Author name: editor

ಪ್ರಾದೇಶಿಕ ವಾರ್ತೆಗಳು

ಅಜೆಕಾರು ಕಲಾಭಿಮಾನಿ ಬಳಗದ ತಾಳಮದ್ದಳೆ ಸರಣಿ ಉದ್ಘಾಟನೆ. *ಯಕ್ಷಗಾನ ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು: ಡಾ.ಎಂ.ಪ್ರಭಾಕರ ಜೋಶಿ

ಮುಂಬಯಿ: ‘ ಯಕ್ಷಗಾನವಿಂದು ಕೇವಲ ಕರಾವಳಿಯ ಕಲೆಯಾಗಿ ಉಳಿದಿಲ್ಲ. ತನ್ನ ವಿಶಿಷ್ಟವಾದ ಪ್ರಭಾವ ಮತ್ತು ಪ್ರಯೋಗಶೀಲತೆಯಿಂದ ನಾಡು – ಹೊರನಾಡುಗಳಲ್ಲಿ ಮೆರೆದು ಸೀಮೋಲ್ಲಂಘನೆ ಮಾಡಿರುವ ಯಕ್ಷಗಾನ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಪರಿಪೂರ್ಣ ರಂಗಕಲೆಯಾಗಿ ಗಮನ ಸೆಳೆದಿದೆ. ಅದು ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು. ಅದರ ಮೌಖಿಕ ವಿಭಾಗವಾದ ತಾಳಮದ್ದಳೆಯನ್ನು ಮುಂಬಯಿಯಲ್ಲಿ ಜನಪ್ರಿಯಗೊಳಿಸಿರುವ ಅಜೆಕಾರು ಬಾಲಕೃಷ್ಣ ಶೆಟ್ಟರ ಕಾರ್ಯ ಶ್ಲಾಘನೀಯ’ ಎಂದು ಹಿರಿಯ ಯಕ್ಷಗಾನ ಅರ್ಥಧಾರಿ, ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.        ಮುಂಬಯಿ ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ಮಂದಿರದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 24 ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸರಣಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.*ಯಕ್ಷಗಾನಕ್ಕೆ ದೀರ್ಘ ಪರಂಪರೆ*:       ಮುಂಬಯಿಯ ಹಿರಿಯ ಅರ್ಥಧಾರಿ ಕೆ.ಕೆ.ಶೆಟ್ಟಿ ಅವರು ಶ್ರೀದೇವಿ ಸನ್ನಿಧಿಯಲ್ಲಿ ದೀಪ ಬೆಳಗಿ 2024 – 25 ನೇ ಸಾಲಿನ ಸರಣಿ ತಾಳಮದ್ದಳೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ‘ಮುಂಬಯಿಯಲ್ಲಿ ಯಕ್ಷಗಾನಕ್ಕೆ ದೀರ್ಘ ಪರಂಪರೆಯಿದೆ. ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದು ಅಜೆಕಾರು ಕಲಾಭಿಮಾನಿ ಬಳಗದ ದೊಡ್ಡ ಸಾಧನೆ’ ಎಂದವರು ನುಡಿದರು. ಅಂಬಿಕಾ ಮಂದಿರದ ಧರ್ಮದರ್ಶಿ ವೇದಮೂರ್ತಿ ಪೆರಣಂಕಿಲ ಹರಿದಾಸ ಭಟ್ಟರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮೊಕ್ತೇಸರ ಹರಿದಾಸ ಗೋಪಾಲ ಶೆಟ್ಟಿ ವಹಿಸಿದ್ದರು.       ಅಜೆಕಾರು ಕಲಾಭಿಮಾನಿ ಬಳಗದ ಪರವಾಗಿ ತಂಡದ ಪ್ರಮುಖ ಅರ್ಥಧಾರಿ, ವಿಮರ್ಶಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಗೌರವಿಸಿ, ವಂದಿಸಿದರು. ದೇವಳದ ಅರ್ಚಕ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.*ತಾಳಮದ್ದಳೆ ‘ಕುರುಕ್ಷೇತ್ರದಲ್ಲಿ ಕೌರವ’:    ಉದ್ಘಾಟನಾ ಸಮಾರಂಭದ ಬಳಿಕ ಊರಿನ ಪ್ರಸಿದ್ಧ ಕಲಾವಿದರಿಂದ ‘ *‘ಕುರುಕ್ಷೇತ್ರದಲ್ಲಿ ಕೌರವ’* ಯಕ್ಷಗಾನ ತಾಳಮದ್ದಳೆ ಜರಗಿತು. ಡಾ. ಎಂ.ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ ಮತ್ತು ಸದಾಶಿವ ಆಳ್ವ ತಲಪಾಡಿ ಅರ್ಥಧಾರಿಗಳಾಗಿದ್ದರು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ ಹಾಗೂ ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಚೆಂಡೆ – ಮದ್ದಳೆ ನುಡಿಸಿದರು.

ಪ್ರಾದೇಶಿಕ ವಾರ್ತೆಗಳು

ಮಯೂರ ಪ್ರತಿಷ್ಠಾನ ಮಂಗಳೂರು: ಪ್ರಥಮ ವಾರ್ಷಿಕೋತ್ಸವ, ಮಯೂರಯಾನ -1: ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಶಿಷ್ಯ ವೃಂದದ ನೂತನ ಯಕ್ಷ ವೇಷಭೂಷಣ ಉದ್ಘಾಟನೆ

