Author name: editor

ಪ್ರಾದೇಶಿಕ ವಾರ್ತೆಗಳು

ಯೆನೆಪೋಯ ವಿವಿಯಲ್ಲಿ ರಾಷ್ಟ್ರೀಯ ಸಮ್ಮೇಳನ

ಮಂಗಳೂರು: ದೇರಳಕಟ್ಟೆಯ ಯೆನೆಪೋಯ ಪರಿಗಣಿತ ವಿ.ವಿ.ಯ ಯೆನೆಪೋಯ ನರ್ಸಿಂಗ್ ಕಾಲೇಜಿನ ನರ್ಸಿಂಗ್ ಶಿಕ್ಷಣ ವಿಭಾಗ ಮತ್ತು ಪ್ರಥಮ ವರ್ಷದ ಎಂ.ಎಸ್ಸಿ ನರ್ಸಿಂಗ್ ವಿಭಾಗದ ವತಿಯಿಂದ ಡಿಜಿಟಲ್ ಶಿಕ್ಷಣಶಾಸ್ತ್ರ ಬೋಧನ -ಕಲಿಕೆಯಲ್ಲಿ ಕಲೆ ವಿಷಯದ ಬಗ್ಗೆ ಸಂಸ್ಥೆಯ ಯೆಂಡೋರೆನ್ಸ್ ಸಭಾಂಗಣದಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಿತು.ಸಮ್ಮೇಳನ ಉದ್ಘಾಟಿಸಿದ ಲಕ್ಷ್ಮಿ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಲರಿಸ್ಸಾ ಮಾರ್ಥಾ ಸ್ಯಾಮ್ಸ್ ಮಾತನಾಡಿ “ವಿದ್ಯಾರ್ಥಿಗಳು ಮತ್ತು ಬೋಧಕರು ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕು . ಡಿಜಿಟಲ್ ನೈತಿಕತೆ ಮತ್ತು ಆಧುನಿಕ ಶಿಕ್ಷಣದಲ್ಲಿ ಲಭ್ಯವಿರುವ ತಾಂತ್ರಿಕ ಸೌಲಭ್ಯಗಳ ಬಗ್ಗೆ ಅರಿವು ಹೊಂದಿರುವುದು ಅತ್ಯಗತ್ಯ ಎಂದರು.ಮುಖ್ಯ ಅತಿಥಿಯಾಗಿದ್ದ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಶ್ವಿನಿ ದತ್ .ಆರ್.ಅವರು ಪರಿವರ್ತನಾಶೀಲ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಲೀನಾ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು. ವಿವಿಧ ರಾಜ್ಯಗಳ ೩೫೦ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮ್ಮೇಳನದ ಅಧ್ಯಕ್ಷೆ ಡಾ. ಪ್ರಿಯಾ ರೇಷ್ಮಾ ಅರಾನ್ಹಾ ಸ್ವಾಗತಿಸಿ, ಕಾರ್ಯದರ್ಶಿ ನಿತ್ಯಶ್ರೀ ಬಿ.ವಿ.ವಂದಿಸಿದರು.

ಕರ್ನಾಟಕ ವಾರ್ತೆಗಳು

*ಕರ್ನಾಟಕ ಪ್ರದೇಶ ಈಡಿಗರ ಸಂಘದ ಸಮಾಜ ದ್ರೋಹಿ ಕೆಲಸದ ವಿರುದ್ಧ ಹೋರಾಟಕ್ಕೆ ಸಜ್ಜು : ಮಾಲೀಕಯ್ಯ ಗುತ್ತೇದಾರ್*

