Author name: editor

ಪ್ರಾದೇಶಿಕ ವಾರ್ತೆಗಳು

ಏಕ ನಿವೇಶನ ವಿನ್ಯಾಸ ನಕ್ಷೆ ತಾಂತ್ರಿಕ ಅನುಮೋದನೆ

ದಿನಾಂಕ 12/09/2025ರಂದು ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ ಜಿ ಎಸ್ ವೈ ಸಭಾಂಗಣದಲ್ಲಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಾಯತ್ರಿ ದೊಂಬರ, ಗುರುಪ್ರಸಾದ್ ಸಹಾಯಕ ನಿರ್ದೇಶಕರು ನಗರ ಯೋಜನಾ ಪ್ರಾಧಿಕಾರ ಮಹಾನಗರ ಪಾಲಿಕೆ ಮಂಗಳೂರು ಇವರು ಏಕ ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ಮತ್ತು ಕಟ್ಟಡ ಪರವಾನಿಗೆಯ ಕಟ್ಟಡದ ವಿನ್ಯಾಸನಕ್ಷೆಗೆ ತಾಂತ್ರಿಕ ಅನುಮೋದನೆ ಹಾಗೂ ಸ್ವಾಧೀನ ಪತ್ರ ವಿತರಣೆ, ಸರ್ಕಾರದ ಇತ್ತೀಚಿನ ಆದೇಶ ಮತ್ತು ಸುತ್ತೋಲೆಗಳ ಕುರಿತು ಮಾಹಿತಿ ನೀಡಿದರು.ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್, ಜಿಪಂ ಯೋಜನಾ ನಿರ್ದೇಶಕರಾದ ಜಯರಾಂ ಕೆ.ಇ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಚಿನ್ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತಾರಾನಾಥ್ ಸಾಲ್ಯಾನ್, ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಬಿ.(ಗ್ರಾ.ಉ), ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

