Author name: editor

ಪ್ರಾದೇಶಿಕ ವಾರ್ತೆಗಳು

In Kannada film CHARGESHEET 03-08, a true crime triller, Pune based pediatrician Dr Sudhakar Shetty in a important role of an doctor (forensic expert)

The Kannada film ” CHARGESHEET ” is based on true story which happened in Bengalaru in 2003 ,when SK Umesh was serving as DSP in Bangaluru Police.This true story is cased on a novel written by him.Its a fight for justice & also has a good message.Directed by award winning director Venkat Bharadwaj.The shooting has been completed & the atmosphere of Bengalaru in the early 2000s has been captured.The film has stars like Sunder raj,Harsh Arjun,Amar Satheya,Ram,Chetana khot,Dr Pramod, Dr Sudhakar Shetty ,Roopesh & Venkat Bharadwaj in the lead roles. Dr Sudhakar Shetty’s first film “Hey Prabhu” has already been released and its songs – eddelo egga & baduku bareda” has been a superhit.Its already been take up by Air India Engineering Services to be screened in Prime minister’s official aircraft ” BHARAT” for PM & his onboard staff.2nd film is ” CHARGESHEET ” ,3rd film is ” RAKKY” presented by Ashwini Puneeth Rajkumar ,4th film is in tulu & marathi ” Dr Mohan MBBS. 5th untitled film is in hindi which will go on floor shortly.In all these films Dr Shetty has played the role of doctor to inspire young doctors & is directed by Venkat Bharadwaj who is the son of Dr Shetty’s film Guru legendary late Shri C V SHIVASHANKAR (Putana kanagal awardee) ಬದುಕು ಬರೆದ – ಸಾಂಗ್ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು.

ಪ್ರಾದೇಶಿಕ ವಾರ್ತೆಗಳು

ಬಿಜೈ ಚರ್ಚ್ ರಸ್ತೆಯ ಕ್ಯಾಮಲಾಟ್ ಸಭಾಂಗಣದಲ್ಲಿ ದಿ ಎಕೋಸ್ ಆಫ್ ದ ಕಾರಿಡಾರ್ಸ್

ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಪರಂಪರೆ ಮತ್ತು ಗುರುತುಗಳನ್ನು ಚಿತ್ರಿಸುವ ದಿ ಎಕೋಸ್ ಆಫ್ ದ ಕಾರಿಡಾರ್ಸ್ – ಎ ಪೋರ್ಟ್ರೇಟ್ ಆಫ್ ಸೈಂಟ್ ಅಲೋಶಿಯಸ್ ಯುನಿವರ್ಸಿಟಿ ಹಾಗೂ ಫಾದರ್ ಮಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನ ಪರಂಪರೆ ಮತ್ತು ಸೇವೆಯನ್ನು ದಾಖಲಿಸುವ ಟಚ್ಡ್ ಬೈ ಏಂಜಲ್ಸ್ – ಎ ಪೋರ್ಟ್ರೇಟ್ ಆಫ್ ಫಾದರ್ ಮಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ಎಂಬ ಎರಡು ಕಾಫಿ ಟೇಬಲ್ ಪುಸ್ತಕಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಸ್ಥೆಗಳ ಇತಿಹಾಸ ಮತ್ತು ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ದೃಶ್ಯ ಕಥನದ ಮಹತ್ವವನ್ನು ಈ ಕಾರ್ಯಕ್ರಮದಲ್ಲಿ ವಿವರಿಸಲಾಗುವುದು. ಈ ಉಪನ್ಯಾಸವನ್ನು ಶ್ರೀಮತಿ ಜಿಸೆಲ್ ಮೆಹ್ತಾ ಅವರು ನೀಡಲಿದ್ದು, ಕಾಫಿ ಟೇಬಲ್ ಪುಸ್ತಕಗಳು ಹೇಗೆ ಪಾರಂಪರಿಕ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಆರ್ಕೈವ್ ಛಾಯಾಚಿತ್ರಗಳು, ದಾಖಲೆಗಳು ಮತ್ತು ಕಥನಶೈಲಿಯನ್ನು ಸಂಯೋಜಿಸುವ ಮೂಲಕ ಇತಿಹಾಸವನ್ನು ಸುಲಭವಾಗಿ ಗ್ರಹಿಸಬಹುದಾದ ಹಾಗೂ ಆಕರ್ಷಕ ರೂಪದಲ್ಲಿ ಹೇಗೆ ಮಂಡಿಸಬಹುದು ಎಂಬುದರ ಮೇಲೆ ಅವರು ಬೆಳಕು ಚೆಲ್ಲಲಿದ್ದಾರೆ.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ। ಮೆಲ್ವಿನ್ ಜೋಸೆಫ್ ಪಿಂಟೊ ಹಾಗೂ ಸೈಂಟ್ ಅಲೋಶಿಯಸ್ ಡೀಮ್ಡ್ ಟು ಬಿ ಯುನಿವರ್ಸಿಟಿಯ ಕುಲಪತಿ ರೆ। ಡಾ। ಪ್ರವೀಣ್ ಮಾರ್ಟಿಸ್ ಉಪಸ್ಥಿತರಿದ್ದು, ಶಿಕ್ಷಣ, ಆರೋಗ್ಯ ಮತ್ತು ಸಮಾಜಸೇವೆಯಲ್ಲಿ ಆಳವಾಗಿ ನೆಲೆಸಿರುವ ಸಂಸ್ಥೆಗಳ ದಾಖಲೀಕರಣದ ಅಗತ್ಯತೆ ಮತ್ತು ಪ್ರಸ್ತುತತೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.ಫಾದರ್ ಮಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನ ನಿರ್ದೇಶಕ ರೆ। ಫಾವುಸ್ತಿನ್ ಲುಕಾಸ್ ಲೋಬೊ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಈ ಕಾರ್ಯಕ್ರಮವು 2025 ಡಿಸೆಂಬರ್ 21 ರಂದು, ಸಂಜೆ 5 ಗಂಟೆಗೆ ಮಂಗಳೂರಿನ ಬಿಜೈ ಚರ್ಚ್ ರಸ್ತೆಯ ‘ಕ್ಯಾಮಲಾಟ್’ ಸಭಾಂಗಣದಲ್ಲಿ ನಡೆಯಲಿದೆ. ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿಗಳು, ಇತಿಹಾಸಕಾರರು, ಪಾರಂಪರಿಕ ಅಧ್ಯಯನ ಆಸಕ್ತರು ಹಾಗೂ ಸಂಸ್ಥೆಗಳ ಇತಿಹಾಸ, ದಾಖಲೀಕರಣ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು ಮುಕ್ತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಕರಾವಳಿ ಸುದ್ದಿ