ಗಂಗಾವತಿ : ರಾಜ್ಯದ ಈಡಿಗ ಸೇರಿದಂತೆ 26 ಪಂಗಡಗಳ ಪ್ರಾತಿನಿಧ್ಯ ಹೊಂದಿದ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಸಮಾಜ ದ್ರೋಹಿ ಕೆಲಸ ಹಾಗೂ ಸ್ವಾರ್ಥ ಸಾಧನೆ ಮಾಡುವುದರ ವಿರುದ್ಧ ಮತ್ತು ಅಧ್ಯಕ್ಷರಾದ ತಿಮ್ಮೇಗೌಡ ಪದಚ್ಯುತಿ ಜೊತೆಗೆ ಎಲ್ಲ ಅಕ್ರಮಗಳ ವಿರುದ್ಧ ಹೋರಾಟ ಆರಂಭಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವರು ಹಾಗೂ ಸಮಾಜದ ಹಿರಿಯ ಮುಖಂಡರಾದ ಮಾಲೀಕಯ್ಯ ವಿ ಗುತ್ತೇದಾರ್ ತಿಳಿಸಿದರು. ಗಂಗಾವತಿ ಸಮೀಪದ ಕಿಷ್ಕಿಂದ ರೆಸಾರ್ಟ್ ಸಭಾಂಗಣದಲ್ಲಿ ಫೆ.23ರಂದು ಡಾ. ಪ್ರಣವಾನಂದ ಶ್ರೀಗಳ ಸಮ್ಮುಖದಲ್ಲಿ ನಡೆದ ಸಮಾಜದ ಹಿರಿಯ ಮುಖಂಡರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಂಡು ರಾಜ್ಯದ 26 ಪಂಗಡಗಳ ಕಲ್ಯಾಣಕ್ಕಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಲು ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಹಿರಿಯ ಮುಖಂಡರಾದ ಎಚ್.ಆರ್ ಶ್ರೀನಾಥ್, ಲಕ್ಷ್ಮಿ ನರಸಯ್ಯ ಮುಂತಾದವರ ಉಪಸ್ಥಿತಿಯಲ್ಲಿ ರಾಜ್ಯದಾದ್ಯಂತದಿಂದ ಆಗಮಿಸಿದ ಈಡಿಗ ಸಮುದಾಯದ ಮುಖಂಡರ ಸಭೆಯಲ್ಲಿ ಹಲವು ನಿರ್ಣಯ ಅಂಗೀಕರಿಸಲಾಗಿದೆ ಎಂದು ಮಾಲೀಕಯ್ಯ ಗುತ್ತೇದಾರ್ ಸುದ್ದಿಗಾರರಿಗೆ ತಿಳಿಸಿದರು. ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘವು ತನ್ನ ಸಂಘದ ನೀತಿ ನಿಯಮಾವಳಿಗೆ ವಿರುದ್ಧವಾಗಿ ಸ್ವಾರ್ಥ ಪರವಾಗಿ ಮತ್ತು ತಮ್ಮ ಉದ್ಯಮಗಳ ಬೆಳವಣಿಗೆಗೆ ಮಾತ್ರ ಸಂಘದ ಹೆಸರನ್ನು ಬಳಸಿ ಮುಂದುವರಿ ಯುತ್ತಿದೆ. ಸೋಲೂರು ಮಠದಲ್ಲಿ ಸಂಘಕ್ಕೆ ಉದಾರಿಗಳು ನೀಡಿದ ದೇಣಿಗೆ ಮತ್ತು ಸರಕಾರದಿಂದ ಕೊಡಮಾಡಿದ ಅನೇಕ ಸೌಲಭ್ಯಗಳ ದುರುಪಯೋಗ ಸೇರಿದಂತೆ ಸಮಾಜಕ್ಕೆ ತೀವ್ರತರವಾದ ದ್ರೋಹವೆಸಗಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್ ಕಟುವಾಗಿ ಆರೋಪಿಸಿದ್ದಾರೆ. ರಾಜ್ಯದ ಈಡಿಗ ಸಮಾಜವನ್ನು ಕತ್ತಲೆಯಲ್ಲಿಟ್ಟು ತಮ್ಮ ಉದ್ಯಮ ಮತ್ತು ಸ್ವಾರ್ಥಲಾಲಸೆಗಾಗಿ ಸಮಾಜದ ಹೆಸರಿನಲ್ಲಿರುವ ಸಂಘವನ್ನು