Author name: editor

ಪ್ರಾದೇಶಿಕ ವಾರ್ತೆಗಳು

ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಮಂಗಳೂರಿನ ಶಿಕ್ಷಕಿ ಶ್ರೀಮತಿ ಐರಿನ್ ಲೀನಾ ಸಿಕ್ವೇರಾ

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮಂಗಳೂರಿನ ಶಿಕ್ಷಕಿ ಶ್ರೀಮತಿ ಐರಿನ್ ಲೀನಾ ಸಿಕ್ವೇರಾ ಇವರು ದಕ್ಷಿಣಕನ್ನಡ ಜಿಲ್ಲೆಯ ಕೆಥೋಲಿಕ್ ವಿದ್ಯಾ ಮಂಡಳಿಯ ಆಡಳಿತಕ್ಕೊಳಪಟ್ಟ ನಂತೂರು ಕೆಲ್ವರಿ ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಶ್ರೀಮತಿ ಐರಿನ್ ಲೀನಾ ಸಿಕ್ವೇರಾ ಇವರು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಿಕ್ಷಕ ಸಂಘ ಬೆಗಳೂರು ಇವರಿಂದ ನೀಡಲ್ಪಡುವ 2025-26ನೇಯ ಸಾಲಿನ ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರುನಲ್ಲಿ ನಡೆದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾದ ಗೌರವಾನ್ವಿತ ಶ್ರೀರುದ್ರಪ್ಪ ಲಮಾಣಿˌ ಸ್ಥಳೀಯ ಶಾಸಕರುˌ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಶಿಕ್ಷಕರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ರಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪನವರು ಪ್ರದಾನ ಮಾಡಿ ಶಿಕ್ಷಕಿ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ ಗೌರವಿಸಿದರು. ಶ್ರೀಮತಿ ಐರಿನ್ ಲೀನಾ ಸಿಕ್ವೇರಾ ಇವರು ಹಲವಾರು ವರ್ಷಗಳಿಂದ ಈ ಶಾಲೆಯ ಸರ್ವಾಂಗೀಣ ಬೆಳವಣಿಗೆಗಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ.ಇವರು ಕದ್ರಿ ಕೈಬಟ್ಟಲು ಎಂಬಲ್ಲಿಯ ನಿವಾಸಿಯಾಗಿದ್ದು ಫರ್ನ್ಸ್ ಸರ್ವಿಸ್ ಸಂಸ್ಥೆಯ ಮಾಲಕ ಶ್ರೀ ಟೈಟಸ್ ಫೆರ್ನಾಂಡಿಸ್ ಇವರ ಧರ್ಮಪತ್ನಿಯಾಗಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ರಾಜ್ಯ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಎಸ್.ಜೆ.ಇ.ಸಿ. ಮಹಿಳಾ ತಂಡ ಚಾಂಪಿಯನ್

ಮಂಗಳೂರು: ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ಶಟ್ಲ್ ಬ್ಯಾಡ್ಮಿಂಟನ್ ತಂಡವು ಸಪ್ಟೆಂಬರ್ 11 ಮತ್ತು 12 ರಂದು ಮಂಡ್ಯದ ಪಿ.ಎಸ್. ಸಿ. ಇ. ನಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರ ಟ್ರೋಫಿಯನ್ನು ಪಡೆದುಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿತು. ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ತೃತೀಯ ವರ್ಷದ ಟ್ರಿವಿಯಾ ಕ್ರೆಡಾ ವೇಗಸ್ ಅವರಿಗೆ ಪಂದ್ಯಾವಳಿಯ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ದೊರಕಿತು. ಕ್ರೀಡಾ ಶಿಕ್ಷಣ ನಿರ್ದೇಶಕಿ (ಪಿಇಡಿ) ವನೀಶಾ ವಿ. ರೊಡ್ರಿಗಸ್ ಮತ್ತು ಸಹಾಯಕ ಪಿಇಡಿ ಸುಧೀರ್ ಅವರ ಮಾರ್ಗದರ್ಶನದಲ್ಲಿ ತಂಡಗಳು ಶ್ರೇಷ್ಠ ಕೌಶಲ್ಯವನ್ನು ಪ್ರದರ್ಶಿಸಿದವು. ವಿಜೇತ ತಂಡವು ಟ್ರಿವಿಯಾ ಕ್ರೆಡಾ ವೇಗಸ್ , ತ್ರಿಶಾ ಕ್ಲಾರಿಸ್ ವೇಗಸ್, ಕ್ರಿಸ್ಟಲ್ ಡ್ಯಾಪ್ನಿ ಮೊಂತೇರೊ ಸೇರಿದಂತೆ ಅನೇಕ ವಿಭಾಗಗಳ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿತ್ತು.

ಪ್ರಾದೇಶಿಕ ವಾರ್ತೆಗಳು

ಕೊಂಕಣಿ ಹಾಡುಗಾರಿಕೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಮಂಗಳೂರು: ಮಂಗಳೂರಿನ ಕೊಂಕಣಿ ನಾಟಕ ಸಭಾ ನಡೆಸಿದ 61 ನೇ ಕೊಂಕಣಿ ಹಾಡುಗಾರಿಕೆ ಸ್ಪರ್ಧೆಯಲ್ಲಿ ಪಾಲ್ದನೆ ನಿವಾಸಿ ರಾಜೇಶ್ ವೇಗಸ್ ಮತ್ತು ಸ್ಯಾಂಡ್ರಾ ವೇಗಸ್ ಅವರ ಪುತ್ರಿ ಟೀನಾ ಕ್ಯಾರಿಸ್ ವೇಗಸ್ ಅವರು 12 ರಿಂದ 15 ವರ್ಷ ವಯೋಮಿತಿ ವಿಭಾಗದಲ್ಲಿ ಸೋಲೋ ಹಾಡುವಿಕೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಡಾ.ಎಂ.ಎನ್.ರಾಜೇಂದ್ರ ಕುಮಾರ್ ರವರಿಗೆ ಮಂಗಳೂರು ರತ್ನ ಪ್ರಶಸ್ತಿ ಪ್ರದಾನ

ಮಂಗಳೂರು, ಸೆ.20;ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಇಪ್ಕೋ ನವದೆಹಲಿಯ ನಿರ್ದೇಶಕ,ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ., ಬೆಂಗಳೂರು ಇದರ ನಿರ್ದೇಶಕ, ಮೆನೇಜಿಂಗ್ ಟ್ರಸ್ಟಿ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ (ರಿ)ನ ಮ್ಯಾನೇಜಿಂಗ್ ಟ್ರಸ್ಟಿಡಾ| ಎಂ. ಎನ್. ರಾಜೇಂದ್ರ ಕುಮಾ‌ರ್ ರವರಿಗೆ ವಿ ಆರ್ ಫ್ರೆಂಡ್ಸ್ ಯುನೈಟೆಡ್ ವತಿಯಿಂದ ‘ಮಂಗಳೂರು ರತ್ನ ‘ ಪ್ರಶಸ್ತಿ ನೀಡಿ ಶನಿವಾರ ಎಸ್ ಸಿಡಿಸಿಸಿ ಬ್ಯಾಂಕ್ ಸೌಧದಲ್ಲಿ ಗೌರವಿಸಲಾಯಿತು.ಈ ಸಂದರ್ಭ ದಲ್ಲಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಲ್ಯೊಟ್ಟು, ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್,ಉದ್ಯಮಿ ಜಯಪ್ರಕಾಶ್ ತುಂಬೆ,ವೀ ಆರ್ ಯುನೈಟೆಡ್ ಸಂಸ್ಥೆಯ ಅಧ್ಯಕ್ಷ ಆಜ್ಫರ್ ರಾಝಕ್, ಉಪಾಧ್ಯಕ್ಷ ಮನೋಜ್ ಕುಮಾರ್, ಕಾರ್ಯದರ್ಶಿ ನಿಶಾನ್ ಭಂಡಾರಿ, ಕೋಶಾಧಿಕಾರಿ ಸುದೇಶ್ ಭಂಡಾರಿ ಇರಾ, ಸಲಹೆಗಾರರಾದ ಶ್ರೀನಿವಾಸ್ ನಾಯಕ್ ಇಂದಾಜೆ, ದೀಪಕ್ ಪಿಲಾರ್, ನಿತಿನ್ ಶೆಟ್ಟಿ, ಸುಜಿತ್ ಭಂಡಾರಿ ಉಪಸ್ಥಿತರಿದ್ದರು.ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ವಹಿಸಲು ಕರೆ

