
ಕಲ್ಲಡ್ಕ ಗಾಂಧಿ ಮೈದಾನದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ
79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಕಲ್ಲಡ್ಕ ಗಾಂಧಿ ಮೈದಾನದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ರೈ ಅವರು ಧ್ವಜಾರೋಹಣ ಮಾಡುವುದರ ಮೂಲಕ ನೆರವೇರಿಸಲಾಯಿತು. ಅಧ್ಯಕ್ಷತೆಯನ್ನು ಸೂರಜ್ ಬೀಡಿ ಮಾಲಕರಾದ ಹುಸೈನ್ ಕಲ್ಲಡ್ಕ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕಲ್ಲಡ್ಕ ಹಿರಿಯ ಪ್ರಾಥಮಿಕ ಶಾಲಾಭಿವೃದ್ಫಿ ಸಮಿತಿ ಅಧ್ಯಕ್ಷರಾದ ಮಧುಸೂದನ್ ಐತಲ್, ಮಾಜಿ ಪಂಚಾಯತ್ ಸದಸ್ಯರು ಹಿರಿಯ ಮುಖಂಡರಾದ ಅಬೂಬಕ್ಕರ್ ಮುರಾಬೈಲ್, ಬಂಟ್ವಾಳ nsui ಉಪಾಧ್ಯಕ್ಷರಾದ ಶ್ರೀವತ್ಸಹ ಶೆಣೈ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಿರಣ್ ಕಲ್ಲಡ್ಕ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಶಾಫಿ ಹಾಗೂ ನರಸಿಂಹ ಮಡಿವಾಳ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು ಮತ್ತು ಅನೇಕ ಗಣ್ಯರು ಭಾಗವಹಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಅಪಪ್ರಚಾರದ ಬಗ್ಗೆ ಖಂಡನಾ ನಿರ್ಣಯ
ದಿನಾoಕ 17/8/25 ರಂದು ಬಿ. ಸಿ. ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ತುರ್ತು ಸಭೆ ಯಲ್ಲಿ ಖಂಡನಾ ನಿರ್ಣಯ ಕೈಗೊಂಡಿತು. ಪೂಜ್ಯ ಹೆಗ್ಗಡೆ ಯವರ ಚಿಂತನೆ,ಖ್ಯಾತಿ ಅವರಿಗೆ ಸಿಗುವ ಮನ್ನಣೆ ಸಹಿಸದ ಕೆಲವೊಂದು ಪಟ್ಟ ಬದ್ದ ಹಿತಾ ಶಕ್ತಿ ಗಳು ಜೈನ ಸಮಾಜ ಮತ್ತು ಜೈನ ಮುನಿಗಳ ಮೇಲೆ ಇಲ್ಲ ಸಲ್ಲದ ಆರೋಪ ಕೆಲವೊಂದು ಜನ ಸಮೂಹ ವ್ನು ಕ್ಷೇತ್ರ ದ ವಿರುದ್ದ ಎತ್ತಿ ಕಟ್ಟುವ ಮೂಲಕ ಜನ ಸಾಮಾನ್ಯರಲ್ಲಿ ಭಯ ಆತಂಕ ಉಂಟು ಮಾಡುತ್ತಿದೆ. ಈ ಸಭೆ ಯಲ್ಲಿ ವೀಕ್ಷಕರಾಗಿ ವೀರ್ ರಾಜೇಶ ಜೈನ್ ಮಂಗಳೂರು, ಮಿಲನ್ ಘಟಕದ ಉಪಾಧ್ಯಕ್ಷರು ಅದ ವೀರ್ ಸುದರ್ಶನ್ ಜೈನ್, ಕಾರ್ಯದರ್ಶಿ ವೀರ್ ಸುಭಾಷ್ ಜೈನ್ , ಜೈನ್ ಮಿಲನ್ ಅಧ್ಯಕ್ಷ ರಾದ ವೀರ್ ರಾಜೇಂದ್ರಜೈನ್ ಘಟನೆ ಯನ್ನು ಖಂಡಿಸಿತು. ಪಚ್ಚಾಜೆ ಜಿನರಾಜ ಅರಿಗರು ಭಾಗವಹಿಸಿ ಘಟನೆ ಯನ್ನು ಖಂಡಿಸಿದರು. ವೀರ್ ಜಯಕೀರ್ತಿ ಅವರು ಕಾರ್ಯಕ್ರಮ ನಿರೂಪಿಸಿ, ವೀರ್ ಸುಭಾಶ್ಚಂದ್ರ ಜೈನ್ ಧನ್ಯವಾದ ನೀಡಿದರು. ಸಮಾಜದ ಎಲ್ಲಾ ಜೈನ್ ಭಾಂದವರು ಒಕ್ಕರಲಿನಿಂದ ಸುಳ್ಳು ಅಪಪ್ರಚಾರ ವಿರುದ್ಧ ಖಂಡನಾ ನಿರ್ಣಯ ಕೈಗೊಂಡಿರು.
ಕರಂಬಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿ 79 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ದಿವಂಗತ ರಾಮ ದೇವಾಡಿಗ ಅವರ ಸ್ಮರಣಾರ್ಥ ಕೊಡುಗೆಯಾಗಿ ನಿರ್ಮಿಸಲಾಗಿರುವ ಹೊಸ ಧ್ವಜಾಸ್ತಂಭವನ್ನು ಅವರ ಧರ್ಮಪತ್ನಿ ಸೀತಾ ದೇವಾಡಿಗರವರು ಉದ್ಘಾಟಿಸಿದರು.SDMC ಅಧ್ಯಕ್ಷರಾದ ಗುಣಪಾಲ್ ದೇವಾಡಿಗರವರು ಧ್ವಜಾರೋಹಣ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದಿವಂಗತ ರಾಮ ದೇವಾಡಿಗರ ಸ್ಮರಣಾರ್ಥ ಶಾಲೆಗೆ ನೂತನ ಧ್ವಜಸ್ತಂಭವನ್ನುನಿರ್ಮಿಸಿ ಕೊಟ್ಟ ಸೀತಾ ದೇವಾಡಿಗ ಹಾಗೂ ಅವರ ಕುಟುಂಬವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಕೋರ್ದಬ್ಬು ದೈವಸ್ಥಾನ ಕರಂಬಾರು ನ ಅಧ್ಯಕ್ಷರಾದ ಜಗನಾಥ್ ಸಾಲ್ಯಾನ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಲಕ್ಷ್ಮಣ್ ಬಂಗೇರ, ನಮ್ಮ ಕ್ಲಿನಿಕ್ ಮಳವೂರಿನ ವೈದ್ಯಾಧಿಕಾರಿ ಡಾ! ಸಮೀಕ್ಷಾ ಡಿ. ಪಿ , ನಮ್ಮ ಜವನೆರ್ ಕರಂಬಾರು ಅಧ್ಯಕ್ಷರಾದ ರಮೇಶ್ ಸುವರ್ಣ, ಶ್ರೀ ದೇವಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಅಧ್ಯಕ್ಷರಾದ ರವಿ ಶೆಟ್ಟಿ, ಓಂಕಾರ್ ಫ್ರೆಂಡ್ಸ್ ಕ್ಲಬ್ ಕೆಂಜಾರು ಕರಂಬಾರು ಅಧ್ಯಕ್ಷರಾದ ಮನೋಜ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ರಾಕೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಕೋಶಾಧಿಕಾರಿ ವಿನೋದ್ ಅರ್ಬಿ, ಖಜಾಂಚಿ ಮಿಥುನ್ ಪೂಜಾರಿ, ಶಾಲಾ SDMC ಉಪಾಧ್ಯಕ್ಷರಾದ ಲಾವಣ್ಯ, ಮಾಜಿ SDMC ಅಧ್ಯಕ್ಷರಾದ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ ಸ್ವಾಗತಿಸಿದರು, ಗೀತಾ ಟೀಚರ್ ನಿರೂಪಿಸಿ, ವಂದಿಸಿದರು.