ಬಳಸಿಕೊಳ್ಳಲಾಗುತ್ತಿದೆ. ಸಮಾಜದ ಪರವಾಗಿ ಯಾವುದೇ ಬೇಡಿಕೆ,ಹೋರಾಟಗಳಿಗೆ ಬೆಂಬಲ ನೀಡದೆ ಸಮಾಜದ ಮುಖಂಡರ ನಡುವೆ ವೈ ಮನಸ್ಸು ಹುಟ್ಟು ಹಾಕುವ ಹಾಗೂ ಆಡಳಿತದಲ್ಲಿರುವ ಮುಖ್ಯಮಂತ್ರಿಗಳಿಗೆ ಸಚಿವರುಗಳಿಗೆ ತಪ್ಪು ಮಾಹಿತಿ ನೀಡಿ ಸಮಾಜ ಒಡೆಯುವ ಕೆಲಸದಲ್ಲಿ ನಿರತ ಅಧ್ಯಕ್ಷ ತಿಮ್ಮೇಗೌಡ ಹಾಗೂ ಅವರ ಆಪ್ತಕೂಟದ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸಲು ರೂಪರೇಷೆ ಹಾಕಲಾಗಿದೆ ಎಂದು ಗುತ್ತೇದಾರ್ ಹೇಳಿದರು. ಡಾ. ಪ್ರಣವಾನಂದ ಶ್ರೀಗಳು ಸಮಾಜದ ಅಭಿವೃದ್ಧಿಗಾಗಿ 18 ಬೇಡಿಕೆಗಳನ್ನು ಒತ್ತಾಯಿಸಿ ಜನವರಿ 6 ರಿಂದ ಫ್ರೀಡಂ ಪಾರ್ಕ್ ವರೆಗೆ 700 ಕೀ . ಮೀ. ಕೈಗೊಂಡ ಪಾದಯಾತ್ರೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಫೆಬ್ರವರಿ 28ರ ಮೊದಲು ಮಾತುಕತೆಗೆ ಆಹ್ವಾನಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಭೇಟಿ, ಕುಲಕಸುಬು ಸೇಂದಿ ಪುನರಾರಂಭಿಸಲು ಕಾನೂನಾತ್ಮಕ ಹೋರಾಟ ,ಕುಲ ಶಾಸ್ತ್ರೀಯ ಅಧ್ಯಯನ ಸಮರ್ಪಕವಾಗಿ ನಡೆಯಲು ಶೀಘ್ರದಲ್ಲೇ ತಮ್ಮ ನೇತೃತ್ವದಲ್ಲಿ ಸಮಾಜದ 15 ಮಂದಿ ತಜ್ಞರನ್ನು ಸೇರಿಸಿ ಮೈಸೂರಿನ ಕುಲಶಾಸ್ತ್ರೀಯ ಅಧ್ಯಯನ ಸಂಶೋಧನಾ ತಂಡದ ಜೊತೆ ಸಂವಾದ ನಡೆಸಲು ನಿರ್ಧರಿಸಲಾಗಿದೆ. ಪ್ರತಿ ತಿಂಗಳು ಸಭೆ ಸೇರಿ ಕೈಗೊಂಡ ನಿರ್ಣಯಗಳ ಅನುಷ್ಠಾನದ ಪ್ರಗತಿ ಹಾಗೂ ರಾಜ್ಯಾದ್ಯಂತ ಶ್ರೀ ಪ್ರಣವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಹಿರಿಯ ಮುಖಂಡರ ತಂಡ ಪ್ರವಾಸ ಮಾಡಿ ಈಡಿಗ ಸಂಘ ಹಾಗೂ 26 ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಜಾಗೃತಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಗುತ್ತೇದಾರ್ ಸಭೆಯ ಪೂರ್ಣ ಮಾಹಿತಿ ನೀಡಿದರು. ಈ ಸಭೆಯಲ್ಲಿ ಜಿ.ಎನ್ ಸಂತೋಷ್ ಕುಮಾರ್ ಬೆಂಗಳೂರು, ವೆಂಕಟೇಶ ಗುಂಡನೂರ್ ಯಾದಗಿರಿ, ಅಶೋಕ್ ಗುತ್ತೇದಾರ್ ಸಿರವಾರ, ಸುರೇಶ್ ಗುತ್ತೇದಾರದ ಶ್ರೀಮತಿ ರಾಧಾ ಉಮೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮಸಂಗೀತ ಗುರುಗಳಿಂದ ಚಾಲನೆ