ಬಂಟ್ವಾಳ: ಮಯೂರ ಪ್ರತಿಷ್ಠಾನ ಮಂಗಳೂರು ಇದರ ಪ್ರಥಮ ವಾರ್ಷಿಕೋತ್ಸವ ಮಯೂರಯಾನ-1ಹಾಗೂ ಯಕ್ಷ ಗುರು ರಕ್ಷಿತ್ ಪಡ್ರೆ ಶಿಷ್ಯವೃಂದದ ನೂತನ ಯಕ್ಷವೇಷಭೂಷಣ ಉದ್ಘಾಟನಾ ಕಾರ್ಯಕ್ರಮ ಕಟೀಲು ರಥಬೀದಿ ಶ್ರೀ ಸರಸ್ವತಿ ಸದನದಲ್ಲಿ ನಡೆಯಿತು.ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿದಾಸ ಆಸ್ರಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿ, ಪರಂಪೆರೆಯನ್ನು ಬಿಂಬಿಸುವ ಯಕ್ಷಗಾನದ ಆಹಾರ್ಯವನ್ನು ಮುಂದುವರೆಸುವ ಕಲೆಯನ್ನು ಮಕ್ಕಳಿಗೆ ಕಲಿಸಿದಾಗ ಭಾರತೀಯ ಸಂಸ್ಕೃತಿ ಎಂಬುವುದು ಯಕ್ಷಗಾನದಿಂದ ಉಳಿಯಲು ಸಾಧ್ಯ.ಅದನ್ನು ತಲುಪಿಸುವಲ್ಲಿ ಯಕ್ಷಗುರುಗಳು ಪ್ರಯತ್ನಿಸಬೇಕು ಎಂದು ಹೇಳಿದರು. ಅಧ್ಯಯನ, ಹಿರಿಯ ಕಲಾವಿದರು ಕಲೆಯನ್ನು ಬೆಳೆಸಿದ ರೀತಿ ಯಕ್ಷಗಾನದ ನಡೆ ಹೀಗೆ ಪರಂಪರೆಯನ್ನು ಗಮನಿಸಿ ಯುವ ಕಲಾವಿದರು ಬೆಳೆಯಬೇಕು ಎಂದು ಅವರು ನುಡಿದರು.ಹಿರಿಯ ನ್ಯಾಯವಾದಿ, ಮಯೂರ ಪ್ರತಿಷ್ಠಾನದ ಅಧ್ಯಕ್ಷ ಪಿ.ಸದಾಶಿವ ಐತಾಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವುದು ಸಂತಸದಾಯಕವಾಗಿದೆ. ಯಕ್ಷಗಾನವನ್ನು ಉಳಿಸಿ, ಬೆಳೆಸುವಲ್ಲಿ ಯುವ ಜನತೆಯ ಕೊಡುಗೆ ಅಮೂಲ್ಯವಾಗಿದೆ ಎಂದರು.ಪಣಂಬೂರು ಪಿ.ವಿ.ಐತಾಳ ಇಂಗ್ಲೀಷ್ ಯಕ್ಷಗಾನ ಬಳಗದ ಸಂಚಾಲಕ ಪಿ.ಸಂತೋಷ್ ಐತಾಳ, ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ದೇವಸ್ಯ, ಮಂಗಳೂರು ಯಕ್ಷ ಮಂಜೂಷ ನಿರ್ದೇಶಕಿ ವಿದ್ಯಾ ಕೂಳ್ಯೂರು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದರಾದ ಚೈತನ್ಯಕೃಷ್ಣ ಪದ್ಯಾಣ ಹಾಗೂ ಪ್ರಸಾಧನ ಕಲಾವಿದ ಮೋಹಿನಿ ಕಲಾಸಂಪದ ಸಂಸ್ಥೆಯ ಗಂಗಾಧರ ಡಿ.ಶೆಟ್ಟಿಗಾರ್ ಅವರಿಗೆ ಮಯೂರಯಾನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೂತನ ಯಕ್ಷ ವೇಷಭೂಷಣ ಸಿದ್ಧ್ದಪಡಿಸಿದ ಬೆನಕ ಕಲಾ ಆರ್ಟ್ಸ್ ಸಂಸ್ಥೆಯ ಕೃಷ್ಣ ಭಟ್ ದೇವಕಾನ, ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರನ್ನು ಸಮ್ಮಾನಿಸಲಾಯಿತು. ಸಂಘ, ಸಂಸ್ಥೆಗಳನ್ನು ಗೌರವಿಸಲಾಯಿತು.ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಕಾಶ್ ಮೂಡಿತ್ತಾಯ ಅವರು ಸ್ವಾಗತಿಸಿದರು. ರತ್ನದೇವ್ ಪುಂಜಾಲಕಟ್ಟೆ ವಂದಿಸಿದರು. ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮಕ್ಕೆ ಮುನ್ನ ಕಟೀಲು ಶ್ರೀ ದೇವಿ ಸನ್ನಿಧಿಯಲ್ಲಿ ಯಕ್ಷ ಸೇವೆ ನಡೆಯಿತು. ಬಳಿಕ ಪ್ರತಿಷ್ಠಾನ ಕಲಾವಿದರಿಂದ ಯಕ್ಷಗಾನ ಬಯಲಾಟ ಅಶ್ವಮೇಧ ಪ್ರದರ್ಶನ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಸಂಗೀತ ಆಲಿಸುವುದರ ಮೂಲಕ ಮನಸ್ಸಿಗೆ ನೆಮ್ಮದಿ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು, ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಆಯೋಜಿಸಲಾದ ಸ್ವರ ಧಾರಾ ಸಂಗೀತ ಉತ್ಸವ ಕಾರ್ಯಕ್ರಮ ಉದ್ಘಾಟಿಸಿಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ,ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾಜಿ ಮೇಯರ್ ಹಾಗೂ ಕ್ಯಾರ್ದೋ ಲೈಟ್ ಸಂಸ್ಥೆ ಮಹಾ ಪ್ರಬಂಧಕ ಕೆ. ದಿವಾಕರ್, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಮಹಾಪ್ರ ಬಂಧಕ ಅರುಣ ಪ್ರಭಾ, ಕುವೈಟ್ ನ ಇಂಜಿನಿಯರ್ ಮಂಜೇಶ್ವರ ಮೋಹನ್ ದಾಸ್ ಕಾಮತ್,ಅನಘಾ ರಿಫೈನರಿಯ ಆಡಳಿತ ನಿರ್ದೇಶಕ ಸಾಂಬಾ ಶಿವರಾವ್ ನಡೆಲ್ಲಾ,ಭಾರತ್ ಆಗ್ರೋ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ.ಅರುಣ್ ರೈ,ಕಲಾ ಸಾಧನ ಸಂಸ್ಥೆ ನಿರ್ದೇಶಕಿ ವಿಭಾಶ್ರೀನಿವಾಸ್ ನಾಯಕ್, ಕಲಾವಿದರಾದ ಕುಮಾರ್ ಮರ್ದು ರ್,ಅಕ್ಷಯ್ ಜೋಶಿ ಧಾರವಾಡ,ಸತೀಶ್ ಭಟ್ ಹೆಗ್ಗಾರ್ ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಸಲಹೆಗಾರರಾದ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು.ಪಾಂಡುರಂಗ ಆಚಾರ್ಯ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಎಂ.ಸಿ.ಸಿ. ಬ್ಯಾಂಕಿನ ಸುರತ್ಕಲ್ ಶಾಖೆಯಲ್ಲಿ 10 ನೇ ಎಟಿಎಂ ಉದ್ಘಾಟನೆ

ಆಗಸ್ಟ್ 10, 2025 ರ ಭಾನುವಾರದಂದು ಸುರತ್ಕಲ್ ಶಾಖೆಯಲ್ಲಿ ತನ್ನ 10 ನೇ ಎಟಿಎಂ ಅನ್ನು ಉದ್ಘಾಟಿಸುವ ಮೂಲಕ ಎಂ.ಸಿ.ಸಿ. ಬ್ಯಾಂಕ್ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.ಸಮಾರಂಭವು ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಚರ್ಚ್’ನ ಧರ್ಮಗುರುಗಳಾದ ವಂದನೀಯ ಆಸ್ಟಿನ್ ಪೀಟರ್ ಪೆರಿಸ್ ಅವರ ಆಶೀರ್ವಾದದೊಂದಿಗೆ ಪ್ರಾರಂಭವಾಯಿತು, ಉಪಯೋಗಿಸಿದ ವಾಹನ ಮಾರಾಟ ಸಲಹೆಗಾರರಾದ ಶ್ರೀ ಮೊಹಮ್ಮದ್ ಹನೀಫ್ ಅವರು ಎಟಿಎಂ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು. ಮುಕ್ಕಾದ ಹೋಲಿ ಸ್ಪಿರಿಟ್ ಚರ್ಚ್’ನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ಪಿಂಟೊ ಅವರ ಉಪಸ್ಥಿತರಿದ್ದರು. ಎಟಿಎಂ ನಿಂದ ಮೊದಲ ನಗದು ಹಿಂಪಡೆಯುವಿಕೆಯನ್ನು ಶ್ರೀ ದುರ್ಗಾ ಫೈನಾನ್ಷಿಯಲ್ ಕಾರ್ಪೊರೇಷನ್‌ನ ಮಾಲೀಕ ಶ್ರೀ ಮೆಬೈಲ್ ಸದಾಶಿವ ಶೆಟ್ಟಿ ಮಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು, ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕಳೆದ ಎಂಟು ವರ್ಷಗಳಲ್ಲಿ ₹500 ಕೋಟಿ ವ್ಯವಹಾರದಿಂದ ₹1,300 ಕೋಟಿಗೆ ತಲುಪಿದ ಬ್ಯಾಂಕಿನ ಪ್ರಗತಿಯನ್ನು ವಿವರಿಸಿದರು. ಈ ಬೆಳವಣಿಗೆಗೆ ಬಲವಾದ ನಾಯಕತ್ವ, ಆಡಳಿತ ಮಂಡಳಿಯ ಬದ್ಧತೆ ಮತ್ತು ಅಚಲವಾದ ಗ್ರಾಹಕರ ನಂಬಿಕೆ ಕಾರಣ ಎಂದು ಅವರು ಹೇಳಿದರು. ಎಂಸಿಸಿ ಬ್ಯಾಂಕ್ ಜನರ ಬ್ಯಾಂಕ್ ಎಂದು ಅವರು ಪುನರುಚ್ಚರಿಸಿದರು, ಇದು ಕೇವಲ ಸಿಬ್ಬಂದಿ ಅಥವಾ ನಿರ್ದೇಶಕರಿಗೆ ಸೇರದೇ ಗ್ರಾಹಕರು ಮತ್ತು ಎಲ್ಲಾ ಸಮುದಾಯಗಳಿಗೆ ಸೇರಿದೆ ಎಂದು ಒತ್ತಿ ಹೇಳಿದರು. “ನಮ್ಮ ಗ್ರಾಹಕರು ನಮ್ಮ ಬ್ರಾಂಡ್ ರಾಯಭಾರಿಗಳು” ಎಂದು ಅವರು ಹೇಳಿದರು,ಎಂಸಿಸಿ ಬ್ಯಾಂಕ್ ಪ್ರಸ್ತುತ ಹಣಕಾಸು ವರ್ಷದ ಅಂತ್ಯದ ವೇಳೆಗೆ 25 ಶಾಖೆಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದ ಅವರು ಬ್ಯಾಂಕಿನ ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ಹಂಚಿಕೊಂಡರು. ಇದರ ಜೊತೆಗೆ, ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್’ಗಳನ್ನು ಅಳವಡಿಸಿಕೊಳ್ಳಲು ಬ್ಯಾಂಕ್ ಸಿದ್ಧವಾಗಿದೆ ಎಂದು ಅವರು ಘೋಷಿಸಿದರು, ಮುಂದಿನ ದಿನಗಳಲ್ಲಿ ಯುಪಿಐ ಸೇವೆಗಳನ್ನು ಪರಿಚಯಿಸುವ ಯೋಜನೆಗಳಿವೆ ಎಂದು ಹೇಳಿದರು.ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಮತ್ತು ಸಮುದಾಯದ ಸದಸ್ಯರಿಗೆ ಅವರ ನಿರಂತರ ಬೆಂಬಲಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸಿ ರಾಜಿ ಮಾಡಿಕೊಳ್ಳದೆ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡಲು ಬ್ಯಾಂಕ್ ಬದ್ಧವಾಗಿರುತ್ತದೆ ಎಂದು ಅವರು ಭರವಸೆ ನೀಡಿದರು.