Author name: editor

ಪ್ರಾದೇಶಿಕ ವಾರ್ತೆಗಳು

ಅಳಿಕೆ ರಾಮಯ್ಯ ರೈ ಸಹಾಯ ನಿಧಿ ಪ್ರದಾನ – ಗೃಹ ಸನ್ಮಾನ. ‘ಪ್ರಯೋಗಶೀಲ ಬಣ್ಣದ ವೇಷಧಾರಿ ಶೆಟ್ಟಿಗಾರ್’: ಡಾ. ಜೋಶಿ

ಮಂಗಳೂರು: ‘ತೆಂಕು ತಿಟ್ಟಿನ ಬಣ್ಣದ ವೇಷಗಾರಿಕೆ ಯಕ್ಷಗಾನ ರಂಗದ ವಿಸ್ಮಯಗಳಲ್ಲೊಂದು. ಅನುಭವೀ ಹಿರಿಯ ಕಲಾವಿದರು ಈ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅದೇ ಪರಂಪರೆಯ ಜಾಡಿನಲ್ಲಿ ಹೊಸ ಆವಿಷ್ಕಾರದೊಂದಿಗೆ ಜನಮನ ಗೆದ್ದ ಕಲಾವಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್. ಅವರು ಓರ್ವ ಪ್ರಯೋಗಶೀಲ ಬಣ್ಣದ ವೇಷಧಾರಿ’ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಹೇಳಿದ್ದಾರೆ. ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರಸಿದ್ಧ ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ಗೃಹ ಸಮ್ಮಾನದೊಂದಿಗೆ ಅಳಿಕೆ ರಾಮಯ್ಯ ರೈ ಯಕ್ಷ ಸಹಾಯನಿಧಿ ಪ್ರದಾನ ಮಾಡಿದ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಮುಖ್ಯ ಸಲಹೆಗಾರರಾಗಿ ಅವರು ಮಾತನಾಡಿದರು. ಇನ್ನೋರ್ವ ಸಲಹೆಗಾರ ಹಾಗೂ ಸದಾಶಿವ ಶೆಟ್ಟಿಗಾರ್ ಅವರ ಒಡನಾಡಿ ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು.ನೆರವಿಗಾಗಿ ಮನವಿ:ಆಯ್ಕೆ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಬಣ್ಣದ ಮಾಲಿಂಗಜ್ಜನ ಗರಡಿಯಲ್ಲಿ ಪಳಗಿದ ಸದಾಶಿವ ಶೆಟ್ಟಿಗಾರ್ ಪಾರಂಪರಿಕ ಶೈಲಿ, ಹೊಸತನದ ಮೆರುಗು ಮತ್ತು ಪ್ರಬುದ್ಧ ಮಾತುಗಾರಿಕೆಯ ಮೂಲಕ ಭರವಸೆಯ ಬಣ್ಣದ ವೇಷಧಾರಿಯಾಗಿ ಬೆಳೆದು ಬಂದವರು. ಗಜೇಂದ್ರ ಮೋಕ್ಷದ ಮಕರ, ರಾಮ ಕಾರುಣ್ಯದ ಕಾಕಾಸುರ ಅವರದೇ ಪರಿಕಲ್ಪನೆಯ ಬಣ್ಣದ ವಿಶಿಷ್ಟ ಮಾದರಿಗಳು. ಪ್ರಸ್ತುತ 60ರ ಹರೆಯದಲ್ಲಿ ಗಂಭೀರ ಕಾಯಿಲೆಗೆ ತುತ್ತಾಗಿ ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಅವರಿಗೆ ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಹಣ ಬೇಕಾಗಿದೆ. ಕಲಾಭಿಮಾನಿಗಳು ಉದಾರವಾಗಿ ಸ್ಪಂದಿಸಿದರೆ ಮಾತ್ರ ಯಕ್ಷಗಾನ ರಂಗದಲ್ಲಿ ಮುಂದೆಯೂ ಅವರು ದುಡಿಯಬಲ್ಲರು. ನೆರವು ನೀಡುವವರು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಬಹುದು. (ಗೂಗಲ್ ಪೇ ನಂ.9741025189)’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅಳಿಕೆ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ರೂ.20,000/- ಸಹಾಯ ನಿಧಿಯನ್ನು ಅರ್ಪಿಸಿ, ಅವರು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.ಎತ್ತರದ ವ್ಯಕ್ತಿ ಅಳಿಕೆ:ಸದಾಶಿವ ಶೆಟ್ಟಿಗಾರ್ ಮತ್ತು ಕಲಾವತಿ ದಂಪತಿಗಳನ್ನು ಸಿದ್ಧಕಟ್ಟೆಯ ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಸದಾಶಿವ ಶೆಟ್ಟಿಗಾರ್ ‘ಕೀರ್ತಿ ಶೇಷ ಅಳಿಕೆಯವರದು ತುಂಬಾ ಎತ್ತರದ ವ್ಯಕ್ತಿತ್ವ. ಅವರ ಜೊತೆಯಲ್ಲಿ ಒಂದು ವೇಷ ಮಾಡಿದ್ದೇನೆ. ಅವರ ಹೆಸರಿನ ಗೌರವ ಸಿಕ್ಕಿರುವುದಕ್ಕೆ ಧನ್ಯತೆಯ ಭಾವ ಮೂಡಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.ಕವಿ – ಸಂಘಟಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಫಲಕ ವಾಚಿಸಿದರು. ಟ್ರಸ್ಟ್ ಸದಸ್ಯರಾದ ಮಹಾಬಲ ಶೆಟ್ಟಿ ಬಜನಿ ಗುತ್ತು, ಅಶೋಕ್ ಶೆಟ್ಟಿ ದರ್ಬೆ ಮತ್ತು ಶೆಟ್ಟಿಗಾರ್ ಅವರ ಮನೆಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

