ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮೂಲ್ಕಿ‌ ಸೀಮೆ ಅರಸು ಕಂಬಲ ಪುಸ್ತಕ ಬಿಡುಗಡೆ

ಮಂಗಳೂರು: ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಒಟ್ಟು ೮೦೦ ವರ್ಷಗಳ ಇತಿಹಾಸವಿದೆ. ಸಂಪ್ರದಾಯ ಬಿಡದೇ ಆಧುನಿಕತೆಯೊಂದಿಗೆ ಅರಸು ಕಂಬಳ ನಡೆಸಲಾಗುತ್ತಿದೆ. ಮುಲ್ಕಿ ಅರಸು ಕಂಬಳದ ಬಗ್ಗೆ ಪುಸ್ತಕ ಹೊರತಂದಿರುವುದು ಶ್ಲಾಘನೀಯ ಎಂದು ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್ ಗೌರವ ಸಂಪಾದಕತ್ವದ ‘ಮೂಲ್ಕಿ ಸೀಮೆ ಅರಸು ಕಂಬುಲ’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿಂದಿನ ಕಾಲದಲ್ಲಿ ಅರಮನೆ, ಬೀಡು ಇದ್ದ ಎಲ್ಲ ಕಡೆ ಕಂಬಳ ನಡೆಯುತ್ತಿತ್ತು. ೧೯೭೧ರಲ್ಲಿ ಭೂಸುಧಾರಣೆ ಕಾಯ್ದೆ ಜಾರಿಗೊಳ್ಳುವವರೆಗೆ ಈ ಕಂಬಳಗಳು ನಡೆಯುತ್ತಿದ್ದವು. ಪ್ರಸ್ತುತ ಅಳದಂಗಡಿ, ಮುಲ್ಕಿ ಅರಮನೆಯಲ್ಲಿ ಕಂಬಳ ನಡೆಯುತ್ತಿದೆ ಎಂದರು.ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕಾರ್ನಾಡು ಶ್ರೀ ಹರಿಹರ ದೇವಸ್ಥಾನದ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ, ಅರಸು ಕಂಬಳ ಹಿಂದೆ ನಡೆಯುತ್ತಿದ್ದಂತೆ ವಿಜೃಂಭಣೆಯಿಂದ ನಡೆಯಬೇಕು. ದಿನಾಂಕ ಸಹಿತ ಈ ಬಗ್ಗೆ ಯಾವುದೇ ಗೊಂದಲ ಇರಬಾರದು ಎಂದರು.ಪುಸ್ತಕದ ಬಗ್ಗೆ ಮಾತನಾಡಿದ ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಮೂಲ್ಕಿ ಸೀಮೆ ಅರಸು ಕಂಬುಲ ಪುಸ್ತಕದ ಮೂಲಕ ಮುಲ್ಕಿ ಅರಸು ಕಂಬಳದ ದಾಖಲೀಕರಣ ಆಗಿದೆ. ಕಳೆದ ೪೦ ವರ್ಷಗಳ ಕಂಬಳದ ಸಭೆಗಳು, ಕಂಬಳದ ದಾನಿಗಳು, ಸಂಕಷ್ಟದ ಬಗ್ಗೆ ದಾಖಲೀಕರಣ ಆಗಿದೆ. ಕಂಬಳದ ಆಚರಣೆಗಳಿಗೆ ಪುಸ್ತಕದಲ್ಲಿ ಸೂಕ್ತ ವ್ಯಾಖ್ಯಾನ ಒದಗಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯವಾಗುವ ಅರ್ಹತೆ ಈ ಪುಸ್ತಕಕ್ಕಿದೆ. ತುಳುನಾಡಿನಲ್ಲಿ ಕಂಬಳ ಸಾಮರಸ್ಯಕ್ಕೂ ಕಾರಣವಾಗಿದೆ ಎಂದು ಹೇಳಿದರು.ಪುಸ್ತಕ ಹೊರತರು ಸಹಕಾರ ನೀಡಿದವರನ್ನು ಈ ವೇಳೆ ಗೌರವಿಸಲಾಯಿತು. ಪುಸ್ತಕದ ಗೌರವ ಸಂಪಾದಕ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್ ಸ್ವಾಗತಿಸಿದರು. ಪ್ರಧಾನ ಸಂಪಾದಕಿ ಡಾ. ಸಾಯಿಗೀತಾ ಹೆಗ್ಡೆ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ಕಿಶೋರ್ ಡಿ ಶೆಟ್ಟಿ ಆಯ್ಕೆ.