ವಂದನೀಯ ಆಸ್ಟಿನ್ ಪೀಟರ್ ಪೆರಿಸ್ ಮಾತನಾಡಿ, ಸುರತ್ಕಲ್‌ನ ಜನರಿಗೆ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ತಂದಿದ್ದಕ್ಕಾಗಿ ಎಂಸಿಸಿ ಬ್ಯಾಂಕ್ ಅನ್ನು ಶ್ಲಾಘಿಸಿದರು. ಮಾನವ ದೇಹದಲ್ಲಿ ರಕ್ತ ಪರಿಚಲನೆಗೆ ಆರ್ಥಿಕ ಪ್ರವೇಶವನ್ನು ಅವರು ರೂಪಕವಾಗಿ ಹೋಲಿಸಿದರು – ಅದರ ಪೋಷಣೆಗೆ ಇದು ಅತ್ಯಗತ್ಯ – ಅದೇ ರೀತಿ, ಸಮುದಾಯ ಅಭಿವೃದ್ಧಿಗೆ ಹಣದ ಹರಿವು ಅತ್ಯಗತ್ಯ ಎಂದು ಹೇಳಿದರು. ಕೋವಿಡ್-19 ಯುಗದಲ್ಲಿ ಇತರ ಸಂಸ್ಥೆಗಳು ಏಕೀಕರಣಗೊಳ್ಳುತ್ತಿದ್ದಾಗಲೂ ಎಂ.ಸಿ.ಸಿ. ಬ್ಯಾಂಕ್ ತನ್ನ ವಿಸ್ತರಣೆಯನ್ನು ಮುಂದುವರೆಸಿದ್ದಕ್ಕಾಗಿ ಅವರು ಬ್ಯಾಂಕ್ ಅನ್ನು ಶ್ಲಾಘಿಸಿದರು, ಬೆಳ್ಮಣ್ ಮತ್ತು ಸುರತ್ಕಲ್‌ನಲ್ಲಿ ಸತತ ಎಟಿಎಂಗಳ ಉದ್ಘಾಟನೆಯನ್ನು ಎಂಸಿಸಿ ಬ್ಯಾಂಕಿನ ಕ್ರಿಯಾತ್ಮಕ ದೃಷ್ಟಿಕೋನದ ಸಂಕೇತವೆAದು ಎತ್ತಿ ತೋರಿಸಿದರು. ಈ ಸ್ಥಿತಿಸ್ಥಾಪಕತ್ವವು ಬ್ಯಾಂಕಿನ ಬಲವಾದ ಅಡಿಪಾಯ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.ಇಂದಿನ ಡಿಜಿಟಲ್ ಯುಗದಲ್ಲಿ, ಎಲ್ಲವೂ ನಮ್ಮ ಬೆರಳ ತುದಿಯಲ್ಲಿ ಲಭ್ಯವಿದೆ ಮತ್ತು ಪ್ರತಿದಿನ ಹೊಸ ತಂತ್ರಜ್ಞಾನಗಳು ಹೊರಹೊಮ್ಮುತ್ತವೆ, ಎಂಸಿಸಿ ಬ್ಯಾಂಕ್ ಇತ್ತೀಚಿನ ಪ್ರಗತಿಯನ್ನು ಅಳವಡಿಸಿಕೊಳ್ಳುವ ಮೂಲಕ ವೇಗವನ್ನು ಕಾಯ್ದುಕೊಂಡಿದೆ. ಇದು ಬ್ಯಾಂಕಿನ ಮುಂದಾಲೋಚನೆಯ ಮನಸ್ಥಿತಿ ಮತ್ತು ಆಧುನಿಕ, “ಸಾಂಕೇತಿಕ” (ಭೌತಿಕ + ಡಿಜಿಟಲ್) ರೂಪಾಂತರವನ್ನು ಅಳವಡಿಸಿಕೊಳ್ಳುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.ಹಳೆ ಬೇರು, ಹೊಸ ಚಿಗುರು – ಬಲವಾದ ಬೇರುಗಳು ಮತ್ತು ಹೊಸ ಬೆಳವಣಿಗೆಯೊಂದಿಗೆ, ಎಂಸಿಸಿ ಬ್ಯಾಂಕ್ ಸಂಪ್ರದಾಯವನ್ನು ನಾವೀನ್ಯತೆಯೊಂದಿಗೆ ಬೆರೆಸುತ್ತಾ ಪ್ರವರ್ಧಮಾನಕ್ಕೆ ಬರುತ್ತಿದೆ.ಸಭೆಯನ್ನುದ್ದೇಶಿಸಿ ಮಾತನಾಡಿದ ವಂದನೀಯ ಫಾದರ್ ಸ್ಟ್ಯಾನಿ ಪಿಂಟೊ, ತೆರಿಗೆ ಮತ್ತು ಹಣಕಾಸು ನೀತಿಯಲ್ಲಿ ಇತ್ತೀಚಿನ ಬದಲಾವಣೆಗಳ ನಂತರ, ನಗದು ಸೇವೆಗಳ ಅಗತ್ಯ ಹೆಚ್ಚುತ್ತಿದೆ ಎಂದು ಹೇಳಿದರು. ಸೇವೆ, ಪಾರದರ್ಶಕ ಕಾರ್ಯಾಚರಣೆಗಳು ಮತ್ತು ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಎಂಸಿಸಿ ಬ್ಯಾಂಕ್‌ನ ಸಮರ್ಪಣೆಯನ್ನು ಅವರು ಶ್ಲಾಘಿಸಿದರು. ಬ್ಯಾಂಕ್ ಸ್ಥಳೀಯ ಸಮುದಾಯಕ್ಕೆ ವರದಾನವಾಗಿದೆ ಎಂದು ಅವರು ಗಮನಿಸಿದರು ಮತ್ತು ಅದರ ನಿರಂತರ ಪ್ರಗತಿಗಾಗಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಿದರು.ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೇಜಸ್ ಸ್ವಾಗತಿಸಿದರು. ಎಂಸಿಸಿ ಬ್ಯಾಂಕಿನ ಸಿಬ್ಬಂದಿ ಸದಸ್ಯ ಶ್ರೀ ಅಲ್ವಿನ್ ಕ್ಸೇವಿಯರ್ ಡಿಸೋಜಾ ಅವರು ಪ್ರಾರ್ಥನೆಯ ನೇತೃತ್ವ ವಹಿಸಿದರು,ಹಿರಿಯ ವ್ಯವಸ್ಥಾಪಕ ಶ್ರೀ ಡೆರಿಲ್ ಲಸಾದೊ ನಿರೂಪಿಸಿದರು ಮತ್ತು ಧನ್ಯವಾದಗಳನ್ನು ಅರ್ಪಿಸಿದರು. ಶಾಖೆಯ ನಿರ್ದೇಶಕ ಶ್ರೀ ಅನಿಲ್ ಪತ್ರಾವೊ, ನಿರ್ದೇಶಕರು ಶ್ರೀ ಹೆರಾಲ್ಡ್ ಮೋಂತೇರೊ, ಶ್ರೀಮತಿ ಐರೀನ್ ರೆಬೆಲ್ಲೊ, ಶಾಖಾ ವ್ಯವಸ್ಥಾಪಕಿ ಶ್ರೀಮತಿ ಸುನಿತಾ ಡಿಸೋಜಾ, ಉಪ ಪ್ರಧಾನ ವ್ಯವಸ್ಥಾಪಕ ಶ್ರೀ ರಾಜ್ ಮಿನೇಜಸ್, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ಸದಸ್ಯರು ಮತ್ತು ಗ್ರಾಹಕರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಇಂದು ರಕ್ಷಾ ಬಂಧನ ಆಚರಣೆ