ಮಂಗಳೂರು: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾಡು,ಹೊರನಾಡು ಮತ್ತು ವಿದೇಶಗಳಲ್ಲಿರುವ ವಿವಿಧ ಕ್ಷೇತ್ರಗಳ 74 ಮಂದಿ ಸಾಧಕರನ್ನು ಗುರುತಿಸಿ ಈ ಬಾರಿಯ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿದೆ. ಮೇ 22ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಖ್ಯಾತ ಉದ್ಯಮಿ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು 2025 ಸಾಲಿನ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಬಂಟ್ವಾಳ ತಾಲೂಕಿನ ಶಂಭೂರು ಸರಕಾರಿ ಶಾಲೆಯನ್ನು ದತ್ತು ಪಡೆದು ತನ್ನ ಸಹೋದರನ ಸ್ಮರಣಾರ್ಥ ‘ದಿ.ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆ’ ಎಂಬ ಹೆಸರಿನಲ್ಲಿ ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಲ್ಲದೆ ತಮ್ಮ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಡಿರುವ ಸಮಾಜ ಸೇವೆ ಮತ್ತು ಯಕ್ಷಗಾನ ಸೇವೆಗಾಗಿ ಸಚ್ಚಿದಾನಂದ ಶೆಟ್ಟರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ.ಅಶೋಕ್ ಬಿ. ಹಿಂಚಿಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾಕ್ಟರ್ ಎಚ್.ಎಲ್.ಎನ್.ರಾವ್ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ, ಹಿರಿಯ ಚಲನಚಿತ್ರ ನಟಿಯರಾದ ಪದ್ಮಶ್ರೀ ಭಾರತಿ ವಿಷ್ಣುವರ್ಧನ್, ಡಾ.ಜಯಮಾಲಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಂಗೀತ ನಿರ್ದೇಶಕ ಪ್ರೇಮಕವಿ ಕೆ.ಕಲ್ಯಾಣ್ ಅತಿಥಿಗಳಾಗಿದ್ದರು.ಸ್ವಾಗತ ಸಮಿತಿಯ ಡಾ.ಕೆ.ಎನ್. ಅಡಿಗ ಅಡೂರು, ಗುರುರಾಜ್, ಡಾ. ಬಸವರಾಜು, ಎಚ್.ಎಸ್. ಹನುಮಂತ ರಾವ್, ಮಂಗಳೂರು ಪ್ರತಿನಿಧಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು. ಉಪಸ್ಥಿತರಿದ್ದರು. ಸುಗ್ಗನಹಳ್ಳಿ ಷಡಕ್ಷರಿ ಹಾಗೂ ಸಾರ್ಥವಳ್ಳಿ ನಾರಾಯಣಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ಯಕ್ಷ ಭಾರತಿಯಿಂದ ಸೂರ್ಯನಾರಾಯಣ ಭಟ್ ಸನ್ಮಾನ. ‘ಆಕಾಶವಾಣಿಯನ್ನು ಜನರ ಹತ್ತಿರ ತಂದರು’: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ಕರಾವಳಿಯ ಜನ ಜೀವನದೊಂದಿಗೆ ಹಾಸು ಹೊಕ್ಕಾಗಿರುವ ಮಂಗಳೂರು ಆಕಾಶವಾಣಿಯಲ್ಲಿ ಸುದೀರ್ಘಕಾಲ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಶ್ರೋತೃಗಳೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಸೂರ್ಯನಾರಾಯಣ ಭಟ್ಟರದು ತುಂಬಾ ಕ್ರಿಯಾಶೀಲ ವ್ಯಕ್ತಿತ್ವ. ಯಕ್ಷಗಾನ, ಕೃಷಿ ರಂಗ, ತುಳು – ಕನ್ನಡ ಮತ್ತು ಕೌಟುಂಬಿಕ ಕಾರ್ಯಕ್ರಮಗಳ ಮೂಲಕ ಅವರು ಆಕಾಶವಾಣಿಯನ್ನು ಜನರ ಹತ್ತಿರ ತಂದಿದ್ದಾರೆ’ ಎಂದು ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ಈ ಮಾಸಾಂತ್ಯದಲ್ಲಿ ನಿವೃತ್ತರಾಗಲಿರುವ ಪಿ.ಎಸ್. ಸೂರ್ಯನಾರಾಯಣ ಭಟ್ಟರಿಗೆ ಕರ್ನಾಟಕ ಯಕ್ಷ ಭಾರತಿ ಪುತ್ತೂರು ವತಿಯಿಂದ ಗೌರವಾರ್ಪಣೆ ಮಾಡಿ ಅವರು ಮಾತನಾಡಿದರು. ‘ಪ್ರಸ್ತುತ ಪ್ರಸಾರವಾಗುವ ಕಥಾಮೃತ, ಕೃತಿ ಸಂಪದ, ಯಕ್ಷಸಿರಿ, ಸ್ಮೃತಿ – ದ್ವನಿ, ಕಾವ್ಯ ಯಾನ ಇತ್ಯಾದಿ ಬಾನುಲಿ ಕಾರ್ಯಕ್ರಮಗಳ ಹಿಂದೆ ಸೂರ್ಯ ಭಟ್ಟರ ಪರಿಶ್ರಮ ಇದೆ’ ಎಂದವರು ಹೇಳಿದರು. ಕರ್ನಾಟಕ ಯಕ್ಷ ಭಾರತಿ ತಂಡದ ಎಂ.ಕೆ.ರಮೇಶಾಚಾರ್ಯ, ಪಿ.ಟಿ.ಜಯರಾಮ ಭಟ್, ಗಣರಾಜ ಕುಂಬಳೆ, ಪ್ರಶಾಂತ ರೈ ಪುತ್ತೂರು, ಉಮೇಶ ಆಚಾರ್ಯ ಗೇರುಕಟ್ಟೆ, ರಮೇಶ ಸಾಲ್ವಣ್ಕರ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಅವರು ಶಾಲು, ಹಾರ, ಫಲತಟ್ಟೆ ಹಾಗೂ ಸ್ಮರಣಿಕೆ ನೀಡಿ ಸೂರ್ಯನಾರಾಯಣರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ. ಎಸ್. ಸೂರ್ಯನಾರಾಯಣ ಭಟ್ಟರು ‘ಬಾನುಲಿ ಮಾಧ್ಯಮದ ಮೂಲಕ ಹಲವಾರು ಕಲಾತಂಡಗಳು, ನಾಡಿನ ವಿದ್ವಾಂಸರು ಮತ್ತು ಜನಸಾಮಾನ್ಯರ ಸಂಪರ್ಕ ತನಗಾಗಿದೆ’ ಎಂದು ತಿಳಿಸಿ, ಯಕ್ಷಗಾನ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಲತೀಶ್ ಪಾಲ್ದನೆ ಹಾಗೂ ತಾಂತ್ರಿಕ ವಿಭಾಗದ ಚಂದ್ರಶೇಖರ ಪಾಣಾಜೆ ,ಅಕ್ಷತಾ ರಾಜ್ ಪೆರ್ಲ, ಚೈತನ್ಯ ಪ್ರಶಾಂತ್, ಚಂದ್ರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಬಳಗದಿಂದ ‘ಕೋಟಿ – ಚೆನ್ನಯ’ ವಿಶೇಷ ತುಳು ಯಕ್ಷಗಾನ ತಾಳಮದ್ದಳೆಯ ಧ್ವನಿ ಮುದ್ರಣ ಜರಗಿತು.

ಪ್ರಾದೇಶಿಕ ವಾರ್ತೆಗಳು

ಭಾರಿ ಗಾಳಿ ಮಳೆಗೆ ಪತ್ರಿಕಾ ಭವನ ಬಳಿ ಉರುಳಿ ಬಿದ್ದ ಮರ, ತಪ್ಪಿದ ಅನಾಹುತ

ಮಂಗಳೂರು, ನಗರದ ಲೇಡಿ ಹಿಲ್ ಉರ್ವಾ ಮಾರ್ಕೆಟ್ ರಸ್ತೆಯಲ್ಲಿ ಇರುವ ಪತ್ರಿಕಾ ಭವನ ಬಳಿ ಶನಿವಾರ ಸಂಜೆ 6 ಗಂಟೆಗೆ ವೇಳೆಗೆ ಭಾರಿ ಗಾಳಿ ಮಳೆಗೆ ಮರವೊಂದು ಉರುಳಿ ಬಿದ್ದಿದೆ. ಕೂಡಲೇ ಮೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಉರುಳಿ ಬಿದ್ದ ಮರ ತೆರವು ಗೊಳಿಸಿದ್ದಾರೆ.ಈ ಘಟನೆ ಬಳಿಕ ವಿದ್ಯುತ್ ಸಂಪರ್ಕ ಕಡಿತ ಗೊಂಡಿತ್ತು. ಇಂದು ಬೆಳಿಗ್ಗೆ ಮೆಸ್ಕಾಂ ಇಲಾಖೆ ಸಿಬ್ಬಂದಿ ದುರಸ್ತಿ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಶ್ರೀಮತಿ ಸಂಧ್ಯಾ ಆಚಾರ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಾದೇಶಿಕ ವಾರ್ತೆಗಳು

ಸ್ಪರ್ಶ ಬಿ ಶೆಟ್ಟಿಗೆ ಶೇ 96 ಅಂಕ

ಮಂಗಳೂರು ನಗರದ ಲೇಡಿಹಿಲ್ ವಿಕ್ಟೋರಿಯ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸ್ಪರ್ಶ ಬಿ ಶೆಟ್ಟಿ 600 (ಶೇ 96) ಅಂಕ ಪಡೆದಿದ್ದಾಳೆ.ಈಕೆ ಬಿಜೈ ಕಾಪಿಕಾಡ್ 3 ನೇ ಕ್ರಾಸ್ ನಿವಾಸಿ ಬಾಲಕೃಷ್ಣ ಶೆಟ್ಟಿ ಮತ್ತು ಸಪ್ನಾ ದಂಪತಿಯ ಪುತ್ರಿ.

ಪ್ರಾದೇಶಿಕ ವಾರ್ತೆಗಳು

ಚೆಂಡೆ :ಹಿರಿಯ ಯಕ್ಷಗಾನ ಕಲಾವಿದರಾದ ವಿಷ್ಣುಶರ್ಮ ವಾಟೆಪಡ್ಪು ಹಾಗೂ ಚಂದ್ರಹಾಸ ತುಂಬೆ ಇವರಿಗೆ ಸನ್ಮಾನ.