ಜಾಗ ಮಾರಾಟಕ್ಕಿದೆ
ಮಂಗಳೂರು ವಿಮಾನ ನಿಲ್ದಾಣ ರಸ್ತೆಯ ಮಳವೂರು ಎಂಬಲ್ಲಿ ಸಮತಟ್ಟಾದ 8 ಸೆಂಟ್ಸ್ ಖಾಲಿ ಜಾಗವು ಮಾರಾಟಕ್ಕಿದೆ.ರಿಂಗ್ ಅಳವಡಿಸಿರುವ ಯಥೇಚ್ಛ ನೀರಿರುವ ಬಾವಿ, (ನೀರಿನ ಟ್ಯಾಂಕರ್ ಇಟ್ಟುಕೊಂಡು ವ್ಯವಹಾರ ನಡೆಸಬಹುದು) 3 ತೆಂಗು, 1 ಹಲಸು ಹಾಗೂ 3 ಮಾವಿನ ಮರಗಳು ಈ ಜಾಗದಲ್ಲಿರುತ್ತದೆ. ಭೂಮಿಗೆ ಸಂಬಂಧಿಸಿದ ಪ್ರಾಪರ್ಟಿ ಕಾರ್ಡ್, ಇ ಖಾತಾ ,ಸಿಂಗಲ್ ಸೈಟ್, ಸ್ಕೆಚ್ ಸೇರಿದಂತೆ ಅಗತ್ಯ ಕಾಗದ ಪತ್ರಗಳು ತಯಾರಿದೆ.ಸೆಂಟ್ಸೊಂದರ ಬೆಲೆ ರೂಪಾಯಿ 5 ಲಕ್ಷಗಳುಪ್ರಯೋಜನಗಳುಪ್ರಾಮಾಣಿಕ ಚೌಕಾಸಿಗೆ ಅವಕಾಶವಿದೆಬಜ್ಪೆ ಏರ್ ರ್ಪೋರ್ಟ್,ದೇವಿ ಕಾಲೇಜು, ಖಾಸಗಿ ವಿದ್ಯಾಸಂಸ್ಥೆಗಳು ವಿವಿಧ ಉದ್ಯಮ ಕಂಪನಿಗಳ ಮುಂತಾದ ಸಂಸ್ಥೆಗಳ ಸಿಬ್ಬಂದಿಗಳಿಗೆ ಪೇಯಿಂಗ್ ಗೆಸ್ಟ್ ಹಾಸ್ಟೆಲ್,ರೂಮ್ಸ್ , ವಸತಿ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದಲ್ಲಿ ಉತ್ತಮ ಲಾಭ ಗಳಿಸಬಹುದು.ಅಥವಾ ಲಾಭಗಳಿಸುವ ನಿಟ್ಟಿನಲ್ಲಿ ಷೇರ್ ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಕೊಳ್ಳುವಂತೆ ಖಾಲಿ ಜಾಗವನ್ನು ಖರೀದಿಸಿ ಇಟ್ಟುಕೊಳ್ಳುವವರಿಗೂ ಇದೊಂದು ಒಳ್ಳೆಯ ಲಾಭ ತಂದು ಕೊಡುವ ಪ್ರಾಪರ್ಟಿ.ಈಗಾಗಲೇ ಈ ಜಾಗಕ್ಕೆ ತಾಗಿಕೊಂಡಿರುವ ಸುಮಾರು 06 ಎಕರೆ ಜಾಗವನ್ನು ಉದ್ಯಮಿಗಳು ಖರೀದಿಸಿ ಲೇ ಔಟ್ ಮಾಡಿಕೊಂಡು ಮಾರಾಟಕ್ಕಿರುತ್ತಾರೆ.ಈ ಜಾಗವನ್ನು ಖರೀದಿಸಲು ಆಸಕ್ತಿ ಹೊಂದಿರುವವರು ಕರೆ ಅಥವಾ ವಾಟ್ಸಾಪ್ ಮಾಡಬಹುದು. 7026286925, 7760980911
ನೀರುಮಾರ್ಗ ಚರ್ಚ್ ನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ
ಮಂಗಳೂರು: ಮಂಗಳೂರಿನ ನೀರುಮಾರ್ಗದ ಸೈಂಟ್ ಜೋಸೆಫ್ ದಿ ವರ್ಕರ್ ಚರ್ಚ್ ನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ಕಾರ್ಯಕ್ರಮ ಆಗಸ್ಟ್ 17 ರಂದು ರವಿವಾರ ನಡೆಯಿತು.