‘ಜಯ ಸಿ ಸುವರ್ಣ ಜನಸೇವಾ ಪುರಸ್ಕಾರ’ ಶಿವಗಿರಿ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ. ‘ಬಿಲ್ಲವ ಸಮಾಜ ಬಲಿಷ್ಠವಾಗಲು ಜಯ ಸುವರ್ಣ ತ್ಯಾಗ ಕಾರಣ’: ಐಕಳ ಹರೀಶ್ ಶೆಟ್ಟಿ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ ಶಿವಗಿರಿಯ ಹೆಸರಿನಲ್ಲಿ, ಮತ್ತವರ ತತ್ವದಂತೆ ಬದುಕಿ ಬಾಳಿದ ಜಯ ಸುವರ್ಣರ ನೆನಪಿನಲ್ಲಿ ನೀಡಿದ ಈ ಸನ್ಮಾನ ನನ್ನ ಬದುಕಿನಲ್ಲಿ ಅಮೂಲ್ಯವಾಗಿದೆ. ಕರ್ನಾಟಕ ಸರಕಾರ. ನಾನು ಹುಟ್ಟಿರುವ ಸಮಾಜ ಹಾಗೂ ನೂರಾರು ಸನ್ಮಾನಗಳನ್ನು ಸ್ವೀಕರಿಸಿಕೊಂಡಿದ್ದೆ ಆದರೆ ಬಿಲ್ಲವ ಸಮಾಜ ನೀಡಿರುವ ಈ ಸನ್ಮಾನಕ್ಕೆ ನಾನು ಋಣಿಯಾಗಿದ್ದೇನೆ ‌, ಬಿಲ್ಲವ ಸಮಾಜ ಇಂದು ಈ ಮಟ್ಟದಲ್ಲಿ ಬಲಿಷ್ಠವಾಗಲು ಕಾರಣ ಜಯ ಸುವರ್ಣರು ಮತ್ತು ಜನಾರ್ಧನ ಪೂಜಾರಿ ಅವರು ಕಾರಣರಾಗಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ನುಡಿದರು, ಅವರು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಜಯಲೀಲಾ ಬ್ಯಾಂಕ್ವೆಟ್ ಹಾಲ್, ಜಯ ಸಿ ಸುವರ್ಣ ಮಾರ್ಗ, ಗೋರೆಗಾಂವ್ (ಪೂರ್ವ), ಇಲ್ಲಿ171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯಲ್ಲಿ ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ರವಿ ಶೆಟ್ಟಿ ಅವರು ಪ್ರಧಾನಿಸಿ, ಜಯ ಸಿ ಸುವರ್ಣ ಜನಸೇವಾ ಪುರಸ್ಕಾರ “ಶಿವಗಿರಿ ಸಮ್ಮಾನ್” ಪ್ರಶಸ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.ಜೈ ಸುವರ್ಣದಲ್ಲಿ ಜ್ಞಾನವಿದೆ ಸಂಘಟನಾ ಶಕ್ತಿ ಇದೆ ಅಂತ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಶಿವಗಿರಿ ಪ್ರಶಸ್ತಿ ನನ್ನ ಜನ ಸೇವೆಗೆ ಶಕ್ತಿ ತುಂಬಿದೆ. ಕಾಲೇಜು ಜೀವನದಲ್ಲಿ ಜಾತಿಯ ಪರಿಧಿಯನ್ನು ಮೀರಿ ಎಲ್ಲರೂ ಒಗ್ಗಟ್ಟಾಗಿ ಬದುಕಿ ಬಾಳಿದವರು, ಎಲ್ಲರನ್ನು ಪ್ರೀತಿಸುವ ಗುಣ ನಮ್ಮಲ್ಲಿ ಬೆಳೆಯಬೇಕು ನಾನು ಈ ಸಮಾಜಕ್ಕೆ ಏನಾದರೂ ಸೇವೆ ಮಾಡಿದ್ದರೆ ಅದು ಕಟೀಲಮ್ಮನ ಆಶೀರ್ವಾದವೆಂದು ನಂಬಿದವನು. ಜೀವನದಲ್ಲಿ ಒಳ್ಳೆಯ ಸೇವೆ ಮಾಡಿದಾಗ ಅದಕ್ಕೆ ಕಲ್ಲು ಎಸೆಯುವರು ಇರುತ್ತಾರೆ. ಕಲ್ಲಿನ ಪೆಟ್ಟು ತಿಂದು ಗಟ್ಟಿಯಾಗಿದ್ದಾಗ. ಯಾವ ಕಲ್ಲಿನ ಪೆಟ್ಟುಗಳನ್ನು ಎದುರಿಸುವ ಶಕ್ತಿವಂತನಾಗಿದ್ದವೆ. ನಮ್ಮಲ್ಲಿ ಆತ್ಮ ಶೈರ್ಯ ಮತ್ತು ದೇವರಿಗೆ ಸಮಾನವವಾಗಿ ನಡೆಯಬೇಕು .ಯಾರಿಗೂ ಅನ್ಯಾಯ ಮಾಡಬಾರದು ಎಲ್ಲರನ್ನು ಪ್ರೀತಿಸುವ ಹಸಿವಿರಬೇಕು. ಬದುಕಿನಲ್ಲಿ ದ್ವೇಷ ಮಾಡಬಾರದು. ಎಷ್ಟು ಒಳ್ಳೆಯ ಸೇವೆ ಮಾಡಿದರು ಟೀಕೆಗಳಿರುತ್ತದೆ. ಅದನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ನಾನು ಬೇಡಿ ತಂದದ್ದನ್ನು ಸಮಾಜಕ್ಕೆ ನೀಡಿದ್ದೇನೆ. ಬಂಟ ಸಮಾಜದಲ್ಲಿ ಕೂಡ 75ರಷ್ಟು ಬಡತನದ ಕುಟುಂಬಗಳಿವೆ. ಬೇಡಿದ್ದನ್ನು ಸಮಾಜಕ್ಕೆ ನೀಡುತ್ತಿದ್ದೇನೆ ಯಾವುದೇ ಸಮಾಜದವರು ಕೂಡ ಜಾಗತಿಕ ಬಂಟರ ಸಂಘಕ್ಕೆ ನೆರವು ಗಾಗಿ ಮನವಿ ನೀಡಿದರೆ ಸಹಕಾರವನ್ನು ನೀಡುತ್ತಾ ಬಂದವನು. ಪ್ರತಿ ಸಂಘ ಸಂಸ್ಥೆಗಳು ಸಮಾಜದ ಬಂಧುಗಳಿಗೆ ಆಶ್ರಯ ನೀಡುವ ಯೋಜನೆಗಳನ್ನು ರೂಪಿಸಿಕೊಳ್ಳಿ ಬೇಕು ಎಂದರು. ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಗಣೇಶ್ ಆರ್. ಪೂಜಾರಿ,ವೇದಪ್ರಕಾಶ್ ಶ್ರೀಯಾನ್ ನಿತ್ಯಾನಂದ ಡಿ. ಕೋಟ್ಯಾನ್ ವಿದ್ಯಾನಂದ್ ಎಸ್. ಕರ್ಕೆರ ಪುರಂದರ ಪೂಜಾರಿ, ಮನೋಜ್ ಹೆಗ್ಡೆ, ಹ್ಯಾರಿ ಸಿಕ್ಕೇರಾ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಮಾಜದಲ್ಲಿ ವಿಶೇಷ ಸೇವೆಗೈದ ಜಲಜಾ ಸೂರು ಪೂಜಾರಿ ವಡಾಲ, ಮತ್ತು ಹೈಕೋರ್ಟ್ ನ ನ್ಯಾಯವಾದಿ ಅಡ್ವಕೇಟ್ ಜಿ ಸಿ ಪೂಜಾರಿ, ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ನಾಳೆ(ಸೆ.11) ಯೇನೆಪೊಯ ಕಾಲೇಜಿನಲ್ಲಿ ಪ್ರಥಮ‌ ಚಿಕಿತ್ಸೆ ತರಬೇತಿ ಶಿಬಿರ

ಮಂಗಳೂರು: ನಗರದ ಕೂಳೂರಿನ ಯೇನೆಪೊಯ ಇನ್ ಸ್ಟಿಟ್ಯೂಟ್ ಆಫ್ ಆರ್ಟ್ಸ್ , ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ ಮೆಂಟ್ ಇದರ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ಸೆ.11 ರಂದು ಬೆಳಗ್ಗೆ 9.30ಕ್ಕೆ ಸಂಸ್ಥೆಯ ಸೆಮಿನಾರ್ ಹಾಲ್ ನಲ್ಲಿ ಯೂತ್ ರೆಡ್ ಕ್ರಾಸ್ ಓರಿಯೆಂಟೇಶನ್ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ ನಡೆಯಲಿದೆ.ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ನಿರ್ದೇಶಕ ಪಿ.ಬಿ.ಹರೀಶ್ ರೈ, ಯೇನೆಪೊಯ ಪರಿಗಣಿತ ವಿ.ವಿ.ಯ ಯೂತ್ ರೆಡ್ ಕ್ರಾಸ್ ನೋಡಲ್ ಅಧಿಕಾರಿ ನಿತ್ಯಶ್ರೀ.ಬಿ.ವಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಪ್ರಾಂಶುಪಾಲ ಪ್ರೊ.ಜೀವನ್ ರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಯೇನೆಪೊಯ ನರ್ಸಿಂಗ್ ಕಾಲೇಜಿನ ಯೂತ್ ರೆಡ್ ಕ್ರಾಸ್ ಅಧಿಕಾರಿ ಜ್ಯೋತಿ, ಯೇನೆಪೊಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನ ಅಸಿಸ್ಟೆಂಟ್ ಪ್ರೊಫೆಸರ್ ವಿಕ್ಕಿ ಜೋಸ್ವಿಟ ಡಿಸೋಜ ಸಂಪನ್ಮೂಲ‌ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಜೈಭಾರತಿ ಟ್ರೋಫಿ ದ.ಕ.ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ. ‘ಕಬಡ್ಡಿ ವಿಶ್ವ ಮಾನ್ಯತೆ ಉತ್ತಮ ಬೆಳವಣಿಗೆ’ -ವಿವೇಕ್ ಆಳ್ವ

