ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

HORE KANIKE PROCESSION FLAGS OFF INFANT JESUS NOVENA PREPARATIONS

Report & Pics: Carmel Kiran MediaIn preparation for the forthcoming Novena and Annual Feast of the Infant Jesus, a solemn Hore Kanike (votive offering) procession was held on Saturday, January 3, 2026, from Cordel Church to the Infant Jesus Shrine, Bikarnakatte. The devotion-filled procession witnessed the participation of numerous faithful who offered their votive gifts in a spirit of gratitude, faith, and hope.The votive offerings were blessed by Rev. Fr. Vijay Monteiro, Assistant Parish Priest of Cordel Church, and the procession was formally flagged off by Mrs. Ruth Castelino, Vice President of Cordel Church. The faithful then proceeded prayerfully towards the shrine, marking the spiritual beginning of the novena celebrations.On arrival, Rev. Fr. Melwyn D’Cunha, Superior of St. Joseph’s Monastery, and Rev. Fr. Stephen Pereira, Shrine Director of the Infant Jesus Shrine, expressed their heartfelt gratitude to the gathering and assured continuous prayers for all devotees and benefactors. As part of the celebrations, the unique programme “Sahaballve”, aimed at promoting harmonious and fraternal living in society, was held. The programme was graced by Mr. Muneer Katipalla, noted social activist; Mrs. Shalet Pinto, Chairperson of the Karnataka Eco-Tourism Development Board; and Mr. Dinesh Hegde of Ulepady, Advocate and Human Rights activist.Sharing his personal experience, Mr. Muneer Katipalla remarked that harmonious living is natural to human beings and cautioned against divisive political narratives. He observed that people often stop listening to their neighbours while giving attention to politically motivated stories, urging society instead to share real-life stories of fraternity and coexistence. The event was also attended by Rev. Fr. Praveen Martis, Vice Chancellor of St. Aloysius Deemed to be University; Sr. Reena D’Souza, Superior of Santa Cruz Convent, Kulshekar; and local corporators Mr. Keshav and Mr. Naveen. All groups who participated in the procession with votive offerings were later honoured.At the conclusion, Rev. Fr. Praveen Martis offered prayers over all the forthcoming activities. He blessed the flag and, by ceremonially hoisting it, officially declared the Novena and Annual Feast of the Infant Jesus open. The spiritual theme for the year, “Called to Carmel, to the Wedding Feast of the Lamb,” invites the faithful to reflect on the soul’s journey towards union with God, inspired by the teachings of St. John of the Cross. The year holds special significance as the Church commemorates 300 years of his sainthood and 100 years since he was declared a Doctor of the Church.The Novena Masses will be held from January 5 to January 13, with nine Masses celebrated daily, along with Eucharistic Adoration attended by devotees. The Annual Feast of the Infant Jesus will be celebrated on January 14 and 15, 2026, drawing thousands of pilgrims to the shrine in faith and devotion.

ಪ್ರಾದೇಶಿಕ ವಾರ್ತೆಗಳು

ಬಾಲ ಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆಯಾಗಿ ಭಕ್ತಿಭಾವಪೂರ್ಣ ಹೊರೆ ಕಾಣಿಕೆ ಮೆರವಣಿಗೆ