ಮುಖ್ಯ ಅತಿಥಿಯಾಗಿದ್ದ ಅರುಣ್ ರಾಜ್ ರೊಡ್ರಿಗಸ್ ಅವರು ಸಮಾರಂಭವನ್ನು ಆ ದಿನದ ವಿಶೇಷ ಖಾದ್ಯ ಪತ್ರೊಡೆಯನ್ನು ಬಿಡಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಕೊಂಕಣಿ ಭಾಷೆಯು 1992 ಆಗಸ್ಟ್ 20 ರಂದು ಭಾರತದ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳ್ಳುವ ಮೂಲಕ ಅಧಿಕೃತ ಭಾಷೆಯ ಸ್ಥಾನ ಮಾನವನ್ನು ಪಡೆಯಿತು. ನಾವು ಅದೇ ಹುಮ್ಮಸ್ಸಿನಿಂದ ಕೊಂಕಣಿ ಭಾಷೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯ ಬೇಕಾದರೆ ಕೊಂಕಣಿ ಮಾತೃ ಭಾಷಿಗರು ತಮ್ಮ ಮನೆಗಳಲ್ಲಿ ಕೊಂಕಣಿಯಲ್ಲಿಯೇ ವ್ಯವಹರಿಸುವ ಅಗತ್ಯವಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನೀರುಮಾರ್ಗ ಚರ್ಚ್ ನ ಧರ್ಮಗುರು ವಂದನೀಯ ಫಾ. ಪೌಲ್ ಪಿಂಟೊ ಅವರು ಮಾತನಾಡಿ, ತಾನು ವೆಲೆನ್ಸಿಯಾ ಚರ್ಚ್ ನಲ್ಲಿ ಧರ್ಮಗುರು ಆಗಿದ್ದಾಗ 25 ವರ್ಷಗಳ ಹಿಂದೆ ಕೊಂಕಣಿ ಮಾನ್ಯತಾ ದಿನವನ್ನು ಆಚರಿಸಲು ಆರಂಭಿಸಿದ್ದೆನು. ಇದೀಗ ಈ ಆಚರಣೆ ಧರ್ಮ ಪ್ರಾಂತ್ಯ ಮಟ್ಟಕ್ಕೆ ವಿಸ್ತರಣೆಗೊಂಡಿದೆ. ಈಗ ಈ ಚರ್ಚ್‌ನಲ್ಲಿ ಆಚರಿಸುತ್ತಿದ್ದೇವೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂದೀಪ್ ಮಿಸ್ಕಿತ್ ಸ್ವಾಗತಿಸಿದರು. ಕಾರ್ಯದರ್ಶಿ ಉಷಾ ಫೆರ್ನಾಂಡಿಸ್, ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಮ್ಯಾನೇಜರ್ ಸಿಸ್ಟರ್ ಸುಜಾತಾ, ಕಾರ್ಮೆಲ್ ಆಶ್ರಮದ ಸುಪೀರಿಯರ್ ಸಿಸ್ಟರ್ ಜೇನ್, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಅವರು ಉಪಸ್ಥಿತರಿದ್ದರು. ಕಿರು ಕ್ರೈಸ್ತ ಸಮುದಾಯದ ಸಂಚಾಲಕಿ ಶಬಿತಾ ಸಲ್ದಾನ್ಹಾ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ 16 ವಾರ್ಡುಗಳ ಜನರು 14 ವಿಭಾಗಗಳಲ್ಲಿ ಕೊಂಕಣಿ ಹಾಡು, ನೃತ್ಯ, ನಾಟಕ, ಮಾಂಡೊ ಮತ್ತಿತರ ವಿವಿಧ ಕೊಂಕಣಿ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕೊಂಕಣಿ ಮಾತೆ ನಿಮಗೆ ನಮ್ಮ ವಂದನೆಗಳು”ಎಂಬ ಸ್ಲೋಗನ್ ಮೊಳಗಿತು. ಕೊನೆಯಲ್ಲಿ ಸಹ ಭೋಜನದಲ್ಲಿ ಪಾಲ್ಗೊಂಡರು.
