Author name: editor

ಪ್ರಾದೇಶಿಕ ವಾರ್ತೆಗಳು

KANACHUR empowers the graduates of MANGALORE UNIVERSITY with CPR & First Aid skills.

Mangalore, 22nd April : In a first of its kind skill empowerment program at Mangalore University, the leadership team lead by Dr PL Dharma – Hon’ble VC, Mangalore University & Dr Jayaraj Amin – Hon’ble Chairman, Dept of Political Science, Mangalore University inaugurated a ‘CPR & FIRST AID’ program, in association with Kanachur Institute of Medical Sciences, Natekal, Mangaluru. Dr. Rohan Monis – Cheif Administrative Officer, Kanachur Hospital & Research Centre was the Guest of Honor; Dr Srinivas (JR III) & Dr Ubedulla (JR I) from Dept of Emergency Medicine, KIMS were the resource persons. In his welcome address, Dr Jayaraj Amin expressed his gratefulness to Kanachur Institute for bringing together a team & a program for empowering their graduates with a community based essential skill. Dr Rohan lauded the efforts of the leadership team of Mangalore University for taking this leap into empowering the graduates with a life saving skill that will improve social well-being; also educating them that India’s Emergency Helpline no is 112. Dr PL Dharma expressed that emergencies happen everywhere but are we equipped with the basics? encouraging the students to do more and be more with no gender and religious boundaries, in their minds.Dr Srinivas & Dr Ubedulla did a didactic session with hands on demonstration of CPR skills. The graduates were thrilled and feedback was great.Cardio Pulmonary Resuscitaiton (CPR) is an emergency procedure that is done when someone’s heartbeat has stopped. Kanachur Institute of Medical Sciences advocates CPR skills – a vital life saving procedure.

ಪ್ರಾದೇಶಿಕ ವಾರ್ತೆಗಳು

ಕಣಚೂರು ಸಂಸ್ಥೆಯಿಂದ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಿಪಿಆರ್ ಮತ್ತು ಪ್ರಥಮ ಚಿಕಿತ್ಸೆ ತರಬೇತಿ

ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎಪ್ರಿಲ್ 22ರಂದು ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಸಂಸ್ಥೆಯಿಂದ ಸಿಪಿಆರ್ (ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್) ಮತ್ತು ಪ್ರಥಮ ಚಿಕಿತ್ಸೆಯ ತರಬೇತಿಯನ್ನು ನೀಡಲಾಯಿತು. ಕೌಶಲ್ಯ ಸಬಲೀಕರಣದ ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ| ಪಿ. ಎಲ್ ಧರ್ಮ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಜಯರಾಜ್ ಅಮೀನ್ ಉಪಸ್ಥಿತರಿದ್ದರು. ಕಣಚೂರು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು, ಮೆಡಿಸಿನ್ ವಿಭಾಗದ ಡಾ| ಶ್ರೀನಿವಾಸ್ ಮತ್ತು ಡಾ| ಉಬೈದುಲ್ಲಾ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು

ಪ್ರಾದೇಶಿಕ ವಾರ್ತೆಗಳು

ಜನಿವಾರ ಪ್ರಕರಣ: ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅವಮಾನಿಸಿರುವುದು ಖಂಡನೀಯ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ: ಸಂಸದ ಕ್ಯಾ. ಚೌಟ