ಮಂಗಳೂರು: ನಗರದ ಉರ್ವ ಹೊಯ್ಗೆಬೈಲಿನ ಜೈಭಾರತಿ ತರುಣ ವೃಂದದ ವಜ್ರಮಹೋತ್ಸವದ ಅಂಗವಾಗಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹಾಗೂ ಮಂಗಳೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಉರ್ವ ಮಾರ್ಕೆಟ್ ಬಳಿಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಜೈಭಾರತಿ ಟ್ರೋಫಿ ದ.ಕ.ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಿತು.’ಪಂದ್ಯಾಟ ಉದ್ಘಾಟಿಸಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಅವರು ಮಾತನಾಡಿ, ಅಪ್ಪಟ ದೇಸಿ ಕ್ರೀಡೆಯಾಗಿರುವ ಕಬಡ್ಡಿ ಆಟಕ್ಕೆ ಇತ್ತೀಚಿನ ವರ್ಷಗಳಲ್ಲಿ ವಿಶ್ವ ಮಾನ್ಯತೆ ದೊರಕಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಜೈಭಾರತಿ ತರುಣ ವೃಂದದ ಸೇವಾ ಚಟುವಟಿಕೆಗಳು ಸಮಾಜಕ್ಕೆ ಮಾದರಿಯಾಗಿದೆ ಎಂದರು.ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ದ.ಕ.ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸುಪ್ರೀತ್ ಆಳ್ವ, ಕಬಡ್ಡಿ ಅಸೋಸಿಯೇಶನ್‌ನ ಪದಾಧಿಕಾರಿಗಳಾಗಿರುವ ಗಿರಿಧರ್ ಶೆಟ್ಟಿ, ದಿನಕರ ಶೆಟ್ಟಿ, ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಇಂಜಿನಿಯರ್ ಬಾಬಾ ಅಲಂಕಾರ್, ಮುಡಾರೆ ಫೌಂಡೇಶನ್ ಅಧ್ಯಕ್ಷ ಸತೀಶ್ ಆಳ್ವ ಮುಡಾರೆ, ಉರ್ವ ಬಿಲ್ಲವ ಸಂಘದ ಅಧ್ಯಕ್ಷ ಬಿ.ಹರಿಪ್ರಸಾದ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಭಾಸ್ಕರ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಜೈಭಾರತಿ ತರುಣ ವೃಂದದ ಗೌರವಾಧ್ಯಕ್ಷ ಕೇಶವ ಕುಲಾಲ್, ಅಧ್ಯಕ್ಷ ವಿಕ್ರಮ್, ಕಾರ್ಯದರ್ಶಿಜಿತೇಂದ್ರ ದೇವಾಡಿಗ, ಜತೆ ಕಾರ್ಯದರ್ಶಿ ಲತೀಶ್ ದೇವಾಡಿಗ, ಕೋಶಾಧಿಕಾರಿ ಸುನಿಲ್ ದೇವಾಡಿಗ, ಕ್ರೀಡಾ ಕಾರ್ಯದರ್ಶಿ ತ್ರಿಶಾಂತ್ ಅಮೀನ್, ಜತೆ ಕ್ರೀಡಾ ಕಾರ್ಯದರ್ಶಿ ತಿಲಕ್‌ರಾಜ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ಶಿಕ್ಷಕರ ದಿನಾಚರಣೆ

ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸಲು ಮತ್ತು ಬೆಳ್ಮಣ್ ಪ್ರದೇಶದ ಸುತ್ತಮುತ್ತಲಿನ ಶಿಕ್ಷಕರ ಸಮರ್ಪಣೆ ಮತ್ತು ಸೇವೆಯನ್ನು ಗೌರವಿಸಲು ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ದಿನಾಂಕ 09.09.2025ರಂದು ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಮುಲ್ಲಡ್ಕ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಫಾದರ್ ಮಿಲ್ಟನ್ ಫೆರ್ನಾಂಡಿಸ್, ನಿವೃತ್ತ ಶಿಕ್ಷಕಿ ಮತ್ತು ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಡ್ವಿನ್ ಅರಾನ್ಹಾ, ಮತ್ತು ಕುರ್ಕಿಲಬೆಟ್ಟು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗ್ರೆಟ್ಟಾ ಮಸ್ಕರೇನ್ಹಸ್ ಅವರು ಗೌರವ ಅತಿಥಿಗಳಾಗಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರು, ಹೊಸದಾಗಿ ಸ್ಥಾಪನೆಯಾದ, ಬೆಳ್ಮಣ್ ಶಾಖೆಯು ಕೇವಲ ಆರು ತಿಂಗಳಲ್ಲಿ ₹ 6 ಕೋಟಿಗೂ ಮೀರಿದ ವಹಿವಾಟು ಸಾಧಿಸಿದೆ ಎಂದು ಹೇಳಿ, ಇದು ಸ್ಥಳೀಯ ಸಮುದಾಯದ ಬಲವಾದ ಬೆಂಬಲಕ್ಕೆ ಸಾಕ್ಷಿಯಾಗಿದೆ. ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ದೂರದೃಷ್ಟಿಯ ಮಹತ್ವವನ್ನು ಒತ್ತಿ ಹೇಳಿದ ಅವರು ಇಂದು ಶಿಕ್ಷಕರು ಎದುರಿಸುತ್ತಿರುವ ಹೆಚ್ಚುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು. ಪ್ರೀತಿ ಮತ್ತು ಸಮರ್ಪಣೆಯೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲು ಶಿಕ್ಷಕರನ್ನು ಪ್ರೋತ್ಸಾಹಿಸುತ್ತಾ, ಹಾಜರಿದ್ದ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.ಫಾದರ್ ಮಿಲ್ಟನ್ ಫೆರ್ನಾಂಡಿಸ್ ಅವರು ತಮ್ಮ ಭಾಷಣದಲ್ಲಿ, ಶಿಕ್ಷಕರನ್ನು ಗೌರವಿಸಲು ಬ್ಯಾಂಕ್ ಮತ್ತು ಇದರ ಸಿಬ್ಬಂದಿ ತೆಗೆದುಕೊಂಡ ಉಪಕ್ರಮವನ್ನು ಶ್ಲಾಘಿಸಿದರು. ಶಿಕ್ಷಕರಿಗೆ ನೀಡಿದ ಮನ್ನಣೆಗೆ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು.ಮತ್ತೊಬ್ಬ ಅತಿಥಿ ಶ್ರೀಮತಿ ಲಿಡ್ವಿನ್ ಅರಾನ್ಹಾ ಕೂಡ ಬ್ಯಾಂಕಿನ ಚಿಂತನಶೀಲ ಕಾರ್ಯವನ್ನು ಶ್ಲಾಘಿಸಿದರು. ಬೆಳ್ಮಣ್ ಪ್ರದೇಶದ ವಿವಿಧ ಸಂಸ್ಥೆಗಳ ಶಿಕ್ಷಕರನ್ನು ಒಟ್ಟುಗೂಡಿಸುವಲ್ಲಿ ಸಿಬ್ಬಂದಿ ಮಾಡಿದ ಶ್ಲಾಘನೀಯ ಕಾರ್ಯಕ್ಕೆ ಅಭಿನಂದನೆ ವ್ಯಕ್ತಪಡಿಸಿದರು.2018–19ನೇ ಸಾಲಿನ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಲಿಡಿಯಾ ಅರಾನ್ಹಾ ಮತ್ತು ಕುರ್ಕಿಲಬೆಟ್ಟು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗ್ರೆಟ್ಟಾ ಮಸ್ಕರೇನ್ಹಸ್ ಅವರನ್ನು ಅವರ ಸಾಧನೆಗಾಗಿ ಸನ್ಮಾನಿಸಲಾಯಿತು. ಒಟ್ಟು 60 ಶಿಕ್ಷಕರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು,ಡಾ| ಸರ್ವಪಲ್ಲಿ ರಾಧಾಕೃಷ್ಜನ್ ಅವರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ನಿರ್ದೇಶಕರಾದ ಶ್ರೀ ಆಂಡ್ರ‍್ಯೂ ಡಿಸೋಜಾ ಸ್ವಾಗತಿಸಿದರು. ಕಾರ್ಯಕ್ರಮವು ಸಿಬ್ಬಂದಿ ನಡೆಸಿದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಸಿಬ್ಬಂದಿ ಶ್ರೀ ರಿತೇಶ್ ಡಿಸೋಜಾ ನಿರೂಪಿಸಿ, ಶಾಖಾ ವ್ಯವಸ್ಥಾಪಕಿ ಶ್ರೀಮತಿ ಶೈನಿ ಲಸ್ರಾದೊ ವಂದಿಸಿದರು.ನಿರ್ದೇಶಕರಾದ ಶ್ರೀ ಎಲ್ರಾಯ್ ಕೆ. ಕ್ರಾಸ್ಟೊ, ಡಾ| ಜೆರಾಲ್ಡ್ ಪಿಂಟೊ, ಶಿಕ್ಷಕರು ಮತ್ತು ಗಣ್ಯರು ಸೇರಿದಂತೆ ಅತಿಥಿಗಳು ಸುಸಂಘಟಿತ ಕಾರ್ಯಕ್ರಮದಲ್ಲಿ ಭಾಗವಹಿಸಿದರು,

ಪ್ರಾದೇಶಿಕ ವಾರ್ತೆಗಳು

MCC Bank, Belman Branch Celebrates Teachers’ Day

Teachers’ Day celebration was organized at the Belman branch of MCC Bank on 9th September 2025 to pay tribute to Dr Sarvepalli Radhakrishnan and to honour the dedication and service of teachers in and around the Belman area.The programme was presided over by Sahakara Ratna Mr Anil Lobo, Chairman of MCC Bank. Fr Milton Fernandes, Principal Don Bosco school Mulladka, Mrs Lydwyn Aranha, Retired Teacher, ex-headmistress St Joseph English Medium School Belman and Mrs Gretta Mascarenhas, Headmistress of the Government School, Kurkilabettu were the guest of honour. In his presidential address, the Chairman of the bank Mr Anil Lobo shared that the Belman branch, though newly established, has already achieved a turnover exceeding ₹6 crore in just six months — a testament to the strong support from the local community. He emphasized the importance of vision in the growth of any organization and acknowledged the increasing challenges faced by teachers today. Encouraging them to continue guiding students with love and dedication, he extended his best wishes to all present.Fr Milton Fernandes, in his address, lauded the initiative taken by the bank and its staff to honour educators. He expressed heartfelt gratitude for the recognition given to teachers and appreciated the efforts put into organizing a meaningful programme.Ms Lydwin Aranha, another guest speaker, also appreciated the bank’s thoughtful gesture. She highlighted the commendable work done by the staff in bringing together educators from various institutions in the Belman region.Mrs Lydia Aranha, recipient of the Best Teacher Award 2018–19 and Mrs Gretta Mascarenhas, Headmistress of the Government School, Kurkilabettu were felicitated for their achievement. A total of 60 teachers were honoured in a special ceremony, with the citation read by Ms Shameen Fernandes.The programme began with a floral tribute to Dr Sarvepalli Radhakrishnan. Mr Andrew Dsouza, Director welcomed the gathering.The programme started with a prayer conducted by the staff. The programme was compered by staff Mr Rithesh Dsouza, while Branch Manager Ms Shiny Lasrado proposed the vote of thanks.Directors Mr Elroy K. Crasto, Dr Gerald Pinto, guests, including educators and dignitaries, attended the well-organized event, making it a memorable celebration of the teaching community.