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಇಂದು ರಕ್ಷಾ ಬಂಧನ ದಿನದ ಪ್ರಯುಕ್ತ ಭಾರತೀಯ ಸೇನೆ ಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿಯಲ್ಲಿರುವ ನಮ್ಮ ಸಹೋದರ ಭಾಂದವರಿಗೆ ರಕ್ಷೆಯನ್ನು ಕಟ್ಟಿ, ಸಿಂದೂರ ತಿಲಕ ಇಟ್ಟು, ಆರತಿ ಬೆಳಗಿ, ರಕ್ಷೆ ಕಟ್ಟಿ, ಉಗ್ರರ ದಾಳಿಗೆ ಸಿಂದೂರ ವನ್ನು ಕಳಕೊಂಡ ನೋವಿಗೆ ಆಪರೇಷನ್ ಸಿಂದೂರದ ಮೂಲಕ ಪ್ರತ್ಯುತ್ತರ ನೀಡಿರುವ ನಮ್ಮ ಸೇನೆಯ ವೀರರಿಗೆ ಧನ್ಯವಾದ ಹೇಳುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮ ದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾ ಮೋರ್ಚಾದ ಪ್ರಭಾರಿ ಸಂಧ್ಯಾ ವೆಂಕಟೇಶ್, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಕಮಲಾಕ್ಷಿ ಗಂಗಾಧರ್, ಶಬರಿ ಶೆಟ್ಟಿ, ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಗೀತಾ, ಪೂಜಾ,ಜ್ಯೋತಿ ಯಲಬುರ್ಗಿ, ಸೌಮ್ಯ ಆಚಾರ್ಯ, ವೀಣಾ ಕುಲಾಲ್, ಪೂರ್ಣಿಮಾ ಶೆಟ್ಟಿ, ಚೇತನ, ಮದಲಾಕ್ಷಿ. ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ ಗ್ರಾಹಕ ಸೇವೆ ಮತ್ತು ಬ್ಯಾಂಕಿAಗ್ಶ್ರೇಷ್ಟತೆಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿಆಗಸ್ಟ್ 9, 2025 ರಂದು ಬೆಳ್ಮಣ್ ಶಾಖೆಯಲ್ಲಿ ತನ್ನ 9 ನೇ ಎಟಿಎಂಅನ್ನು ಉದ್ಘಾಟಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಎಟಿಎಂ ಅನ್ನುಬೆಳ್ಮನ್‌ನ ಮಾನ್ಯ ಡೆವಲಪರ್ಸ್ ಮತ್ತು ಹೋಟೆಲ್ ಸೂರಜ್ ಇನ್‌ನಮಾಲೀಕ ಶ್ರೀ ಶೋಧನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಬೆಳ್ಮಣ್ ನಸೇಂಟ್ ಜೋಸೆಫ್ ಚರ್ಚ್ನನ ಧರ್ಮಗುರುಗಳಾದ ರೆವೆರೆಂಡ್ಫಾದರ್ ಫ್ರೆಡ್ರಿಕ್ ಮಸ್ಕರೇನ್ಹಸ್ ಅವರು ಎಟಿಎಂ ಅನ್ನು ಆಶಿರ್ವಚಿಸಿ ಶಾಖೆಮತ್ತು ಅದರ ಗ್ರಾಹಕರಿಗೆ ಅನುಗ್ರಹ ಮತ್ತುಸಮೃದ್ಧಿಯನ್ನು ಕೋರಿದರು. ಎಟಿಎಂನಿoದ ಮೊದಲ ನಗದುಹಿಂಪಡೆಯುವಿಕೆಯನ್ನು ಶ್ರೀ ಫ್ರೆಡ್ರಿಕ್ ವಿನ್ಸೆಂಟ್ ಅಂದ್ರಾದೆಮಾಡಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿ ಶ್ರೀ ಫ್ರಾನ್ಸಿಸ್ ಡಿ’ಸೋಜಾ, ಸೇಂಟ್ಜೋಸೆಫ್ ಅರ್ಥ್ ಮೂವರ್ಸ್ ಮತ್ತು ಸೇಂಟ್ ಜೋಸೆಫ್ ಪ್ಯೂಯೆಲ್ಸ್ಮಾಲೀಕ ಶ್ರೀ ಡೊಮಿನಿಕ್ ಆಂದ್ರಾದೆ ಮತ್ತು ಬೆಳ್ಮನ್‌ನ ಸೇಂಟ್ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.ಕಾರ್ಯಕ್ರಮವು ಎಂಸಿಸಿ ಬ್ಯಾಂಕ್ ಬೆಳ್ಮನ್ ಶಾಖೆಯ ಶಾಖಾವ್ಯವಸ್ಥಾಪಕಿ ಶ್ರೀಮತಿ ಶೈನಿ ಲಸ್ರಾದೊ ಅವರ ಸ್ವಾಗತದೊಂದಿಗೆಪ್ರಾರAಭವಾಯಿತು. ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರಿಗೆ ಹೂವಿನಸ್ವಾಗತ ನೀಡಲಾಯಿತು, ನಂತರ ಡೀಲ್ ಮತ್ತು ಆಲ್ವಿನ್ ಡಿಸೋಜ ಅವರನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು,ಅಧ್ಯಕ್ಷೀಯ ಭಾಷಣ ಮಾಡಿದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನಶ್ರೀ ಅನಿಲ್ ಲೋಬೊ ಅವರು ಬ್ಯಾಂಕಿನ ಪ್ರಯಾಣದ ವಿವರವಾದವಿವರಣೆಯನ್ನು ನೀಡಿದರು. ಆರ್‌ಬಿಐ ನಿಯತಾಂಕಗಳೊoದಿಗೆಬ್ಯಾAಕಿನ ಸ್ಥಿರ ಅನುಸರಣೆಯ ಬಗ್ಗೆ ಅವರು ಮಾತನಾಡಿದರುಮತ್ತು ಬೆಳ್ಮನ್ ಶಾಖೆಯಲ್ಲಿ ₹5 ಕೋಟಿ ವಹಿವಾಟು ದಾಟಿದ ಒಳ್ಳೆಯಸುದ್ದಿಯನ್ನು ಹಂಚಿಕೊAಡರು. ಬ್ರಹ್ಮಾವರ ಒಂದುವರ್ಷದೊಳಗೆ ₹10 ಕೋಟಿ ವಹಿವಾಟು ಸಾಧಿಸಿರುವುದು ಮತ್ತುಬೈಂದೂರು ಇತ್ತೀಚೆಗೆ 100 ಕ್ಕೂ ಹೆಚ್ಚು ಹೊಸಖಾತೆಗಳೊಂದಿಗೆ ತೆರೆದಿರುವುದು ಇತರ ಶಾಖೆಗಳಲ್ಲಿನಗಮನಾರ್ಹ ಬೆಳವಣಿಗೆಯನ್ನು ಅವರು ವಿವರಿಸಿದರು. ಹೆಚ್ಚಿನಎಟಿಎಂಗಳು ಮತ್ತು ಶಾಖೆಗಳನ್ನು ಒಳಗೊಂಡoತೆ ಭವಿಷ್ಯದವಿಸ್ತರಣಾ ಯೋಜನೆಗಳನ್ನು ಸಹ ಅವರು ಘೋಷಿಸಿದರು.ಬೆಳ್ಮನ್ ಶಾಖೆಯ ಯಶಸ್ಸ್ಸಿನಲ್ಲಿ ಗ್ರಾಹಕರು ವಹಿಸಿದ ಪ್ರಮುಖಪಾತ್ರವನ್ನು ಅವರು ಗುರುತಿಸಿದರು ಮತ್ತು ಶ್ಲಾಘಿಸಿದರು. ಎಲ್ಲಾಗಣ್ಯರು ಮತ್ತು ಅತಿಥಿಗಳಿಗೆ ಅವರ ಅಚಲ ಬೆಂಬಲ ಮತ್ತುಪ್ರೋತ್ಸಾಹಕ್ಕಾಗಿ ಅವರು ಕೃತಜ್ಞತೆಗಳನ್ನು ಅರ್ಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶೋಧನ್ ಕುಮಾರ್ ಶೆಟ್ಟಿ, ಎಂಸಿಸಿಬ್ಯಾoಕಿನ ಶ್ಲಾಘನೀಯ ಸೇವೆಗಳಿಗಾಗಿ ಹೃತ್ಪೂರ್ವಕಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಬೆಳ್ಮನ್ಸಮುದಾಯಕ್ಕೆ ಶಾಖೆಯ ಕೊಡುಗೆಯನ್ನು ಶ್ಲಾಘಿಸಿದರು.ಬ್ಯಾಂಕಿನ ನಿರಂತರ ಬೆಳವಣಿಗೆಗೆ ತಮ್ಮ ಶುಭಾಶಯಗಳನ್ನುವ್ಯಕ್ತಪಡಿಸಿದರು.ರೆವರೆಂಡ್ ಫಾದರ್ ಫ್ರೆಡ್ರಿಕ್ ಮಸ್ಕರೇನ್ಹಸ್ ಅವರು ತಮ್ಮಭಾಷಣದಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಬಹುದಾದಬ್ಯಾಂಕಿAಗ್ ಮಾನದಂಡಗಳನ್ನು ಕಾಯ್ದುಕೊಳ್ಳಲು ಮತ್ತುಗ್ರಾಹಕ ಸ್ನೇಹಿ ಸೇವೆಯನ್ನು ನೀಡುತ್ತಿರುವುದಕ್ಕೆ ಎಂಸಿಸಿ ಬ್ಯಾಂಕ್ಅನ್ನು ಶ್ಲಾಘಿಸಿದರು.ಶ್ರೀ ಡೊಮಿನಿಕ್ ಆಂದ್ರಾದೆ, ತಮ್ಮ ಸಂಕ್ಷಿಪ್ತ ಭಾಷಣದಲ್ಲಿ, ಕಳೆದವರ್ಷಗಳಲ್ಲಿ ಬ್ಯಾಂಕಿನೊoದಿಗೆ ನಿಂತು, ಅದರ ಬೆಳವಣಿಗೆ ಮತ್ತುಸ್ಥಿರತೆಗೆ ಕೊಡುಗೆ ನೀಡಿದ ಗ್ರಾಹಕರಿಗೆ ಧನ್ಯವಾದಗಳನ್ನುಅರ್ಪಿಸಿದರು.ಕಾರ್ಯಕ್ರಮವನ್ನು ಶ್ರೀ ರಿತೇಶ್ ಡಿಸೋಜಾ ನಿರೂಪಿಸಿದರು ಹಾಗೂವಂದಿಸಿದರು. ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದಡಾ| ಫ್ರೀಡಾ ಡಿಸೋಜಾ, ಡಾ| ಜೆರಾಲ್ಡ್ ಪಿಂಟೊ, ಮಹಾ ಪ್ರಬಂಧಕ ಶ್ರೀಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ಶ್ರೀ ರಾಜ್ ಎಫ್ ಮಿನೇಜಸ್,ಸಿಬ್ಬಂದಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

112ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಮಹರ್ಷಿ ವಾಲ್ಮೀಕಿ ವಸತಿ ಶಾಲೆ ಕದ್ರಿ ಮಂಗಳೂರು ಜಂಟಿ ಆಶ್ರಯದಲ್ಲಿ 112ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಜುಲೈ 9 ಶನಿವಾರ ಮಹರ್ಷಿ ವಾಲ್ಮೀಕಿ ಸಭಾಂಗಣದಲ್ಲಿ ನಡೆಯಿತು. 112ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು. ಮಹರ್ಷಿ ವಾಲ್ಮೀಕಿ ವಸತಿ ಶಾಲೆ. ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನೀತಾರವರು ವಹಿಸಿದ್ದರು. ಮುಖ್ಯಸಂಪನ್ಮೂಲ ಅತಿಥಿಗಳಾಗಿ. ಕರಾವಳಿ ಡೈಲಿ ನ್ಯೂಸ್ ಚೀಪ್ ಎಡಿಟರ್ ಮಹೇಶ್ ಕನ್ನೇಶ್ವರ ಹಿರಿಯ ಬರಹಗಾರರಾದ ಸುಬ್ರಾಯ ಭಟ್, ದೂರದರ್ಶನ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರರಾದ. ರಾಜೇಶ್ ದಡ್ಡಂಗಡಿ, ಶಾಲೆಯ ಮೇಲ್ವಿಚಾರಕಿ ಸರಸ್ವತಿ ಉಪಸ್ಥಿತರಿದ್ದರು. ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು. ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು. ಸ್ವಾಗತಿಸಿದರು ಲೇಖಕಿ ಶಿಕ್ಷಕಿ ನಿರ್ಮಲ ಉದಯಕುಮಾರ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಮಾಡಲು ಸಾರ್ವಜನಿಕ ವಿನಂತಿ