ಮಂಗಳೂರು: ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಇದರ ನೂತನ ಅಧ್ಯಕ್ಷರಾಗಿ ಕಿಶೋರ್ ಡಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಮಂಗಳೂರು ತುಳು ನಾಟಕ ಕಲಾವಿದರ ಒಕ್ಕೂಟ ಇದರ 2024-2025 ನೇ ಸಾಲಿನ ವಾರ್ಷಿಕ ಮಹಾಸಭೆಯುಕದ್ರಿ ಪಾರ್ಕ್ ಬಳಿಯ ಲಯನ್ಸ್ ಅಶೋಕ ಸೇವಾಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಕಿಶೋರ್ ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕಿಶೋರ್ ಡಿ. ಶೆಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಗೋಕುಲ್ ಕದ್ರಿ ಮತ್ತು ತಾರಾನಾಥ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷಣ್ ಕುಮಾರ್ ಮಲ್ಲೂರ್, ಕೋಶಾಧಿಕಾರಿಯಾಗಿ ಮೋಹನ ಕೊಪ್ಪಲ ಕದ್ರಿ, ಕ್ಷೇಮನಿಧಿ ಪ್ರಧಾನಸಂಚಾಲಕರಾಗಿ ಪ್ರದೀಪ್ ಆಳ್ವ ಕದ್ರಿ, ಕ್ಷೇಮನಿಧಿ ಸಂಚಾಲಕರಾಗಿ ರಾಘವೇಂದ್ರ ರಾವ್ ಶರವು, ಜೊತೆ ಕಾರ್ಯದರ್ಶಿ ತುಳಸೀ ದಾಸ್ ಉರ್ವ, ಸಲಹಾ ಸಮಿತಿ ಸದಸ್ಯರಾಗಿ ತಮ್ಮ ಲಕ್ಷ್ಮ್ಮಣ್ , ಶೋಭಾಶೆಟ್ಟಿ, ಶರತ್ ಶೆಟ್ಟಿ ಮುಂಡ್ಕೂರು, ಸಂಘಟನಾ ಕಾರ್ಯದರ್ಶಿಯಾಗಿ ಮಧು ಬಂಗೇರ, ಪ್ರಚಾರ ನಿರ್ದೇಶಕರಾಗಿ ರತ್ನದೇವ್ ಪುಂಜಾಲಕಟ್ಟೆ, ಆಡಳಿತ ಸಮಿತಿ ಸದಸ್ಯರಾಗಿ ಕಿಶೋರ್ ಕುಮಾರ್ ಜೋಗಿ ಉಬಾರ್, ಕಿಶೋರ್ ಡಿ.ಕೆ., ಸುಧಾಕರ ಶೆಟ್ಟಿ ಬೆದ್ರ, ಸಂಜೀವ ಅಡ್ಯಾರ್, ನಾಗೇಶ್ ದೇವಾಡಿಗ ಕದ್ರಿ, ಮೋಹನ್ ಕೆ. ಬೋಳಾರ್, ಅಶ್ವಿನಿ ರೈ, ಕಿಶನ್ ಮಂಗಳಾದೇವಿ, ಹರೀಶ್ ಕೆ. ಶಕ್ತಿನಗರ, ಮನೋಜ್ ಕುಮಾರ್, ನರೇಂದ್ರ ಎಸ್. ಅಂಚನ್, ಸುರೇಶ್ ಬಲ್ಮಠ, ಉದಯರವಿ ಶೆಟ್ಟಿ, ರಾಜಶೇಖರ ಶೆಟ್ಟಿ, ನಿತಿನ್ ಕುಮಾರ್ ಕನೀರ್ತೋಟ, ವಿನಾಯಕ ಜೆಪ್ಪು, ದಿನೇಶ್ ಕುಂಪಲ, ನರೇಂದ್ರ ಕೆರೆಕಾಡು, ತಾರಾನಾಥ್ ಉರ್ವ, ರಂಜನ್ ಬೋಳೂರು ಆಯ್ಕೆಯಾದರು. ಮೋಹನ ಕೊಪ್ಪಲ ಕದ್ರಿ ಕಾರ್ಯಕ್ರಮ ನಿರ್ವಹಿಸಿದರು. ಪ್ರದೀಪ್ ಆಳ್ವ ಕದ್ರಿ ವಂದಿಸಿದರು.ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು ಸ್ವಾಗತಿಸಿ, ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು.