ಮಂಗಳೂರು: ಕರ್ನಾಟಕದ ಸರ್ವ ಜನಾಂಗದ ಶಾಂತಿ ತೋಟವನ್ನು ಸರ್ವನಾಶ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಹಿಂದೂಗಳನ್ನು ದ್ವೇಷಿಸುತ್ತಿದ್ದು, ವಿದ್ಯಾರ್ಥಿಯ ಭವಿಷ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ಹಾಗೂ ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅಪಚಾರವೆಸಗಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿ ಅವಮಾನಿಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಂಸದರು, ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿಇಟಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಯಜ್ಞೋಪವೀತ ತುಂಡರಿಸಿರುವುದು ಹಿಂದೂಗಳ ಶ್ರದ್ದೆಯ ಮೇಲೆ ನಡೆದ ಆಕ್ರಮಣವಾಗಿದೆ. ಕೈಯಲ್ಲಿ ಕಟ್ಟಿಕೊಂಡಿದ್ದ ಕಾಶಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ಬಲವಂತವಾಗಿ ತೆಗೆಸಿರುವುದು ಸನಾತನ ಹಿಂದು ಧರ್ಮದ ಭಾಗವಾದ ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅವಮಾನ. ಸಿದ್ದರಾಮಯ್ಯ ಸರ್ಕಾರ ಪರೀಕ್ಷೆಯ ತಪಾಸಣೆ ನೆಪದಲ್ಲಿ ಮಾಂಗಲ್ಯವನ್ನು ತೆಗೆಯಲು, ಜನಿವಾರ ತುಂಡರಿಸಲು ಪ್ರಚೋದಿಸಿರುವುದು ಅಕ್ಷಮ್ಯ. ಉದ್ದೇಶ ಪೂರ್ವಕವಾಗಿ ಮಾಡಲಾದ ಈ ಕೃತ್ಯ ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಯಜ್ಞೋಪವೀತವು ಕೇವಲ ಒಂದು ದಾರವಲ್ಲ; ಅದು ಜ್ಞಾನದ ಸಂಕೇತ, ಸಂಯಮದ ಪ್ರತೀಕ. ಇದು ವಟುವಿನ ಬದುಕಿಗೆ ಒಂದು ಮಹತ್ವದ ತಿರುವು ನೀಡುವ ಸಂಸ್ಕಾರ. ಇಂತಹ ಪವಿತ್ರ ಸಂಸ್ಕಾರವನ್ನು ಕಡೆಗಣಿಸಿ, ಅದನ್ನು ತೆಗೆದುಹಾಕುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಯ ಭಾವನೆಯನ್ನು ಘಾಸಿಗೊಳಿಸುವುದರ ಜತೆಗೆ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗಳಿಗೂ ತೀವ್ರ ನೋವುಂಟು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತುತ್ತಿದ್ದು, ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ರಷ್ಟು ಮುಸ್ಲಿಮರಿಗೆ ಮೀಸಲಾತಿ, ಜಾತಿ ಗಣತಿಯಲ್ಲಿಯೂ ತಾರತಮ್ಯ, ಜನಿವಾರದಂತಹ ಕೃತ್ಯಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಜನರನ್ನು ಓಲೈಸುತ್ತಿರುವುದು ಕೋಮುವಾದದ ಅತಿರೇಕದ ನಡೆಗಳಾಗಿವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಕ್ಷಣ ರಾಜ್ಯದ ಜನತೆಯ ಕ್ಷಮೆಯಾಚಿಸಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸುಮುಖ ಪ್ರೊಡಕ್ಷನ್‌ ಎರಡನೇ ಸಿನಿಮಾ “ಕಜ್ಜ” ಕ್ಕೆ ಮುಹೂರ್ತ