ಮಂಗಳೂರು -ಸುನೀತಾ ಶೆಟ್ಟಿ,43 ವರ್ಷ, ಅಶೋಕ್ ಶೆಟ್ಟಿಯವರ ಪತ್ನಿಯಾಗಿದ್ದು, ಜನಾರ್ಧನ ನಗರ, ಜೆಪ್ಪು ಕುಡ್ಪಾಡಿ, ಮಂಗಳೂರು ನಿವಾಸಿಯಾಗಿದ್ದು, ಕಳೆದ ಒಂದು ತಿಂಗಳಿಂದ ಗರ್ಭಕೋಶದ ಸೋಂಕಿನಿಂದ ಮಂಗಳೂರಿನ ಅತ್ತಾವರ ಕೆಎಂಸಿಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತೀವ್ರ ಜ್ವರ, ತಡೆಯಲಾಗದ ಹೊಟ್ಟೆನೋವು ವೈದ್ಯಕೀಯ ಚಿಕಿತ್ಸೆ ನೀಡಿದರೂ ಗುಣವಾಗದ ಕಾರಣ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಚಿಕಿತ್ಸೆ ದುಬಾರಿಯಾಗುತ್ತಿದ್ದು, ಈಗಾಗಲೇ ಒಂದು ಲಕ್ಷ ರೂಪಾಯಿ ಖರ್ಚಾಗಿದ್ದು ಇನ್ನೂ 2 ಲಕ್ಷ ರೂಪಾಯಿ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಬಡ ಕುಟುಂಬದ ಸುನೀತಾ ಶೆಟ್ಟಿಗೆ ಇಷ್ಟೊಂದು ಹಣ ಭರಿಸುವುದು ಆಸಾಧ್ಯವಾಗಿದ್ದು, ಮಾನವೀಯ ನೆಲೆಯಲ್ಲಿ ದಾನಿಗಳು ಧನಸಹಾಯ ನೀಡಬೇಕಾಗಿ ಈ ಮೂಲಕ ವಿನಂತಿ.google pay / phone pay : 7975907683 (Sunitha)Bank detailsSUNITHA P.SB A/C : 520101254587312IFSC CODE : UBIN0901334.UNION BANK OF INDIA.Pandeshwara Branch, Mangaluru

