Author name: editor

ಪ್ರಾದೇಶಿಕ ವಾರ್ತೆಗಳು

ಸಂಗಬೆಟ್ಟು ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದ ಶ್ರೀ ಮಹಾಕಾಳಿ, ಶ್ರೀ ಬ್ರಹ್ಮ ಮುಗೇರ ದೈವಗಳು ಮತ್ತು ಪರಿವಾರ ದೈವಗಳ ಹಾಗೂ ಕೊರಗಜ್ಜ ದೈವದ ವರ್ಷಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ದೈವಸ್ಥಾನ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು.ದಿನಾಂಕ 16-01-2026 ರಿಂದ 19-01-2026 ತನಕ ನೇಮೋತ್ಸವ ನಡೆಯಲಿರುತ್ತದೆ.ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾದ ರಾಮಕೃಷ್ಣ ನಾಯಕ್ ಕಿನ್ನಾಜೆ,ಗೌರವ ಅಧ್ಯಕ್ಷ ಭುಜಬಲಿ ಕಂಬಳಿ,ಪ್ರಧಾನ ಕಾರ್ಯದರ್ಶಿ ಶ್ರೀಧರ ಮುಗೇರ, ಗುರಿಕಾರರಾದ ಭಾಸ್ಕರ ಪೂಜಾರಿ ಅಲಕ್ಕೆ ಮೇಗಿನಮನೆ,ಮುಗೇರ ಸಮಾಜದ ಗುರಿಕಾರ ನೋಣಯ ಮುಗೇರ, ಮಹಿಳಾ ಸಮಿತಿ ಅಧ್ಯಕ್ಷೆ ರಂಜಿನಿ ದಿವಾಕರ್,ಕೊರಗಜ್ಜ ಬೆಳ್ಳಿ ಮುಟ್ಟಾಳೆ ಸಮರ್ಪಣೆ ಅಧ್ಯಕ್ಷರಾದ ಸಂತೋಷ ಕುಮಾರ್ ಚೌಟ,ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರವೀಂದ್ರ ಪೂಜಾರಿ ಗುರಿಗದ್ದೆ ಪದಾಧಿಕಾರಿಗಳಾದ ಮಹಾಬಲ ಪೂಜಾರಿ,ರತ್ನಕಾರ ಪೂಜಾರಿ, ವಾಮನ ಬುಣ್ಣನ್ ಕರ್ಪೆ, ಭೋಜ ಪೂಜಾರಿ,ವಿನೋದ್ ಪೂಜಾರಿ,ಸತೀಶ್ ಮುಗೇರ, ಶಂಕರ ಪೂಜಾರಿ,ಶೇಖರ ಮುಗೇರ, ವಾಸು ಮುಗೇರ ಕರ್ಪೆ,ನೇತ್ರಾವತಿ, ವಿರಮ್ಮ,ಮತ್ತಿತರರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

“ಪರ್ವ 2025” ಸೀರೆ, ಲೈಫ್ ಸ್ಟೈ ಲ್, ಮತ್ತು ಫುಢ್ ಫೆಸ್ಟಿವೆಲ್. ಡಿಸೆಂಬರ್ 19 ರಿಂದ 21 ರ ವರೆಗೆ ಸುರತ್ಕಲ್ ಬಂಟರ ಭವನದಲ್ಲಿ ಜನ ಜಾತ್ರೆ. ಸಂಗೀತ ರಸಮಂಜರಿ, “ಎನ್ನಿಲೆಕ ಇಜ್ಜೆರ್”, “ವೈರಲ್ ವೈಶಾಲಿ” ನಾಟಕ ಪ್ರದರ್ಶನ