ನಗರದ ಸಂಗೀತ ಭಾರತಿ ಫೌಂಡೇಶನ್ ದ ಆಶ್ರಯದಲ್ಲಿ ಉರ್ವ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಸ್ತ್ರೀ ವಿಶಿಷ್ಟ ಪರಿಕಲ್ಪನೆಯ ಸಂಗೀತ ಕಾರ್ಯಕ್ರಮವನ್ನು ಗುರುಗಳಾದ ಶ್ರೀಮತಿ ಬಸ್ತಿ ಕವಿತಾ ಶೆಣೈ, ಶ್ರೀಮತಿ ವಿಭಾ ನಾಯಕ್, ಶ್ರೀಮತಿ ಶ್ರೀಲತಾ ಫ್ರಭು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಗೀತ ಭಾರತಿ ಫೌಂಡೇಶನ್ ದ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್ , ಉಪಾಧ್ಯಕ್ಷರಾದ ಶ್ರೀ ನರೇಂದ್ರ ಎಲ್ ನಾಯಕ್ , ಕಾರ್ಯದರ್ಶಿ ಡಾ ಉಷಾಪ್ರಭಾ ಎನ್ ನಾಯಕ್ , ಟ್ರಸ್ಟಿ ರಮೇಶ್ ಕೆಜಿ, ಖಚಾಂಚಿ ಕರುಣಾಕರ ಬಳ್ಕೂರು, ಸದಸ್ಯೆ ಶ್ರೀ ಸೌಮ್ಯ ಕಾಮತ್ ಉಪಸ್ಥಿತರಿದ್ಧರು. ಪೂರ್ವಾರ್ಧಸಲ್ಲಿ ವಿಭಾ ಹೆಗ್ಡೆ ಮತ್ತು ಶಿವಾನಿ ಮಿರಾಜ್ ಕರ್ ಇವರಿಂದ ಶಾಸ್ತ್ರೀಯ ಜುಗಲ್ ಬಂಧಿ ಖಾರ್ಯಕ್ರಮ ನಡೆಯಿತು. ಇವರಿಗೆ ಹಾರ್ಮೋನಿಯಂ ನಲ್ಲಿ ಮೇಧಾ ಭಟ್, ತಬ್ಲದಲ್ಲಿ ವಿಜೇತಾ ಹೆಗ್ಡೆ, ತಂಬೂರದಲ್ಲಿ ಪ್ರತೀಕ್ಷ ಪ್ರಭು, ಶಾವರಿ ಸಾಥ್ ನೀಡಿದರು. ಉತ್ತರಾರ್ಧದಲ್ಲಿ ವಯೋಲಿನ್ ಟ್ರಯೋ ಕಾರ್ಯಕ್ರಮವನ್ನು ಸಂಗೀತಾ ಶಂಕರ್ ಮತ್ತು ನಂದಿನಿ ಶಂಕರ್ , ರಾಗಿಣಿ ಶಂಕರ್ ನಡೆಸಿಕೊಟ್ಟರು. ಇವರಿಗೆ ತಬ್ಲದಲ್ಲಿ ಅನುರಾಧ ಪಾಲ್ ಸಾಥ್ ನೀಡಿದರು. ಈ ಕಾರ್ಯಕ್ರಮಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ , ಪ್ರವಾಸೋದ್ಯಮ ಇಲಾಖೆ, ಕೆನರಾ ಬ್ಯಾಂಕ್, ಡಾ ದಯಾನಂದ ಫೈ, ಕರ್ಣಾಟಕ ಬ್ಯಾಂಕ್ , ಮುದ್ರಾ ಪ್ರಿಂರ್ಟಸ್ ಸಹ ಪ್ರಾಯೋಜಕತ್ವವನ್ನು ನೀಡಿದ್ದಾರೆ