ಮಂಗಳೂರು,ಮಕ್ಕಳ ಆರೋಗ್ಯದ ಕುರಿತು ಪೋಷಕರು ಹೆಚ್ಚಿನ ಗಮನ ಹಾಗೂ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ನಗರದ ಬಿಜೈ ಕಾಪಿಕಾಡ್ ಅಂಗನವಾಡಿ ಶಾಲೆಯಲ್ಲಿ ನಡೆದ ಪೋಷಣಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೆ ಎಂ ಸಿ ಆಸ್ಪತ್ರೆಯ ಡಾ ಶರಾವತಿ ಹಾಗೂ ಡಾ. ಎಲ್ಸ್ ಷಾ ಮಾಹಿತಿ ನೀಡಿದರು. ಶಾಲಾ ಮುಖ್ಯ ಗುರು ಲೀನಾ, ಸಿಆರ್ಪಿ ವಿನೋದ ಅಮೀನ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಸವಿತಾ, ಆರೋಗ್ಯ ಸಹಾಯಕಿಯರಾದ ಸುಮಿತ್ರಾ, ಭಾರತಿ, ಅಂಗನವಾಡಿ ಶಿಕ್ಷಕಿ ನಂದಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಇಂದು ಡಾ. ಎ.ಸದಾನಂದ ಶೆಟ್ಟಿಯವರ ಹುಟ್ಟುಹಬ್ಬ.

ಮಂಗಳೂರು – ಇಂದು (ಸೆ.20) ಶ್ರೀದೇವಿ ಏಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಎ.ಸದಾನಂದ ಶೆಟ್ಟಿಯವರ ಹುಟ್ಟುಹಬ್ಬ. ನೇರ ನಡೆ ನುಡಿಯ ಕೊಡುಗೈ ದಾನಿ,ವಿಶ್ವ ಬಂಟರ ಸಮ್ಮೇಳನದ ಯಶಸ್ವಿ ಸಂಘಟಕ, ಕ್ರೀಡಾ ಕ್ಷೇತ್ರದ ಜನಪ್ರಿಯ ನಾಯಕರು,ಸಂಘಟಕರು, ಪೋಷಕರು, ಸೌಹಾರ್ದ ವ್ಯಕ್ತಿತ್ವದ ನಿಸ್ವಾರ್ಥ ನೇತಾರ, ಟಾಕ್ ಆಪ್ ದಿ ಟೌನ್,ಬಡವರ ಬಂಧು,ಬಂಟರ ಯಾನೆ ಮಾತೃ ಸಂಘದ ಮಾಜಿ ಅಧ್ಯಕ್ಷರು, ವರ್ಲ್ಡ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷರು ,ಬಂಟ ಸಮಾಜದ ರಾಜಾ ಹುಲಿ ಡಾ. ಎ.ಸದಾನಂದ ಶೆಟ್ಟಿಯವರ ಹುಟ್ಟು ಹಬ್ಬಕ್ಕೆ Mp mla*s ನ್ಯೂಸ್ ಶುಭ ಹಾರೈಸುತ್ತದೆ