ಮಂಗಳೂರು: ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಮೂಡಿಬರಲಿರುವ ಎರಡನೇ ಸಿನಿಮಾ “ಕಜ್ಜ” ಇದರ ಮುಹೂರ್ತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಿತು. ಸಿನಿಮಾಕ್ಕೆ ನಿರ್ಮಾಪಕ ವಿಶಾಂತ್ ಮಿನೆಜಸ್ ಕ್ಲಾಪ್ ಮಾಡಿದರು. ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಲ್ ಬೈಲ್, ಅರವಿಂದ ಬೋಳಾರ್ ಚಾಲನೆ ನೀಡಿದರು.ಬಳಿಕ ಮಾತಾಡಿದ ಫಾದರ್ ಮೆಲ್ವಿನ್ ಪಿಂಟೊ ಎಸ್ ಜೆ ಸುಮುಖ ಪ್ರೊಡಕ್ಷನ್‌ ಮೊದಲ ಸಿನಿಮಾಕ್ಕೆ ತುಳುನಾಡಿನ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ತುಡರ್‌ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದು ಮುಂದಿನ ಸಿನಿಮಾ ಕೂಡಾ ಜನರು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಒಳ್ಳೆಯ ತಂಡ ಸಿನಿಮಾದಲ್ಲಿ ದುಡಿಯುತ್ತಿದ್ದು ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ಬಾರಿ ಇನ್ನಷ್ಟು ಮನೋರಂಜನೆ ನೀಡಲು ಉತ್ಸಾಹಿ ಯುವಕರ ತಂಡ ಸಜ್ಜಾಗಿದೆ ಎಂದರು. ಬಳಿಕ ಮಾತಾಡಿದ ಅರವಿಂದ ಬೋಳಾರ್ “ಕಜ್ಜ” ಅಂದರೆ ತುಳುವಿನಲ್ಲಿ ಕಾರ್ಯ ಎಂದರ್ಥ. ಒಂದೊಳ್ಳೆಯ ಕಾರ್ಯವನ್ನು ಮಾಡಲು ನಾವೆಲ್ಲ ಒಂದಾಗಿದ್ದೇವೆ. ಆದಷ್ಟು ಬೇಗನೆ ಜನರ ಮುಂದೆ ಸಿನಿಮಾ ಬರಲಿ. ಹಿಂದಿನ ಸಿನಿಮಾಕ್ಕೆ ಕೊಟ್ಟಷ್ಟೇ ಪ್ರೋತ್ಸಾಹ ಪ್ರೀತಿಯನ್ನು ಈ ಬಾರಿಯೂ ಕೊಡುವ ಮೂಲಕ ಹೊಸಬರ ತಂಡವನ್ನು ಪ್ರೋತ್ಸಾಹಿಸಿ ಎಂದರು.ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ಕಜ್ಜ ಸಿನಿಮಾದ ಕತೆ ಚೆನ್ನಾಗಿದೆ. ಉತ್ತಮ ಕಲಾವಿದ್ದಾರೆ. ಹೊಸಬರಿಗೂ ಅವಕಾಶ ನೀಡಿದ್ದಾರೆ. ತುಡರ್ ಸಿನಿಮಾದಂತೆ ಕಜ್ಜ ಸಿನಿಮಾ ಕೂಡಾ ಜಯಬೇರಿ ಬಾರಿಸಲಿ ಎಂದರು.ಪ್ರದೀಪ್ ಕುಮಾರ್ ಕಲ್ಕೂರ, ಸಾಯಿರಾಂ, ರವಿಶಂಕರ್ ಮಿಜಾರ್, ರಮಾನಂದ ಪೂಜಾರಿ ಬೋಳಾರ್, ಉದಯ ಪೂಜಾರಿ ಬಲ್ಲಾಲ್ ಭಾಗ್, ಶಾಹಿನ್ ಶೇಖ್, ಪ್ರೇಮ್ ಶೆಟ್ಟಿ ಸುರತ್ಕಲ್, ಹರೀಶ್ ಶೆಟ್ಟಿ, ಸಿನಿಮಾದ ನಟ ನಿರ್ದೇಶಕ ಸಿದ್ಧಾರ್ಥ್‌ ಶೆಟ್ಟಿ, ಉಮೇಶ್‌ ಮಿಜಾರ್‌, ಸದಾಶಿವ ಅಮೀನ್‌, ವೆನ್ಸಿಟಾ ಡಯಾಸ್‌, ಲಂಚುಲಾಲ್, ಮೋಹನ್ ಕೊಪ್ಪಳ, ಬಾಲಕೃಷ್ಣ ಶೆಟ್ಟಿ, ರೂಪ ವರ್ಕಾಡಿ, ಮೋಹನ್ ರಾಜ್, ಅರತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಸಿನಿಮಾದಲ್ಲಿ ಸಿದ್ದಾಥ್೯ ಶೆಟ್ಟಿ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಜಯಶ್ರೀ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಸುವರ್ಣ ಪೂಜಾರಿ, ಸವಿತಾ ಅಂಚನ್, ಶಾಹಿನ್ ಶೇಖ್, ಸನ್ನಿಧಿ ಶೆಟ್ಟಿ ಅಭಿನಯಿಸುತ್ತಿದ್ದಾರೆ.ನಿರ್ದೇಶನ : ಜಿಸ್ನು ಎಸ್ ಮೆನನ್ ಸಿದ್ದಾಥ್೯ ಶೆಟ್ಟಿ, ನಿರ್ಮಾಪಕರು: ವಿಶಾಂತ್ ಮಿನೆಜಸ್, ಛಾಯಾಗ್ರಾಹಣ: ಚಂದು ಮೆಪ್ಪಾಯೂರ್, ಸಂಕಲನ : ಶರತ್ ಹೆಗ್ಡೆ, ನೃತ್ಯ: ವಿಜೇತ್ ಆರ್ ನಾಯಕ್, ಸಾಹಸ: ಯೋಗಾನಂದ್, ಪ್ರೊಡಕ್ಷನ್ ಮ್ಯಾನೇಜರ್: ಕಾರ್ತಿಕ್ ರೈ ಅಡ್ಯನಡ್ಕ