ಮೈಕಲ್ ಡಿ’ಸೋಜಾ ವಿಶನ್ 2030 ಕಾರ್ಯಯೋಜನೆಗೆ ಚಾಲನೆ

ಮಂಗಳೂರು, ಡಿಸೆಂಬರ್ 16, 2025 – ಪ್ರಸಿದ್ಧ ಅನಿವಾಸಿ ಉದ್ಯಮಿ ಮತ್ತು ಮಹಾದಾನಿ ಶ್ರೀ ಮೈಕಲ್ ಡಿ’ಸೋಜಾ ಅವರ ಕಾರವಾರ ಮತ್ತು ಗುಲ್ಬರ್ಗಾ ಜೋಡಿ ಧರ್ಮಪ್ರಾಂತ್ಯಗಳ ಸಮುದಾಯಗಳನ್ನು ಸಮರ್ಥಗೊಳಿಸುವ ಗುರಿಯುಳ್ಳ ಮಹತ್ವಾಕಾಂಕ್ಷಿ ವಿಶನ್ 2030 ಕಾರ್ಯಯೋಜನೆಗೆ ಮಂಗಳೂರು ಧರ್ಮಕ್ಷೇತ್ರದ, ಧರ್ಮಾಧ್ಯಕ್ಷರ ನಿವಾಸದಲ್ಲಿ ತಿಳುವಳಿಕೆ ಒಡಂಬಡಿಕೆಗೆ (MoU) ಸಹಿ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳಿಗಾಗಿ ಮೈಕಲ್ ಡಿ’ ಸೊಜಾ ವಿಶನ್ 2030 ಕಾರ್ಯಯೋಜನೆ ವಸತಿ ಮತ್ತು ಶಿಕ್ಷಣ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್ ವಂದನೀಯ ಡಾ| ಪೀಟರ್ ಪೌಲ್ ಸಲ್ದಾನ್ಹ ಮತ್ತು ಉಡುಪಿಯ ಬಿಷಪ್ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಉಪಸ್ಥಿತರಿದ್ದರು. “ಪ್ರತಿಯೊಬ್ಬ ಮಾನವನಿಗೂ ವಸತಿ ಮತ್ತು ಶಿಕ್ಷಣವು ಮೂಲಭೂತ ಅಗತ್ಯಗಳು. ತಲೆ ಮೇಲೊಂದು ಸುರಕ್ಷಿತ ಸೂರು ಇಲ್ಲದೆ ನಿರಂತರ ಅನಿಶ್ಚಿತತೆಯಲ್ಲಿ ಬದುಕುವುದು ಮತ್ತು ಉನ್ನತ ಶಿಕ್ಷಣದ ಕೊರತೆಯಿಂದ ಘನತೆಯಿಂದ ಕೂಡಿದ ಜೀವನ ಸಾಗಿಸಲು ಕಷ್ಟಪಡುವುದು ಸಮುದಾಯ ಅಭಿವೃದ್ಧಿಯ ಪಥದಲ್ಲಿ ತೊಡಕುಗಳಾಗಿವೆ ” ಎಂದು ಶ್ರೀ ಡಿ’ಸೋಜಾ ಹೇಳಿದರು. “ದೇವರು ನನ್ನ ಕುಟುಂಬಕ್ಕೆ ಮತ್ತು ನನಗೆ ಅಗತ್ಯಕ್ಕಿಂತ ಹೆಚ್ಚು ಆಶೀರ್ವದಿಸಿದ್ದಾರೆ, ಮತ್ತು ನಮ್ಮ ಸಹೋದರರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದಾಗ ನಮಗೆ ಇನ್ನಷ್ಟು ಆಶೀರ್ವಾದ ಸಿಕ್ಕಿದೆ.” ಎಂದು ಅವರು ಮಾರ್ಮಿಕವಾಗಿ ನುಡಿದರು.ಶ್ರೀ ಡಿ’ಸೋಜಾ ಅವರು ದಾನಧರ್ಮಕ್ಕೆ ಘನತೆಯುಕ್ತ ವಿಧಾನವನ್ನು ಒತ್ತಿ ಹೇಳಿದರು: “ದಾನಧರ್ಮವು ಫಲಾನುಭವಿಗಳಿಗೆ ಘನತೆಯನ್ನು ಮರಳಿ ನೀಡುವ ಗುರಿಯನ್ನು ಹೊಂದಿರಬೇಕು. ಸಮುದಾಯಗಳನ್ನು ಸಬಲೀಕರಣಗೊಳಿಸಲು ಶಿಕ್ಷಣವು ಅತ್ಯುತ್ತಮ ಮಾರ್ಗ. ಧರ್ಮಸಭೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಅತ್ಯಂತ ವಿಶ್ವಾಸಾರ್ಹ ಮತ್ತು ಸಮಯ ಪರೀಕ್ಷಿತ ಮಾದರಿಗಳಾಗಿವೆ. 2013ರಿಂದ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯಗಳು ಸಮಗ್ರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿದ್ದು, ಗುಲ್ಬರ್ಗಾ ಮತ್ತು ಕಾರವಾರ ಬಿಷಪ್‌ರ ದೂರದೃಷ್ಟಿ ನಾಯಕತ್ವದಡಿ ಕಾರ್ಯಯೋಜನೆ ವಿಶನ್ 2030 ತಯಾರಿಸಲಾಗಿದೆ. ವ್ಯಕ್ತಿಗಳು ಬಂದು ಹೋಗಬಹುದು, ಆದರೆ ಸಂಸ್ಥೆ ಮತ್ತು ಅದರ ದೂರದೃಷ್ಟಿತ್ವ ಶಾಶ್ವತವಾಗಿರುತ್ತದೆ.”