ಪ್ರಾದೇಶಿಕ ವಾರ್ತೆಗಳು

Hey Prabhu – By Venkat Bharadwaj, Director / Writer – Karnataka State Awardee

Rural India, though rich in culture and resilience, suffers from a silent crisis—the absence of doctors. While cities overflow with hospitals, clinics, and specialists, countless villages are left behind with no medical help in sight. Every fever turns into fear, every childbirth into risk, and every accident into tragedy.Hey Prabhu captures this stark reality and transforms it into a tale of hope. The film follows the journey of young, fresh doctors who, after completing their medical studies, are assigned to serve in rural areas. At first, many of them resist—drawn instead to the comforts of city life, the lure of money, and modern facilities. But the story slowly reveals how true healing and real purpose are often discovered far away from luxury, in the dusty paths of forgotten villages.At its heart, the film is inspired by the life and work of Dr. Sudhakar Shetty from Pune, whose selfless service in rural communities became a source of light for thousands. Through his dedication, the film portrays how one doctor’s decision to serve can uplift entire regions, restore hope to families, and remind us that medicine is not just a profession—it is a calling.The narrative blends emotion and inspiration. We see villagers praying for a doctor, children waiting for treatment, and young physicians confronted with the weight of responsibility. The story highlights the struggle between personal ambition and social duty, ultimately showing that the highest reward lies in service.Hey Prabhu is more than a film—it is a movement, a motivational anthem for young doctors. It urges them to step into rural India not with hesitation, but with pride. It is a reminder that every heartbeat counts, every life matters, and every doctor has the power to be a savior where hope is rare.I am in kannada film industry from 1983.one year acting course,at Udayakalanikeyan .1 yr theatre training at abhinaya taranga with prakash rai and m venugopal while doing MBBS. Assistant director for 4 years. 40 year back..returnFilm release date is 7th november 2025

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

‘ಹೇ ಪ್ರಭು ದ ಮೊದಲ ಸಿಂಗಲ್ ಎದ್ದೇಳೋ ಈಗ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ

ಕನ್ನಡ ಚಿತ್ರ “ಹೇ ಪ್ರಭು” ದ ಮೊದಲ ಸಿಂಗಲ್ “ಎದ್ದೇಳೋ ಈಗ” ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. ಸ್ಫೂರ್ತಿದಾಯಕ ಸಾಹಿತ್ಯ, ಶಕ್ತಿಯುತ ಗಾಯನ ಮತ್ತು ಮನಸ್ಸು ಕುದಿಯಿಸುವ ಸಂಗೀತದೊಂದಿಗೆ ಈ ಹಾಡು ಸಂಗೀತ ಪ್ರಿಯರು ಹಾಗೂ ಚಿತ್ರಾಭಿಮಾನಿಗಳ ಹೃದಯದಲ್ಲಿ ಭಾವುಕ ಸ್ಪಂದನ ಮೂಡಿಸಿದೆ.ತೇಜಸ್ವಿ ಹರಿದಾಸ್ ಅವರ ಆತ್ಮಸ್ಪರ್ಶಿ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡು — ಆಸೆ , ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಚಿತ್ರ ಸಾಹಿತಿ ಅರಸು ಅಂತಾರೆ ಅವರ ಹೃದಯಮುಟ್ಟುವ ಸಾಹಿತ್ಯ ಮತ್ತು ಡ್ಯಾನಿ ಆಂಡರ್ಸನ್ ಅವರ ಉತ್ಸಾಹಭರಿತ ಸಂಗೀತ ಸಂಯೋಜನೆ ಜೊತೆಯಾಗಿ “ಎದ್ದೇಳೋ ಈಗ” ಅನ್ನು ಇತ್ತೀಚಿನ ಕನ್ನಡ ಚಲನಚಿತ್ರ ಲೋಕದ ಅತ್ಯಂತ ಪ್ರೇರಣಾದಾಯಕ ಹಾಡುಗಳಲ್ಲಿ ಒಂದಾಗಿ ರೂಪಿಸಿದೆ. ಚಿತ್ರವನ್ನು ನಿರ್ದೇಶಿಸಿರುವವರು ವೆಂಕಟ್ ಭಾರದ್ವಾಜ್, “ಹೇ ಪ್ರಭು “ತನ್ನ ಬಿಡುಗಡೆಯತ್ತ ಹೆಜ್ಜೆ ಇಡುತ್ತಿದೆ. ಚಿತ್ರದಲ್ಲಿ ಜಯ ವರ್ಧನ್, ಸಂಹಿತಾ ವಿನ್ಯ, ಯಮುನಾ ಶ್ರೀನಿಧಿ, ಗಜಾನನ ಹೆಗ್ಡೆ, ಲಕ್ಷ್ಮಣ ಶಿವಶಂಕರ, ಡಾ. ಪ್ರಮೊದ್, ಹರಿ ಧನಂಜಯ ಸೇರಿದಂತೆ ಹಲವಾರು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ.ನಿಜ ಘಟನೆಯ ಆಧಾರದ ಮೇಲೆ ನಿರ್ಮಿತವಾದ ಹೇ ಪ್ರಭು — ಅಮೃತ ಫಿಲ್ಮ್ ಸೆಂಟರ್ ಹಾಗೂ 24 ರೀಲ್ಸ್ ಸಂಸ್ಥೆಗಳ ಸಂಯುಕ್ತ ನಿರ್ಮಾಣ. ಚಿತ್ರವನ್ನು ಡಾ. ಸುಧಾಕರ್ ಶೆಟ್ಟಿ (ಪುಣೆ) ಅವರು ಪ್ರಸ್ತುತಪಡಿಸಿದ್ದಾರೆ.ಸಂಗೀತದಾಚೆಗೂ ಹೋಗಿ, ಈ ಚಿತ್ರವು ಒಂದು ಜಾಗತಿಕ ಸಮಸ್ಯೆಯನ್ನು ಧೈರ್ಯವಾಗಿ ಸ್ಪರ್ಶಿಸುತ್ತದೆ — ಅಂದ್ರೆ ಔಷಧ ಕಂಪನಿಗಳ ನಿಯಂತ್ರಣರಹಿತ ಪ್ರಭಾವ ಮತ್ತು ಲಾಲಸೆ. ಇತ್ತೀಚಿನ ಮಕ್ಕಳ ಕೆಮ್ಮಿನ ಸಿರಪ್ ವಿವಾದದಂತಹ ಘಟನೆಗಳ ಬೆಳಕಿನಲ್ಲಿ, ಹೇ ಪ್ರಭು ಸಂಸ್ಥೆಗಳ ಲಾಭದಾಸೆ, ನೈತಿಕತೆ ಮತ್ತು ಸಾಮಾನ್ಯ ಜನರ ಬದುಕಿನ ಮೇಲೆ ಅದರ ಪರಿಣಾಮವನ್ನು ತೆರೆದಿಡುತ್ತದೆ.ವೆಂಕಟ್ ಭಾರದ್ವಾಜ್ ಅವರ ದೃಷ್ಟಿಯಲ್ಲಿ ಹೇ ಪ್ರಭು ಕೇವಲ ಸಿನಿಮಾ ಅಲ್ಲ — ಅದು “Indian Cinema with a Conscience” ಎಂಬ ಅವರ ಸತ್ಯನಿಷ್ಠ ಕಲೆಗಾಗಿ ನೀಡಿದ ಮತ್ತೊಂದು ಧ್ವನಿ. ಈ ಚಿತ್ರವು ಭಾರತದ ಜನರ ಪರವಾಗಿ ಮಾತನಾಡುತ್ತದೆ — ಅವರ ಆರೋಗ್ಯ, ಪ್ರಾಮಾಣಿಕತೆ ಮತ್ತು ಆಶೆಗಾಗಿ ಹೋರಾಡುತ್ತದೆ.ತನ್ನ ಪ್ರೇರಣಾದಾಯಕ ಸಂದೇಶ ಮತ್ತು ಮನಮುಟ್ಟುವ ಸಂಗೀತದೊಂದಿಗೆ, ಹೇ ಪ್ರಭು ಕೇವಲ ಒಂದು ಸಿನಿಮಾ ಅಲ್ಲ — ಅದು ಎದ್ದೇಳುವ, ನಂಬುವ ಮತ್ತು ಜಯಿಸುವ ಕರೆ. “ಎದ್ದೇಳೋ ಈಗ” ಎಂಬ ಶಕ್ತಿಯುತ ಹಾಡಿನಂತೆ, ಈ ಚಿತ್ರವೂ ಪ್ರೇಕ್ಷಕರಲ್ಲಿ ಹೊಸ ಚೈತನ್ಯ ತುಂಬುತ್ತಿದೆ.ತಾಂತ್ರಿಕ ವರ್ಗದಲ್ಲಿ , ಸಂಕಲನ ಶಮೀಕ್ ವಿ ಭರದ್ವಾಜ , ಸಂಭಾಷಣೆ ಲಕ್ಷ್ಮಣ್ ಶಿವಶಂಕರ್ , ಪ್ರವೀಣ್ , ವೆಂಕಟ್ ಭಾರದ್ವಾಜ್ , ಛಾಯಾಗ್ರಹಣ ಪ್ರಮೋದ್ ಭಾರತೀಯ ಮತ್ತು ಲಾರೆನ್ಸ್ ಪ್ರೀತಮ್ ರವರ ಸಹ ನಿರ್ದೇಶನ ಮತ್ತು ನಟನೆ.