ಪ್ರಾದೇಶಿಕ ವಾರ್ತೆಗಳು

ದ. ಕ. ಕಾರ್ಯನಿರತ ಪತ್ರಕರ್ತರ ಸಂಘದ ಶ್ರೀನಿವಾಸ್ ನಾಯಕ್, ಅನ್ಸಾರ್ ಇನೋಳಿ, ಸತ್ಯವತಿ, ಇಕ್ಬಾಲ್ ಕುತ್ತಾರ್, ಸ್ಟೀವನ್, ವೇಣು ವಿನೋದ್ ಸೇರಿದಂತೆ 21 ಮಂದಿ ಪತ್ರಕರ್ತರಿಗೆ ಕಾಸರಗೋಡು ಪತ್ರಕರ್ತ ಸಂಘದ ದತ್ತಿ ನಿಧಿ ಪ್ರಶಸ್ತಿ

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್, ಉಪಾಧ್ಯಕ್ಷ ಅನ್ಸಾರ್ ಇನ್ನೊಳಿ,ಕಾರ್ಯಕಾರಿ ಸಮಿತಿ ಸದಸ್ಯೆ ಸತ್ಯವತಿ,ಸದಸ್ಯರಾದ ವೇಣುವಿನೋದ್, ಸ್ಟೀವನ್ ರೇಗೋ,ಎನ್ಕೌಂಟರ್ ಪತ್ರಿಕೆಯ ಸಂಪಾದಕ ಇಕ್ಬಾಲ್ ಕುತ್ತಾರ್ ಸಹಿತ ಜಿಲ್ಲೆಯ 6 ಮಂದಿ ಪತ್ರಕರ್ತರಿಗೆ ಸೇರಿದಂತೆ ಒಟ್ಟು 21 ಮಂದಿ ವಾರ್ಷಿಕ ದತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇ 3ರಂದು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಪ್ರಶಸ್ತಿಗೆ ಆಯ್ಕೆಯಾದವರ ವಿವರಸತ್ಯವತಿ -ನ್ಯಾಯವಾದಿ ಮುಹಮ್ಮದ್ ಇಬ್ರಾಹೀಂ ಪಾರೆ ಸ್ಮರಣಾರ್ಥ ಪ್ರಶಸ್ತಿ, ಕಂಡಕೆರೆ ಇಸ್ಮಾಯೀಲ್ ಕೊಡಗು- ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ದತ್ತಿ ಪ್ರಶಸ್ತಿ, ಶ್ರೀನಿವಾಸ ಜೋಕಟ್ಟೆ ಮುಂಬೈ-ಬ್ರಹ್ಮಕ್ಯ ಎಡನೀರು ಶ್ರೀಕೇಶವಾನಂದ ಭಾರತೀ ಸ್ವಾಮೀಜಿ ನೆನಪಿಗಾಗಿ ನೀಡುವ ದತ್ತಿನಿಧಿ ಪ್ರಶಸ್ತಿ, ಗಣೇಶ್ ಕಾಸರಗೋಡು – ಪತ್ರಕರ್ತ ರವಿಬೆಳೆಗೆರೆ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ, ಶ್ರೀನಿವಾಸ ನಾಯಕ್ ಇಂದಾಜೆ -ಅವ್ವ ಟ್ರಸ್ಟ್ ಹುಬ್ಬಳ್ಳಿ ದತ್ತಿನಿಧಿ, ಮಲ್ಲಿಕಾರ್ಜುನ ರೆಡ್ಡಿ ಗೋಂದಿ ಬೆಳಗಾವಿ- ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ದತ್ತಿನಿಧಿ, ಎನ್. ರವಿಕುಮಾರ್ – ಹವ್ವಾ ಹಸನ್ ಫೌಂಡೇಶನ್ ಕುದ್ಕೋಳಿ ದತ್ತಿನಿಧಿ, ನಾಗರಾಜ ವೈ ಕೊಪ್ಪಳ -ಅನಿವಾಸಿ ಉದ್ಯಮಿ ಕಲಾಪೋಷಕ ಶ್ರೀ ಜೋಸೆಫ್ ಮಥಾಯಸ್ ದುಬೈ ದತ್ತಿನಿಧಿ, ಈಶ್ವರ ಅಲೆವೂರು ಮುಂಬೈ- ಕೆ.ವಿ.ಆರ್.ಟ್ಯಾಗೋರ್ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ, ಮುಹಮ್ಮದ್ ಅನ್ಸಾರ್ ಇನೋಳಿ – ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ದತ್ತಿನಿಧಿ ಪ್ರಶಸ್ತಿ, ಸಿ.ಜೆ.