ಮೈಕಲ್ ಡಿ ಸೊಜಾ ಕುಟುಂಬ ಪ್ರೇರಿತ ಶಿಕ್ಷಣ, ಆರೋಗ್ಯ, ವಸತಿ ಮತ್ತು ಸ್ವಸಹಾಯ ಗುಂಪು ಮಾದರಿ ಯೋಜನೆಗಳು 2013ರಿಂದ ಮಂಗಳೂರು ಮತ್ತು ಉಡುಪಿ ಧರ್ಮಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು ಅದರ ಯಶಸ್ಸಿನ ಮೇಲೆ ವಿಶನ್ 2030 ನಿರ್ಮಿತವಾಗಿದ್ದು, ದೀರ್ಘಕಾಲೀನ ಸಮುದಾಯ ಉನ್ನತೀಕರಣದ ಕಡೆ ಕೇಂದ್ರೀಕೃತವಾಗಿದೆ.ಮೈಕಲ್ ಡಿ. ಸೋಜಾ ಸಮುದಾಯ ಯೋಜನೆಯ ಸಲಹೆಗಾರ ಶ್ರೀ ಓಸ್ವಾಲ್ಡ್ ರೊಡ್ರಿಗಸ್ ಅವರು ಸಭೆಗೆ ಸ್ವಾಗತ ಕೋರಿದರು ಮತ್ತು ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ಅವಲೋಕನ ನೀಡಿದರು.ಪ್ರೊ. ಸಿ.ಎ. ಲಾಯ್ನಲ್ ಅರಾನ್ಹಾ ತಿಳಿವಳಿಕೆ ಒಡಂಬಡಿಕೆಯ ಸಂದರ್ಭ ಮತ್ತು ಮಹತ್ವವನ್ನು ವಿವರಿಸಿದರು, ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಗುಲ್ಬರ್ಗಾ ಧರ್ಮಕ್ಷೇತ್ರದ ವಿಕಾರ್ ಜನರಲ್ ಅತೀ ವಂದನೀಯ ಮೊ| ಸಂತೋಷ್ ಬಾಪು ಅವರು ತಮ್ಮ ಧರ್ಮಕ್ಷೇತ್ರದ ಪರವಾಗಿ ಕೃತಜ್ಞತೆ ವ್ಯಕ್ತಪಡಿಸಿದರು ಮತ್ತು ಬಿಷಪ್ ಡುಮಿಂಗ್ ಡಾಯಸ್ ಅವರು ಕಾರವಾರ ಧರ್ಮಕ್ಷೇತ್ರದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.ಶ್ರೀ ಮೈಕಲ್ ಡಿ’ ಸೋಜಾ ಮತ್ತು ಅವರ ಪತ್ನಿ ಶ್ರೀಮತಿ ಫ್ಲೇವಿಯಾ ಡಿ’ ಸೋಜಾ ಇವರನ್ನು ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳ ವತಿಯಿಂದ ಶಾಲು ಮತ್ತು ಪುಷ್ಪಗುಚ್ಛಗಳೊಂದಿಗೆ ಸನ್ಮಾನಿಸಲಾಯಿತು.ಪ್ರಮುಖ ಅತಿಥಿಗಳಲ್ಲಿ ಕರ್ನಾಟಕ ಜೆಸ್ಯೂಟ್‌ಗಳ ಪ್ರಾಂತೀಯ ಮುಖ್ಯಸ್ಥರಾದ ವಂ. ಡಯೋನಿಯಸ್ ವಾಸ್ ಎಸ್.ಜೆ.; ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ವಂ. ಡಾ. ರಾಜೇಶ್ ರೊಸಾರಿಯೋ; ಮತ್ತು ಅಪೋಸ್ತಲಿಕ್ ಕಾರ್ಮೆಲೈಟ್‌ಗ ಪ್ರಾಂತೀಯ ಮುಖ್ಯಸ್ಥೆ ವಂ. ಭ. ನವೀನ್ ಎ.ಸಿ. ಮತ್ತು ಕಾರವಾರ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊ| ವಂ| ರಿಚರ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಅವರು ಸಭೆಯನ್ನು ಪ್ರಾರ್ಥನೆಯಲ್ಲಿ ಮುನ್ನಡೆಸಿ, ಮೈಕಲ್ ಡಿ’ಸೋಜಾ 2030 ದೃಷ್ಟಿ (MDV2030) ಉಪಕ್ರಮದ ಮೇಲೆ ದೈವಿಕ ಆಶೀರ್ವಾದವನ್ನು ಬೇಡಿಕೊಂಡರು.