ಪ್ರಾದೇಶಿಕ ವಾರ್ತೆಗಳು

ಚೆಕ್‌ಗಳ ತ್ವರಿತ ಕ್ಲಿಯರಿಂಗ್ ಇಲ್ಲಿದೆ!

ಇನ್ನು ಮುಂದೆ, ಬ್ಯಾಂಕುಗಳು ಚೆಕ್‌ಗಳನ್ನು ಅದೇ ದಿನದಂದು ಪಾಸ್ ಮಾಡುತ್ತದೆ / ಹಿಂದಿರುಗಿಸುತ್ತವೆ. ಹಾಗೆಯೇ ಗ್ರಾಹಕರಿಗೆ ಅದೇ ದಿನದಂದು ಕ್ರೆಡಿಟ್ ಸಿಗುತ್ತದೆ.ಜನವರಿ 3, 2026 ರಿಂದ: ಚೆಕ್‌ಗಳನ್ನು ಪ್ರಸ್ತುತಪಡಿಸಿದ ಕೆಲವೇ ಗಂಟೆಗಳಲ್ಲಿ ಕ್ಲಿಯರ್ ಮಾಡಲಾಗುತ್ತದೆ ಮತ್ತು ಗ್ರಾಹಕರ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.⚡ ಇದರ ಅರ್ಥವೇನು:✔ ತ್ವರಿತ ಹಣ ಲಭ್ಯತೆ✔ ಹೆಚ್ಚು ಅನುಕೂಲಕರ✔ ಕಡಿಮೆಯಾದ ವಿಳಂಬಗಳು📌 ನೆನಪಿಡಿ: ಚೆಕ್ ಬೌನ್ಸ್ ಅನ್ನು ತಪ್ಪಿಸಲು ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಇರಿಸಿ.👉 ಹೆಚ್ಚಿನ ವಿವರಗಳಿಗಾಗಿ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಅಥವಾ 🔗 www.rbi.org.in ಗೆ ಭೇಟಿ ನೀಡಿ💡 RBI ಹೇಳುತ್ತೆ… ಜಾಣರಾಗಿರಿ, ಜಾಗರೂಕರಾಗಿರಿ!