St Aloysius Deemed to be University and Father Muller Medical College Sign MoU to Foster Interdisciplinary Collaboration
Mangalore, August 8, 2025: In a significant step toward advancing academic collaboration and interdisciplinary research, St Aloysius Deemed to be University, Mangalore, and Father Muller Medical College, Mangalore, have officially signed a Memorandum of Understanding (MoU) on 8th August 2025.The MoU was signed by Rev. Fr Faustine Lucas Lobo, Director of Father Muller Institutions, and Dr (Fr) Kiran Cotha SJ, Director of the AIMIT Centre, St Aloysius Deemed to be University. This partnership reflects the shared vision of both institutions to foster innovation, promote collaborative research, and enhance academic engagement across disciplines. The coordination of the MoU was led by Dr. Ramesh Bhat, Head of Research at Father Muller Medical College, and Dr. S. Ruban, Associate Professor and Dean of the School of Engineering, St Aloysius Deemed to be University. They were ably supported by Mr. Roshan Fredrick Dsouza, Chair, International and Domestic Relations, St Aloysius Deemed to be University, whose efforts in strengthening institutional partnerships were instrumental in formalizing this agreement.This MoU aims to facilitate joint initiatives such as collaborative research projects, interdisciplinary workshops, training programs, and academic exchanges, creating a platform for knowledge sharing and mutual growth.Both institutions expressed their enthusiasm for the opportunities this collaboration will bring to faculty and students, emphasizing the importance of working together to address contemporary challenges in healthcare, technology, and society at large.
ಚೆಂಬೂರು ಚೆಡ್ಡಾ ನಗರ ಸುಬ್ರಹ್ಮಣ್ಯ ಮಠದಲ್ಲಿ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಳೆ.’ಯಕ್ಷಗಾನಕ್ಕೆ ಮಠ ಮಂದಿರಗಳ ಕೊಡುಗೆ ಅಪಾರ’: ಪ್ರೊ|ಭಾಸ್ಕರ ರೈ ಕುಕ್ಕುವಳ್ಳಿ