ಪುನೀತ್ ಮೈಸೂರು- ಆರ್ಥಿಕ ತಜ್ಞ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ದತ್ತಿನಿಧಿ, ವೇಣು ವಿನೋದ್ ಮಂಗಳೂರು- ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಸೋಮಣ್ಣ ಬೇವಿನಮರದ ದತ್ತಿನಿಧಿ, ಮೌಲಾನ ಸಾಬ್ ಬೀದರ್-ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ದತ್ತಿನಿಧಿ, ಸ್ಟೀವನ್ ರೇಗೊ ಮಂಗಳೂರು-ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ದತ್ತಿನಿಧಿ, ಕೆ.ಜಿ.ನಾಗಲಕ್ಷ್ಮೀ ಬಾಯಿ ಬೆಂಗಳೂರು -ಉದ್ಯಮಿ ಶಿವಶಂಕರ ನೆಕ್ರಾಜೆ ದತ್ತಿನಿಧಿ, ಇಕ್ಬಾಲ್ ಕುತ್ತಾರ್-ಉದ್ಯಮಿ ಸಮಾಜ ಸೇವಕ ಜೇಮ್ಸ್ ಮೆಂಡೊನ್ಸಾ ದತ್ತಿನಿಧಿ, ರಾಮ ಅಜೆಕ್ಕಾರ್-ಉದ್ಯಮಿ ಸಮಾಜ ಸೇವಕ ಅಶ್ರಫ್ ಶಾ ಮಂತೂರು ದತ್ತಿನಿಧಿ, ಗಣೇಶ್ ಕಾಸರಗೋಡು-ಕೆಯುಡಬ್ಲ್ಯುಜೆ ರಾಜ್ಯ ಸಮಿತಿ ದತ್ತಿನಿಧಿ, ಭಾಸ್ಕರ ಕೆ ಕಾಸರಗೋಡು-ಕೆಯುಡಬ್ಲ್ಯುಜೆ ರಾಜ್ಯ ಸಮಿತಿ ದತ್ತಿನಿಧಿ, ಅಜಿತ್ ಸ್ವರ್ಗ -ಕೆಯುಡಬ್ಲ್ಯುಜೆ ದತ್ತಿನಿಧಿ, ಮತ್ತಿಕೆರೆ ಜಯರಾಮ ಮಂಡ್ಯ- ಕೆ.ಕೆ. ಶೆಟ್ಟಿ ಕುತ್ತಿಕಾರ್ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದತ್ತಿನಿಧಿ ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹೊಂದಿರುತ್ತದೆ.ಎರಡು ದಶಕಗಳಿಂದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಇತರ ಕನ್ನಡಪರ ಸಂಘ ಸಂಸ್ಥೆಗಳೊಂದಿಗೆ ಸೇರಿ ಶ್ರಮಿಸುತ್ತಿದೆ. ಕನ್ನಡ ಮತ್ತು ಮಲೆಯಾಳ ಪತ್ರಕರ್ತರ ಸ್ನೇಹಸೇತುವಾಗಿ ಈ ಸಂಘವು ಕಾರ್ಯಾಚರಿಸುತ್ತಿದೆ.ಮೇ 3 ರಂದು ಕಾಸರಗೋಡಿನ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ. ಕೆ ಶೆಟ್ಟಿ ಕುತ್ತಿಕಾರ್ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕ ಸರಕಾರದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ಕಾಸರಗೋಡು ಜಿಲ್ಲಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿ ನಾಯ್ಕಾಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕರಾವಳಿ ಸುದ್ದಿ, ಪ್ರಾಪರ್ಟಿ ಪೇಜ್

ಎಸ್‌ಬಿಎಸ್ ಫಾರ್ಮ್‌ಹೌಸ್ ಮಂಗಳೂರು – ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗಾಗಿ ಒಂದು ನೆಮ್ಮದಿಯ ತಾಣ