ಮಂಗಳೂರು: ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಢ್ ಫೆಸ್ಟಿವೆಲ್ ನಡೆಯಲಿದೆ ಎಂದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಡಿಸೆಂಬರ್ 20 ರಂದು ಶನಿವಾರ ಸಂಜೆ 7 ಕ್ಕೆ ಪೆರ್ಮೆದ ಕಲಾವಿದೆರ್ ಚೇಳಾರ್ ತಂಡದಿಂದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.ಡಿಸೆಂಬರ್ 21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ “ಸಂಗೀತ ರಸ ಮಂಜರಿ”, ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಈ ವರ್ಷದ ಸೂಪರ್ ಹಿಟ್ ಹಾಸ್ಯ ನಾಟಕ “ವೈರಲ್ ವೈಶಾಲಿ” ಪ್ರದರ್ಶನ ಗೊಳ್ಳಲಿದೆ ಎಂದರು.ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತರ ತನಕ ಬಗೆಬಗೆಯ ತಿಂಡಿತಿನಿಸುಗಳ ಫುಡ್ ಫೆಸ್ಟಿವಲ್ ನಡೆಯಲಿದೆ.ಸೀರೆ ಮೇಳ: ಮೂರು ದಿನಗಳ ಕಾಲ ಸುರತ್ಕಲ್ ಬಂಟರ ಭವನದಲ್ಲಿ ವಿವಿಧ ಮಳಿಗೆಗಳ ಸೀರೆ ಮಾರಾಟ ಮೇಳವೂ ನಡೆಯಲಿದೆ.ನವನವೀನ ಮಾದರಿಯ ಕಾಂಚಿಪುರಂ, ಬನಾರಸ್, ರೇಷ್ಮೆ, ಬಂಗಾಲಿ ಕಾಟನ್ ಹಾಗೂ ವಿವಿಧ ಮಾದರಿಯ ಸೀರೆಗಳು ಸಲ್ವಾರ್ ಸೂಟ್, ಕುರ್ತಾಗಳು, ಖಾದಿ ಭಂಡಾರ, ಕಸೂತಿ, ಹಸ್ತಕಲೆ ಬ್ಯಾಗುಗಳು, ಒಂದು ಗ್ರಾಂ ಚಿನ್ನಾಭರಣ ವಿವಿಧ ವಿನ್ಯಾಸದ ಆರ್ಟಿಫಿಶಲ್ ಜ್ಯುವೆಲ್ಲರಿ ಮಸಾಲೆ ಹುಡಿಗಳು, ಹರ್ಬಲ್ ಉತ್ಪನ್ನಗಳು ಹಾಗೂ ಅನೇಕ ವಿಧವಿಧ ಉತ್ಪನ್ನಗಳ ಅಪೂರ್ವ ಸಂಗ್ರಹವೂ ಇದೆ.ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಉತ್ಪನ್ನಗಳು ದೊರೆಯಲಿದೆ. ಇದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆಯುವಂತಹ ಕಾರ್ಯಕ್ರಮವಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ಟಿ ಶೆಟ್ಟಿ, ಕೋಶಾಧಿಕಾರಿ ಮಾಲತಿ ಜೆ ಶೆಟ್ಟಿ, ಜೊತೆ ಕಾರ್ಯದರ್ಶಿ ಕವಿತಾ ಪಿ ಶೆಟ್ಟಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಜನ ಮೆಚ್ಚುಗೆ ಗಳಿಸಿದ ಬ್ರಹ್ಮರಕೂಟ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 90ರ ಸಂಭ್ರಮ

ಬಂಟ್ವಾಳ: ಬಂಟ್ವಾಳ ತಾಲೂಕು, ಕಳ್ಳಿಗೆ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮರಕೂಟ್ಲು ಇದರ 9೦ರ ಸಂಭ್ರಮ ದಿನಾಂಕ 13-12-2025ರಂದು ಅದ್ದೂರಿಯಾಗಿ ನೆರವೇರಿತು. 1935ರಲ್ಲೇ ಸ್ಥಾಪನೆಗೊಂಡ ಶಾಲೆಯಲ್ಲಿ ಈಗಾಗಲೇ ಅನೇಕ ಸತ್ಪ್ರಜೆಗಳ ನಿರ್ಮಾಣವಾಗಿದೆ. ಇಲಾಖೆಯ ಮಾನ್ಯತೆಯೊಂದಿಗೆ ಕನ್ನಡ ಹಾಗೂ ಇಂಗ್ಲೀಷ್‌ ಮಾಧ್ಯಮದಲ್ಲಿ ತರಗತಿಗಳನ್ನು ದ್ವಿತೀಯ ವರ್ಷ ಯಶಸ್ವಿಯಾಗಿ ನಡೆಸಿದೆ. ಇಲ್ಲಿಗೆ ತಮ್ಮ ಮಕ್ಕಳನ್ನು ಸೇರಿಸಿ ಉತ್ತಮ ಶಿಕ್ಷಣವನ್ನು ಉಚಿತವಾಗಿ ಪಡೆಯಿರಿ. ಮುಂದಿನ 1೦ ವರ್ಷದಲ್ಲಿ 1೦೦ರ ಸಂಭ್ರಮ ಇನ್ನಷ್ಟು ಪೋಷಕರ ಶಿಕ್ಷಣಾಸಕ್ತರ ಹಾಗೂ ಹಿರಿಯ ವಿದ್ಯಾರ್ಥಿಗಳ ನೆರವಿನಲ್ಲಿ ಅತಿ ವಿಜೃಂಭಣೆಯಿಂದ ನೆರವೇರಲಿ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಇವರು ಉದ್ಘಾಟಿಸಿ,ಮಾತನಾಡಿದರು.ಬೆಳಗ್ಗೆ 9.30ಕ್ಕೆ ಸರಿಯಾಗಿ ಶಾಲಾ ಧ್ವಜಾರೋಹಣವನ್ನು ಕಳ್ಳಿಗೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಇವರು ನೆರವೇರಿಸಿ ಶುಭಾಶಯ ನುಡಿದರು. ಬಳಿಕ ವಿದ್ಯಾರ್ಥಿಗಳ ಏರೋಬಿಕ್ ವ್ಯಾಯಾಮ ಪ್ರದರ್ಶನ ವಿಭಿನ್ನ ಮಾದರಿಯಲ್ಲಿ ನಡೆಯಿತು. ಬಳಿಕ ಬೆಳಗ್ಗೆ 11.30ಕ್ಕೆ ಸಭಾ ಕಾರ್ಯಕ್ರಮ ನೆರವೇರಿತು. ದ.ಕ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ಬಿ .