ಪ್ರಾದೇಶಿಕ ವಾರ್ತೆಗಳು

ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಸಂಪನ್ನ

ಉಡುಪಿಯಲ್ಲಿ ನಡೆದ ಕ್ರೀಡಾ ಹಬ್ಬ — Big Beaters ಅಂಬಲ್ಪಾಡಿ ತಂಡ ಚಾಂಪಿಯನ್, Malsi Smashers ರನ್ನರ್-ಅಪ್ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಅಕ್ಟೋಬರ್ 11 ರಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (Torpedoes Badminton Premier League) ಭರ್ಜರಿಯಾಗಿ ನೆರವೇರಿತು. ತೀರ್ಥಹಳ್ಳಿ, ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ 12 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದವು.ಫೈನಲ್ ಪಂದ್ಯದಲ್ಲಿ Big Beaters ಅಂಬಲ್ಪಾಡಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಕೈಸೇರಿಸಿತು. Malsi Smashers ತಂಡ ರನ್ನರ್-ಅಪ್ ಆಗಿ ತೃಪ್ತಿಪಟ್ಟಿತು.ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅತ್ಯಂತ ಶಿಸ್ತಿನೊಂದಿಗೆ, ಉತ್ತಮ ಕ್ರೀಡಾ ಸೌಹಾರ್ದತೆಯನ್ನು ಉತ್ತೇಜಿಸುವ ರೀತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಆಟಗಾರರು ಮತ್ತು ತಂಡದ ಪ್ರತಿನಿಧಿಗಳು ಈ ಕ್ರೀಡಾಕೂಟದ ಶಿಸ್ತು, ವ್ಯವಸ್ಥೆ ಹಾಗೂ ಆಯೋಜನೆಯ ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತ ಮತ್ತು ರನ್ನರ್-ಅಪ್ ತಂಡಗಳಿಗೆ ಬಹುಮಾನ ವಿತರಣೆ ನಡೆಯಿತು. ಕ್ರೀಡಾಪಟುಗಳ ಶ್ರಮ, ತಂಡಗಳ ಸಮ್ಮಿಲನ ಮತ್ತು ಪ್ರೇಕ್ಷಕರ ಉತ್ಸಾಹ ಕಾರ್ಯಕ್ರಮಕ್ಕೆ ವಿಶೇಷ ಕಳೆ ತುಂಬಿತು. ಭಾಗವಹಿಸಿದ ಎಲ್ಲಾ ಆಟಗಾರರು, ತಂಡದ ಪ್ರತಿನಿಧಿಗಳು ಹಾಗೂ ಕ್ರೀಡಾಭಿಮಾನಿಗಳಿಗೆ ಆಯೋಜಕರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.ಈ ಕ್ರೀಡಾಕೂಟದ ಯಶಸ್ಸಿನ ಹಿಂದೆ ಗೌತಮ್ ಶೆಟ್ಟಿ ಮತ್ತು ಅವರ ಸಹ ತಂಡದ ಶ್ರಮ ಅಚ್ಚಳಿಯಾಗಿದೆ. ಅವರ ನೇತೃತ್ವದಲ್ಲಿ ನಡೆದ ಈ ಪ್ರೀಮಿಯರ್ ಲೀಗ್ ಉಡುಪಿ ಜಿಲ್ಲೆಯ ಬ್ಯಾಡ್ಮಿಂಟನ್ ಕ್ರೀಡೆಗೆ ಹೊಸ ಪ್ರೇರಣೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯುವ ಪ್ರತಿಭೆಗಳು ಹೊರಹೊಮ್ಮಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.ಸಂಪೂರ್ಣ ಕಾರ್ಯಕ್ರಮವನ್ನು Sports Kannada ವಾಹಿನಿ ನೇರ ಪ್ರಸಾರ ಮಾಡಿತ್ತು.