ಪ್ರಾದೇಶಿಕ ವಾರ್ತೆಗಳು

ದ.ಕ.-ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರಕಾರದಿಂದ “ಮಾಸ್ಟರ್ ಪ್ಲಾನ್”!. ಶಾಸಕ ಮಂಜುನಾಥ ಭಂಡಾರಿ ಮನವಿಗೆ ಸಚಿವರ ಸ್ಪಂದನೆ

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಮಂಜುನಾಥ ಭಂಡಾರಿಯವರು ಪಶ್ಚಿಮ ಘಟ್ಟದಿಂದ ಹರಿಯುವ ನದಿಗಳು, ಜಲಪಾತಗಳು, ಕಡಲ ತೀರಗಳು ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಈ ಪ್ರದೇಶವನ್ನು“ಟೂರಿಸಂ ಹಬ್” ಆಗಿ ರೂಪಿಸಲು ಮಾಸ್ಟರ್ ಪ್ಲಾನ್ ತಯಾರಿಸುವ ಕುರಿತಂತೆ ಸರ್ಕಾರದ ಗಮನಕ್ಕೆ ತಂದಿದ್ದು ಸರ್ಕಾರವು ಈ ಕುರಿತು ನೀಡಿರುವ ಭರವಸೆಯ ಹಿನ್ನೆಲೆಯಲ್ಲಿ ಇಂದು ನಡೆದ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಯಿತು.ಈ ಕುರಿತು ಶೀಘ್ರವೇ ಎರಡು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಸಭೆ ಕರೆಯಲಾಗುವುದು. ಜಿಲ್ಲೆಗಳಲ್ಲಿ ಸಭೆ ನಡೆಸಲು ಜಿಲ್ಲಾಧಿಕಾರಿಗಳೇ ಮುಖ್ಯಸ್ಥರಾಗಿರುವುದರಿಂದ ಅವರ ಮೂಲಕ ಸಭೆ ಕರೆದು ಅದಕ್ಕೆ ಸದಸ್ಯರನ್ನು ಆಹ್ವಾನಿಸಿ, ಪ್ರವಾಸೋದ್ಯಮ ಚಟುವಟಿಕೆ ಗಳಿಗಾಗಿ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಯೋಜನೆ ಮಾಡಲಾಗುವುದು ಮತ್ತು “ರಿವರ್ ಫೆಸ್ಟ್ರವಲ್” ಬಗ್ಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಜೀವಿಶಾಸ್ತ್ರ ಸಚಿವರು ತಿಳಿಸಿದ್ದಾರೆ.ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸುವ ಹಾಗೂ ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿ ವಿಸ್ತ್ರತ ಯೋಜನೆಯನ್ನು ತಯಾರಿಸಲು ಸರ್ಕಾರದ ಆದೇಶ ಸಂಖ್ಯೆ: ಟಿಓಆ‌ರ್/154/ಟಿಡಿಪಿ/2023, ಬೆಂಗಳೂರು 21.08.2024ರಂದು ಅನುಮೋದನೆಯನ್ನು ನೀಡಿರುತ್ತದೆ.ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ರಸ್ತೆ ಬದಿ ಸೌಲಭ್ಯಗಳನ್ನು ಉನ್ನತೀಕರಿಸುವ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ ಟಿಒಆರ್ 56 ಟಿಡಿಪಿ 2025, 23-07-2025 ಘೋಷಣೆಯನ್ನು ಅನುಷ್ಠಾನಗೊಳಿಸುವ ಪ್ರಸ್ತಾವನೆಗೆ ತಾತ್ವಿಕ ಅನುಮೋದನೆ ನೀಡಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಣ್ಣೀರುಬಾವಿ ಕಡಲ ತೀರದಲ್ಲಿ ರೆಸಾರ್ಟ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಲು ಸಮಾಲೋಚಕ ಸಂಸ್ಥೆಯನ್ನು ಆಯ್ಕೆ ಮಾಡಲು ಟೆಂಡರ್ ಪ್ರಕಟಿಸಲಾಗಿದ್ದು, ಸದರಿ ಟೆಂಡರ್ ನ ತಾಂತ್ರಿಕ ಬಿಡ್ಡನ್ನು ದಿನಾಂಕ 07.08.2025 ರಂದು ತೆರೆಯಲಾಗಿದ್ದು, ಸದರಿ ಟೆಂಡರ್ ‌ನಲ್ಲಿ 3 ಬಿಡ್ಡುದಾರರು ಭಾಗವಹಿಸಿದ್ದು ಸದರಿ ಬಿಡ್ಡುದಾರರಿಗೆ ತಾಂತ್ರಿಕ ಪ್ರಾತ್ಯಕ್ಷಿಕೆ 29.08.2025 ರಂದು ಆಯೋಜಿಸಿದ್ದು. ಸದರಿ ಬಿಡ್ ಪರಿಶೀಲನಾ ಹಂತದಲ್ಲಿರುತ್ತದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೋಡಿಕಲ್, ಗುರುಪುರ ನದಿ ತೀರದಲ್ಲಿ ರೆಸಾರ್ಟ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ವಹಿವಾಟು ಸಲಹೆಗಾರರನ್ನು ಆಯ್ಕೆ ಮಾಡಿಕೊಳ್ಳಲು Infrastructure Development Ports and inland Water Transport Department Government of karnataka (IDP & IWTD) ರವರೊಂದಿಗೆ ಏಂಪ್ಯಾನಲ್ ಆಗಿರುವ ಸಂಸ್ಥೆಗಳಿಗೆ ಮಾತ್ರ ಟೆಂಡರ್ ಪ್ರಕಟಿಸಿದ್ದು, ಸದರಿ ಟೆಂಡರ್ ನ Pre-Bid ಸಭೆಯಲ್ಲಿ ಏಂಪ್ಯಾನಲ್ಡ್ ಬಿಡ್ಡುದಾರರಿಗೆ ಪ್ರಕಟಿಸಿರುವ ಟೆಂಡರ್ ಬದಲಿಗೆ ಒಪನ್ ಟೆಂಡ‌ರ್ ಅನ್ನು ಪ್ರಕಟಿಸಿರುವಂತೆ ಬಿಡ್ಡುದಾರ ಸಂಸ್ಥೆಗಳು ಕೋರಿರುತ್ತಾರೆ. ಆದ್ದರಿಂದ ಸದರಿ ಟೆಂಡ‌ರ್ ಅನ್ನು ರದ್ದುಪಡಿಸಿದ್ದು, ಮತ್ತೊಮ್ಮೆ ಅತ್ಯಂತ ಜರೂರಾಗಿ ಟೆಂಡರ್ (Open Tender) ಅನ್ನು ಮರುಪ್ರಕಟಿಸಲಾಗಿದ್ದು, ಸದರಿ ಟೆಂಡರ್‌ನ ತಾಂತ್ರಿಕ ಬಿಡ್ಡನ್ನು 12.09.2025 ರಂದು ತೆರೆಯಲಾಗುವುದು.ಉಡುಪಿ ಜಿಲ್ಲೆಯ ಸದರಿ ಮೂರು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಸಂಬಂಧಿಸಿದಂತೆ ವಹಿವಾಟು ಸಲಹೆಗಾರರನ್ನು ಆಯ್ಕೆ ಮಾಡಿಕೊಳ್ಳಲು Infrastructure Development Ports and inland Water Transport Department Government of karnataka (IDP & IWTD) ಎಂಪ್ಯಾನಲ್ ಆಗಿರುವ ಸಂಸ್ಥೆಗಳಿಗೆ ಮಾತ್ರ ಟೆಂಡರ್ ಪ್ರಕಟಿಸಿದ್ದು, ಸದರಿ ಟೆಂಡರ್ Pre-Bid ಸಭೆಯಲ್ಲಿ ಏಂಪ್ಯಾನಲ್ಡ್ ಬಿಡ್ಡುದಾರರಿಗೆ ಪ್ರಕಟಿಸಿರುವ ಟೆಂಡ‌ರ್ ಬದಲಿಗೆ ಒಪನ್ ಟೆಂಡರ್ ಅನ್ನು ಪ್ರಕಟಿಸಿರುವಂತೆ ಬಿಡುದಾರ ಸಂಸ್ಥೆಗಳು