ಪ್ರಾದೇಶಿಕ ವಾರ್ತೆಗಳು

ರೆಡ್ ಕ್ರಾಸ್ ದ.ಕ.ಜಿಲ್ಲಾ ಆಡಳಿತ ಮಂಡಳಿ ಚುನಾವಣೆ-ಸಿಎ ಶಾಂತಾರಾಮ ಶೆಟ್ಟಿ ನೇತ್ರತ್ವದ ತಂಡಕ್ಕೆ ಭರ್ಜರಿ ಜಯ

ಮಂಗಳೂರು: ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ 2026-29ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ನೇತ್ರತ್ವದ ತಂಡ ಎಲ್ಲ 10 ಸ್ಥಾನ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು. ಸೋಮವಾರ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಮತ ಎಣಿಕೆ ನಡೆಯಿತು.ಸಿಎ ಶಾಂತಾರಾಮ ಶೆಟ್ಟಿ -1005, ಡಾ.ಸುಮನ.ಬಿ.-876, ಡಾ.ಸತೀಶ್ ರಾವ್-870,ಡಾ. ಬಿ.ಸಚ್ಚಿದಾನಂದ ರೈ-868, ರಾಘವೇಂದ್ರ ರಾವ್- 844,ಪುಷ್ಪರಾಜ್ ಜೈನ್-835, ಪಿ.ಬಿ.ಹರಿಪ್ರಸಾದ್ ರೈ-810, ಯತೀಶ್ ಬೈಕಂಪಾಡಿ-797, ಸಚೇತ್ ಸುವರ್ಣ- 762, ಗುರುದತ್ .ಎಂ.ನಾಯಕ್-762. ಮತ ಗಳಿಸಿ ಜಯಶಾಲಿಗಳಾದರು.ಆಡಳಿತ ಮಂಡಳಿಯ 10 ಸದಸ್ಯ ಸ್ಥಾನಕ್ಕೆ ಫೆ.22 ರಂದು ಚುನಾವಣೆ ನಡೆದಿತ್ತು. 3654 ಮತದಾರರ ಪೈಕಿ 1388 ಮಂದಿ ಮತ ಚಲಾಯಿಸಿದ್ದರು. 24 ಮತ ಅಸಿಂಧುವಾಗಿತ್ತು.ಚುನಾವಣಾಧಿಕಾರಿಯಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ .ಯು. ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಚುನಾವಣಾ ಉಪ ತಹಶೀಲ್ದಾರ್ ರಾಮಚಂದ್ರ .ಬಿ. ಕಾರ್ಯ ನಿರ್ವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಯೂನಿವರ್ಸಲ್ ಕೋಚಿಂಗ್ ಸೆಂಟರ್ ಬೆಳ್ಳಿಹಬ್ಬ. ಐಎಎಸ್, ಐಪಿಎಸ್, ಕೆಎಎಸ್ ಉಚಿತ ಪರೀಕ್ಷಾ ತರಬೇತಿ