ಪ್ರಾದೇಶಿಕ ವಾರ್ತೆಗಳು

ಎನ್ ನಾಗೇಂದ್ರ ಅವರಿಗೆ ವಿಶ್ವೇಶ್ವರಯ್ಯ ಇಂಟರ್ನ್ಯಾಷನಲ್ ಪ್ರಶಸ್ತಿ

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್,ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು,ಇವರ ಸಹ ಯೋಗದೊಂದಿಗೆ ದಿ. 16.10.2025 ರಂದು ನಡೆದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನ ಕಾರ್ಯಕ್ರಮದಲ್ಲಿ ಶ್ರೀ ಎನ್. ನಾಗೇಂದ್ರ ರವರ ಗಾಯನ ಕ್ಷೇತ್ರ ಹಾಗೂ ಬಹುಮುಖ ಪ್ರತಿಭೆ ಸಾಧನೆ ಇವುಗಳನ್ನ ಪರಿಗಣಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಮಾಜಿ ಲೋಕಾಯುಕ್ತರು ಹಾಗೂ ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಆದ ಡಾ. ಏನ್ ಸಂತೋಷ್ ಹೆಗ್ಡೆ ರವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿರುತ್ತಾರೆ.ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್,ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು,ಡಾ. ಎಮ್ ಎಸ್ ಮುತ್ತುರಾಜ್, ಕರ್ನಾಟಕ ಸವಿತಾ ಸಮಾಜ ಅಧ್ಯಕ್ಷರು, ಶ್ರೀ ಶ್ರೀ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು ಅಥಣಿ, ಶ್ರೀ ಶ್ರೀ ರಮಾನಂದ ಗುರೂಜಿ, ದೊಡ್ಡನಗುಡ್ಡೆ ಉಡುಪಿ ಹಾಗೂ ಎಸ್ ಜಿ ನಂಜಯ್ಯನಮಠ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಕರ್ನಾಟಕ ಸರ್ಕಾರ,ಇವರು ಹಾಜರಿರುತ್ತಾರೆ. ಈ ಕಾರ್ಯಕ್ರಮ ಅಕ್ಟೋಬರ್ 15 ರಂದು ನವ ದೆಹಲಿಯ ನೆಹರು ಭವನದಲ್ಲಿ ಜರುಗಬೇಕಾಗಿತ್ತು ಸರ್ಕಾರಿ ಕಾರ್ಯಕ್ರಮಗಳ ನಿಮಿತ್ತ ಕಾರಣದಿಂದಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಮುಂದೂಡಲಾಗಿತ್ತು