ಪ್ರಾದೇಶಿಕ ವಾರ್ತೆಗಳು

The Karnataka Nair Service Society ®️, Mangalore Karayogam organized the grand celebration of Onam on 7th September 2025 at Shree Gorakshanath Jnana Mandira, Opp. Kadri Park, Kadri, Mangalore.

The programme was presided over by Sri. Murali Nair Hosamajalu, President of KNSS. Sri. V.M. Satheesan, Secretary of KNSS, welcomed the distinguished gathering.The Chief Guest of the function was the renowned multilingual actor Dr. Suman Talwar, who praised the Nair and Keralite community for their invaluable contribution to Indian culture. He also lauded KNSS Mangalore Karayogam for its consistent social and cultural activities, as well as its strong bond with the local community. The Keynote Address was delivered by Smt. Priyamvada K. Pisharadi, Research Scholar, Spiritual Orator, Motivational Speaker, Anchor, and Social Media Influencer from Kottarakkara, Kerala. In her inspiring address, she spoke about the significance of Hindu traditions, literature, and ethics, and emphasized the need to nurture children from a young age to uphold dharma and cultural values. She also highlighted the importance of the Vedas, Upanishads, Ramayana, and Mahabharata as guiding lights of Indian heritage.Distinguished GuestsThe event was graced by eminent personalities, including:• Sri. P.V. Abhilash, Trustee, Mookambika Temple, Kollur• Sri. N. D. Sathish, Vice Chairman III, KNSS• Sri. Vinod A. K., CGM, Union Bank, Mangalore• Sri. Shantharam Shetty, Chairman, Red Cross Society, Mangalore• Sri. Swaraj Shetty, Director & Actor• Sri. Sathish Kumpala, President, BJP Dakshina Kannada• Sri. Ramanath Rai, Former District & In-Charge Minister, Karnataka• Sri. Ivan D’Souza, Honourable Member, Legislative Council• Sri. Kishore Kumar Botyady, Honourable Member, Legislative Council• Sri. Ajith Kumar Rai Malady, President, Bunts Sangha, Mangalore• Sri. Kiran Jogi, President, Jogi Souhardaka Sangha• Sri. Ashok T. A., Vice President, Kerala Samajam• Sri. Rimju, President, Malayali Samajam ®️, Mangalore• Sri. Sandesh A., President, Karnataka Vishwakarma Samajam ®️, Mangalore• Sri. Nichla Bose, President, Kairali Kala Vedi ®️, Surathkal• Sri. K.K. Radhakrishnan, President, Karavali Friends Club ®️, Mangalore• Sri. Dinesh Mandan, Sree Narayana Samskarika Kala Vedi ®️, Mangalore• Sri. Krishnan Nair, President, KNSS Karayogam Sullya• Sri. Mohan Das, President, KNSS Karayogam UdupiAlso present were Mahila Vibhagam Secretary Smt. Lata Diwakar, Treasurer Smt. Jayalakshmi Chandramohan, Board Members Sri. M.V. Rajan and Sri. P.K.S. Pillai, along with several other Committee Members.Programme Highlights• Cultural programmes were presented by the members, showcasing the spirit of Onam.• A special Comedy and Karaoke performance was presented by the Time Jokes Event Troop from Kozhikode, led by Sri. Ajay Kalai, which entertained the audience.• Felicitation Ceremony: Sri. P.V. Abhilash Dr. Suman Talwar Sri. Krishnan Nairwere felicitated for their notable achievements.• Miss Diya Bhandary, State-level medal winner in High Jump, was honoured for her sports excellence.• The team of the recently released Tulu movie “Netterkare” was felicitated by the organisers.• Achievers from the Nair community were also recognised for their contributions in various fields.• A traditional and sumptuous Onam Sadya was served, which was one of the highlights of the celebration and was enjoyed by all attendees.ConclusionThe Vote of Thanks was proposed by Sri. Ravindranath, Treasurer of KNSS, who expressed gratitude to all guests, participants, and members for making the celebration a memorable success.The entire programme was conducted smoothly under the able compering of Smt. Navya Kurup and Smt. Neetu Lakshmi.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ®️, ಮಂಗಳೂರು ಕರಯೋಗಂ ವತಿಯಿಂದ ವಿಜೃಂಭಣೆಯ ಓಣಂ ಹಬ್ಬದ ಆಚರಣೆ