ಬಾಲ ಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆಯಾಗಿ ಜನವರಿ 3, 2026 ಶನಿವಾರ, ಕೊರ್ಡೆಲ್ ಚರ್ಚ್ ನಿಂದ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದ ವರೆಗೆ ಭಕ್ತಿಭಾವಪೂರ್ಣ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಅನೇಕ ಭಕ್ತರು ಕೃತಜ್ಞತೆ, ನಂಬಿಕೆ ಮತ್ತು ಆಶಯದೊಂದಿಗೆ ಕಾಣಿಕೆಗಳನ್ನು ಸಮರ್ಪಿಸಿದರು. ವಂ. ವಿಜಯ್ ಮೊಂತೆರೋ, (ಸಹಾಯಕ ಧರ್ಮಗುರು , ಕೊರ್ಡೆಲ್ ಚರ್ಚ್) ಆಶೀರ್ವಾದ ನೀಡಿ, ಶ್ರೀಮತಿ ರೂತ್ ಕ್ಯಾಸ್ಟೆಲಿನೊ, (ಉಪಾಧ್ಯಕ್ಷೆ, ಕೊರ್ಡೆಲ್ ಚರ್ಚ್) ಮೆರವಣಿಗೆಗೆ ಧ್ವಜ ಹಾರಿಸಿ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಸಾಮಾಜಿಕ ಸೌಹಾರ್ದತೆ ಯನ್ನು ಉತ್ತೇಜಿಸುವ “ಸಹಬಾಳ್ವೆ” ಕಾರ್ಯಕ್ರಮ ಪುಣ್ಯಕ್ಷೇತ್ರದ ಆಂಗಣದಲ್ಲಿ ನಡೆಯಿತು. ಮುನೀರ್ ಕಾಟಿಪಳ್ಳ (ಸಾಮಾಜಿಕ ಕಾರ್ಯಕರ್ತ ), ಶ್ರೀಮತಿ ಶಾಲೇಟ್ ಪಿಂಟೊ (ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ) ಹಾಗೂ ಶ್ರೀ ದಿನೇಶ್ ಹೆಗಡೆ, ಉಳೇಪಾಡಿ (ಮಾನವ ಹಕ್ಕುಗಳ ಹೋರಾಟಗಾರ, ವಕೀಲರು) ಭಾಗವಹಿಸಿದರು. ಸಮಾಜದಲ್ಲಿ ಸಹೋದರತ್ವ ಮತ್ತು ಏಕತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ವಂ. ಪ್ರವೀಣ್ ಮಾರ್ಟಿಸ್ (ಉಪಕುಲಪತಿ, ಸಂತ ಅಲೋಶಿಯಸ್ ವಿಶ್ವ ವಿದ್ಯಾನಿಲಯ); ಸಿಸ್ಟರ್ ರೀನಾ ಡಿಸೋಜಾ, (ಸಾಂತಾ ಕ್ರೂಸ್ ಕಾನ್ವೆಂಟ್, ಕುಲಶೇಖರ); ಹಾಗೂ ಕಾರ್ಪೊರೇಟರ್ ಗಳಾದ ಕೇಶವ್ ಮತ್ತು ನವೀನ್ ಉಪಸ್ಥಿತರಿದ್ದರು. ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದವರನ್ನು ಗೌರವಿಸಲಾಯಿತು. ವಂ. ಮೆಲ್ವಿನ್ ಡಿ’ಕುನ್ನಾ, ಸಂತ ಜೋಸೆಫ್ ಮಠದ ಮಠಾಧೀಶರು) ಮತ್ತು ವಂ. ಸ್ಟೀಫನ್ ಪಿರೇರಾ, ಪುಣ್ಯಕ್ಷೇತ್ರದ ನಿರ್ದೇಶಕರು ಭಕ್ತರಿಗೆ ಕೃತಜ್ಞತೆ ಸಲ್ಲಿಸಿ ಪ್ರಾರ್ಥನೆಯ ಭರವಸೆ ನೀಡಿದರು. ಅಂತಿಮವಾಗಿ ವಂ. ಪ್ರವೀಣ್ ಮಾರ್ಟಿಸ್ ಧ್ವಜಕ್ಕೆ ಆಶೀರ್ವಾದ ನೀಡಿ ಧ್ವಜಾರೋಹಣ ಮಾಡುವ ಮೂಲಕ ನವೆನಾ ಮತ್ತು ಮಹೋತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಿದರು.ಈ ವರ್ಷದ ಮಹೋತ್ಸವದ ಧ್ಯಾನದ ವಿಷಯ “ ಕರೆದಿಹರು ಕಾರ್ಮೆಲ್ ಗಿರಿಗೆ, ಕುರಿಮರಿಯ ಲಗ್ನ ಉತ್ಸವಕೆ” ಎಂಬುದಾಗಿದ್ದು, ಶಿಲುಬೆಯ ಸಂತ ಯೊವಾನ್ನರ ಉಪದೇಶಗಳಿಂದ ಪ್ರೇರಿತವಾಗಿದೆ. ಅವರ ಸಂತತ್ವದ 300ನೇ ರ‍್ಷ ಮತ್ತು ಪವಿತ್ರ ರ‍್ಮಸಭೆಯ ಪಂಡಿತರೆಂದು ಘೋಷಿಸಲಾದ 100ನೇ ರ‍್ಷದ ಸ್ಮರಣೆಯೂ ಈ ವರ್ಷ ಆಚರಿಸಲಾಗುತ್ತಿದೆ.ಜನವರಿ 5 ರಿಂದ 13ರವರೆಗೆ ದಿನವಿಡೀ ನವೆನಾವಿಧಿಗಳು, 9 ಪೂಜಾಕರ‍್ಯಗಳು ಹಾಗೂ ಪವಿತ್ರ ಸಂಸ್ಕಾರದ ಆರಾಧನೆ ನಡೆಯಲಿದ್ದು, ವರ್ಷದ ಜಾತ್ರೆ ಜನವರಿ 14 ಮತ್ತು 15, 2026ರಂದು ನಡೆಯಲಿದೆ.