ಕೋರಿರುತ್ತಾರೆ. ಆದ್ದರಿಂದ ಸದರಿ ಟೆಂಡರ್ ಅನ್ನು ರದ್ದುಪಡಿಸಿದ್ದು, ಮತ್ತೊಮ್ಮೆ ಅತ್ಯಂತ ಜರೂರಾಗಿ ಟೆಂಡರ್ (Open Tender) ಅನ್ನು ಮರುಪ್ರಕಟಿಸಲಾಗಿದ್ದು, ಸದರಿ ಟೆಂಡರ್ ತಾಂತ್ರಿಕ ಬಿಡ್ಡನ್ನು 12.09.2025 ರಂದು ತೆರೆಯಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಚಿವರು ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಹಿಂದೂ ಸುರಕ್ಷಾ ಸಮಿತಿ ಅಡ್ಯಾರ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ. ಹಬ್ಬಗಳಿಂದ ಐಕ್ಯತೆ, ಸಾಮಾಜಿಕ ಜಾಗೃತಿಯೊಂದಿಗೆ ಪ್ರಗತಿ-ಪ್ರೊ|ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ನಮ್ಮ ಹಬ್ಬಗಳಲ್ಲೆಲ್ಲ ಐಕ್ಯತೆಯ ಸಂದೇಶವಿದೆ. ಅಷ್ಟಮಿಯ ಆಚರಣೆಯಲ್ಲಿ ಅದು ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ. ಶ್ರೀಕೃಷ್ಣನಂತಹ ಪುರಾಣ ಪುರುಷರ ಉಪದೇಶಗಳಿಂದ ಸಮಾಜದಲ್ಲಿ ಜಾಗೃತಿ ಮೂಡುವ ಜೊತೆಗೆ ವಿವಿಧ ಉದ್ಯಮ ರಂಗಗಳಲ್ಲಿ ವ್ಯಾಪಾರ ವಹಿವಾಟುಗಳ ಮೂಲಕ ಸಾಮಾಜಿಕ ಪ್ರಗತಿಯೂ ಸಾಧ್ಯವಾಗಿದೆ‌’ ಎಂದು ಮಾಜಿ ಅಕಾಡೆಮಿ ಸದಸ್ಯ, ಲೇಖಕ ಹಾಗೂ ಧಾರ್ಮಿಕ ಚಿಂತಕ ಪ್ರೊ|ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.ಹಿಂದೂ ಸುರಕ್ಷಾ ಸಮಿತಿ ಅಡ್ಯಾರ್ ಆಶ್ರಯದಲ್ಲಿ ಅಡ್ಯಾರು ಸೋಮನಾಥ ಕಟ್ಟೆ ಬಳಿ ಛತ್ರಪತಿ ಶಿವಾಜಿ ಮೈದಾನದ ಶ್ರೀಕೃಷ್ಣ ಕಲಾಮಂಟಪದ ಗೀತೋಪದೇಶ ಕಲಾವೇದಿಕೆಯಲ್ಲಿ ಜರಗಿದ 43ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.‘ಭಾರತೀಯ ಕಾವ್ಯಗಳಲ್ಲಿ ಪ್ರಸ್ಥಾನ ತ್ರಯಗಳೆಂದು ಕರೆಯಲ್ಪಡುವ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳಲ್ಲಿ ಮಾನವರ ಬದುಕನ್ನು ಸುಭಗಗೊಳಿಸುವ ಜೀವನ ಮೌಲ್ಯಗಳ ಪಾಠವಿದೆ. ಅದರಲ್ಲೂ ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯನ್ನು ಹಿಂದೂಗಳ ಪವಿತ್ರ ಧರ್ಮ ಗ್ರಂಥವೆಂದೆ ಭಾವಿಸಲಾಗಿದೆ’ ಎಂದವರು ನುಡಿದರು. ಶ್ರೀ ಕೃಷ್ಣನ ಭಾವಚಿತ್ರದ ಮುಂಭಾಗದಲ್ಲಿ ಗೋಪೂಜೆಯನ್ನು ನೆರವೇರಿಸಿ, ಗೋಗ್ರಾಸ ನೀಡಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅತಿಥಿಗಳು ಅಷ್ಟಮಿ ಉತ್ಸವವನ್ನು ಉದ್ಘಾಟಿಸಿದರು. ಸಾಧಕರ ಸನ್ಮಾನ:ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 50ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಉದ್ಯಮಿ ಮತ್ತು ಸಮಾಜಸೇವಕರಾದ ಎ.