ಪ್ರಾದೇಶಿಕ ವಾರ್ತೆಗಳು

ನೈಜ ಘಟನೆಯ ಚಾರ್ಜ್ ಶೀಟ್ ನಲ್ಲಿ ವೈದ್ಯರಾಗಿ ಪ್ರಮುಖ ಪಾತ್ರದಲ್ಲಿ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ.ಸುಧಾಕರ್ ಶೆಟ್ಟಿ

ಬೆಂಗಳೂರಿನಲ್ಲಿ 2003ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಚಿತ್ರ ‘ಚಾರ್ಜ್ ಶೀಟ್ 03/08’. ಆ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಜೀವನಾನುಭವ ಹಾಗೂ ಅವರು ಬರೆದ ಕಾದಂಬರಿಯೇ ಈ ಸಿನಿಮಾದ ಕಥಾಹಂದರ. ಸತ್ಯದ ಹುಡುಕಾಟ, ವ್ಯವಸ್ಥೆಯೊಳಗಿನ ಸಂಘರ್ಷ ಮತ್ತು ನ್ಯಾಯಕ್ಕಾಗಿ ನಡೆಯುವ ಹೋರಾಟವನ್ನು ಈ ಸಿನಿಮಾ ಚಿತ್ರಿಸುವುದರ ಜೊತೆಗೆ ಉತ್ತಮ ಸಂದೇಶವನ್ನೂ ನೀಡಲಿದೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ನೈಜ ಕಥೆಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, 2000ದ ದಶಕದ ಆರಂಭದ ಬೆಂಗಳೂರಿನ ವಾತಾವರಣವನ್ನು ಇಲ್ಲಿ ನೈಜವಾಗಿ ಸೆರೆಹಿಡಿಯಲಾಗಿದೆ. ಚಿತ್ರದಲ್ಲಿ ಸುಂದರ್‍ರಾಜ್, ಹರ್ಶ್ ಅರ್ಜುನ್, ಅಮರ್, ಸತೆಯಾ, ರಾಮ್, ಚೇತನ ಖೋಟ್, ಡಾ. ಪ್ರಮೋದ್, ಡಾ. ಸುಧಾಕರ್ ಶೆಟ್ಟಿ, ರೂಪೇಶ್ ಹಾಗೂ ವೆಂಕಟ್ ಭಾರದ್ವಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಾ.ಸುಧಾಕರ ಶೆಟ್ಟಿಯವರ ಮೊದಲ ಚಿತ್ರ ವೆಂಕಟ್ ಭಾರಧ್ವಜ್ ನಿರ್ದೇಶನದ ಹೇ ಪ್ರಭು, ಎರಡನೆ ಚಿತ್ರ ಚಾರ್ಜ್ ಶೀಟ್, ಮೂರನೇ ಚಿತ್ರ ರಕ್ಕಿ,ನಾಲ್ಕನೇ ಚಿತ್ರ ಡಾ.ಮೋಹನ್ ಎಂಬಿಬಿಯಸ್ .ಇದು ತುಳು ಮತ್ತು ಮರಾಠಿ ಚಿತ್ರವಾಗಿದ್ದು, ಡಾ.ಸುಧಾಕರ್ ಶೆಟ್ಟಿಯವರು ಪ್ರಮುಖ ಪಾತ್ರದಲ್ಲಿದ್ದಾರೆ. ಇದು ಸಮರ್ಪಿತ ಮತ್ತು ಪ್ರಾಮಾಣಿಕ ವೈದ್ಯರ ಕಥೆಯನ್ನು ಆಧರಿಸಿದೆ.