ಪ್ರಾದೇಶಿಕ ವಾರ್ತೆಗಳು

ಧರ್ಮ ಒಂದೇ ಅದುವೆ ವಿಶ್ವ ಮಾನವ ಧರ್ಮ- ಡಾ ಸುರೇಶ ನೆಗಳಗುಳಿ

ಕುವೆಂಪು ಜನ್ಮ ದಿನದ ನೆನಪಿನಲ್ಲಿ ಓ ನನ್ನ ಚೇತನಾ ವಿಚಾರಗೋಷ್ಠಿ, ಕವಿಗೋಷ್ಠಿಯು ಜನವರಿ ನಾಲ್ಕರ ಭಾನುವಾರ ಪಡುಬಿದ್ರಿಯ ಸುಜ್ಲಾನ್ ಕಾಲೋನಿಯ ಸಭಾಭವನದಲ್ಲಿ ವಿಜೃಂಭಣೆ ಯಿಂದ ನಡೆಯಿತು.ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ(KSSAP)ದ ಅಧ್ಯಕ್ಷೆ ರಾಣಿ ಪುಷ್ಪಲತಾ ಅವರ ಸಾರಥ್ಯದಲ್ಲಿ ನಡೆದ ಈ ಸಮಾರಂಭವನ್ನು ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜಿನ ಪ್ರಧಾನ ಸಲಹೆಗಾರ ಡಾ ಸುರೇಶ ನೆಗಳಗುಳಿಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.ಅವರು ಕುವೆಂಪು ಅವರ ಬಗ್ಗೆ ಮಾತನಾಡಿ ವಿಶ್ವ ಮಾನವಧರ್ಮ ಕ್ಕೆ ಮಿಗಿಲಾದ ಧರ್ಮ ಬೇರೆ ಇಲ್ಲ ಎನ್ನುತ್ತಾ ಸ್ವರಚಿತ ಕವನಗಳನ್ನು ವಾಚಿಸಿದರು. ರಾಣಿ ಪುಷ್ಪಲತಾ ದೇವಿಯವರು ಅಧ್ಯಕ್ಷತೆ ವಹಿಸಿದ್ದು ಕುವೆಂಪು ಅವರ ಬಗೆಗೆ ಸವಿವಾರವಾಗಿ ಮಾತನಾಡಿದರು.ಸಮಾಜಿಕ ಚಿಂತಕ ರಂಜನ್ ಕುಮಾರ್,ಶಿಕ್ಷಕಿ ಕವಯಿತ್ರಿ ಶರಣ್ಯ ಬೆಳುವಾಯಿ, NSCDF ಅಧ್ಯಕ್ಷ ಗಂಗಾಧರ ಗಾಂಧೀ, ಮತ್ತು NSCDF ಅಂತಾರಾಷ್ಟ್ರೀಯ ವಕ್ತಾರ ಕೆ.ಎಂ.ಇಲಿಯಾಸ್ ಮುಖ್ಯ ಅತಿಥಿಗಳಾಗಿದ್ದರು.ಬಳಿಕ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಮಣಿಪಾಲದ ಹಿಪ್ನೋಥೆರಪಿಸ್ಟ್ ಕವಯಿತ್ರಿmy ಜ್ಯೋತಿ ಮಹದೇವ್ ವಹಿಸಿದ್ದರು. ಅವರು ಕುವೆಂಪು ಹಾಗೂ ಕಾವ್ಯಗಳ ಕುರಿತು ಮಾತನಾಡಿದರು.ಇದಲ್ಲದೆ ರಾಣಿ ಪುಷ್ಪಲತಾ ದೇವಿಯವರು ನೆಗಳಗುಳಿ ಹಾಗೂ ಜ್ಯೋತಿ ಮಹದೇವ್ ರನ್ನು ಶಾಲು ಹಾರ ಪೇಟ ನೆನಪಿನ ಕಾಣಿಕೆ ಸಹಿತವಾಗಿ ಗೌರವಿಸಿದರು.ಕವಿಗಳಾದ ಅಶ್ವಿನಿ ಕೊಂಜಾಡಿ, ,ವಾಣಿಶ್ರೀ ಅಶೋಕ್ ಐತಾಳ್ ಕೆ , ಡಾ. ಪ್ಲಾವಿಯ ಕ್ಯಾಸ್ಟಲಿನೊ , ಮಂಜುನಾಥ್ ಗುಂಡ್ಮಿ, ಶಾಲಿನಿ ಕೆಮ್ಮಣ್ಣು, ಗಿರೀಶ್ ಪೆರಿಯಡ್ಕ, ಆಂಟೋನಿ ಲೂಯಿಸ್ ಮಣಿಪಾಲ, ಮಾರುತಿ ಕೆ.ಪಿ.,ಮಾಲತಿ ರಮೇಶ್ ಕೆಮ್ಮಣ್ಣು, ಅವನೀಶ್ ಐತಾಳ್ ಪಿ, ಆಯಿಷಾ ಪೆರ್ನೆ, ವಿನೋದಾ ಪ್ರಕಾಶ್ ಪಡುಬಿದ್ರಿ, ಸುಮಾ ಕಿರಣ್, ಜಯಂತಿ ಎಸ್. ನಂದಳಿಕೆ, ಸುಲೋಚನ ನವೀನ್, ತನ್ಸೀರಾ ಆತೂರ್, ಸುಮಯ್ಯಾ ಎಂ ಪಾಟೀಲ್ ದೇರಳಕಟ್ಟೆ, ಆಕೃತಿ ಐ.ಎಸ್. ಭಟ್, ಮೂಗಪ್ಪ ಗಾಳೇರ, ಪೂರ್ಣಿಮಾ ಅನಿಲ್‌ ಮಣಿಪಾಲ, ಸ್ಮಿತಾ ಅಶೋಕ್ ಪರ್ಕಳ, ಮಂಡ್ಯ ಅನಾರ್ಕಲಿ ಸಲೀಂ ಮಂಗಳೂರು,ಗಂಗಾಧರ ಗಾಂಧಿ ಮತ್ತಿತರರು ಕಾವ್ಯವಾಚನ ಮಾಡಿದರು. ಭಾಗವಹಿಸಿದ ಕವಿಗಳೆಲ್ಲರಿಗೂ ಪ್ರಶಂಶನ ಪತ್ರ ಹಾಗೂ ಕೃತಿಗಳನ್ನು ನೀಡಿ ಗೌರವಿಸಲಾಯಿತು.ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಣೆ ಗೈದರು.

ಪ್ರಾದೇಶಿಕ ವಾರ್ತೆಗಳು

ವಲ್ಲಿ ವಗ್ಗ ಅವರಿಗೆ ಕವಿತಾ ಟ್ರಸ್ಟ್‌ನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ

ಕವಿತಾ ಟ್ರಸ್ಟ್ ನೀಡುವ 2025ನೇ ಸಾಲಿನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ, ವಲ್ಲಿ ವಗ್ಗ ಎಂಬ ಕಾವ್ಯನಾಮದಲ್ಲಿ ಬರೆಯುವ ವಲೇರಿಯನ್ ಡಿ’ಸೋಜಾ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯ ಮೌಲ್ಯ ರೂ. 25,000, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ಜನವರಿ 11, 2026 ರಂದು ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ನಲ್ಲಿರುವ ಮದರ್ ತೆರೇಸಾ ಪೀಸ್ ಪಾರ್ಕ್‌ನಲ್ಲಿ ನಡೆಯುವ 20 ನೇ ಕವಿತಾ ಫೆಸ್ತ್ ಉತ್ಸವದ ಸಂದರ್ಭದಲ್ಲಿ ಪ್ರಸಿದ್ಧ ಕೊಂಕಣಿ ಬರಹಗಾರ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಣ್ಣ ಕಥೆಗಾರ ದಾಮೋದರ್ ಮಾವ್ಜೊ ಅವರು ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಿದ್ದಾರೆ.ಕೊಂಕಣಿ-ಕನ್ನಡ ಕವಿ ಮತ್ತು ಸಣ್ಣ ಕಥೆಗಾರ ವಲೇರಿಯನ್ ಡಿಸೋಜಾ ಅವರು ವಲ್ಲಿ ವಗ್ಗ ಎಂಬ ಕಾವ್ಯನಾಮದಲ್ಲಿ ಬರೆಯುತ್ತಾರೆ. ಅವರು 1947 ಜುಲೈ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿಯ ವಗ್ಗ ಎಂಬ ಸಣ್ಣ ಪಟ್ಟಣದಲ್ಲಿ ಪೀಟರ್ ಮತ್ತು ಮೇರಿ ಡಿ’ಸೋಜಾ ಅವರಿಗೆ ನಾಲ್ಕನೇ ಮಗುವಾಗಿ ಜನಿಸಿದರು. ಹದಿನೇಳನೇ ವಯಸ್ಸಿನಲ್ಲಿ, ಅವರ ಮೊದಲ ಕಥೆ ‘ಸೊರ‍್ಯಾವರ್ವಿಂ ಚುರ್ಚುರೆ’, ರಾಕ್ಣೊ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಅಂದಿನಿಂದ, ಕಳೆದ ಆರು ದಶಕಗಳಲ್ಲಿ, ಅವರು ನೂರಾರು ಕವನಗಳನ್ನು ಮತ್ತು ವಿವಿಧ ನಿಯತಕಾಲಿಕೆಗಳು, ವೆಬ್‌ಸೈಟ್‌ಗಳು ಮತ್ತು ಸಂಕಲನಗಳಲ್ಲಿ ಕಥೆಗಳು, ಬರಹಗಳು ಮತ್ತು ಸಂಕಲನಗಳನ್ನು ಪ್ರಕಟಿಸಿದ್ದಾರೆ.‘ದೊಂಗ್ರಾ ವಯ್ಲಿ ವಾಟ್’ (2007) ಮತ್ತು ‘ನೆಕೆತ್ರಾಂ’ (2013) ಅವರ ಕವನ ಸಂಕಲನಗಳು. ‘ಜಿನ್ನಿ ಕೊಣಾಚೆಂ?’ (1966), ‘ಸತ್ ಆನಿ ಜಿವಿತ್’ (1967), ‘ಧುಳ್’ (1990) ಮತ್ತು ‘ಖಾಂದಿ ಖುರಿಸ್’ (2015) ಅವರ ಕಥಾ ಸಂಕಲನಗಳಾಗಿವೆ. ಅಭಿರುಚಿ ಪ್ರಕಾಶನ, ಮೈಸೂರು 2013 ರಲ್ಲಿ ‘ಹೆಗಲ ಶಿಲುಬೆ’ ಎಂಬ ಶೀರ್ಷಿಕೆಯ ಹದಿನೇಳು ಕಥೆಗಳ ಸಂಕಲನವನ್ನು ಕನ್ನಡದಲ್ಲಿ ಪ್ರಕಟಿಸಿದೆ.2001 ರಲ್ಲಿ, ಅವರ ‘ಕಾಡಾಡಿ’ ಕಥೆ ಕರ್ನಾಟಕ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗಳಿಸಿತು.ವಲ್ಲಿ ವಗ್ಗ ಒಬ್ಬ ಬರಹಗಾರರಷ್ಟೇ ಅಲ್ಲ, ಕೊಂಕಣಿ ಭಾಷೆಯ ಉತ್ಸಾಹಿ ಕಾರ್ಯಕರ್ತರೂ ಆಗಿದ್ದಾರೆ. ಮೈಸೂರಿನಲ್ಲಿ ಸ್ಥಾಪಿಸಲಾದ ಕೊಂಕಣಿ ಕ್ರಿಶ್ಚಿಯನ್ ಸಂಘದ ಮೊದಲ ಜಂಟಿ ಕಾರ್ಯದರ್ಶಿ ಮತ್ತು ಆರು ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿದ್ದರು. ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು.ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (2010), ಕೊಂಕಣಿ ಕುಟಮ್ ಬಾಹ್ರೇನ್ ಪ್ರಶಸ್ತಿ (2012), ದಾಯ್ಜಿ ದುಬಾಯ್ ಪ್ರಶಸ್ತಿ (2019), ಸಂದೇಶ ಸಾಹಿತ್ಯ ಪ್ರಶಸ್ತಿ (2020) – ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2020 ರಲ್ಲಿ, ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಶ್ರೀಮತಿ ನಾಗಿಣಿಭರಣ ಅವರ ನಿರ್ದೇಶನದಲ್ಲಿ ವಲ್ಲಿ ವಗ್ಗ ಅವರ ಕೊಂಕಣಿ-ಕನ್ನಡ ಸಾಹಿತ್ಯ ಕೃತಿಯ ಕುರಿತು 7 ನಿಮಿಷಗಳ ಸಾಕ್ಷ್ಯಚಿತ್ರವನ್ನು ನಿರ್ಮಿಸಿತು. ನವೆಂಬರ್ 2020 ರಲ್ಲಿ, ಅವರಿಗೆ ಕರ್ನಾಟಕದ ಮುಖ್ಯಮಂತ್ರಿಗಳು 1 ಲಕ್ಷ ರೂ. ಮತ್ತು ಇಪ್ಪತ್ತು ಗ್ರಾಂ ಚಿನ್ನದ ಪದಕದೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಕವಿತಾ ಟ್ರಸ್ಟ್‌ನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿಯನ್ನು ಮಂಗಳೂರು ಬಳಿಯ ಕುಪ್ಪೆಪದವುವಿನ ಜೋಸೆಫ್ ಮಥಾಯಸ್ ಅವರು ಸ್ಥಾಪಿಸಿದರು, ಅವರು ದುಬೈನ ಮೆರಿಟ್ ಫ್ರೈಟ್ ಸಿಸ್ಟಮ್ಸ್ ಎಲ್‌ಎಲ್‌ಸಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ಪ್ರಶಸ್ತಿಯನ್ನು ಇಲ್ಲಿಯವರೆಗೆ ಗೋವಾ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದ ಹದಿನೇಳು ಕವಿಗಳಿಗೆ ನೀಡಲಾಗಿದೆ. ವಲ್ಲಿ ವಗ್ಗ 18 ನೇ ಪ್ರಶಸ್ತಿ ವಿಜೇತರು.