ಪ್ರಾದೇಶಿಕ ವಾರ್ತೆಗಳು

ಬೋಂದೆಲ್‌ ಸಂತ ಲಾರೆನ್ಸ್ ಚರ್ಚ್ ನಲ್ಲಿ ಸಂತರ ಹಬ್ಬ: ನವೇನಾ ಕಾರ್ಯಕ್ರಮ ಆರಂಭ

ಮಂಗಳೂರು: ಬೋಂದೆಲ್‌ ಸಂತ ಲಾರೆನ್ಸ್ ಚರ್ಚ್ ನಲ್ಲಿ ಸಂತರ ಹಬ್ಬವನ್ನು ಆಗಸ್ಟ್ 10 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ಆ ಪ್ರಯುಕ್ತ 9 ದಿನಗಳ ನವೇನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಬಲಿಪೂಜೆ, ಪರಮ ಪ್ರಸಾದದ ಅರಾಧನೆ, ವ್ಯಾಧಿಷ್ಟರಿಗಾಗಿ ಪ್ರತ್ಯೇಕ ಪ್ರಾರ್ಥನೆ ನಡೆಸಲಾಗುತ್ತದೆ. ಆಗಸ್ಟ್ 8 ರಂದು ಬಲಿಪೂಜೆಯ ಸಂದರ್ಭದಲ್ಲಿ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಗಾಯನ ತಂಡವು ಭಕ್ತಿ ಗೀತೆಗಳ ಗಾಯನವನ್ನು ನೆರವೇರಿಸಿ ಕೊಟ್ಟಿತು. ಗಾಯನ ಮಂಡಳಿಯ ಅಧ್ಯಕ್ಷೆ ಲಿಝಿ ಫೆರ್ನಾಂಡಿಸ್, ಸದಸ್ಯರಾದ ಚಾರ್ಲ್ಸ್ ಡಿ’ಮೆಲ್ಲೊ, ಮಾರಿಯೊ ರೇಗೊ, ವಿನೊಲಾ ಪಿಂಟೊ, ಲ್ಯಾನಿಸ್‌ ಡಿ’ ಸೋಜಾ, ಆಲೀಶಾ ಮೊಂತೇರೊ, ರೆನಿಶಾ ಡಿ’ಸೋಜಾ, ಜೆನಿಟಾ ರೇಗೊ, ಈತನ್‌ ಮೊಂತೇರೊ, ಜನಿಶಾ ಫೆರ್ನಾಂಡಿಸ್, ಜೆಸಿಂತಾ ಕ್ರಾಸ್ತಾ, ಪಾಲ್ದನೆ ಚರ್ಚ್ ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್‌, ಮುಕ್ಕ ಹೋಲಿ ಸ್ಪಿರಿಟ್‌ ಚರ್ಚ್ ಧರ್ಮಗುರು ವಂದನೀಯ ಫಾ. ಸ್ಟ್ಯಾನಿ ಪಿಂಟೊ, ಬೋಂದೆಲ್‌ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಆ್ಯಂಡ್ರೂ ಲಿಯೋ ಡಿ’ಸೋಜಾ, ಬೋಂದೆಲ್‌ ಚರ್ಚ್ ಗಾಯನ ಮಂಡಳಿಯ ಸಂಚಾಲಕಿ ಜಾಸ್ಮಿನ್‌ ಡಿ’ಸೋಜಾ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಋಣಾತ್ಮಕ ಭಾವನೆಯನ್ನು ತ್ಯಜಿಸಿ: ಕಯ್ಯೂರು ನಾರಾಯಣ ಭಟ್

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಭೆಯು ಪುತ್ತೂರು ಕೊಂಬೆಟ್ಟಿನ ಸೌಜನ್ಯ ನಿವಾಸದಲ್ಲಿ ಜರಗಿತು.ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪ್ರೊ ಎ.ವಿ ನಾರಾಯಣ ಸಭೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ಪ್ರತಿಷ್ಠಾನದ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ ಮಾತನಾಡಿ ಋಣಾತ್ಮಕವಾದ ಭಾವನೆಯನ್ನು ಬಿಟ್ಟು ಶಿಸ್ತು ಮತ್ತು ಬದ್ಧತೆಯಿಂದ ಪ್ರತಿಷ್ಠಾನದ ಚಟುವಟಿಕೆಗಳನ್ನು ನಡೆಸುವ ಅಗತ್ಯವಿದೆ ಎಂದರು.ಪ್ರತಿಷ್ಠಾನದ ಐದು ವರ್ಷಗಳ ಸಿಂಹಾವಲೋಕನ ಮಾಡಿ ಕಾರ್ಯಕ್ರಮಗಳಿಗೆ ಹೊಸ ರೂಪವನ್ನು ಕೊಡುವ ಬಗ್ಗೆ ಮಾಹಿತಿ ನೀಡಿದರು.ಪುತ್ತೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಆಳ್ವ ಮಾತನಾಡಿ ಆಗಸ್ಟ್ 17ರಂದು ಶ್ರೀ ಕ್ಷೇತ್ರ ಪಡುಮಲೆಯಲ್ಲಿ ಜರಗಲಿರುವ ಜಿಲ್ಲಾ ಮಟ್ಟದ ಪ್ರಥಮ ಕಾರ್ಯಾಗಾರದಲ್ಲಿ ಹಿರಿಯರಿಗೆ ಉಪಯುಕ್ತವಾಗುವ ಮೂರು ವಿಚಾರಗೋಷ್ಠಿಗಳು, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಬಗ್ಗೆ ತಿಳಿಸಿದರು.ಪ್ರತಿಷ್ಠಾನದ ವಾರ್ಷಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಟ್ರಸ್ಟಿಗಳ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಕೇಂದ್ರ ಸಮಿತಿಯ ಸಭೆಯನ್ನು ತಿಂಗಳ ಪ್ರಥಮ ಶನಿವಾರದ ಪೂರ್ವಾಹ್ನ ನಡೆಸುವುದೆಂದು ನಿರ್ಧರಿಸಲಾಯಿತು.ಶಂಕರಿ ಶರ್ಮ ಪುತ್ತೂರು ಪ್ರಾರ್ಥಿಸಿ ಪ್ರತಿಷ್ಠಾನದ ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿದರು.ಉಪಾಧ್ಯಕ್ಷ ಎಂ. ಜಯರಾಮ ಭಂಡಾರಿ ಧರ್ಮಸ್ಥಳ ವಂದಿಸಿದರು. ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಕಾರ್ಯಕ್ರಮ ನಿರೂಪಿಸಿದರು.

Scroll to Top