ಪ್ರಾದೇಶಿಕ ವಾರ್ತೆಗಳು

ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಕಳಸಗುರಿ ಇದರ ಸಹಾಯ ನಿಧಿಯ ದಶಮಾನೋತ್ಸವ

ಮಂಗಳೂರು -ನವಜ್ಯೋತಿ ಫ್ರೆಂಡ್ಸ್ ಕ್ಲಬ್ (ರಿ)ಕಳಸಗುರಿ ಇದರ ಸಹಾಯ ನಿಧಿಯ ದಶಮಾನೋತ್ಸವ ಕಾರ್ಯಕ್ರಮವು ಡಿಸೆಂಬರ್ 13 ರಂದು ಅಡ್ಡೂರು, ಕಳಸಗುರಿ ಎಂಬಲ್ಲಿ ಬಹಳ ಅದ್ದೂರಿಯಿಂದ ಜರುಗಿತು. ಕಾರ್ಯಕ್ರಮವು ಭಜನಾ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ಈಶ್ವರಿ ಭಜನಾ ಮಂಡಳಿ, ಕಾಂಜಿಲಕೋಡಿ ಹಾಗೂ ಆಗಸ್ತ್ಯೇಶ್ವರ ಭಜನಾ ಮಂಡಳಿ, ಪೊಳಲಿ ಇವರಿಂದ ಕುಣಿತ ಭಜನೆಯ ಕಾರ್ಯಕ್ರಮವು ನಡೆಯಿತು. ನಂತರ ಸ್ಥಳೀಯ ಪ್ರತಿಭೆಗಳಿಂದ ಹಾಗೂ ಸಂಸ್ಥೆಯ ಮಹಿಳಾ ಸದಸ್ಯರುಗಳಿಂದ ವಿವಿಧ ಡ್ಯಾನ್ಸ್ ಕಾರ್ಯಕ್ರಮವು ಜರುಗಿತು ಹಾಗೂ ಮಂಗಳೂರಿನ ಹೆಸರಾಂತ ಡ್ಯಾನ್ಸ್ ತಂಡವಾದ ವರ್ಸಿಟಿ ಡ್ಯಾನ್ಸ್ ಅಕಾಡೆಮಿ ಇವರಿಂದ ವಿನೂತನ ಶೈಲಿಯ ನೃತ್ಯ ಪ್ರದರ್ಶನವು ನಡೆಯಿತು. ಅಶೋಕ್ ಪೊಳಲಿ ಇವರಿಂದ ವಿಶಿಷ್ಟ ಶೈಲಿಯ ನೃತ್ಯ ಪ್ರದರ್ಶನವು ಜರುಗಿತು. ನಂತರ ದಶಮಾನೋತ್ಸವದ ಸಭಾ ಕಾರ್ಯಕ್ರಮವು ನಡೆಯಿತು. ಸಭಾಧ್ಯಕ್ಷತೆಯನ್ನು ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರು ವಹಿಸಿದ್ದರು. ಅತಿಥಿಗಳಾಗಿ ಅನಂತ್ ಭಟ್ ಪೊಳಲಿ, ಪದ್ಮರಾಜ್ ಆರ್, ಹರಿಕೃಷ್ಣ ಬಂಟ್ವಾಳ, ಭುವನೇಶ್ ಪಚ್ಚಿನಡ್ಕ,ಗಿರೀಶ್ ಆಳ್ವ, ಪದ್ಮನಾಭ ಕೋಟ್ಯಾನ್, ಹಿರಿಯ ವರದಿಗಾರರಾದ ವಿಜಯ ಕೋಟ್ಯಾನ್, ಭಾರತ ಸರ್ಕಾರದ ಅಧಿಕಾರಿಯಾಗಿರುವ ಜಗದೀಶ್ ಕೆ, ವೆಂಕಟೇಶ, ನಾವಡ ಪೊಳಲಿ, ಯಶವಂತ ಪೊಳಲಿ, ಯು. ಪಿ. ಇಬ್ರಾಹಿಂ, ಎ. ಕೆ. ಹ್ಯಾರಿಸ್, ಧನಂಜಯ ಗಂದಾಡಿ, ಸಂಸ್ಥೆಯ ಅಧ್ಯಕ್ಷರಾದ ಭೋಜ ಮೂಲ್ಯ ಅಡ್ಡೂರು,ಮಹಿಳಾ ಅಧ್ಯಕ್ಷರಾದ ನಿಶ್ಮಿತಾ, ಸ್ವರೂಪ್ ಪೂಂಜಾ, ಚಂದ್ರಹಾಸ ಶೆಟ್ಟಿ ನಾರಳ, ಚಂದ್ರಹಾಸ ಪಲ್ಲಿಪಾಡಿ ಇವರುಗಳು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಸದಸ್ಯರುಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಜರುಗಿತು. ಸ್ಥಳೀಯವಾಗಿ ಗುರುತಿಸಿಕೊಂಡು ಸಮಾಜಕ್ಕೆ ಮಾದರಿಯಾದ ಕೆಲಸಗಳನ್ನು ಮಾಡುತ್ತಿರುವ ಎಂಟು ಜನ ಸಾಧಕರಿಗೆ ಸಮ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಸಹಾಯ ನಿಧಿಯ ಫಲಾನುಭವಿಗಳಿಗೆ ಸಹಾಯ ನಿಧಿಯ ಮೊತ್ತವನ್ನು ವಿತರಿಸಲಾಯಿತು. ಪ್ರತಿಭಾ ಪುರಸ್ಕಾರ ಮಾಡಲಾಯಿತು, ಸುಮಾರು ಎರಡುವರೆ ಲಕ್ಷ ರೂಪಾಯಿಗಳ ಮೊತ್ತವನ್ನು.ಸಹಾಯ ನಿಧಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಯಿತು. ಸಭಾ ಕಾರ್ಯಕ್ರಮವನ್ನು ದಿನೇಶ್ ರಾಯಿ ಇವರು ನಿರೂಪಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಜಿತೇಶ್ ಕುಮಾರ್ ಉಳಿಯ ಮತ್ತು ಜಶ್ವಿನಿ ಜಿತೇಶ್ ಇವರು ನಿರೂಪಿಸಿದರು.ಕಿರಣ್, ಶ್ವೇತಾ. ಲೋಕೇಶ್ ಸಹಕರಿಸಿದರು.ಪ್ರಧಾನ ಸನ್ಮಾನವನ್ನು ಸಂಸ್ಥೆಯ ಸಹಾಯನಿಧಿ ರೂವಾರಿ ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ ಇವರಿಗೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಪ್ರಸನ್ನ ಶೆಟ್ಟಿ ಬೈಲೂರು ಇವರ ತಂಡದಿಂದ ‘ರಾಘು ಮಾಸ್ಟ್ರು’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಡಿ .14ರಂದು ಮಧ್ಯಾಹ್ನ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಂತರ ಮಹಾ ಅನ್ನ ಸಂತರ್ಪಣೆ ಹಾಗೂ ರಾತ್ರಿ ಬಪ್ಪನಾಡು ಮೇಳದವರಿಂದ ಯಕ್ಷಗಾನ ಪ್ರದರ್ಶನಗೊಂಡಿತು.