ಪ್ರಾದೇಶಿಕ ವಾರ್ತೆಗಳು

BREAKING NEWS. ಮುಂಬಯಿಯ ಖ್ಯಾತ ಉದ್ಯಮಿಯೊಬ್ಬರಿಗೆ ಹನಿ ಟ್ರ್ಯಾಪ್. 5 ಕೋಟಿ ಡೀಲ್

ಬೆಂಗಳೂರು – ಮುಂಬಯಿ ಉದ್ಯಮಿಯೊಬ್ಬರನ್ನು ಹನಿ ಟ್ರ್ಯಾಪ್ ಮಾಡಿದ ಪ್ರಕರಣವನ್ನು ಸದ್ದಿಲ್ಲದೆ ಮುಚ್ಚಿಡಲಾಗಿದೆ. ಈ ಬಗ್ಗೆ ಮಹತ್ವದ ಸುಳಿವು ಲಭ್ಯವಾಗಿದೆ. ಇದರ ಡೀಟೇಲ್ ವರದಿ ನಿರೀಕ್ಷಿಸಿ

ಪ್ರಾದೇಶಿಕ ವಾರ್ತೆಗಳು

ನಿಟ್ಟೆ ವಿನಯ ಹೆಗ್ಡೆ ನಿಧನ

ಮಂಗಳೂರು: ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ, ಶಿಕ್ಷಣ ತಜ್ಞ ಕೆ.ಎಸ್. ಹೆಗ್ಡೆ ಚಾರಿಟೆಬಲ್ ಹಾಸ್ಪಿಟಲ್‍ನ ವ್ಯವಸ್ಥಾಪಕ ನಿರ್ದೇಶಕ ಎನ್. ವಿನಯ ಹೆಗ್ಡೆ (86) ಗುರುವಾರ ನಸುಕಿನ 2 ಗಂಟೆ ಸುಮಾರಿಗೆ ಕದ್ರಿ ಶಿವಬಾಗ್‍ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಪತ್ನಿ ಸುಜಾತಾ ಹೆಗ್ಡೆ, ಪುತ್ರ ನಿಟ್ಟೆ ವಿ.ವಿ.ಯ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ, ಪುತ್ರಿ ಬೆಂಗಳೂರಿನ ನಿಟ್ಟೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥೆ ಅಶ್ವಿತಾ ಪೂಂಜ, ಸಹೋದರ ನಿವೃತ್ತ ಕರ್ನಾಟಕ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ ಸಹಿತ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್ ಆಗಿದ್ದ ಕೆ.ಎಸ್. ಹೆಗ್ಡೆ (ಕೌಡೂರು ಸದಾನಂದ ಹೆಗ್ಡೆ) ಅವರ ದ್ವಿತೀಯ ಪುತ್ರರಾದ ವಿನಯ ಹೆಗ್ಡೆ ಅವರು ಕರಾವಳಿ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದರು. ಗ್ರಾಮೀಣ ಪ್ರದೇಶವಾಗಿದ್ದ ನಿಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಶಿಕ್ಷಣ ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದವರು ಧಾರ್ಮಿಕ, ಸಾಮಾಜಿಕ ಸೇವೆಯ ಮೂಲಕವೂ ಅಪಾರ ಖ್ಯಾತಿ ಗಳಿಸಿದ್ದರು. ಇವರ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.*ಎರಡು ದಿನ ಹಿಂದೆ ಅಯೋಧ್ಯೆ ರಾಮನ ದರ್ಶನ*ವಿನಯ ಹೆಗ್ಡೆ ಕುಟುಂಬ ಸಹಿತ ಡಿ. 28ರಂದು ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಭೇಟಿ ನೀಡಿ, ಶ್ರೀರಾಮಚಂದ್ರನ ದರ್ಶನ ಪಡೆದು ಬಂದಿದ್ದರು. ಅಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಜತೆಯಲ್ಲೇ ಶ್ರೀರಾಮನ ದರ್ಶನ ಮಾಡಿದ್ದರು. ಈ ವೇಳೆ ಅವರು, ಜೀವನದ ಆಸೆ ಈಡೇರಿದೆ ನನಗೆ ಇನ್ನೇನು ಬೇಕು’ ಎನ್ನುವ ಮಾತನ್ನು ಹೇಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಅಯೋಧ್ಯೆಯಿಂದ ಬಂದವರಿಗೆ ಸ್ವಲ್ಪ ಅನಾರೋಗ್ಯ ಕಾಡಿತ್ತು. ಡಿ. 30ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು. ಡಿ. 31ರಂದು ಮನೆಯಲ್ಲೇ ಇದ್ದು, ರಾತ್ರಿ ಮಲಗಿದವರು ಎದ್ದು ಶೌಚಾಲಯಕ್ಕೆ ಹೋಗಿ ಮರಳಿ ಬಂದು ಹಾಸಿಗೆಯಲ್ಲಿ ಕುಳಿತವರು ಅಲ್ಲೇ ಮಲಗಿ ನಿಧನ ಹೊಂದಿದರು.

ಪ್ರಾದೇಶಿಕ ವಾರ್ತೆಗಳು

ಹರೀಶ್ ಮೋಟುಕಾನ ಅವರಿಗೆ ಕನ್ನಡ ಕಸ್ತೂರಿ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದಿಂದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇಲ್ಲಿ ಡಿ.30ರಂದು ಸಾಹಿತಿ ತೇಜಕುಮಾರ್ ಬಡ್ಡಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಜಯವಾಣಿ ಹಿರಿಯ ವರದಿಗಾರ ಹರೀಶ್ ಮೋಟುಕಾನ ಅವರು ಕನ್ನಡ ಕಸ್ತೂರಿ ಪುರಸ್ಕಾರ ಸ್ವೀಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಪ್ರಧಾನಿ ಮೋದಿ ಅವರ ವಂದೇ ಮಾತರಂ-150 ಅಭಿಯಾನ: ಮಂಗಳೂರು ಕಂಬಳದಲ್ಲಿ ಮೊಳಗಿದ ದೇಶಭಕ್ತಿಯ ನಿನಾದ. ಸಂಸದ ಕ್ಯಾ. ಚೌಟ ನೇತೃತ್ವದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ನವ ವರ್ಷದ ಕಂಬಳ

ಮಂಗಳೂರು: ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ಕಂಬಳ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್‌ಪಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ನಡೆದ ನವ ವರ್ಷದ-ನವ ವಿಧದ ಮಂಗಳೂರು ಕಂಬಳವು ನವರೂಪದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಬಹಳ ಯಶಸ್ವಿಯಾಗಿ ಸಂಪನ್ನಗೊಂಡಿದೆ.ತುಳುನಾಡು ಅಸ್ಮಿತೆಯ 9ನೇ ವರ್ಷದ ಮಂಗಳೂರು ಕಂಬಳದಲ್ಲಿ ಸಂಸದ ಕ್ಯಾ. ಚೌಟ ಅವರ ʼಬ್ಯಾಕ್‌ ಟು ಊರುʼ ಪರಿಕಲ್ಪನೆಗೆ ಪೂರಕವಾಗಿ ತಾಯ್ನಾಡಿಗೆ ವಾಪಾಸ್ಸಾಗಿ ಸ್ವಂತ ಉದ್ಯಮ ಕಟ್ಟಿ ಬೆಳೆಸಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿರುವ 9 ಮಂದಿ ಉದ್ಯಮಿಗಳನ್ನು ಕಂಬಳ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇತರೆ ನಾಯಕರ ಸಮ್ಮುಖದಲ್ಲಿ ಸನ್ಮಾನಿಸಿರುವುದು ಅವಿಸ್ಮರಣೀಯ ಕ್ಷಣವಾಗಿತ್ತು. ವಿನೂತನ ‘ವಂದೇ ಮಾತರಂ ಬೂತ್’: 1000ಕ್ಕೂ ಹೆಚ್ಚು ಮಂದಿಯಿಂದ ರಾಷ್ಟ್ರೀಯ ಗೀತೆ ರೆಕಾರ್ಡ್!ಈ ಬಾರಿಯ ಮಂಗಳೂರು ಕಂಬಳದಲ್ಲಿ ಸಂಸದ ಕ್ಯಾ. ಚೌಟ ಅವರ ಆಶಯದಂತೆ ನಮ್ಮ ತುಳುನಾಡಿನ ಜನರಲ್ಲಿ ದೇಶ ಭಕ್ತಿಯ ಚೈತನ್ಯವನ್ನು ಉದ್ದೀಪನಗೊಳಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕರೆಯಂತೆ ವಂದೇ ಮಾತರಂ’ ಗೀತೆಯನ್ನು ಕೆರೋಕೆಯೊಂದಿಗೆ ಹಾಡಿ, ಅದರ ವಿಡಿಯೋವನ್ನು ವಂದೇ ಮಾತರಂ ವೆಬ್ ಸೈಟ್ ನಲ್ಲಿ ಅಪ್‌ಲೋಡ್ ಮಾಡಲು ವಿಶೇಷ ಬೂತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರಂತೆ, ಒಂದೆಡೆ ಕಂಬಳದ ಕೋಣಗಳ ಓಟ ಸ್ಪರ್ಧೆ ನಡೆಯುತ್ತಿದ್ದರೆ, ಮತ್ತೊಂದಡೆ ಮಕ್ಕಳು, ಯುವಕರು, ಮಹಿಳೆಯರು, ಹಿರಿಯರು,ಕಂಬಳ ಓಟಗಾರರು ಹೀಗೆ ಕಂಬಳಕ್ಕೆ ಬಂದಿದ್ದವರ ಪೈಕಿ ಸುಮಾರು 1000ಕ್ಕೂ ಹೆಚ್ಚು ಮಂದಿ ಬಂದು ವಂದೇ ಮಾತರಂ ಗೀತೆ ಹಾಡಿ ಹಾಡಿ ಡಿಜಿಟಲ್ ಸರ್ಟಿಫಿಕೇಟ್ ಪಡೆದುಕೊಂಡರು. ಈ ಮೂಲಕ ಇಡೀ ಮಂಗಳೂರು ಕಂಬಳದಲ್ಲಿ ದೇಶಪ್ರೇಮದ ಕಿಡಿ ಪಸರಿಸುವ ಬಹಳ ವಿನೂತನ ಪ್ರಯತ್ನವನ್ನು ಕ್ಯಾ. ಚೌಟ ಅವರು