ಮಂಗಳೂರು: ಯೂನಿವರ್ಸಲ್ ಕೋಚಿಂಗ್ ಸೆಂಟರ್ ಸಂಸ್ಥೆ 25ನೇ ವರ್ಷದ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು, ಕರ್ನಾಟಕ ಸೇರಿ ಭಾರತದಾದ್ಯಂತ 8036 ಕ್ಕೂ ಹೆಚ್ಚು IAS/IPS/KAS/PDO/ESI/PSI ಮತ್ತು ಇತರೇ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳ್ಳಿ ಹಬ್ಬ ಮಹೋತ್ಸವದ ಪ್ರಯುಕ್ತ ಕರ್ನಾಟಕದ 100 ಅಭ್ಯರ್ಥಿ ಗಳಿಗೆ ಉಚಿತ IAS/KAS ಪರೀಕ್ಷಾ ಪೂರ್ವ ತರಬೇತಿ ನೀಡಲು ನಿರ್ಧರಿಸಿದ್ದು, ತರಬೇತಿ ಸಂಪೂರ್ಣ ಉಚಿತವಾಗಿದೆ. ಅಧಿಕಾರಿಗಳಾಗಲು ಬಯಸುತ್ತಿರುವ ಸ್ಪರ್ಧಾರ್ಥಿಗಳಿಗೆ ಉಚಿತ ತರಬೇತಿ ಪಡೆದುಕೊಳ್ಳಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ಯೂನಿವರ್ಸಲ್ ಕೋಚಿಂಗ್ ಸೆಂಟರ್, ಅತ್ತಿಗುಪ್ಪೆ, ವಿಜಯನಗರ, ಬೆಂಗಳೂರು :9686664983, 080-23396403/409 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯೂನಿವರ್ಸಲ್ ಕೋಚಿಂಗ್ ಸೆಂಟರ್ ಸಂಸ್ಥೆಯ ನಿರ್ದೇಶಕರಾದ ಆರ್. ಉಪೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರಿಗೆ ಕರ್ನಾಟಕ ಸಹಕಾರ ಶಿರೋಮಣಿ ಪ್ರಶಸ್ತಿ.

ಬೆಂಗಳೂರು_ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರಿಗೆ ಕನ್ನಡ ಪ್ರಭ, ಏಷ್ಯಾನೆಟ್ ಸುವರ್ಣ ಟಿವಿ ನ್ಯೂಸ್ ವತಿಯಿಂದ ಕರ್ನಾಟಕ ಸಹಕಾರ ಶಿರೋಮಣಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಚೆಲುವರಾಯ ಸ್ವಾಮಿ,ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಗಣ್ಯರು ಹಲವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಡಾ. ರೋಹನ್ ಮೊಂತೆರೋ ಅವರಿಗೆ ನವ ನಕ್ಷತ್ರ ಸನ್ಮಾನ.

ಬೆಂಗಳೂರು – ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸಾಧನೆಗಾಗಿ ಡಾ. ರೋಹನ್ ಮೊಂತೆರೋ ಅವರಿಗೆ ಟಿವಿ 9 ಕನ್ನಡ ಟಿವಿ ಚಾನೆಲ್ ಫೆ.15 ರಂದು ಬೆಂಗಳೂರಲ್ಲಿ ನಡೆದ ಸಮಾರಂಭದಲ್ಲಿ ನವ ನಕ್ಷತ್ರ ಸನ್ಮಾನ ನೀಡಿ ಗೌರವಿಸಿದೆ. ಕಳೆದ ವರ್ಷ ಮಂಗಳೂರು ಪುರಭವನದಲ್ಲಿ ನಡೆದ ಎಂಪಿಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಡಾ. ರೋಹನ್ ಮೊಂತೆರೋ ಅವರಿಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು

ಪ್ರಾದೇಶಿಕ ವಾರ್ತೆಗಳು

ಯಕ್ಷಗಾನ ಕಲಾರಂಗದ 88ನೇಯ ಮನೆ ಹಸ್ತಾಂತರ. ಯಕ್ಷಗಾನ ಕಲಾರಂಗವೆಂಬುದು ವಿಸ್ಮಯ: ಬೈಂದೂರು ಶಾಸಕ ಗಂಟಿಹೊಳೆ

ಉಡುಪಿ: ಯಕ್ಷಗಾನ ಕಲಾರಂಗ ಉಡುಪಿ ಇದರ ವಿದ್ಯಾಪೋಷಕ್‌ನಡಿ 88ನೆಯ ಮನೆಯನ್ನು ಶನಿವಾರ(ಫೆ.14) ಹಸ್ತಾಂತರಿಸಲಾಯಿತು.ಎಂಎಸ್‌ಆರ್‌ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಡಾ.ಶಾರದಾ ಎಂ. ಇವರು ತಮ್ಮ ಪತಿ ಕೃಷ್ಣಮೂರ್ತಿ ಕೆ.ಇವರ ಸ್ಮರಣೆಯಲ್ಲಿ, 7,೦೦,೦೦೦ ರೂ.ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಛಂದೋಗತಿ’ಯನ್ನು ಬೈಂದೂರು ತಾಲೂಕಿನ ಜಡ್ಕಲ್ ಸೆಲ್ಕೋಡ್ ನಿವಾಸಿಗಳಾದ ಚಿಕ್ಕಮ್ಮ ಮತ್ತು ಶಂಕರ ನಾಯ್ಕ್ ಇವರ ಪುತ್ರ ಪ್ರಥಮ ಪಿಯುಸಿ ವಿದ್ಯಾರ್ಥಿ ಸ್ವಸ್ತಿಕ್ ಎಸ್. ನಾಯ್ಕ್‌ಗೆ ನಿರ್ಮಿಸಿಕೊಡಲಾಗಿದೆ. ಇದು ಶಾರದಾ ಎಂ ಅವರ ಪ್ರಾಯೋಜಕತ್ವದ ಎರಡನೇ ಮನೆಯಾಗಿದೆ. ಸ್ವಸ್ತಿಕ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.97 ಅಂಕ ಪಡೆದಿದ್ದು, ವಿದ್ಯಾಪೋಷಕ್ ಅಡಿಯಲ್ಲಿ ಈತನನ್ನು ಆಯ್ಕೆ ಮಾಡಲಾಗಿತ್ತು.ಅತ್ಯಂತ ಸರಳವಾಗಿ ಈ ಕಾರ್ಯಕ್ರಮ ನಡೆಯಿತು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾನಿ ಶಾರದಾ ಎಂ ಅವರು, ನನ್ನ ಪತಿ ಕೃಷ್ಣಮೂರ್ತಿಯವರ ಹಲವು ಆಸಕ್ತಿಗಳಲ್ಲಿ ಛಂದಸ್ಸಿನ ಕುರಿತ ಆಳವಾದ ಅಧ್ಯಯನವೂ ಒಂದು. ಅವರಿಗೆ ‘ಛಂದೋಗತಿ’ ಎಂಬ ಪುಸ್ತಕವನ್ನು ಬರೆಯಬೇಕೆಂಬ ಕನಸಿತ್ತು. ಅದು ಈಡೇರಿರಲಿಲ್ಲ. ಹಾಗಾಗಿ ಅವರ ಸ್ಮೃತಿಯಲ್ಲಿ ನೀಡಿದ ಈ ಮನೆಗೆ ಅದೇ ಹೆಸರಿಟ್ಟಿದ್ದೇನೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಯಕ್ಷಗಾನ ಕಲಾರಂಗ ನನಗೊಂದು ವಿಸ್ಮಯವೇ ಆಗಿದೆ. ಅವರ ಸಾಮಾಜಿಕ-ಶೈಕ್ಷಣಿಕ-ಕಲಾ ಸಂಬಂಧಿ ಕಾರ್ಯಕ್ರಮಗಳ ವಿಶ್ವರೂಪ ಅನ್ಯ ಸಂಘಟನೆಗಳಿಂದ ಅಸಾಧ್ಯ. ಅವರ ಕ್ಲಪ್ತತೆ, ಪರಿಶ್ರಮ, ಪಾರದರ್ಶಕತೆ, ಬದ್ಧತೆ, ಅಚ್ಚುಕಟ್ಟುತನಕ್ಕೆ ಶರಣಾಗಿದ್ದೇನೆ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆಯವರು ಮಾತನಾಡಿ, ಆಹಾರ, ಔಷಧ, ಶಿಕ್ಷಣ ವಿಕ್ರಯ ಮಾಡಬಾರದೆಂದು ನಮ್ಮ ಮೂಲ ಸಂಸ್ಕೃತಿಯಲ್ಲಿದೆ. ಈ ಮೂರೂ ವಿಧದ ದಾನಗಳು ಈ ಸಂಸ್ಥೆಯಿಂದ ಆಗುತ್ತಿವೆ ಎಂದರು.ವೇದಿಕೆಯಲ್ಲಿ ಖ್ಯಾತ ವಕೀಲ ರಾಮಚಂದ್ರ ಅಡಿಗ, ಬಿ.ಹರೀಶ್ ತಂತ್ರಿ, ಶಾರದಾ ಎಂ ಅವರ ಸಹೋದರ ಕೃಷ್ಣ ಭಟ್ ಮತ್ತು ಅವರ ಪತ್ನಿ ಪರಮೇಶ್ವರೀ, ಸಹೋದರಿ ಸರೋಜ,ಸಹೋದ್ಯೋಗಿ ಸುಬ್ರಹ್ಮಣ್ಯ ಭಟ್, ಸ್ನೇಹಿತೆ ಜೆಸಿಂತಾ, ಮಧುಕರ ಪೂಜಾರಿ, ವಿಠ್ಠಲ ಪೂಜಾರಿ, ವಿಷ್ಣುಮೂರ್ತಿ ಪ್ರಭು ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಯು. ವಿಶ್ವನಾಥ ಶೆಣೈ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಡಾ.ರಾಘವೇಂದ್ರ ರಾವ್, ಪ್ರಾಂಶುಪಾಲರಾದ ಅಮರೇಶ್ ಹೆಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಪ್ರಾದೇಶಿಕ ವಾರ್ತೆಗಳು