ಪ್ರಾದೇಶಿಕ ವಾರ್ತೆಗಳು

ಸುರತ್ಕಲ್ ನಲ್ಲಿ “ಪರ್ವ 2025” ಸೀರೆ, ಲೈಫ್ ಸ್ಟೈ ಲ್, ಮತ್ತು ಫುಢ್ ಫೆಸ್ಟಿವೆಲ್ ಉದ್ಘಾಟನೆ. ಸುರತ್ಕಲ್ ಬಂಟರ ಭವನದಲ್ಲಿ  ಮೂರು ದಿನ ಜನ ಜಾತ್ರೆ

ಸುರತ್ಕಲ್: ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ  “ಪರ್ವ 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಢ್ ಫೆಸ್ಟಿವೆಲ್ ನಡೆಯಲಿದ್ದು, ಕಾರ್ಯಕ್ರಮವನ್ನು ಮನಪಾ ಸುರತ್ಕಲ್ ವಲಯ ಕಛೇರಿಯ ಆಯುಕ್ತರಾದ ವಾಣಿ ಆಳ್ವ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸುರತ್ಕಲ್ ಬಂಟರ ಸಂಘದಲ್ಲಿ ಮಹಿಳಾ ವೇದಿಕೆ ನಿರಂತರ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದೆ. ಸಾಂಸ್ಕೃತಿಕ, ಕ್ರೀಡೆ ಸಹಿತ ಎಲ್ಲಾ ವಿಭಾಗಗಳಲ್ಲೂ ಮಹಿಳಾ ವೇದಿಕೆ ಮುಂಚೂಣಿಯಲ್ಲಿದೆ ಎಂದರು.ಮುಖ್ಯ ಅತಿಥಿ  ಎಸ್ ಸಿಡಿಸಿಸಿ ಬ್ಯಾಂಕ್ ಕಾಟಿಪಳ್ಳ ಶಾಖೆಯ ಶಾಖಾ ವ್ಯವಸ್ಥಾಪಕರಾದ ಕೇಸರಿ ಶೆಟ್ಟಿ ಶುಭ ಹಾರೈಸಿದರು.ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ಟಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಹಿಳಾ ವೇದಿಕೆಯ ಉಪಾಧ್ಯೆಕ್ಷೆ ಜಯಂತಿ ಟಿ ರೈ, ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ, ಕೋಶಾಧಿಕಾರಿ ಮಾಲತಿ ಜೆ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ವರಿ ಡಿ ಶೆಟ್ಟಿ ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಕವಿತಾ ಶೆಟ್ಟಿ ವಂದಿಸಿದರು.ಜ್ಯೋತಿ ಪಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಡಿಸೆಂಬರ್ 20 ರಂದು ಶನಿವಾರ ಸಂಜೆ 7 ಕ್ಕೆ  ಪೆರ್ಮೆದ ಕಲಾವಿದೆರ್ ಚೇಳಾರ್ ತಂಡದಿಂದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.ಡಿಸೆಂಬರ್ 21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ “ಸಂಗೀತ ರಸ ಮಂಜರಿ”, ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಈ ವರ್ಷದ ಸೂಪರ್ ಹಿಟ್ ಹಾಸ್ಯ ನಾಟಕ “ವೈರಲ್ ವೈಶಾಲಿ” ಪ್ರದರ್ಶನ ಗೊಳ್ಳಲಿದೆ.ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತರ ತನಕ ಬಗೆಬಗೆಯ ತಿಂಡಿತಿನಿಸುಗಳ ಫುಡ್ ಫೆಸ್ಟಿವಲ್ ನಡೆಯಲಿದೆ.*ಸೀರೆ ಮೇಳ:* ಮೂರು ದಿನಗಳ ಕಾಲ ಸುರತ್ಕಲ್ ಬಂಟರ ಭವನದಲ್ಲಿ  ವಿವಿಧ ಮಳಿಗೆಗಳ ಸೀರೆ ಮಾರಾಟ ಮೇಳವೂ ನಡೆಯಲಿದೆ.ನವನವೀನ ಮಾದರಿಯ ಕಾಂಚಿಪುರಂ, ಬನಾರಸ್, ರೇಷ್ಮೆ, ಬಂಗಾಲಿ ಕಾಟನ್ ಹಾಗೂ ವಿವಿಧ ಮಾದರಿಯ ಸೀರೆಗಳು ಸಲ್ವಾರ್ ಸೂಟ್, ಕುರ್ತಾಗಳು, ಖಾದಿ ಭಂಡಾರ, ಕಸೂತಿ, ಹಸ್ತಕಲೆ ಬ್ಯಾಗುಗಳು, ಒಂದು ಗ್ರಾಂ ಚಿನ್ನಾಭರಣ ವಿವಿಧ ವಿನ್ಯಾಸದ ಆರ್ಟಿಫಿಶಲ್ ಜ್ಯುವೆಲ್ಲರಿ ಮಸಾಲೆ ಹುಡಿಗಳು, ಹರ್ಬಲ್ ಉತ್ಪನ್ನಗಳು ಹಾಗೂ ಅನೇಕ ವಿಧವಿಧ ಉತ್ಪನ್ನಗಳ ಅಪೂರ್ವ ಸಂಗ್ರಹವೂ ಇದೆ.ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಉತ್ಪನ್ನಗಳು ದೊರೆಯಲಿದೆ. ಇದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆಯುವಂತಹ ಕಾರ್ಯಕ್ರಮವಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಪ್ರಾದೇಶಿಕ ವಾರ್ತೆಗಳು

ಹುಬ್ಬಳ್ಳಿಯಲ್ಲಿ ಮಿಂಚಿದ “ಶನಿ ಮಹಾತ್ಮೆ”