ಮಾಡಿದ್ದಾರೆ. ಮಂಗಳೂರು ಕಂಬಳದಲ್ಲಿಯೂ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಗೆ ತುಳುನಾಡಿನ ಜನತೆಯು ವಿಭಿನ್ನ ರೀತಿ ಸಾಕ್ಷಿಯಾಗುವಂತೆ ಮಾಡಿದ ಕ್ಯಾ. ಬ್ರಿಜೇಶ್‌ ಚೌಟ ಅವರ ಪ್ರಯತ್ನ ನಿಜಕ್ಕೂ ಮಾದರಿ ಹಾಗೂ ಶ್ಲಾಘನೀಯ. ಕಂಬಳದಲ್ಲಿ ಹಿರಿಯ ಜೀವಗಳ ಸಮ್ಮಿಲನಹಾಗೆಯೇ ಈ ಬಾರಿಯ ಮಂಗಳೂರು ಕಂಬಳದಲ್ಲಿ ದಕ್ಷಿಣ ಕನ್ನಡದ ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಗಳಿಗೂ ಭಾಗವಹಿಸುವ ಅವಕಾಶವನ್ನು ಕೂಡ ಕ್ಯಾ. ಚೌಟ ಅವರು ಕಲ್ಪಿಸಿದ್ದರು. ಅದರಂತೆ ಜಿಲ್ಲೆಯ ಹಲವಾರು ವೃದ್ಧಾಶ್ರಮಗಳಿಂದ ಹಿರಿಯ ಚೇತನಗಳು ಮಂಗಳೂರು ಕಂಬಳ ನೋಡುವುದಕ್ಕೆ ಆಗಮಿಸಿದ್ದು, ಅವರೆಲ್ಲರನ್ನು ಖುದ್ದು ಕ್ಯಾ. ಚೌಟ ಅವರೇ ಬಹಳ ಪ್ರೀತಿ-ಅಕ್ಕರೆಯಿಂದ ಕಂಬಳ ಕರೆಯತ್ತ ಕರೆದುಕೊಂಡು ಹೋಗಿ ಕಂಬಳದ ವೈಭವವನ್ನು ಕಣ್ಣುತುಂಬಿಕೊಳ್ಳುವುದಕ್ಕೆ ಜತೆಯಾಗಿದ್ದು ನಿಜಕ್ಕೂ ಭಾವಪರವಶಗೊಳಿಸುವಂತಿತ್ತು. ಕಂಬಳದ ಈ ಸಂಭ್ರಮದಲ್ಲಿ ಭಾಗಹಿಸುವುದಕ್ಕೆ ಹೀಗೊಂದು ಅಪರೂಪದ ಅವಕಾಶ ಲಭಿಸಿರುವುದರ ಧನ್ಯತೆ ಆ ಹಿರಿಜೀವಗಳ ಮುಖದಲ್ಲಿ ಕಾಣಿಸಿದ್ದು, ಇಂಥಹ ಅಪರೂಪದ ಕ್ಷಣ ಕ್ಯಾ. ಚೌಟ ಅವರಲ್ಲಿಯೂ ಸಾರ್ಥಕತೆಯ ಭಾವ ಮೂಡಿಸಿದೆ.ಹಾಗೆಯೇ ಏಕ್‌ ಪೇಡ್‌ ಮಾ ಕೇ ನಾಮ್‌ ಅಭಿಯಾನದಂತೆ ಮಂಗಳೂರು ಕಂಬಳದಲ್ಲಿಯೂ 200ಕ್ಕೂ ಹೆಚ್ಚು ಸಸಿ ವಿತರಿಸುವ ಬಹಳ ವಿಭಿನ್ನ ವ್ಯವಸ್ಥೆ ಕಲ್ಪಿಸಲಾಗಿತ್ತು. ಜತೆಗೆ ಎಐ ಕ್ರಿಯೇಟಿವ್‌ ಯೋಧ, ಫೋಟೊಗ್ರಾಫಿ, ಸೋಷಿಯಲ್‌ ಮೀಡಿಯಾ ಆಸಕ್ತರ ರೀಲ್ಸ್‌ ಮೇಕಿಂಗ್‌ ಸ್ಪರ್ಧೆಯೂ ನವ ವರ್ಷದ ಕಂಬಳಕ್ಕೆ ವಿಶೇಷ ಕಳೆ ನೀಡಿತ್ತು. ಈ ನಡುವೆ ಡ್ರಾಯಿಂಗ್‌ ಸ್ಪರ್ಧೆಯಲ್ಲಿಯೂ ಸುಮಾರು 100 ಮಂದಿ ಭಾಗವಹಿಸಿ ಕಂಬಳವನ್ನು ಮತ್ತಷ್ಟು ಕಲರ್‌ಪುಲ್‌ ಮಾಡಿತ್ತು. ಮಂಗಳೂರು ಕಂಬಳದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆನವ ವಿಧದ-ನವ ವರ್ಷದ ಮಂಗಳೂರು ಕಂಬಳದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ ಅವರು, “ಮಂಗಳೂರು ಕಂಬಳ ಸಮಿತಿಯ ಅವಿರತ ಪರಿಶ್ರಮ ಹಾಗೂ ಉತ್ಸಾಹದ ಫಲವಾಗಿ 9ನೇ ವರ್ಷದ ಮಂಗಳೂರು ಕಂಬಳವು ತುಳುನಾಡಿನ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ಕಂಬಳದ ಸೊಬಗು ನೋಡಲು ಬಂದ ಜನರಲ್ಲಿ ದೇಶಭಕ್ತಿಯ ಭಾವ ಉದ್ದೀಪನಗೊಳಿಸುವುದಕ್ಕೆ ಸಾಕ್ಷಿಯಾಗಿದ್ದು ವೈಯಕ್ತಿಕವಾಗಿ ಬಹಳ ಖುಷಿ ಹಾಗೂ ಸಂತೃಪ್ತಿ ತಂದಿದೆ. ಇಡೀ ಮಂಗಳೂರು ಕಂಬಳ ಬಹಳ ಅಚ್ಚುಕಟ್ಟಾಗಿ ನಡೆಯುವ ಮೂಲಕ ಅದರ ಯಶಸ್ವಿಗೆ ನೇರ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಸಲ್ಲಿಸಬಯಸುತ್ತೇವೆ. ಇದು ಮುಂದಿನ 10ನೇ ವರ್ಷದ ಮಂಗಳೂರು ಕಂಬಳವನ್ನು ಮತ್ತಷ್ಟು ವೈಭವೋಪೇತವಾಗಿ ಆಯೋಜಿಸುವುದಕ್ಕೆ ಉತ್ತೇಜನವನ್ನು ನೀಡಿದೆ ಎಂದು ಕ್ಯಾ.ಚೌಟ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸುಸ್ಲಾನ್ ಕಾಲೋನಿಯಲ್ಲಿ ಉಚಿತ ವೈದ್ಯಕೀಯ ಶಿಬಿರ