ರಮಾನಾಥ ರೈ ಇವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸುವುದರೊಂದಿಗೆ ರೋಟರಿ ಸಹಯೋಗದಲ್ಲಿ ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘ ಕೊಡುಗೆಯಾಗಿ ನೀಡಿದ ಪ್ಲೇ ಗ್ರೌಂಡ್‌ ವಸ್ತುಗಳ ಉಪಯೋಗಕ್ಕೆ ಚಾಲನೆ ನೀಡಿದರು.ಅತಿಥಿಗಳಾಗಿ ದತ್ತು ಸ್ವೀಕಾರ ಸಮಿತಿಯ ಗೌರವ ಸಲಹೆಗಾರರಾದ ಚಂದ್ರಪ್ರಕಾಶ್ ಶೆಟ್ಟಿ, ಗ್ರಾಮ ಪಂಚಾಯತ್ ಕಳ್ಳಿಗೆ ಇದರ ಉಪಾಧ್ಯಕ್ಷರಾದ ಶ್ರೀಮತಿ ವಾರಿಜ, ಗ್ರಾಮ ಪಂಚಾಯತ್ ಕಳ್ಳಿಗೆ ಸದಸ್ಯರಾದ ರವಿರಾಜ್ ಜೈನ್, ಶ್ರೀಮತಿ ರತ್ನಾವತಿ, ತುಂಬೆ ಕ್ಲಸ್ಟರ್ ಸಿ.ಆರ್.ಪಿ.ರಮೇಶ್, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಜೇಸಿ ಸುರೇಶ್ ಕುಮಾರ್ ಬಿ ನಾವೂರು ವಕೀಲರು, ರೋಟರಿ ಕ್ಲಬ್ ಬಿಸಿ ರೋಡ್ ಅಧ್ಯಕ್ಷರಾದ ಶ್ರೀ ದಿವಾಕರ್ ಶೆಟ್ಟಿ, ದತ್ತು ಸ್ವೀಕಾರ ಸಮಿತಿ ಅಧ್ಯಕ್ಷರಾದ ಮಧುಸೂದನ್ ಶೆಣೈ, ನಿಯಾಝ್‌ ತಲಪಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯೋಗೀಶ್ ದರಿಬಾಗಿಲು, ಕೋಶಾಧಿಕಾರಿ ಪ್ರಶಾಂತ್‌ ಮುಂಡಾಜೆ ಉಪಸ್ಥಿತರಿದ್ದರು.ವಿಶೇಷ ಆಹ್ವಾನಿತರಾಗಿ ಶ್ ಅನಿಲ್ ಪಂಡಿತ್, ಜ್ಯೋತಿಷ್ಯರು, ಮೋಹನ್ ದಾಸ್ ರೈ ಪೆತ್ತಮುಗೇರು, ದಿನೇಶ್ ರೈ ಪೆತ್ರಮುಗೇರು, ಸುರೇಶ್ ರೈ, ಪೆತ್ತಮುಗೇರು, ಶಶಿಧರ ಬ್ರಹ್ಮರಕೂಟ್ಟು, ಶ್ರೀಮತಿ ಶಶಿಪ್ರಭಾ ಗುತ್ತಿನಹಿತ್ತಿಲು, ಶ್ರೀಮತಿ ವಾಣಿ ಪೆರಿಯೋಡಿ , ಪೂವಪ್ಪ ಮೇಸ್ತ್ರಿ ವಳವೂರು, ಹಮೀದ್, ಬ್ರಹ್ಮರಕೂಟ್ಲು, ಸಂಜೀವ ದರಿಬಾಗಿಲು, ಆಕ್ಟರ್ ಅಲಿ, ಶಿಕ್ಷಕರು, ಟಿ. ಇದಿನಬ್ಬ ತಲಪಾಡಿ, ಕೆ.ಎಸ್.ಆರ್.ಟಿ.