ಮಂಗಳೂರು: ಕಿಶೋರ್ ಡಿ ಶೆಟ್ಟಿ ನೇತೃತ್ವದ ಶ್ರೀ ಲಲಿತೆ ತಂಡದವರು ಹುಬ್ಬಳ್ಳಿಯ ಸಾವಾಯಿ ಗಂಧರ್ವ ಸಭಾ ಭವನದಲ್ಲಿ ಪ್ರದರ್ಶಿಸಿದ “ಶನಿ ಮಹಾತ್ಮೆ” ಕನ್ನಡ ಪೌರಾಣಿಕ ನಾಟಕವು ಪ್ರೇಕ್ಷಕರನ್ನು ಬೆರಗುಗೊಳಿಸಿತು. ಹುಬ್ಬಳ್ಳಿಯ ಶನಿ ಪೂಜಾ ಸೇವಾ ಸಮಿತಿಯವರು ಸಾಮೂಹಿಕ ಶನಿ ಪೂಜೆ ನಡೆಸಿ ಶನಿ ದೇವರ ಕಥೆ ಯನ್ನು ನಾಟಕ ದ ಮೂಲಕ ಪ್ರಸ್ತುತಿ ಗೈದರು. ಶನಿ ಜನ್ಮ, ಶನಿ ಪ್ರಭಾವ ವನ್ನು ಬೇರೆ ಬೇರೆ ಯುಗ ಗಳಲ್ಲಿ ತೋರುವ ನವ ರಸ ಭರಿತ ಕಥಾ ವಸ್ತುವನ್ನು ಹೊಂದಿದ ಕದ್ರಿ ನವನೀತ ಶೆಟ್ಟಿ ಅವರು ರಚಿಸಿದ ಈ ನಾಟಕ ದ 48 ನೇ ಪ್ರದರ್ಶನ ಇದಾಗಿದೆ.ಅದ್ದೂರಿ ಸಂಪ್ರದಾಯಿಕ ರಂಗ ವಿನ್ಯಾಸ, ಆಧುನಿಕ ಬೆಳಕಿನ ವಿನ್ಯಾಸ, ಪೂರ್ವ ಮುದ್ರಿತ ಧ್ವನಿ, ಸೊಗಸಾದ ವೇಷ ಭೂಷಣ, ಹಿತ ಮಿತ ಸಂಗೀತ, ಪ್ರಬುದ್ಧ ಕಲಾವಿದರ ಭಾವ ಪೂರ್ಣ ಅಭಿನಯಗಳೊಂದಿಗೆ ಅಚ್ಚುಕಟ್ಟಾಗಿ ಪ್ರದರ್ಶನಗೊಂಡ ನಾಟಕವನ್ನು ಪ್ರೇಕ್ಷಕರು ಭಕ್ತಿ ಭಾವದಿಂದ ಆಸ್ವಾದಿಸಿದರು.ಇದೇ ಸಂದರ್ಭದಲ್ಲಿ ನಾಟಕ ರಚನೆ ಮಾಡಿದ ಬಹುಮುಖ ಪ್ರತಿಭೆಯ ಕಲಾವಿದ ಕದ್ರಿ ನವನೀತ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಉದ್ಯಮಿಗಳಾದ ರಮೇಶ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಅರ್ಚಕ ಅಕ್ಷಯ ಉಡುಪ ಅತಿಥಿಗಳಾಗಿ ಪಾಲ್ಗೊಂಡರು.