ಕೆ. ಜಯರಾಮ ಶೇಖರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ರಂಗ ಕಲಾವಿದ ಪ್ರೀತಂ ಕುಮಾರ್ ಅಡ್ಯಾರ್, ಕುಸ್ತಿಪಟು ಕು|ಎಂ. ಅನುಷಾ ಅಡ್ಯಾರ್ ಮತ್ತು ಹತ್ತನೇ ಹಾಗೂ ಪಿಯುಸಿಯಲ್ಲಿ 90% ಶೇಕಡ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ವತಿಯಿಂದ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಭೆಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.ಸುರತ್ಕಲ್ ಶಾಸಕ ವೈ. ಭರತ್ ಶೆಟ್ಟಿ, ಪುತ್ತೂರು ಆದರ್ಶ ದಂತ ಚಿಕಿತ್ಸಾಲಯದ ಮಹೇಶ್ ಕುಮಾರ್ ವೈ , ಎನ್.ಪಿ.ಎಸ್.ಎನ್.ಅಟೋಮೇಟಿವ್ ಮಾರ್ಕೆಟಿಂಗ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವೃಷಭರಾಜ್ ಜೈನ್, ಎಸ್.ಎಸ್.ಡಿ.ಲೋಡ್ಜಿಸ್ಟಿಕ್ ಮಾಲಕ ಮೋಹನ್ ಕುಮಾರ್, ಎಸ್.ಎಸ್. ಬ್ರದರ್ಸ್ ಪಾರ್ಕಿಂಗ್ ಏಜೆನ್ಸೀಸ್ ಮುಖ್ಯಸ್ಥ ಶಿವರಾಜ್ ಅಡ್ಯಾರ್ ಅತಿಥಿಗಳಾಗಿದ್ದರು. ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ವಿವೇಕ್ ಪೂಜಾರಿ ಕೋಡಿಮಜಲು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಹಿಂದೂ ಸುರಕ್ಷಾ ಸಮಿತಿ ಅಡ್ಯಾರ್ ಸಹ ಸಂಚಾಲಕ ಆನಂದ ಶೆಟ್ಟಿ ಅಡ್ಯಾರ್ ಸ್ವಾಗತಿಸಿದರು. ಸಂಚಾಲಕ ಪ್ರವೀಣ್ ಶೆಟ್ಟಿ ಆಡ್ಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಗೌರವಾಧ್ಯಕ್ಷ ಎ.ದಿವಾಕರ ನಾಯ್ಕ್ ಆರ್.ಕೆ.ಟ್ರಾವೆಲ್ಸ್, ಅಧ್ಯಕ್ಷ ಜಗದೀಶ್ ಶೆಟ್ಟಿ ಬಾಳಿಕೆ ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಕೃಷ್ಣ ಪೂಜಾರಿ ಆಡ್ಯಾರ್ ಪದವು ವಂದಿಸಿದರು. ಸಮಿತಿಯ ರಮೇಶ್ ತುಂಬೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜೇಶ್ ಕಲ್ಲಡ್ಕ ಮತ್ತು ಅಶೋಕ್ ಕೊಟ್ಟಾರಿ ಪದವು ಕಾರ್ಯಕ್ರಮ ನಿರೂಪಿಸಿದರು.ಸಮಾರಂಭದ ಬಳಿಕ ನೃತ್ಯ ಸಂಪದ ಅಡ್ಯಾರ್ ಇದರ ಸದಸ್ಯರಿಂದ ‘ರುಕ್ಮಿಣಿ ಸ್ವಯಂವರ’ ಯಕ್ಷಗಾನ ಪ್ರದರ್ಶನ ಜರಗಿತು.