ನಿಮ್ಮ ಪ್ರೀತಿಪಾತ್ರರೊಂದಿಗೆ ಶಾಂತತೆಯಿಂದ ಸಮಯ ಕಳೆಯಲು ತಕ್ಕ ಸ್ಥಳವನ್ನು ಹುಡುಕುತ್ತಿದ್ದೀರಾ? ಮಂಗಳೂರಿನ ಕಿನ್ನಿಗೋಳಿ ಬಳಿ ಇರುವ ಎಸ್‌ಬಿಎಸ್ಫಾರ್ಮ್‌ಹೌಸ್ (Sugandhi Bhoja Shetty Farm House ) ನಿಮಗೆ ಸರಿಯಾದ ಆಯ್ಕೆ. ಇದು ನಗರದ ಜೀವನದ ಜಂಜಾಟದಿಂದ ದೂರವಿದ್ದು, ನಿಸರ್ಗದ ಸೌಂದರ್ಯವನ್ನು ಅನುಭವಿಸಲು ಮತ್ತು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಅಮೂಲ್ಯ ಕ್ಷಣಗಳನ್ನು ರಚಿಸಲು ಶಾಂತವಾದ ಪರಿಸರವನ್ನು ಹೊಂದಿದೆ. ನಿಸರ್ಗದ ಸೌಂದರ್ಯದಲ್ಲಿ ವಿಶ್ರಾಂತಿ ಎಸ್‌ಬಿಎಸ್ ಫಾರ್ಮ್‌ಹೌಸ್ ತೆಂಗಿನ ತೋಟ , ಎತ್ತರದ ಮರಗಳು ಮತ್ತು ತಾಜಾ ಗಾಳಿಯಿಂದ ಆವರಿತವಾಗಿದೆ. ಇಲ್ಲಿ ನೀವು ದಿನನಿತ್ಯದ ಒತ್ತಡ ಮತ್ತು ಗದ್ದಲವನ್ನು ಮರೆತು, ನಿಜವಾದ ವಿಶ್ರಾಂತಿಯ ಅನುಭವ ಪಡೆಯಬಹುದು. ಮರಗಳ ನೆರಳಿನಲ್ಲಿ ಕುಳಿತುಕೊಳ್ಳುವುದು ಅಥವಾ ಹುಲ್ಲಿನ ಮೇಲೆ ನಡೆಯುವುದು—ಇದಕ್ಕೆಲ್ಲ ನಿಸರ್ಗದ ಶಾಂತಿಯೇ ಸಾಥಿ. ಇದು ಶಾಂತವಾದ ಸ್ಥಳವಾದರೂ, ತುಂಬಾ ಸುಲಭವಾಗಿ ತಲುಪಬಹುದಾಗಿದೆ. ಕಿನ್ನಿಗೋಳಿ, ಮುಲ್ಕಿ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಜ್ಪೆ) ಇವೆಲ್ಲದರ ಹತ್ತಿರವಿರುವ ಈ ಸ್ಥಳ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸಹ ಸುಂದರವಾದ ತಾಣವಾಗಿದೆ. ಮೋಜು ಮತ್ತು ಆಚರಣೆಗಳಿಗೆ ( Event ) ಸೂಕ್ತ ಸ್ಥಳ ನೀವು ಹುಟ್ಟುಹಬ್ಬದ ಪಾರ್ಟಿ, ವಾರಾಂತ್ಯದ ಗೆಟ್-ಟುಗೆದರ್ ಅಥವಾ ಸ್ನೇಹಿತರೊಂದಿಗೆ ಮೋಜಿನ ಸಮಯವನ್ನು ಆಯೋಜಿಸುತ್ತಿದ್ದರೆ, ಅದನ್ನು ಮಾಡಲು ಎಸ್‌ಬಿಎಸ್ ಫಾರ್ಮ್‌ಹೌಸ್ ಸೂಕ್ತ ಸ್ಥಳವಾಗಿದೆ.  