ಸಿ., ಶ್ರೀಮತಿ ಕುಸುಮ ವಿಶ್ವನಾಥ ಜಾರಂದಗುಡ್ಡೆ, ಶ್ರೀಮತಿ ಪ್ರಿಯದರ್ಶಿನಿ ದರಿಬಾಗಿಲು, ಸಂತೋಷ್ ಬಂಗೇರ, ಜಗದೀಶ್ ಬಂಗೇರ ಕಂಜೆತ್ತೂರು, ಮನೋಹರ ಕಂಜೆತ್ತೂರು, ಸಂದೇಶ್ ದರಿಬಾಗಿಲು ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಸಭೆಯಲ್ಲಿ 2024-25ನೇ ಸಾಲಿನ ಮುಖ್ಯಮಂತ್ರಿಯವರ ಬಂಗಾರದ ಪದಕ ಪ್ರಶಸ್ತಿ ಪುರಸ್ಕೃತರಾದ ಶಾಲೆಯ ಹಳೆ ವಿದ್ಯಾರ್ಥಿ ಸುಧೀರ್ ಜಾರಂದಗುಡ್ಡೆ, ರೋಟರಿ ಜಿಲ್ಲೆ 3181ರ ಸಮಾಜ ಸೇವಾ ಪ್ರಶಸ್ತಿ ವಿಜೇತರು ಹಾಗೂ ಸ. ಹಿ. ಪ್ರಾ. ಶಾಲೆ ಬ್ರಹ್ಮರಕೂಟ್ಲುವಿನ ಸಹಶಿಕ್ಷಕರಾದ ಶ್ರೀಮತಿ ಭಾರತಿ, 23ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ – ನಾಲ್ಕು ಪದಕಗಳನ್ನು ಗೆದ್ದ ಸಾಧಕಿ ಶ್ರೀಮತಿ ಅಶ್ಲೀಟ್ ಗ್ರೇಡಿಸ್ ಪಾಯಸ್ ಇವರನ್ನು ಸನ್ಮಾನಿಸಲಾಯಿತು.ಸಭಾಧ್ಯಕ್ಷತೆ ವಹಿಸಿದ ಶಾಲಾ ಎಸ್.ಡಿ.ಎಂ.ಸಿ ಯ ಅಧ್ಯಕ್ಷರಾದ ಉದಯ ಕುಮಾರ್ ಜ್ಯೋತಿಗುಡ್ಡೆ ಇವರು ಮಾತನಾಡಿ ಶಾಲೆ ಕೇವಲ ಕಟ್ಟಡ ಅಲ್ಲ. ಅಲ್ಲಿಗೆ ಹಳೆ ವಿದ್ಯಾರ್ಥಿಗಳು ತಮ್ಮ ಮಕ್ಕಳನ್ನು ಕಳಿಸಿದರಷ್ಟೆ ಶಾಲೆ ಉಳಿಯಲು ಸಾಧ್ಯ. ಕಲಿಕೆಯಲ್ಲಿ ಕಲಿಸುವಿಕೆಯಲ್ಲಿ ಈಗಾಗಲೇ ಸರಕಾರಿ ಶಾಲೆಗಳು ಮುಂಚೂಣಿಯಲ್ಲಿರುವಾಗ ಶಾಲೆಗೆ ಸೇರಿಸಲು ಯಾವುದೇ ಸಂಶಯ ಬೇಕಾಗಿಲ್ಲ. 1೦೦ರ ಸಂಭ್ರಮಾಚರಣೆ ಇನ್ನಷ್ಟು ಹಿರಿಯ ವಿದ್ಯಾರ್ಥಿಗಳ ಸಹಕಾರದಲ್ಲಿ ಇನ್ನೂ ಅದ್ದೂರಿಯಾಗಿ ನಡೆಯಲಿ ಎಂದು ಹಾರೈಸಿದರು.ವಿದ್ಯಾರ್ಥಿಗಳ ಪ್ರಾರ್ಥನೆ ಮೂಲಕ ಪ್ರಾರಂಭ ಗೊಂಡ ಉದ್ಘಾಟನಾ ಸಮಾರಂಭಕ್ಕೆ ಬಂದ ವರನ್ನು ಮುಖ್ಯಶಿಕ್ಷಕಿ ಶ್ರೀಮತಿ ಕಲ್ಯಾಣಿ ಜಿ. ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ವೇದಾವತಿ ವಂದನಾರ್ಪಣೆ ಸಲ್ಲಿಸಿದರು.ಅಪರಾಹ್ನ 4 ಘಂಟೆಯಿಂದ ಶಾಲಾ ವಿದ್ಯಾರ್ಥಿಗಳ ಮನೋರಂಜನಾ ಕಾರ್ಯಕ್ರಮ ನೆರವೇರಿತು. ಸಂಜೆ 6.00ರಿಂದ ಗೀತಾಂಜಲಿ ಆರ್ಕೆಸ್ಟ್ರಾ ಬಳಗ ಬಿ.ಸಿ.ರೋಡ್ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಲಾಯಿತು.