ಬಂಟ್ವಾಳ :ಹಿರಿಯ ಯಕ್ಷಗಾನ ಕಲಾವಿದ ಕೀರ್ತಿಶೇಷ ಪುಳಿಂಚ ರಾಮಯ್ಯ ಶೆಟ್ಟಿಯವರ ಸುಪುತ್ರ ಶ್ರೀಧರ ಶೆಟ್ಟಿ ಪುಳಿಂಚ ಇವರ ಸೇವಾ ರೂಪವಾಗಿ ಮೇ 23ರಂದು ಶುಕ್ರವಾರ ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕಲ್ಲುರ್ಟಿ ದೇವಸ್ಥಾನದ ವಠಾರದಲ್ಲಿ ಶ್ರೀ ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ವಿಷ್ಣುಶರ್ಮ ವಾಟೆಪಡ್ಪು ಹಾಗೂ ಚಂದ್ರಹಾಸ ತುಂಬೆ ಇವರನ್ನು ಗಣ್ಯ ಅಥಿತಿಗಳ ಸಮಕ್ಷಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪಾರಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮುಕ್ತೇಸರರಾದ ರತ್ನಾಕರ ಶೆಟ್ಟಿ ಮೂಡಯೂರು, ಬಾಳ್ತಿಲ ಗ್ರಾ ಪಂ ಅಧ್ಯಕ್ಷ ಚಂದ್ರಶೇಖರ ಪೂಜಾರಿ,ಹಿರಿಯ ವಕೀಲರಾದ ಜಗದೀಶ ಶೇಣವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರತಿಭಾ ಶ್ರೀಧರ ಶೆಟ್ಟಿ ಹಾಗೂ ಮನೆಯವರ, ಕಲಾಭಿಮಾನಿಗಳ ಗೌರವ ಉಪಸ್ಥಿತಿಯಲ್ಲಿ ಕಲಾವಿದರನ್ನು ಶಾಲು ಫಲಪುಷ್ಪ ಸ್ಮರಣಿಕೆ ಗೌರವನಿಧಿಯೊಂದಿಗೆ ಸನ್ಮಾನಿಸಲಾಯಿತು.ಯಕ್ಷಗಾನ ಸಂಘಟಕ ಬಿ ಜನಾರ್ದನ ಅಮುಂಜೆ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಬಂಟರ ಸಂಘ ಬಂಟವಾಳ ತಾಲೂಕುವಿಂಶತಿ ಸಂಭ್ರಮ: ಉದ್ಘಾಟನಾ ಸಮಾರಂಭ