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ®️, ಮಂಗಳೂರು ಕರಯೋಗಂ ವತಿಯಿಂದ ಓಣಂ ಮಹೋತ್ಸವವನ್ನು 07 ಸೆಪ್ಟೆಂಬರ್ 2025 ರಂದು ಶ್ರೀ ಗೋರಕ್ಷನಾಥ ಜ್ಞಾನ ಮಂದಿರ, ಕದ್ರಿ ಪಾರ್ಕ್ ಎದುರು, ಕದ್ರಿ, ಮಂಗಳೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ಸಂಘದ ಅಧ್ಯಕ್ಷರಾದ ಶ್ರೀ ಮುರಳಿ ನಾಯರ್ ಹೊಸಮಜಲು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದರು.ಸಂಘದ ಕಾರ್ಯದರ್ಶಿ ಶ್ರೀ ವಿ. ಎಂ. ಸತೀಶನ್ ಅವರು ಗೌರವಾನ್ವಿತ ಅತಿಥಿಗಳಿಗೆ ಸ್ವಾಗತ ಕೋರಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಖ್ಯಾತ ಬಹುಭಾಷಾ ಚಲನಚಿತ್ರ ನಟ ಡಾ. ಸುಮನ್ ತಲ್ವಾರ್ ಹಾಜರಿದ್ದು, ನಾಯರ್ ಮತ್ತು ಕೇರಳ ಸಮುದಾಯವು ಭಾರತೀಯ ಸಂಸ್ಕೃತಿಗೆ ನೀಡಿರುವ ಅಪಾರ ಕೊಡುಗೆಯನ್ನು ಶ್ಲಾಘಿಸಿದರು. ಅವರು ಮಂಗಳೂರು ಕರಯೋಗಂ ನಡೆಸುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಾಗೂ ಸ್ಥಳೀಯ ಸಮುದಾಯದೊಂದಿಗೆ ಬೆಸೆದಿರುವ ಬಾಂಧವ್ಯವನ್ನು ಕೊಂಡಾಡಿದರು. ಪ್ರಮುಖ ಉಪನ್ಯಾಸಕೇರಳದ ಕೊಟ್ಟಾರಕ್ಕರದ ಸಂಶೋಧನಾ ವಿದ್ಯಾರ್ಥಿನಿ, ಧಾರ್ಮಿಕ ವಕ್ತಾರೆ, ಪ್ರೇರಣಾದಾಯಕ ಭಾಷಣಕಾರ್ತಿ, ನಿರೂಪಕಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಶಾಲಿ ಶ್ರೀಮತಿ. ಪ್ರಿಯಂವದ ಕೆ. ಪಿಶಾರಡಿ ಅವರು ಮುಖ್ಯ ಭಾಷಣ ಮಾಡಿದರು. ತಮ್ಮ ಪ್ರೇರಣಾದಾಯಕ ಉಪನ್ಯಾಸದಲ್ಲಿ ಅವರು ಹಿಂದೂ ಸಂಪ್ರದಾಯಗಳು, ಸಾಹಿತ್ಯ ಮತ್ತು ನೀತಿಯ ಮಹತ್ವವನ್ನು ಪ್ರತಿಪಾದಿಸಿ, ಧರ್ಮ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಕಾಪಾಡಲು ಮಕ್ಕಳನ್ನು ಬಾಲ್ಯದಿಂದಲೇ ಬೆಳೆಸುವ ಅಗತ್ಯತೆಯನ್ನು ಒತ್ತಿ ಹೇಳಿದರು. ವೇದಗಳು, ಉಪನಿಷತ್ತುಗಳು, ರಾಮಾಯಣ ಮತ್ತು ಮಹಾಭಾರತವು ಭಾರತೀಯ ಪರಂಪರೆಯ ಮಾರ್ಗದರ್ಶಕ ದೀಪಗಳಾಗಿವೆ ಎಂದು ಅವರು ಒತ್ತಿ ಹೇಳಿದರು.ಗೌರವಾನ್ವಿತ ಅತಿಥಿಗಳುಕಾರ್ಯಕ್ರಮವನ್ನು ಈ ಕೆಳಗಿನ ಅನೇಕ ಗಣ್ಯರು ಉಪಸ್ಥಿತರಿದ್ದರು:• ಶ್ರೀ ಪಿ. ವಿ. ಅಭಿಲಾಶ್, ಟ್ರಸ್ಟಿ, ಮೂಕಾಂಬಿಕಾ ದೇವಾಲಯ, ಕೊಲ್ಲೂರು• ಶ್ರೀ ಎನ್. ಡಿ. ಸತೀಶ್, ಉಪಾಧ್ಯಕ್ಷ III, KNSS• ಶ್ರೀ ವಿನೋದ್ ಎ. ಕೆ., CGM, ಯೂನಿಯನ್ ಬ್ಯಾಂಕ್, ಮಂಗಳೂರು• ಶ್ರೀ ಶಾಂತರಾಮ ಶೆಟ್ಟಿ, ಅಧ್ಯಕ್ಷರು, ರೆಡ್ ಕ್ರಾಸ್ ಸೊಸೈಟಿ, ಮಂಗಳೂರು• ಶ್ರೀ ಸ್ವರಾಜ್ ಶೆಟ್ಟಿ, ನಿರ್ದೇಶಕ ಮತ್ತು ನಟ• ಶ್ರೀ ಸತೀಶ್ ಕುಂಪಳ, ಅಧ್ಯಕ್ಷರು, ಬಿಜೆಪಿ ದಕ್ಷಿಣ ಕನ್ನಡ• ಶ್ರೀ ರಮಾನಾಥ ರೈ, ಮಾಜಿ ಜಿಲ್ಲಾ ಮತ್ತು ಇನ್-ಚಾರ್ಜ್ ಸಚಿವ, ಕರ್ನಾಟಕ• ಶ್ರೀ ಐವನ್ ಡಿ’ಸೋಜಾ, ಮಾನ್ಯ ಸದಸ್ಯರು, ವಿಧಾನ ಪರಿಷತ್• ಶ್ರೀ ಕಿಶೋರ್ ಕುಮಾರ್ ಬೊಟ್ಯಾಡಿ, ಮಾನ್ಯ ಸದಸ್ಯರು, ವಿಧಾನ ಪರಿಷತ್• ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು, ಬಂಟ್ಸ್ ಸಂಘ, ಮಂಗಳೂರು• ಶ್ರೀ ಕಿರಣ್ ಜೋಗಿ, ಅಧ್ಯಕ್ಷರು, ಜೋಗಿ ಸೌಹಾರ್ದಕ ಸಂಘ• ಶ್ರೀ ಅಶೋಕ್ ಟಿ. ಎ., ಉಪಾಧ್ಯಕ್ಷರು, ಕೇರಳ ಸಮಾಜಂ• ಶ್ರೀ ರಿಂಜು, ಅಧ್ಯಕ್ಷರು, ಮಲಯಾಳಿ ಸಮಾಜಂ ®️, ಮಂಗಳೂರು• ಶ್ರೀ ಸಂದೇಶ್ ಎ., ಅಧ್ಯಕ್ಷರು, ಕರ್ನಾಟಕ ವಿಶ್ವಕರ್ಮ ಸಮಾಜಂ ®️, ಮಂಗಳೂರು• ಶ್ರೀ ನಿಕ್ಲಾಬೋಸ್, ಅಧ್ಯಕ್ಷರು, ಕೈರಾಳಿ ಕಲಾ ವೇದಿ ®️, ಸೂರತ್ಕಲ್• ಶ್ರೀ ಕೆ. ಕೆ. ರಾಧಾಕೃಷ್ಣನ್, ಅಧ್ಯಕ್ಷರು, ಕರಾವಳಿ ಫ್ರೆಂಡ್ಸ್ ಕ್ಲಬ್ ®️, ಮಂಗಳೂರು• ಶ್ರೀ. ದಿನೇಶ್‌ ಮಂದನ್‌, ಶ್ರೀ ನಾರಾಯಣಾ ಸಂಸ್ಕಾರಿಕಾ ಕಲಾ ವೇದಿ (ರಿ), ಮಂಗಳೂರು• ಶ್ರೀ ಕೃಷ್ಣನ್ ನಾಯರ್, ಅಧ್ಯಕ್ಷರು, KNSS ಕರಯೋಗಂ ಸುಳ್ಯ• ಶ್ರೀ ಮೋಹನ್ ದಾಸ್, ಅಧ್ಯಕ್ಷರು, KNSS ಕರಯೋಗಂ ಉಡುಪಿಇದರೊಂದಿಗೆ ಮಹಿಳಾ ವಿಭಾಗ ಕಾರ್ಯದರ್ಶಿ ಶ್ರೀಮತಿ. ಲತಾ ದಿವಾಕರ್, ಖಜಾಂಚಿ ಶ್ರೀಮತಿ. ಜಯಲಕ್ಷ್ಮಿ ಚಂದ್ರಮೋಹನ್, ಮಂಡಳಿ ಸದಸ್ಯರು ಶ್ರೀ ಎಂ. ವಿ. ರಾಜನ್ ಮತ್ತು ಶ್ರೀ ಪಿ. ಕೆ. ಎಸ್. ಪಿಳ್ಳೈ ಹಾಗೂ ಇತರ ಸಮಿತಿ ಸದಸ್ಯರು ಕೂಡ ಹಾಜರಿದ್ದರು.ಕಾರ್ಯಕ್ರಮದ ಮುಖ್ಯಾಂಶಗಳು• ಸಂಘದ ಸದಸ್ಯರಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.• ಕೋಯಿಕೋಡ್ ಟೈಮ್ ಜೋಕ್ಸ್ ಈವೆಂಟ್ ತಂಡದ ಶ್ರೀ ಅಜಯ್ ಕಲೈ ನೇತೃತ್ವದಲ್ಲಿ ಹಾಸ್ಯ ಮತ್ತು ಕರೋಕೆ ಕಾರ್ಯಕ್ರಮವು ಪ್ರೇಕ್ಷಕರಿಗೆ ಮನರಂಜನೆ ನೀಡಿತು.• ಸನ್ಮಾನ ಸಮಾರಂಭ: ಶ್ರೀ ಪಿ. ವಿ. ಅಭಿಲಾಷ್ ಡಾ. ಸುಮನ್ ತಲ್ವಾರ್ ಶ್ರೀ ಕೃಷ್ಣನ್ ನಾಯರ್ಇವರಿಗೆ ವಿಶೇಷ ಸನ್ಮಾನ ಸಲ್ಲಿಸಲಾಯಿತು.• ಹೈ ಜಂಪ್‌ನಲ್ಲಿ ರಾಜ್ಯ ಮಟ್ಟದ ಪದಕ ವಿಜೇತೆಯಾದ ಕುಮಾರಿ ದಿಯಾ ಭಂಡಾರಿಯನ್ನು ಗೌರವಿಸಲಾಯಿತು.• ಇತ್ತೀಚೆಗೆ ಬಿಡುಗಡೆಯಾದ ತುಳು ಚಲನಚಿತ್ರ ನೆತ್ತೆರೆಕೆರೆ ತಂಡವನ್ನು ಆಯೋಜಕರು ಸನ್ಮಾನಿಸಿದರು.• ನಾಯರ್ ಸಮುದಾಯದ ಸಾಧಕರಿಗೂ ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆಗಾಗಿ ಗೌರವಿಸಲಾಯಿತು.• ಸಾಂಪ್ರದಾಯಿಕ ಹಾಗೂ ರುಚಿಕರವಾದ ಓಣಂ ಸದ್ಯವನ್ನು ಎಲ್ಲಾ ಅತಿಥಿಗಳಿಗೆ ಸವಿಯಿಸಲಾಯಿತು.ಸಮಾಪ್ತಿಕಾರ್ಯಕ್ರಮದ ವಂದನೆಯನ್ನು ಸಂಘದ ಖಜಾಂಚಿ ಶ್ರೀ ರವೀಂದ್ರನಾಥ ಅವರು ಸಲ್ಲಿಸಿ, ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದ ಎಲ್ಲ ಅತಿಥಿಗಳು, ಭಾಗವಹಿಸಿದವರು ಮತ್ತು ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.ಸಂಪೂರ್ಣ ಕಾರ್ಯಕ್ರಮವನ್ನು ಶ್ರೀಮತಿ. ನವ್ಯಾ ಕೂರುಪ್ ಮತ್ತು ಶ್ರೀಮತಿ. ನೀತು ಲಕ್ಷ್ಮಿ ಅವರು ಸಮರ್ಪಕವಾಗಿ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