ಪ್ರಾದೇಶಿಕ ವಾರ್ತೆಗಳು

‘ಸಂದೇಶ ಕ್ರೈಸ್ತರಿಗೆ ಮಾತ್ರ ಸೀಮಿತವಲ್ಲ’

ಉಳ್ಳಾಲ: ಏಸು ಕ್ರಿಸ್ತರ ಶಾಂತಿಯ ಸಂದೇಶದ ಫಲವಾಗಿ ಜಗತ್ತಿನಲ್ಲಿ ಶಾಂತಿ ನೆಲೆಸಿದ್ದು ಭಾರತದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದೆ. ಅವರ ಸಂದೇಶ ಕೇವಲ ಕ್ರಿಸ್ತರಿಗೆ ಸೀಮಿತವಲ್ಲ ಎಂದು ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಅಭಿಪ್ರಾಯಪಟ್ಟರು.ಪಜೀರ್ ಮೆರ್ಸಿಯಮ್ಮನವರ ಇಗರ್ಜಿಯ ಸೇಕ್ರೆಡ್ ಹಾರ್ಟ್ ವಾರ್ಡ್ ವತಿಯಿಂದ ಭಾನುವಾರ ಪಾವೂರು ಗ್ರಾಮದ ಕೊಂತಪದವಿನಲ್ಲಿ ನಡೆದ ಕ್ರಿಸ್‌ಮಸ್ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಾಜಿ ಸದಸ್ಯ ವಿವೇಕ್ ರೈ ಮಾತನಾಡಿ, ಭಾರತ ವೈವಿಧ್ಯತೆಯಲ್ಲಿ ಏಕತೆ ಇದ್ದರೂ ಆಚರಣೆಗಳು ಒಂದು ಧರ್ಮ, ಜಾತಿಗೆ ಸೀಮಿತವಾಗಿ ನಡೆಯುತ್ತಿರುವುದು ಖೇದಕರ. ವೇದಿಕೆಯಲ್ಲಾಡುವ ಮಾತುಗಳು ನಮ್ಮ ಜೀವನದಲ್ಲಿ ಅಳವಡಿಸುವಂತಾಗಬೇಕು ಎಂದು ತಿಳಿಸಿದರು.ಘಟಕ ಸಂಯೋಜಕ ಸಂತೋಷ್ ಗೋನ್ಸಾಲ್ವಿಸ್ ಮಾತನಾಡಿ, ಏಸು ಕ್ರಿಸ್ತರು ಪ್ರೀತಿ, ಕ್ಷಮೆ, ಹಂಚುವ ಸಂದೇಶ ನೀಡಿದ್ದಲ್ಲದೆ ಮಾಡಿ ತೋರಿಸಿದ್ದರು. ಹಬ್ಬಗಳು ಬರುತ್ತವೆ ಹೋಗುತ್ತವೆ, ಎಲ್ಲಾ ಹಬ್ಬಗಳು ಸೌಹಾರ್ದ ಸಂದೇಶ ನೀಡಿದೆ. ಸರ್ವ ಧರ್ಮೀಯರು ಸೇರಿ ಹಬ್ಬಗಳನ್ನು ಆಚರಿಸುವುದರಿಂದ ಪರಸ್ಪರ ಪ್ರೀತಿಯ ಭಾವನೆ ಹೆಚ್ಚಾಗುತ್ತದೆ ಎಂದರು.ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ, ಗ್ರಾಮ ಪಂಚಾಯಿತಿ ಸದಸ್ಯ ದಯಾನಂದ ಪೂಜಾರಿ ಕಿಲ್ಲೂರು, ಸ್ಥಳೀಯರಾದ ಹಮೀದ್ ಬಿ.ಸೈಟ್, ವಾರ್ಡ್ ಸಚೇತಕ ಸಿಸ್ಟರ್ ಜಾಯ್ಸ್ ಮೊಂತೆರೋ, ಕಾರ್ಯಕ್ರಮ ಸಂಯೋಜಕ ವಿನ್ಸೆಂಟ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು.ರೀಶಲ್ ಡಿಸೋಜ ಸ್ವಾಗತಿಸಿದರು. ಜೆಸ್ವಿಟಾ ಕ್ತಾಸ್ತಾ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮಧ್ವ ಯಕ್ಷಕೂಟ: ವಾರ್ಷಿಕೋತ್ಸವ, ಸಮ್ಮಾನ. ಸನಾತರ ಧರ್ಮದ ಉಳಿವಿಗೆ ಯಕ್ಷಗಾನದ ಕೊಡುಗೆ ಅಪಾರ: ರಾಘವೇಂದ್ರ ಭಟ್