ಮುಂಬಯಿ: ‘ಕರಾವಳಿ ಭಾಗದಲ್ಲಿ ಹುಟ್ಟಿ ಬೆಳೆದ ಯಕ್ಷಗಾನವಿಂದು ಜಗದಗಲ ತನ್ನ ಪ್ರಭಾವವನ್ನು ಬೀರಲು ಅಲ್ಲಲ್ಲಿ ನೆಲೆಸಿರುವ ಕಲಾಸಕ್ತರು ಮತ್ತು ಕರಾವಳಿ ಮೂಲದ ಸಂಘ – ಸಂಸ್ಥೆಗಳು ಪ್ರಮುಖ ಕಾರಣವೆನ್ನಬಹುದು. ಇದರಲ್ಲಿ ಮಠ – ಮಂದಿರಗಳ ಕೊಡುಗೆಯೂ ಅಪಾರ. ದೇಶ ವಿದೇಶಗಳಲ್ಲಿರುವ ಪ್ರಸಿದ್ಧ ಸಂಸ್ಥಾನಗಳ ಶಾಖಾಮಠಗಳು ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ ನೀಡಿವೆ. ಈ ನಿಟ್ಟಿನಲ್ಲಿ ಚೆಡ್ಡಾನಗರ ಶ್ರೀ ಸುಬ್ರಮಣ್ಯ ಮಠದಲ್ಲಿ ನಡೆಯುತ್ತಿರುವ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಾರ್ಹವೆನಿಸಿವೆ. ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಮಾರ್ಗದರ್ಶನ ಮತ್ತು ಆರಿಕ್ಕಾಡಿ ಅಶೋಕ ಭಟ್ಟರಂತಹ ಸಂಸ್ಕೃತಿ ಪ್ರಿಯರ ಕಾರ್ಯಶೀಲತೆಯಿಂದ ಇದು ಸಾಧ್ಯವಾಗಿದೆ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಚೆಂಬೂರು ಪಶ್ಚಿಮದ ಚೆಡ್ಡಾ ನಗರ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 24ನೇ ತಾಳಮದ್ದಳೆ ಸರಣಿ ಅಂಗವಾಗಿ ಆಗಸ್ಟ್ 14ರಂದು ಜರಗಿದ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಅವರು ಬಳಗದ ಪರವಾಗಿ ಮಾತನಾಡಿದರು. ಯಕ್ಷಗಾನ ಪೋಷಕರಾದ ಖ್ಯಾತ ಜ್ಯೋತಿಷಿ ಆರಿಕ್ಕಾಡಿ ಅಶೋಕ ಭಟ್ಟ ಕುರ್ಲಾ – ಪಶ್ಚಿಮ ಅವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಊರಿನಿಂದ ಬಂದ ಪ್ರಸಿದ್ಧ ಕಲಾವಿದರನ್ನು ಶಾಲು – ಸ್ಮರಣಿಕೆ ನೀಡಿ ಗೌರವಿಸಲಾಯಿತು.ಹಿರಿಯ ಅರ್ಥಧಾರಿ – ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ ‘ಯಾವುದೇ ಕಲೆ ಬೆಳೆಯಬೇಕಾದರೆ ರಾಜಾಶ್ರಯ ಬೇಕು. ಇದು ಅದರ ವ್ಯಾಪ್ತಿ ಮತ್ತು ವಿಸ್ತರಣೆಗೂ ಕಾರಣವಾಗುತ್ತದೆ. ಯಕ್ಷಗಾನದಂತಹ ನಮ್ಮ ನಾಡಿನ ಕಲೆ ಮುಂಬೈ ಮಹಾನಗರದಲ್ಲಿ ಇಷ್ಟೊಂದು ಜನಾಕರ್ಷಣೆ ಪಡೆಯಬೇಕಾದರೆ ಇಲ್ಲಿನ ಕಲಾಭಿಮಾನಿಗಳು ಮತ್ತು ಪೋಷಕರ ಔದಾರ್ಯ ಕಾರಣ’ ಎಂದರು. ಅಜೆಕಾರು ಕಲಾಭಿಮಾನಿ ಬಳಗದ ಮುಂಬೈ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಆರಿಕ್ಕಾಡಿ ಅಶೋಕ ಭಟ್ಟರನ್ನು ಸನ್ಮಾನಿಸಿದರು. ಪತ್ನಿ ಆರಿಕ್ಕಾಡಿ ಪ್ರಿಯಾ ಅಶೋಕ್ ಭಟ್ ಜತೆಗಿದ್ದರು. ಮಠದ ಆಡಳಿತಾಧಿಕಾರಿ ವಿಷ್ಣು ಕಾರಂತ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅರ್ಚನಾ ಕಾರಂತ್, ಪ್ರಭಾ ಉಡುಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.‘ಶ್ರೀರಾಮ ನಿರ್ಯಾಣ’ ತಾಳಮದ್ದಳೆ:ಸರಣಿಯ ಆರನೇ ದಿನದ ಯಕ್ಷಗಾನ ತಾಳಮದ್ದಳೆ ‘ಶ್ರೀರಾಮ ನಿರ್ಯಾಣ’ ಪ್ರಸಂಗದಲ್ಲಿ ಡಾ. ಎಂ.ಪ್ರಭಾಕರ ಜೋಶಿ ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀರಾಮ ); ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಲಕ್ಷ್ಮಣ ); ದಿನೇಶ್ ಶೆಟ್ಟಿ ಕಾವಳಕಟ್ಟೆ (ದೂರ್ವಾಸ), ಸದಾಶಿವ ಆಳ್ವ ತಲಪಾಡಿ (ಕಾಲ ಪುರುಷ) ಅರ್ಥಧಾರಿಗಳಾಗಿದ್ದರು. ದೇವಿಪ್ರಸಾದ್ ಆಳ್ವ ತಲಪಾಡಿ ಅವರ ಭಾಗವತಿಕೆಗೆ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಹಿಮ್ಮೇಳದಲ್ಲಿ ಸಹಕರಿಸಿದರು.