(ಜಯಾನಂದ ಪೆರಾಜೆ ಬಂಟ್ವಾಳ)ಬಂಟ್ವಾಳ ತಾಲೂಕು ಬಂಟರ ಸಂಘದ ವಿಂತತಿ ಸಂಭ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಿ ಬಂಟ ಸಮಾಜದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಬಂಟರ ಸಂಘದ ಬಂಟವಾಳ ತಾಲೂಕು ಸಂಘದ ಸ್ಥಾಪಕ ಅಧ್ಯಕ್ಷ ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಪದಾಧಿಕಾರಿಗಳಾದ ಡಾ.ಪ್ರಶಾಂತ ಮಾರ್ಲ,ಜಗನ್ನಾಥ ಚೌಟ ಬದಿಗುಡ್ಡೆ ,ಲೋಕೇಶ್ ಶೆಟ್ಟಿ ಕುಳ, ರಂಜನ್ ಕುಮಾರ್ ಶೆಟ್ಟಿ ಅರಳ ,ಪ್ರತಿಭಾ ರೈ ಪಾಣೆಮಂಗಳೂರು, ರಮಾ ಎಸ್.ಭಂಡಾರಿ,ನಿಶಾನ್ ಆಳ್ವ ಬಿಸಿರೋಡ್ ಮತ್ತಿತರರು ಉಪಸ್ಥಿತಿದ್ದರು.ಮುಖ್ಯ ಅತಿಥಿಗಳಾಗಿ ರಾಜೇಶ್ ಚೌಟ ಸುಜೀರುಗುತ್ತು,ವಿಶ್ವನಾಥ ಶೆಟ್ಟಿ ಕರ್ನಿರೆ,ಕೆಕೆ ಶೆಟ್ಟಿ ಕುತ್ತಿಕಾರ್,ಕೆಪಿ ಶೆಟ್ಟಿ ಮೊಡಂಕಾಪುಗುತ್ತು,ರಘು ಎಲ್.ಶೆಟ್ಟಿ ಮುಂಬಯಿ,ಸುಧಾಕರ ಶೆಟ್ಟಿ ಮುಗರೋಡಿ,ರೋಹಿತ್ ಶೆಟ್ಟಿ ನಗ್ರಿಗುತ್ತು,ಮಲ್ಲಿಕಾ ಪಕ್ಕಳ ಮಲಾರು,ಅಜಿತ್ ಚೌಟ ದೇವಸ್ಯ,ಅರವಿಂದ ಶೆಟ್ಟಿ ನಡುಮೊಗರುಗುತ್ತು,ಡಾ.ಶಿವಪ್ರಸಾದ್ ಶೆಟ್ಟಿ ಬಿಸಿರೋಡು, ಚಂದ್ರಪ್ರಕಾಶ ಶೆಟ್ಟಿ ತುಂಬೆಗುತ್ತು, ಸತೀಶ್ ಆಳ್ವ ಮುಡಾರೆ,ಡಾ.ಸತ್ಯ ಶಂಕರ್ ಶೆಟ್ಟಿ ಬಿಸಿರೋಡು,ಧೀರಜ್ ನಾಯ್ಕ್ ನಾರ್ಯನಡಿಗುತ್ತು ಮೊದಲಾದವರು ಭಾಗವಹಿಸಿದ್ದರು. 20 ಮಂದಿಸಾಧಕರಿಗೆ ವಿಂಶತಿ ಸನ್ಮಾನ:ಬಿ.ರಮಾನಾಥ ರೈ ಮಾಜಿ ಸಚಿವರು, ಜಸ್ಟೀಸ್ ರಾಜೇಶ್ ರೈ ಕಲ್ಲಂಗಳ,ಡಾ.ಸತೀಶ್ ಭಂಡಾರಿ,ರವಿಶಂಕರ ಶೆಟ್ಟಿ ಬಡಾಜೆಗುತ್ತು,ಕರ್ನಲ್ ಜಗಜೀವನ ಭಂಡಾರಿ ಅಗರಿ, ವಿಠಲ ರೈ ಬಾಲಾಜಿ ಬೈಲು, ಶೀನಶೆಟ್ಟಿ ವೀರಕಂಭ,ರವಿ ಶೆಟ್ಟಿ ದೋಣಿಂಜೆಗುತ್ತು,ಸರಸ್ವತಿ ಜಿ.ರೈ ಬೋಳಂತೂರು ಗುತ್ತು,ಕಾಂತಪ್ಪ ಶೆಟ್ಟಿ ‌ಅಗರಿ, ಮಹಾಬಲ ಶೆಟ್ಟಿ ಪಟ್ಲಗುತ್ತು, ಜಯರಾಮ ರೈ ಮಲಾರು, ಸುರೇಶ ರೈ ಮಕರಜ್ಯೋತಿ, ರವೀಂದ್ರ ಕಂಬಳಿ ಸುಜೀರುಬೀಡು,ಸಚ್ಚಿದಾನಂದ ಶೆಟ್ಟಿ ಬೊಂಡಾಲ,ಸಿಎ ಯತೀಶ್ ಭಂಡಾರಿ ಬಿಸಿರೋಡು, ಪ್ರದೀಪ್ ಆಳ್ವ ಅಜೆಕಲಗುತ್ತು,ಶ್ರೀ ನಾಥ್ ಶೆಟ್ಟಿ ಮೊಡಂಕಾಪುಗುತ್ತು ,ಆನಂದ ಶೆಟ್ಟಿ ಕಾಂಪ್ರಬೈಲು,ಚೇತನ್ ರೈ ಮಾಣಿ,ಪುರಂದರ ಶೆಟ್ಟಿ ಗೋಳ್ತಮಜಲು ಇವರಿಗೆ ವಿಂಶತಿ ಸನ್ಮಾನ ಮಾಡಲಾಯಿತು. ವಿವಿಧ ವಲಯಾಧ್ಯಕ್ಷರು ವೇದಿಕೆಯಲ್ಲಿದ್ದರು. ಚಂದ್ರಹಾಸ ಶೆಟ್ಟಿ ರಂಗೋಲಿ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿದರು.ಡಾ.ಪ್ರಖ್ಯಾತ ಶೆಟ್ಟಿ ಪ್ರಾರ್ಥಿಸಿದರು. ಆಶಾ ರೈ ಮತ್ತಿತರರು ಸನ್ಮಾನ ಪತ್ರ ವಾಚಿಸಿದರು.ಭಾನುವಾರ ಬೆಳಿಗ್ಗೆ ಶೈಕ್ಷಣಿಕ,ವೃತ್ತಿಮಾರ್ಗದರ್ಶನ,ವಿಂಶತಿ ಗೌರವ,ನೃತ್ಯ ಸ್ಪರ್ಧೆ,ಯುವೋಚ್ಚಯ,ಸಂಜೆಸಮಾರೋಪ ಸಮಾರಂಭ ನಡೆಯಲಿದೆ.