ನ್ಯಾಚುರಲ್ ಮೆಡಿಕಲ್ಸ್ ಎರಡನೆಯ ಬ್ರಾಂಚ್ ಉದ್ಘಾಟನೆ. ಮೆಡಿಕಲ್ಸ್ ಗಳು ಸೇವಾ ಉದ್ಯಮವಾಗಿ ಬೆಳೆಯಲಿ: ಕಾಮತ್

ಮಹಾನಗರ, ಫೆ. 14 : ಜನರು ಅನಾರೋಗ್ಯಕ್ಕೆ ಈಡಾದಾಗ ಔಷಧಿಗೆ ಬರುವ ಸಂದರ್ಭ ಮಾನವೀಯ ಹಾಗೂ ಸೇವಾ ರೂಪದಲ್ಲಿ ಬೇಕಾದ ಔಷಧಿಗಳನ್ನು ಕ್ಲಪ್ತ ಸಮಯದಲ್ಲಿ ನೀಡುವಂತಾಗಬೇಕು.ಇದರಿಂದ ಗ್ರಾಹಕರು ಹಾಗೂ ಉದ್ಯಮದ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕ ವೇದವ್ಯಾಸ ಕಾಮತ್ ಹೇಳಿದರು.ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ಮೈಲ್ ಸ್ಟೋನ್ -25 ಕಟ್ಟಡದಲ್ಲಿ ಸ್ವಾತಿ ಗಣೇಶ್ ಮಾಲಕತ್ವದ ನ್ಯಾಚುರಲ್ ಗ್ರೂಪ್ಇವರ ಸಂಪೂರ್ಣ ಹವಾ ನಿಯಂತ್ರಿತ ಔಷಧಿಯ ಮಳಿಗೆ ನ್ಯಾಚುರಲ್ ಮೆಡಿಕಲ್ಸ್ ನ 2ನೇ ಬ್ರಾಂಚ್ ನ್ನು ಉದ್ಘಾಟಿಸಿ ಅವರು ಮಾನಾಡಿದರು. ಮಂಗಳೂರು ಬೆಳೆಯುತ್ತಿರುವ ನಗರವಾಗಿದ್ದು ಆರೋಗ್ಯ ಕ್ಷೇತ್ರದಲ್ಲಿಯೂ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಹತ್ತಾರು ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಇಲ್ಲಿದ್ದು, ಇದಕ್ಕೆ ಪೂರಕವಾಗಿ ಎಲ್ಲಾ ಔಷಧಿ ವ್ಯವಸ್ಥೆಗಳು ಒಂದೇ ಸೂರಿ ನಾಡಿ ದೊರಕುವಂತಹ ಮೆಡಿಕಲ್ಸ್ ಕೇಂದ್ರಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ನ್ಯಾಚುರಲ್ ಗ್ರೂಪ್ ಸಂಸ್ಥೆ ಉತ್ತಮ ಹೆಜ್ಜೆಯನ್ನು ಇಟ್ಟಿದೆ. ಜನರಿಗೆ ಮನೆ ಬಾಗಿಲಿನಲ್ಲಿ ದೊರಕುವಂತಹ ಔಷಧ ಕೇಂದ್ರಗಳು ಮಂಗಳೂರು ಮಾತ್ರವಲ್ಲದೆ ಇತರ ಜಿಲ್ಲೆಗಳಲ್ಲಿಯೂ ಆರಂಭಿಸಲು ದೇವರು ಶಕ್ತಿ ನೀಡಲಿ ಎಂದು ನುಡಿದರು.ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮಂಜು ಕಾರ್ನವರ್,ಆಡಳಿತ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಅವರುಹೊಸ ಔಷಧಿ ಕೇಂದ್ರದಲ್ಲಿ ಸೇವೆಯ ಜೊತೆಗೆ, ಹಲವು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟು ಮಹಿಳಾ ಉದ್ಯಮಿ ಸ್ವಾತಿ ಗಣೇಶ ಅವರು ಇತರರಿಗೆ ಮಾದರಿ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ಶ್ಲಾಘಿಸಿದರು., ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಡೆಂಟ್ ಡಾ. ಉದಯ್ ಕುಮಾರ್ ಅವರು ಮಾತನಾಡಿ ಔಷಧಿ ಕೇಂದ್ರಗಳು ಉತ್ತಮ ಸೇವೆ ನೀಡುವ ಜೊತೆಗೆ, ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರು ಆರೋಗ್ಯಯುತವಾಗಿ ಬಾಳಲು ಸಹಕಾರ ನೀಡಬೇಕು ಎಂದರು.ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಅವರು ಮಾತನಾಡಿ ಮಂಗಳೂರಿನ ರಾವ್ ಅಂಡ್ ರಾವ್ ಸರ್ಕಲ್ ನಲ್ಲಿ ಪ್ರಥಮ ಬ್ರ್ಯಾಂಚ್ ತೆರೆದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬರುತ್ತಿದ್ದೀರಿ. ಇಲ್ಲಿಯೂ ಉತ್ತಮ ಸೇವೆ ಸಿಗುವಂತಾಗಲಿ ಎಂದು ಹಾರೈಸಿದರು.ಲ್ಯಾಂಡ್ ಟ್ರೇಡ್ಸ್ ಮಾಲಕ ಕೆ. ಶ್ರೀನಾಥ್ ಹೆಬ್ಬಾರ್,ಬಂದರ್ ಸ್ಟೀಲ್ ಸೆಂಟರ್ ನ ಎಂ. ಮೂಸಾ ಮೋಯಿದೀನ್, ಮೆಡಿಕಲ್ಸ್ ಓನರ್ಸ್ ಅಸೋಸಿಯೇಷನ್ ಇದರ ಜಮಾಲ್, ನ್ಯಾಚುರಲ್ ಗ್ರೂಪ್ ನ ಗಣೇಶ್ ಉಪಸ್ಥಿತರಿದ್ದರು.ಸಂಸ್ಥೆಯ ಮಾಲಕರಾದ ಸ್ವಾತಿ ಗಣೇಶ್ ಸ್ವಾಗತಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.ನ್ಯಾಚುರಲ್ ಗ್ರೂಪ್ ಇದರ ಪ್ರಥಮ ಹವಾ ನಿಯಂತ್ರಿತ ಮೆಡಿಕಲ್ ರಾವ್ ಅಂಡ್ ರಾವ್ ಸರ್ಕಲ್ ನಲ್ಲಿರುವ ಸಹಕಾರಿ ಸದನ ಕಟ್ಟಡದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು,ಇದೀಗ ನೂತನವಾಗಿ ಆರಂಭವಾದ ಹವಾ ನಿಯಂತ್ರಿತ ಔಷಧಿ ಕೇಂದ್ರ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲಿದೆ. ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನರ ಮನೆ ಬಾಗಲಿಗೆ ಔಷಧಿ ತಲುಪಿಸುವ ಸೌಲಭ್ಯ ನೀಡಲಿದೆ.

Scroll to Top