ಪ್ರಾದೇಶಿಕ ವಾರ್ತೆಗಳು

ದೇಶ ಕಟ್ಟುವ ಕಾರ್ಯದಲ್ಲಿ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಳ್ಳಬೇಕು- ರಾಜೇಶ್ ನಾಯ್ಕ್

ಬಂಟ್ವಾಳ ಸೆ.16 ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರು ಸಕ್ರೀಯವಾಗಿರಬೇಕು. ಭಾ.ಜ.ಪಾ. ಪಕ್ಷವು ಕೇವಲ ರಾಜಕೀಯ ಪಕ್ಷವಾಗಿರದೆ ತತ್ವ ಸಿದ್ದಾಂತದ ಮೂಲಕ ರಾಷ್ಟç ನಿರ್ಮಾಣ ಕಾರ್ಯದಲ್ಲಿ ಸಕ್ರೀಯವಾಗಿದೆ. 20ಕೋಟಿಗಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿಯು ಜಗತ್ತಿನ ಅತೀ ದೊಡ್ಡ ಸಂಘಟಿತ ರಾಜಕೀಯ ಪಕ್ಷವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.ಅವರು ಮಾಣಿ ಮಹಾಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಕ್ತಿ ಕೇಂದ್ರದ ಪ್ರಮುಖ ಹರೀಶ್ ಕುಲಾಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಬಂಟ್ವಾಳ ಮಂಡಲ ಕಾರ್ಯದರ್ಶಿ ಸುದರ್ಶನ್ ಬಜ ,ಮಾಣಿ ಶಕ್ತಿಕೇಂದ್ರದ ಅಧ್ಯಕ್ಷ ಅರವಿಂದ ರೈ, ಪ್ರಧಾನ ಕಾರ್ಯದರ್ಶಿ ನಾಗೇಶ ಭಂಡಾರಿ , ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯೆ ಭವಾನಿ ಶೆಟ್ಟಿ ಉಪಸ್ಥಿತರಿದ್ದರು.ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧನಲಕ್ಷಿö್ಮÃ ಗಟ್ಟಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ , ವಿಕಾಸ್ ಪುತ್ತೂರು ಸಂಘಟನೆಯ ಬಗ್ಗೆ ಮಾರ್ಗದರ್ಶನ ನೀಡಿ ವಿಷಯ ಮಂಡಿಸಿದರು.ಸಮಾರೋಪ ಸಮಾರಂಭದಲ್ಲಿ ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿ ಶುಭ ಹಾರೈಸಿದರು. ಬಿಜೆಪಿ ನಾಯಕರಾದ ಮಾಧವ ಮಾವೆ , ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ , ಉಪಾಧ್ಯಕ್ಷ ರವೀಶ ಶೆಟ್ಟಿ, ನೇರಳಕಟ್ಟೆ ಸೊಸೈಟಿ ಅಧ್ಯಕ್ಷ ಪುಷ್ಪರಾಜ ಚೌಟ, ಅಭ್ಯಾಸ ವರ್ಗ ಸಂಚಾಲಕ ನಾರಾಯಣ ಶೆಟ್ಟಿ , ಸಹಸಂಚಾಲಕಿ ಸುಶೀಲ ಆನಂದ್ , ಬಿಜೆಪಿ ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು , ಮಹಿಳಾ ಪ್ರಮುಖರು ಭಾಗವಹಿಸಿದ್ದರು.

Scroll to Top