ಬಂಟ್ವಾಳ ಡಿ.14:ಯಕ್ಷಗಾನವು ಧರ್ಮಾಧಾರಿತ ಚಿಂತನೆಯನ್ನು ಹೊಂದಿದ್ದು, ಸನಾತನ ಧರ್ಮದ ಉಳಿವಿಗೆ ಯಕ್ಷಗಾನದ ಕೊಡುಗೆ ಅಪಾರ. ಧರ್ಮದ ಉಳಿವಿಗೆ ಯಕ್ಷಾಗಾನವನ್ನು ಉಳಿಸಿ,ಬೆಳೆಸುವ ಯಕ್ಷ ಕೂಟ ಮಧ್ವದ ಕಾರ್ಯ ಅಭಿನಂದನೀಯ ಎಂದು ಮಧ್ವ, ಮಧ್ವಕಟ್ಟೆಯ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರು ಹೇಳಿದರು.ಕಾವಳಪಡೂರು ಗ್ರಾಮದ ಮಧ್ವದ ಮಧ್ವಪ್ಯಾಲೆಸ್ ಸಭಾಂಗಣದಲ್ಲಿ ನಡೆದ ಮಧ್ವ ಯಕ್ಷಕೂಟ ಇದರ 6ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ಯಕ್ಷಗಾನ ನಮ್ಮ ಸಂಸ್ಕೃತಿ, ಪರಂಪರೆ, ಆಧ್ಯಾತ್ಮಿಕ, ನೈತಿಕ ಮೌಲ್ಯಗಳನ್ನು ತಿಳಿಸುವ ಏಕೈಕ ಕಲಾಪ್ರಾಕಾರವಾಗಿದೆ. ಮೆದುಳಿಗೆ ಜ್ಞಾನ ದೊರಕುವ ಯಕ್ಷಗಾನದಲ್ಲಿ ಯುವ ಜನತೆ ಹೆಚ್ಚು ತೊಡಗಿಸಕೊಳ್ಳಬೇಕು ಎಂದರು.ಮೂಡುಬಿದಿರೆ ಮಹಾವೀರ ಕಾಲೇಜ್ ನ ಪ್ರಾಂಶುಪಾಲರಾದ ಡಾ| ರಾಧಾಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ಕಲೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಆಧುನಿಕ ಮೊಬಲ್ ಯುಗದಲ್ಲಿ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಬೇಕು. ಮಧ್ವಾಚಾರ್ಯರು ವಿಶ್ರಮಿಸಿದ ಸ್ಥಳವಾದ ಮಧ್ವದಲ್ಲಿ ಯಕ್ಷಗಾನ ಸೇವೆ ನಡೆಸುತ್ತಿರುವುದು ಉತ್ತಮ ಕಾರ್ಯ ಎಂದರು.ಬಳ್ಳಮಂಜ ಉದ್ಯಮಿ ಜಯಪ್ರಕಾಶ್ ಸಂಪಿಗೆತ್ತಾಯ, ತುಳುಕೂಟ ಬಂಟ್ವಾಳ ಅಧ್ಯಕ್ಷ ಸುದರ್ಶನ ಜೈನ್ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಬಿ.ಅಮೀನ್, ಕಾವಳಪಡೂರು ಗ್ರಾ.ಪಂ.ಸದಸ್ಯೆ ಭವಾನಿ ಶ್ರೀಧರ್ ಪೂಜಾರಿ, ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಪ್ರಬಂಧಕ ಗೋಪಾಲಕೃಷ್ಣ ಶೆಟ್ಟಿ, ಮಧ್ವ ಪ್ಯಾಲೇಸ್ ಮಾಲಕ ರುಕ್ಮಯ್ಯ ಗೌಡ,ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಪಂಜಿಕಲ್ಲು, ಕಾರ್ಯದರ್ಶಿ ಗಣನಾಥ ಶೆಟ್ಟಿ, ಶಿವಪ್ಪ ಗೌಡ ನಿನ್ನಿಕಲ್ಲು, ಸುರೇಂದ್ರ ಶೆಟ್ಟಿ, ಸುಜಾತ ಶೆಟ್ಟಿ, ಯುವರಾಜ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಅವರನ್ನು ಸಮ್ಮಾನಿಸಲಾಯಿತು. ಕಾರಿಂಜ ಯಕ್ಷಾವ್ಯಾಸಂ ಸಂಚಾಲಕಿ ಸಾಯಿಸುಮಾ ಎಂ.ನಾವಡ ಅಭಿನಂದಿಸಿದರು.ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ಮಧ್ವ ಅವರು ಸ್ವಾಗತಿಸಿದರು. ರಂಗ ಕಲಾವಿದ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಕೃಷ್ಣ ಸಂಧಾನ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಭಟ್ರಕುಮೇರು ಸ್ವಾಮಿ ಬಾಲ ತನಿಯ ಕ್ಷೇತ್ರ: ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ ಸಂಪನ್ನ