ಪ್ರಾದೇಶಿಕ ವಾರ್ತೆಗಳು

ಮೇ 27ರಂದು ನವೀನ್.ಡಿ.ಪಡೀಲ್ ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮೇ 27ರಂದು ಬೆಳಗ್ಗೆ 11.30 ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ತುಳು ರಂಗಭೂಮಿ ಹಾಗೂ ಸಿನಿಮಾ ನಟ ನವೀನ್.ಡಿ.ಪಡೀಲ್ ಭಾಗವಹಿಸಿ ಸಂವಾದ ನಡೆಸಲಿದ್ದಾರೆ. ಚಿತ್ರ ನಿರ್ದೇಶಕ, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್. ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜ್ ನಿಂದ ಪೀಡಿಯಾಕಾನ್-2025

ಬಂಟ್ವಾಳ: ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ಅಧೀನದಲ್ಲಿರುವ ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವತಿಯಿಂದ ಸ್ವಿಫ್ಟ್ ಹ್ಯಾಂಡ್ಸ್-ಸೇಫ್‌ಗಾರ್ಡಿಂಗ್ ಲಿಟಲ್ ಲೈವ್ಸ್ ಎಂಬ ಧ್ಯೇಯದಡಿ ಪೀಡಿಯಾಕಾನ್-೨೦೨೫ ಪ್ರಾದೇಶಿಕ ಸಮ್ಮೇಳನ ಕಾಲೇಜಿನ ಫ್ಲೋರೆನ್ಸ್ ನೈಂಟಿಗೇಲ್ ಸಭಾಂಗಣದಲ್ಲಿ ನಡೆಯಿತು.ಮಕ್ಕಳ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ನರ್ಸ್ ಗಳ ಕೌಶಲ್ಯ ವೃದ್ಧಿಯ ದೃಷ್ಟಿಯಿಂದ ಆಯೋಜಿಸಿದ್ದ ಈ ಸಮ್ಮೇಳನದ ಉದ್ಘಾಟನಾ ಸಮಾರಂಭದ ಮುಖ್ಯಅತಿಥಿ ಫಾದರ್ ಮುಲ್ಲರ್ ಹೆಲ್ತ್ ಕೇರ್ ಸಿಮ್ಯುಲೇಶನ್ ಎಜ್ಯುಕೇಶನ್‌ನ ಮುಖ್ಯಸ್ಥ ಡಾ| ಲುಲು ಶರೀಫ್ ಮಹ್ಮೂದ್ ಅವರು, ಗರ್ಭಾಶಯದಿಂದ ನವಜಾತ ಶಿಶುವಿನವರೆಗಿನ ಸೂಕ್ಷ್ಮ ಆರೈಕೆಯ ಕುರಿತು ವಿವರಿಸಿದರು.ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ನ ನಿರ್ದೇಶಕ ರೆ|ಫಾ| ರಿಚ್ಚಾರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಮಕ್ಕಳ ಆರೈಕೆ, ಆರೋಗ್ಯದ ಸಮಯೋಚಿತ ನಿರ್ವಹಣೆ ಅತಿ ಅಗತ್ಯವಾಗಿದೆ ಎಂದರು.ಸಮಾರಂಭದಲ್ಲಿ ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ನ ನಿಯೋಜಿತ ನಿರ್ದೇಶಕ ರೆ|ಫಾ| ಪಾವೋಸ್ತಿನ್ ಲುಕಾಸ್ ಲೋಬೊ, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವೈದ್ಯಕೀಯ ಅಧೀಕ್ಷಕ ಡಾ| ಕಿರಣ್ ಶೆಟ್ಟಿ, ಆಯೋಜನಾ ಸಮಿತಿ ಕಾರ್ಯದರ್ಶಿ ಜಾಯ್ಸ್ ಫೆನಾಂಡೀಸ್ ಉಪಸ್ಥಿತರಿದ್ದರು.ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಸಿ| ಜೂಡಿ ಸ್ವಾಗತಿಸಿದರು. ಆಯೋಜನಾ ಸಮಿತಿಯ ಜಾನೆಟ್ ಸಿಕ್ವೇರಾ ವಂದಿಸಿದರು. ಸಹ ಪ್ರಾಧ್ಯಾಪಕಿ ಡಾ| ಎಡ್ವಿನಾ ಫಿಲಿಪ್ ಮೊನಿಸ್ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಪ್ರಿನ್ಸಿಟಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಕಾಲೇಜುಗಳ ಒಟ್ಟು ೨೧೧ ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಪ್ರಾದೇಶಿಕ ವಾರ್ತೆಗಳು