ಪ್ರಾದೇಶಿಕ ವಾರ್ತೆಗಳು

ಪ್ರಯತ್ನ, ಹೋರಾಟಗಳಿಂದ ಯಶಸ್ಸು ಸಾಧ್ಯ- ಎಂಎಲ್‌ಸಿ ಐವನ್

ಮಂಗಳೂರು- ಕೆಲಸಗಳು ಸುಲಭದಲ್ಲಿ ಆಗೋದಿಲ್ಲ. ಇದಕ್ಕೆ ನಿರಂತರವಾದ ಹೋರಾಟ, ಪ್ರಯತ್ನಗಳ ಜತೆಗೆ ಎಲ್ಲರ ಒಗ್ಗಟ್ಟುತನ ಇದ್ದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.ಅವರು ಶುಕ್ರವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಮಂಗಳೂರು ಜು.1,2022ರಿಂದ ಜು.31,2024ರ ಅವಧಿಯಲ್ಲಿ ನಿವೃತ್ತರಾದ ಸರಕಾರಿ ನೌಕರರ ರಾಜ್ಯ ಕಾರ‍್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಸಿಎಂ ಮನೆ ಮುಂದೆ ಧರಣಿಗೆ ಚಿಂತನೆ: ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಇದರ ರಾಜ್ಯ ಮಹಾಪ್ರಧಾನ ಸಂಚಾಲಕ ಡಾ.ಎಂ.ಪಿ.ಎ ಷಣ್ಮುಖಯ್ಯ ಮಾತನಾಡಿ, ಇದು ಸರಕಾರ ಮಾಡಿದ ಅನ್ಯಾಯವಲ್ಲ. ಪ್ರಸ್ತುತ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಅಧ್ಯಕ್ಷ ಸಿ.ಎಚ್.ಷಡಕ್ಷರಿ ಮತ್ತು ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಎಲ್. ಭೈರಪ್ಪ ಅವರು 7ನೇ ವೇತನ ಆಯೋಗದ ವರದಿ ಒಪ್ಪಿ ಮಂಜೂರು ಮಾಡಿದ ಮಹಾತ್ಮರು ಅವರಿಂದ ನಾವು ಹಿರಿಯ ನಾಗರಿಕರು ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗಿ ಬಂತು. ನವೆಂಬರ್‌ನಲ್ಲಿ ಮೈಸೂರಿನ ಸಿಎಂ ಮನೆ ಮುಂದೆ ನಿವೃತ್ತ ಸರಕಾರಿ ನೌಕರರಿಂದ ಧರಣಿ ಮಾಡುವ ಜತೆಗೆ ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಚಳಿಗಾಲ ಅಧಿವೇಶನಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುವ ಕರ‍್ಯ ಮಾಡಲಾಗುತ್ತದೆ ಎಂದರು.ಪರಿಷ್ಕೃತ ಆದೇಶ ನೀಡಿ: ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಮಂಗಳೂರು ಇದರ ಜಿಲ್ಲಾ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಮಾತನಾಡಿ, ಸರಿಸುಮಾರು 25-40 ವರ್ಷಗಳ ಕಾಲ ಸರಕಾರಿಯ ನಾನಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತರಾದಂತಹ ನೌಕರರಿಗೆ ಸಂಧ್ಯಾಕಾಲದಲ್ಲಿ ಆರ್ಥಿಕವಾಗಿ ವಂಚಿತರನ್ನಾಗಿ ಮಾಡುವುದು ಸರಿಯಲ್ಲ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಪೂರ್ಣ ಪ್ರಮಾಣದ ವೇತನ ಪಡೆಯುತ್ತಿದ್ದಾರೆ. ನಿವೃತ್ತ ನೌಕರರ ಮೇಲೆ ಯಾಕೆ ಈ ತಾರತಮ್ಯ ಮಾಡಲಾಗುತ್ತಿದೆ ಎಂದರು.ಈ ಸಂದರ್ಭ ರಾಜ್ಯ ಸಂಚಾಲಕರಾದ ಅಶೋಕ ಎಂ. ಸಜ್ಜನ, ಶಂಕರಪ್ಪ ಲಮಾಣಿ, ಎಸ್.ಬಿ. ಬಿಸೇರೊಟ್ಟಿ, ಮಹಾಂತೇಶ ವಿ. ಹಿರೇಮಠ ಸೇರಿದಂತೆ ರಾಜ್ಯದ 31 ಜಿಲ್ಲೆಗಳಿಂದ ಬಂದ ಪ್ರಧಾನ ಸಂಚಾಲಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಯಾದಗಿರಿಯ ಬೀಮಣ್ಣ ಪ್ರಾರ್ಥಿಸಿದರು. ವಿಜಯನಗರದ ಹುಳು ಬಸಪ್ಪ ವಂದಿಸಿದರು. ಮಂಡ್ಯದ ನಾರಾಯಣ ಸ್ವಾಮಿ ಕಾರ‍್ಯಕ್ರಮ ನಿರೂಪಿಸಿದರು. ನಿವೃತ್ತ ಸರಕಾರಿ ನೌಕರರ ಸಮಸ್ಯೆಗೆ ಪರಿಹಾರ ಕೊಡಿಸಲು ಆಗ್ರಹಜು.1, 2022ರಿಂದ ಜು.31,2024 ನೌಕರರಿಗೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕಾಲ್ಪನಿಕವಾಗಿ ವೇತನ ಪರಿಷ್ಕರಣೆ ಮಾಡಿ ಆದೇಶ ಮಾಡಲಾಗಿದೆ. ಆದರೆ ನಗದು ರೂಪದಲ್ಲಿ ಆ.1, 2024 ರಿಂದ ಅನ್ವಯವಾಗುವಂತೆ ಆದೇಶ ಮಾಡಿರುವುದರಿಂದ ಈ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ನಿವೃತ್ತಿ ಪಿಂಚಣಿ ಹೊಸ ವೇತನದಂತೆ ನಿಗದಿ ಪಡಿಸಲು ಆದೇಶ ಮಾಡಿರುವುದರಿಂದ ಡಿ.ಸಿ.ಆರ್.ಜಿ.. ಕಮ್ಯುಟೇಶನ್, ಇ.ಎಲï. ನಗದೀಕರಣ ಸೌಲಭ್ಯಗಳನ್ನು 6 ನೇ ವೇತನದ ಆಯೋಗದ ಅಡಿ ಪಡೆಯುತ್ತಿದ್ದ ಮೂಲ ವೇತನದ ಮೇಲೆ ಪಾವತಿಸುವುದರಿಂದ ಸುಮಾರು 26,500 ನಿವೃತ್ತ ನೌಕರರು ಆರ್ಥಿಕವಾಗಿ ವಂಚಿತರಾಗುತ್ತಾರೆ ಎನ್ನುವುದು ನಿವೃತ್ತ ಸರಕಾರಿ ನೌಕರರ ಆಳಲು ಇದಕ್ಕೆ ರಾಜ್ಯದ ಸಿಎಂ ಪರಿಹಾರ ಕೊಡಬೇಕು ಎನ್ನುವುದು ಇವರ ಆಗ್ರಹ.….ಚಿತ್ರ: 17ಎಂ-ಸರಕಾರಿನಿವೃತ್ತರಾದ ಸರಕಾರಿ ನೌಕರರ ರಾಜ್ಯ ಕಾರ‍್ಯಕಾರಿಣಿ ಸಭೆಯ ಉದ್ಘಾಟನೆ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮನಾಭ ಕೋಟ್ಯಾನ್