ಮಂಗಳೂರು: ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ಚತುರ್ಥ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆಯು ಸಾನಿಧ್ಯದ ಯಜಮಾನರು ಹಾಗೂ ದೈವಾರಾಧಕರಾದ ಶ್ರೀ ಭಾಸ್ಕರ ಬಂಗೇರ ಇವರ ನೇತ್ರತ್ವದಲ್ಲಿ ತಾ| 07-12-2025ನೇ ಅದಿತ್ಯವಾರದಂದು ತಂತ್ರಿಗಳಾದ ಶ್ರೀ ರವಿ ಆನಂದ ಶಾಂತಿ ಆಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಿತು. ಅಂದು ಬೆಳಿಗ್ಗೆ 7ರಿಂದ ಮಹಾಗಣಪತಿ ಹೋಮ ಹಾಗೂ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಭಜನೆ ಹಾಗೂ ಹರಿನಾಮ ಕೀರ್ತನೆ ನಡೆಯಿತು. ಸಂಜೆ 3 ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.ಸಂಜೆ ಶ್ರೀಮತಿ ವಿಜಯ ಭಾಸ್ಕರ್ ಮತ್ತು ತಂಡದಿಂದ ಭಕ್ತಿಗಾನ ಸುಧೆ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಿತು. ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ದಿನಾಂಕ 08-12-2025 ನೇ ಸೋಮವಾರ ಸಂಜೆ 7 ಗಂಟೆಗೆ ಅಗೆಲು ಸೇವೆ ನಡೆಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮಾತ್, ರೇಕಿ ಮಾಸ್ಟರ್ ವಿಜಯ ಸುವರ್ಣ, ಡಾ.ಗುರುತೇಜ, ತಡ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಾಣೇಶ್ ಅತ್ತಾವರ, ಮಾಣೂರು ಬಾಲಕೃಷ್ಣ ಸುಬ್ರಹ್ಮಣ್ಯ ದೇವಾಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಶ್ರೀಮತಿ ವೀಣಾ, ಪದವಿನಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂದೀಪ್ ಬೋಂದೆಲ್, ಉದ್ಯಮಿಗಳಾದ ಬಾಲಕೃಷ್ಣ ಗಟ್ಟಿ, ಲೀಲಾಕ್ಷ ಕರ್ಕೇರಾ, ನಿರೂಪಕ ನವನೀತ್ ಶೆಟ್ಟಿ ಕದ್ರಿ, ಸಾಹಿತಿ ಕೆ.ಕೆ. ಪೇಜಾವರ್, ಶ್ರೀ ಕ್ಷೇತ್ರದ ಸೇವಾಕರ್ತರು ಗಳಾದ ಪೂಜ್ಯ ಮಾತಶ್ರೀ ವಿಮಲಾ ಮುಂತಾದವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.ಅತಿಥಿ ಪತ್ರಿಕೆಯ ಸಂಪಾದಕರಾದ ಬಾಲಕೃಷ್ಣ ಯೆಯ್ಯಾಡಿ ನಿರೂಪಿಸಿದರು.

Scroll to Top