ಶನಿ ಪೂಜಾ ಸಮಿತಿಯ ಸತೀಶ್ ಡಿ ಶೆಟ್ಟಿ ಅವರು ಅಭಿನಂದಿಸಿದರು. ಸಮಿತಿಯ ಪ್ರಧಾನ ರಾದ ಅನಂತ ಪದ್ಮನಾಭ ಐತಾಳ್, ಕೃಷ್ಣ ಶೆಟ್ಟಿ, ರಮಾನಂದ ಶೆಟ್ಟಿ, ವಿವೇಕ್ ಪೂಜಾರಿ ಉಪಸ್ಥಿತರಿದ್ದರು.ಶ್ರೀ ಲಲಿತೆ ತಂಡದ ಯಜಮಾನ ಕಿಶೋರ್ ಡಿ ಶೆಟ್ಟಿ, ನಾಟಕ ನಿರ್ದೇಶಕ ಜೀವನ್ ಉಳ್ಳಾಲ್, ಪ್ರಸರಣ ಸಂಯೋಜಕ ಪ್ರದೀಪ್ ಆಳ್ವ ಕದ್ರಿ ಅವರನ್ನು ಗೌರವಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ನಗರದಲ್ಲಿ ಹೆಚ್ಚುತ್ತಿರುವ ಹೆಬ್ಬಾವುಗಳ ಹಾವಳಿ

ಮಂಗಳೂರು-2 ದಿನಗಳ ಹಿಂದೆ ನಸುಕಿನ ಜಾವ 4.30ಕ್ಕೆ ಮಂಗಳೂರು ಸ್ಟೇಟ್ ಬ್ಯಾಂಕ್ ನ ಹ್ಯಾಮಿಲ್ಟನ್ ವೃತ್ತದ ಬಳಿ ಹೆಬ್ಬಾವೊಂದು ರಸ್ತೆ ಮಧ್ಯೆ ಹಾದು ಹೋಯಿತು. ನಾವು ಡ್ಯೂಟಿ ಮುಗಿಸಿ ಬೈಕಲ್ಲಿ ಬರುವಾಗ ಕಂಡೆವು. ನಾವೆಲ್ಲ ಅದು ರಸ್ತೆ ದಾಟುವ ತನಕ ಕಾದು ಕುಳಿತು ಬೈಕ್ ನಿಲ್ಲಿಸಿ ನಂತರ ಹೊರಟೆವೆಂದು ಹೊಗೈ ಬಜಾರ್ ನಿವಾಸಿಯೊಬ್ಬರು ಹೇಳಿದ್ದಾರೆ. ನಗರದಲ್ಲಿ ಹೆಬ್ಬಾವುಗಳು ಹೆಚ್ಚುತ್ತಿದ್ದು, ನಿನ್ನೆ ರಾತ್ರಿ ಕೊಟ್ಟಾರ ಕ್ರಾಸ್ ನ ಪೂವರಿ ಫಾಸ್ಟ್ ಫುಡ್ ಬಳಿ ಹೆಬ್ಬಾವೊಂದು ಪತ್ತೆಯಾದಾಗ ತುಳುನಾಡು ಪ್ರತಿಷ್ಠಾನದ ಅಧ್ಯಕ್ಷ ರಾಜೇಶ್ ಅಮಿನ್ ಮೂಲ್ಕಿ ಮತ್ತು ಸ್ಥಳೀಯರಾದ ರಾಕೇಶ್ ಕೊಟ್ಟಾರ ಕ್ರಾಸ್ ಅವರು ಅದನ್ನು ಹಿಡಿದು ಸುರಕ್ಷಿತ ಜಾಗಕ್ಕೆ ತಲುಪಿಸಿದರು. ಇದನ್ನು ಈ ಕೆಳಗಿನ ಲಿಂಕ್ ಬಳಸಿ ನೋಡಬಹುದಾಗಿದೆ.

Scroll to Top