ನೀವು ಆನಂದಿಸಬಹುದಾದದ್ದು ಇಲ್ಲಿದೆ: ಇಲ್ಲಿ ಯಾವುದೇ ಅಡಚಣೆಗಳಿಲ್ಲದೆ ಮೋಜು, ನಿಸರ್ಗ ಮತ್ತು ನೆಮ್ಮದಿಯನ್ನು ಸಂಪೂರ್ಣವಾಗಿ ಆನಂದಿಸಬಹುದು. ವಾರಾಂತ್ಯದವಾಸ್ತವ್ಯಕ್ಕಾಗಿಒಳ್ಳೆಯಸ್ಥಳ ಎಸ್‌ಬಿಎಸ್ ಫಾರ್ಮ್‌ಹೌಸ್ ಒಂದು ದಿನದ ಭೇಟಿಗೆ ಮಾತ್ರವಲ್ಲ, ವಾರಾಂತ್ಯವನ್ನು ಚೆನ್ನಾಗಿ ಕಳೆಯಲು ಸಹ ಉತ್ತಮ ಸ್ಥಳವಾಗಿದೆ.  ನೀವು ಶಾಂತಿಯುತ ವಾತಾವರಣದಲ್ಲಿ ವಿಶ್ರಾಂತಿ ಪಡೆಯಬಹುದು, ತಾಜಾ ಗಾಳಿಯನ್ನು ಆನಂದಿಸಬಹುದು ಮತ್ತು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಬಹುದು. ವಿಶೇಷವಾಗಿ ನೀವು ಹೊರಾಂಗಣದಲ್ಲಿ ಆಡಲು ಇಷ್ಟಪಡುವ ಮಕ್ಕಳನ್ನು ಹೊಂದಿದ್ದರೆ, ವಿರಾಮ ತೆಗೆದುಕೊಳ್ಳಲು ಇದು ಪರಿಪೂರ್ಣ ಸ್ಥಳವಾಗಿದೆ. ಸಣ್ಣಮದುವೆ ಸಮಾರಂಭಗಳಿಗೆಸುಂದರತಾಣ ನೀವು ಸಣ್ಣ ಮದುವೆ ಸಮಾರಂಭ, ನಿಶ್ಚಿತಾರ್ಥ ಅಥವಾ ಪೂರ್ವ-ವಿವಾಹ ಫೋಟೋಶೂಟ್ ಅನ್ನು ಯೋಜಿಸುತ್ತಿದ್ದರೆ, ಎಸ್‌ಬಿಎಸ್ ಫಾರ್ಮ್‌ಹೌಸ್ ಒಂದು ಸುಂದರವಾದ ಆಯ್ಕೆಯಾಗಿದೆ. ಫಾರ್ಮ್‌ನ ಹಸಿರು ಪರಿಸರ ಮತ್ತು ಶಾಂತ ವಾತಾವರಣವು ನಿಮ್ಮ ಹತ್ತಿರದ ಪ್ರೀತಿಪಾತ್ರರ ಜೊತೆಗೆ ಸರಳ ಮತ್ತು ಸುಂದರವಾದ ಆಚರಣೆಗೆ ಉತ್ತಮ ಸ್ಥಳವಾಗಿದೆ. ಬನ್ನಿ, ಅನುಭವಿಸಿ – ಎಸ್‌ಬಿಎಸ್ಫಾರ್ಮ್‌ಹೌಸ್ ಸಣ್ಣ ಭೇಟಿ, ವಾರಾಂತ್ಯದ ವಾಸ್ತವ್ಯ ಅಥವಾ ಸಣ್ಣ ಆಚರಣೆ – ಯಾವ ಕಾರಣಕ್ಕೂ ಇರಲಿ, ಎಸ್‌ಬಿಎಸ್ ಫಾರ್ಮ್‌ಹೌಸ್ ನಿಮಗೆ ಸೂಕ್ತವಾದ ತಾಣವಾಗಿದೆ. ಇದು ಪ್ರಕೃತಿ, ಸೌಕರ್ಯ ಮತ್ತು ಸಂತೋಷವನ್ನು ಒಟ್ಟಿಗೆ ಸೇರಿಸುವ ಸ್ಥಳವಾಗಿದೆ. ಸಂಪರ್ಕ ವಿವರಗಳು ವೆಬ್‌ಸೈಟ್: www.sbsfarmhousemangalore.com ಸ್ಥಳ:    ಕಟೀಲು ದೇವಸ್ಥಾನದ ಹತ್ತಿರ    ಕಲ್ಲಕುಮೇರ್, ಕೊಂಡೆಮೂಲ ಗ್ರಾಮ    ಕಿನ್ನಿಗೋಳಿ, ಕಟೀಲು    ಮಂಗಳೂರು-574148 Location Map: https://g.co/kgs/RTgjmnW ಮೊಬೈಲ್:    +91 63606 05001    +91 63606 15001