ಕ್ಯಾಥೊಲಿಕ್ ಸಭಾ ಕೂಳೂರು ಘಟಕದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣ

ಮಂಗಳೂರು: ಕ್ಯಾಥೊಲಿಕ್ ಸಭಾ ಕೂಳೂರು ಘಟಕವು ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದ್ದು, ಈ ಆಚರಣೆಯ ಶುಭ ಸಂದರ್ಭದಲ್ಲಿ ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಬಡ ಕುಟುಂಬವೊಂದಕ್ಕೆ ಬಂಗ್ರ ಕೂಳೂರಿನಲ್ಲಿ ಅವರ ಸ್ವಂತ ಜಾಗದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದು, ಈ ಮನೆಯ ಉದ್ಘಾಟನೆ, ಆಶೀರ್ವಚನ ಹಾಗೂ ಹಸ್ತಾಂತರ ಕಾರ್ಯಕ್ರಮ ಮೇ 25 ರಂದು ಬೆಳಗ್ಗೆ 11 ಗಂಟೆಗೆ ಬಂಗ್ರ ಕುಳೂರಿನಲ್ಲಿ ನೆರವೇರಲಿದೆ.ಆಶೀರ್ವಚನ ಮತ್ತು ಉದ್ಘಾಟನೆಯನ್ನು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ನೆರವೇರಿಸಲಿದ್ದು, ಅಧ್ಯಕ್ಷತೆಯನನ್ರು ಕ್ಯಾಥೊಲಿಕ್‌ ಸಭಾ ಕೂಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ಹಾಗೂ ಕುಳೂರು ಸಂತ ಅಂತೋನಿ ಚರ್ಚ್ ನ ಧರ್ಮಗುರು ವಂದನೀಯ ವಿಕ್ಟರ್‌ ವಿಜಯ್‌ ಲೋಬೋ ಅವರು ವಹಿಸಲಿದ್ದಾರೆ. ಎಪಿಸ್ಕೋಪಲ್‌ ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಜಾನ್‌ ವಾಸ್‌, ದಾಯ್ಜಿ ವರ್ಲ್ಡ್ ಮೀಡಿಯಾ ಸಂಸ್ಥೆಯ ಸ್ಥಾಪಕ ವಾಲ್ಟರ್ ನಂದಳಿಕೆ, ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್‌ ಲೋಬೊ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕ್ಯಾಥೊಲಿಕ್‌ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್‌ ಡಿ’ಸೋಜಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Scroll to Top