Rohan Corporation Launches ‘Rohan Marina One’ – India’s First All Sea-Facing Luxury Homes in Mangaluru

Mangaluru: With a legacy of over three decades, Rohan Corporation – one of India’s most trusted and visionary real estate developers, proudly presents its latest landmark project, Rohan Marina One. A first-of-its-kind in Indian real estate, this iconic project offers every home an uninterrupted, breathtaking view of the Arabian Sea.Located on the pristine NITK Beach Road in Surathkal, this 8.2-acre coastal paradise features 433 ultra-luxury residences across two iconic towers – The Retreat and The Resort. Each home is crafted to deliver unparalleled comfort, refined elegance, and exclusivity, complemented by scenic sea views. A New Chapter in Coastal LivingRohan Marina One sets a new benchmark in Indian real estate – it’s the first residential project where every single home enjoys uninterrupted, sweeping views of the Arabian Sea. Each home is thoughtfully crafted to frame the beauty of the ocean, with interiors that seamlessly blend contemporary elegance and the tranquil essence of coastal living.But what truly sets Rohan Marina One apart is its incredible investment potential. Whether you’re from Mangalore, anywhere in Karnataka, or from across India, this project offers something truly rare in today’s market. It’s the perfect blend of luxury living and smart investing, designed for buyers who understand the value of owning India’s most exclusive waterfront address.Two Iconic Towers*The Retreat (39 Floors): Featuring 2, 3, and 4 BHK residences, each crafted with modern amenities and expansive layouts. Large windows and balconies invite serene sea views, while the rooftop infinity-edge pool elevates relaxation to a new horizon.*The Resort (47 Floors): Among the most luxurious residential towers in India, offering spacious 2 & 3 BHK residences along with premium commercial spaces. A rare combination of lifestyle and investment, The Resort delivers unmatched amenities, profitable opportunities, and a lifestyle worth cherishing.Ultra-Luxury Living with World Class Amenities‘Rohan Marina One’ is more than a home with a view – it’s a lifestyle enriched with 83 world-class amenities that make every day extraordinary.Entertainment & Celebration: Sky-high banquet halls and party lounges offer captivating settings for private celebrations, while a discotheque, fine-dining restaurants, café, and BBQ deck and more.By the Water: The signature infinity-edge pool crowning The Retreat offers majestic ocean views, complemented by an Olympic-size swimming pool, water jet play areas, bubble jets, and a unique floating pavilion that makes every dip feel like a resort experience.Sports & Fitness: Professional badminton, squash, and tennis courts alongside a world-class fitness center, mini soccer field, and jogging tracks cater to every fitness enthusiast’s needs.Wellness: Dedicated yoga decks, meditation rooms, separate male and female spas, and serene wellness spaces designed for complete mind-body rejuvenation with ocean views as your backdrop.Business & Convenience: A fully-equipped business centre, EV charging rooms, and multipurpose decks ensure modern conveniences are always at your fingertips.Family & Recreation: Children’s play zones, pets park, video games room, picnic lawns, viewing decks, entertainment decks, dome pavilions, party lawns, glasshouse, and peaceful family gathering spaces create the perfect environment for making lasting memories.“Rohan Marina One combines luxurious living with the serenity of the coastline and world-class amenities, making it a pioneering experiment in the real estate sector. It is our dream project, aimed at giving a new meaning to coastal living. For the first time in India, every apartment offers delightful views of the Arabian Sea. This project is our tribute to the city of Mangaluru and an effort to showcase the beauty of our coastline to the world.”– Rohan Monteiro, MD, Rohan CorporationPrime Location, Seamless ConnectivityRohan Marina One enjoys strategic connectivity while preserving the serenity of a beachfront lifestyle. Just 32 minutes from Mangaluru International Airport, it ensures effortless global connectivity – with Middle Eastern destinations only a 3-hour flight away. Closer to home, major hubs like Manipal (54 min), Udupi (47 min), and Kerala (1 hr 22 min) are within easy reach. Scenic escapes such as Kudremukh (2 hr 10 min), Sringeri (2 hr 22 min), and Murdeshwar (2 hr 27 min) offer perfect weekend getaways, while longer drives take you to Madikeri (3 hr 21 min), Shivamogga (3 hr 48 min), Gokarna (3 hr 59 min), Mysuru (5 hr 51 min), and even Goa (5 hr 23 min).With renowned educational institutions, hospitals, religious landmarks, tourist destinations, all within easy reach, Rohan Marina One is perfectly positioned for a world of convenience. With all these advantages, Rohan Marina One is set to make a significant contribution to the economic and tourism growth of Mangaluru. Strength in Every DetailRohan Marina One stands on the finest construction standards, incorporating advanced MIVAN technology, SRC cement, epoxy-coated steel, and SS308-grade railings with toughened glass. Every detail is engineered for strength, durability, and timeless elegance, ensuring that this is not just a dream investment, but also a lasting one.About Rohan CorporationFor over 32 years, Rohan Corporation has stood as a hallmark of trust, innovation, and excellence in India’s real estate landscape. With a legacy built on delivering exceptional residential and commercial projects, the company has consistently redefined standards in quality, design, and lifestyle. With a legacy of successfully completing over 25 landmark projects in prime locations across Mangaluru, Rohan Corporation is renowned for delivering developments that combine timeless beauty, sustainability, and lasting trust.

Scroll to Top