ಪಡುಬಿದ್ರಿ: ಬೆಂಗಳೂರಿನ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇವರ ಸಹಭಾಗಿತ್ವ ದಲ್ಲಿ ಶನಿವಾರ ಇಲ್ಲಿನ ಸುಸ್ಲಾನ್ ಕಾಲೋನಿಯಲ್ಲಿ “ಆರೋಗ್ಯವೇ ಭಾಗ್ಯ” ಉಚಿತ ವೈದ್ಯಕೀಯ ಶಿಬಿರ ನಡೆಯಿತು.ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಶಿಕಾಂತ್ ಪಡುಬಿದ್ರಿ ಮಾತನಾಡಿ ಇಂತಹ ವೈದ್ಯಕೀಯ ಶಿಬಿರಗಳಿಂದ ಕಾಯಿಲೆಗಳ ಪತ್ತೆ ಆಗುವುದರಿಂದ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಹಾಯಕ ಆಗುತ್ತದೆ. ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ಎಸ್ ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ವಹಿಸಿದ್ದರು.ಕಣಚೂರು ಆಯುರ್ವೇದ ಕಾಲೇಜು ವೈದ್ಯಕೀಯಸಲಹೆಗಾರ ಡಾ. ಸುರೇಶ್ ನೆಗಳಗುಳಿ. ಕಣಚೂರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕಾರ್ತಿಕೇಯ ಪ್ರಸಾದ್, ಸಹಾಯಕ ಪ್ರಾಧ್ಯಾಪಕ ಡಾ. ಶ್ರೀರಾಮ್,ಕಣಚೂರು ಆಸ್ಪತ್ರೆ, ಸಮಾಜ ಸೇವಕ ರಂಜನ್ ಕುಮಾರ್,ಸುಸ್ಲೋನ್ ಕಾಲೊನಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಮಾಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ಸೌಮ್ಯ ಶೆಟ್ಟಿ, ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಅನುಪಮಾ ರಾವ್, ನಿರ್ದೇಶಕಿ ಶಿಲ್ಪಾ ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು.ಶರಣ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.ಬಳಿಕ ನಡೆದ ವೈದ್ಯಕೀಯ ಶಿಬಿರದಲ್ಲಿ 60 ಕ್ಕು ಹೆಚ್ಚು ಮಂದಿ ವೈದ್ಯಕೀಯ ಸಲಹೆ ಮತ್ತು ಔಷಧಿ ಪಡೆದರು.

ಪ್ರಾದೇಶಿಕ ವಾರ್ತೆಗಳು

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026. ಜನವರಿ 18 ರಂದು ಕಾಸರಗೋಡು ನಲ್ಲಿ ಪ್ರಶಸ್ತಿ ಪ್ರದಾನ

ಮಂಗಳೂರು, ಕಾಸರಗೋಡು ಕನ್ನಡ ಭವನದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾಗಿರುವ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026 ಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರನ್ನು ಆಯ್ಕೆ ಮಾಡಲಾಗಿದೆ. ಜನವರಿ 18 ರಂದು ಕಾಸರಗೋಡು ನಲ್ಲಿ ಕನ್ನಡ ಭವನ ರಜತ ಸಂಭ್ರಮ ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪುರಸ್ಕಾರ ನಡೆಯಲಿದೆ.ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

Scroll to Top