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಮಂಗಳೂರು ಉತ್ತರ ವಿಧಾನ ಸಭೆ ಕ್ಷೇತ್ರದ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಪದ್ಮನಾಭ ಕೋಟ್ಯಾನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ

ಪ್ರಾದೇಶಿಕ ವಾರ್ತೆಗಳು

ದ.ಕ. ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ವಾರ್ಷಿಕ ಸಭೆ: ಮಾನವೀಯ ಸೇವೆ ರೆಡ್‌ಕ್ರಾಸ್ ಸಂಸ್ಥೆಯ ಗುರಿ-ದ.ಕ.ಜಿಲ್ಲಾಧಿಕಾರಿ ದರ್ಶನ್.ಎಚ್.ವಿ.

ಮಂಗಳೂರು : ರಕ್ತದಾನ, ಆರೋಗ್ಯ ಕಾಳಜಿ, ವಿಪತ್ತು ಪರಿಹಾರ ಸಹಿತ ಹಲವು ಸೇವಾ ಕಾರ್ಯಗಳ ಮೂಲಕ ರೆಡ್‌ಕ್ರಾಸ್ ಸಮಾಜಕ್ಕೆ ನೆರವಾಗುತ್ತಿದೆ. ವಿಶ್ವದಾದ್ಯಂತ ರೆಡ್‌ಕ್ರಾಸ್ ಪಸರಿಸಿದ್ದು ಮಾನವೀಯ ಸೇವೆಯೇ ಸಂಸ್ಥೆಯ ಗುರಿಯಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ, ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ದರ್ಶನ್.ಎಚ್.ವಿ.ಹೇಳಿದರು.ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆದ ದ.ಕ. ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ ಭವ್ಯ ಶತಮಾನೋತ್ಸವ ಕಟ್ಟಡದ ನಿರ್ಮಾಣ ಸಹಿತ ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದಕಾರ್ಯ ಚಟುವಟಿಕೆ ರಾಜ್ಯಕ್ಕೆ ಮಾದರಿಯಾಗಿದೆ’ ಎಂದರು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ‘ ದ.ಕ.ಜಿಲ್ಲಾಡಳಿತ, ದಾನಿಗಳು ಹಾಗೂ ರೆಡ್‌ಕ್ರಾಸ್ ಸದಸ್ಯರ ನೆರವಿನಿಂದ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ನಿರ್ಮಾಣವಾಗಿರುವುದು ಹೆಮ್ಮೆ ತಂದಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಇತರ ಆರೋಗ್ಯ ಸಮಸ್ಯೆ ಸಂಬಂಧಿಸಿ ದಾಖಲಾದವರಿಗೆ ಅವಶ್ಯ ಇದ್ದರೆ ರೆಡ್‌ಕ್ರಾಸ್ ಬ್ಲಡ್‌ಬ್ಯಾಂಕ್‌ನಿಂದ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮಾಹಿತಿ ಒದಗಿಸಲು ರೆಡ್‌ಕ್ರಾಸ್‌ನಿಂದ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ ಎಂದರು.ರೆಡ್‌ಕ್ರಾಸ್ ರಾಜ್ಯ ಘಟಕದ ಚೇರ್ಮನ್ ಬಸ್ರೂರು ರಾಜೀವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಕಟ್ಟಡ ನಿರ್ಮಣಕ್ಕೆ ನೆರವಾದ ದಾನಿಗಳನ್ನು ಮತ್ತು ಆಡಳಿತ ಮಂಡಳಿಯ ಮಾಜಿ ನಿರ್ದೇಶಕರನ್ನು ಗೌರವಿಸಲಾಯಿತು.ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಘಟಕ ಕಾರ್ಯ ನಿರ್ವಹಣೆಗಾಗಿ ಸುಳ್ಯ ಘಟಕದ ಅಧ್ಯಕ್ಷ ಪಿ.ಬಿ. ಸುಧಾಕರ ರೈ (ಪ್ರಥಮ) ಹಾಗೂ ಬೆಳ್ತಂಗಡಿ ಘಟಕದ ಹರಿದಾಸ್.ಎಸ್. ಎಂ. (ದ್ವಿತೀಯ) ಪುರಸ್ಕಾರ ಸ್ವೀಕರಿಸಿದರು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ವರದಿ ವಾಚಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಡಾ.ಸತೀಶ್ ರಾವ್, ಖಜಾಂಚಿ ಮೋಹನ್ ಶೆಟ್ಟಿ ಕೆ., ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ಡಾ.ಬಿ. ಸಚ್ಚಿದಾನಂದ ರೈ, ಗುರುದತ್.ಎಂ. ನಾಯಕ್, ವಿಟ್ಟಲ ಎ., ಡಾ.ಸುಮನಾ ಬಿ. ಉಪಸ್ಥಿತರಿದ್ದರು.

Scroll to Top