ಪ್ರಾದೇಶಿಕ ವಾರ್ತೆಗಳು

ಎ. 25: ಮಿಲಾಗ್ರಿಸ್‌ ಚರ್ಚ್ ನಲ್ಲಿ ಪೋಪ್‌ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕ್ಯಾಥೊಲಿಕ್‌ ಧರ್ಮ ಸಭೆಯ ಪರಮೋಚ್ಛ ಗುರು ಪೋಪ್‌ ಫ್ರಾನ್ಸಿಸ್‌ ಅವರು ಎಪ್ರಿಲ್‌ 21 ರಂದು ನಿಧನ ಹೊಂದಿದ್ದು, ಮಂಗಳೂರು ಧರ್ಮ ಪ್ರಾಂತ್ಯದ ವತಿಯಿಂದ ಪೋಪ್‌ ಅವರ ಆತ್ಮಕ್ಕೆ ಚಿರ ಶಾಂತಿ ಕೋರಲು ಎಪ್ರಿಲ್ 25 ರಂದು ಶುಕ್ರವಾರ ಮಂಗಳೂರಿನ ಮಿಲಾಗ್ರಿಸ್‌ ಚರ್ಚ್ ನಲ್ಲಿ ಸಂಜೆ 5 ಗಂಟೆಗೆ ಬಲಿ ಪೂಜೆಯನ್ನು ಏರ್ಪಡಿಸಲಾಗಿದೆ. ಬಲಿ ಪೂಜೆಯ ಬಳಿಕ 6 ಗಂಟೆಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಧರ್ಮ ಪ್ರಾಂತ್ಯದ ಬಿಷಪ್‌ ಅತಿ ವಂದನೀಯ ಡಾ. ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

“ಧರ್ಮ ಚಾವಡಿ”ತುಳು ಚಿತ್ರದ ಟೀಸರ್ ಬಿಡುಗಡೆ. ಜುಲೈ 11ಕ್ಕೆ ಬಿಡುಗಡೆ

ಮಂಗಳೂರು: “ಧರ್ಮ ದೈವ” ತುಳು ಚಿತ್ರದ ನಿರ್ದೇಶಕರ ಎರಡನೇ ಚಿತ್ರ “ಧರ್ಮ ಚಾವಡಿ” ತುಳು ಚಿತ್ರದ ಟೀಸರ್ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿದ್ದು ಸಿನಿಮಾ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಸಾಕಷ್ಟು ಜನರು ಇದು ಧರ್ಮ ದೈವದ ಮುಂದುವರೆದ ಭಾಗ ಎಂದು ಭಾವಿಸಿದ್ದರು, ಆದರೆ ಟೀಸರ್ ಬೇರೆಯೇ ರೀತಿಯಲ್ಲಿದ್ದು ಬಹಳಷ್ಟು ಕುತೂಹಲವನ್ನು ಹುಟ್ಟಿಹಾಕಿದೆ.ಎಂ.ರ್ .ಟಿ ಯುಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆ ಗೊಂಡಿದೆ.ಟೀಸರ್ ಬಿಡುಗಡೆ ಸಮಾರಂಭದಲ್ಲಿ ತುಳು ಸಿನಿಮಾ ರಂಗದ ಗಣ್ಯರು ಭಾಗವಹಿಸಿದ್ದರು. ಟೀಸರ್ ಬಗ್ಗೆ ಎಲ್ಲರು ಕುತೂಹಲ ವ್ಯಕ್ತಪಡಿಸಿದ್ದರು. ನಿರ್ದೇಶನ, ಛಾಯಾಗ್ರಹಣ, ಸಂಕಲನ ಹಾಗೂ ಹಿನ್ನೆಲೆ ಸಂಗೀತ, ಕಲರ್ ಗ್ರೇಡಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ ನಡೆದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ನಿರ್ಮಾಪಕ, ನಿರ್ದೇಶಕರಾದ ಪ್ರಕಾಶ್ ಪಾಂಡೇಶ್ವರ ಉದ್ಘಾಟನೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಟೀಸರ್ ಬಿಡುಗಡೆಯನ್ನು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಡೆಸಿಕೊಟ್ಟು ಧರ್ಮ ಚಾವಡಿ ನಿರೀಕ್ಷೆ ಹೆಚ್ಚಿಸಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉದ್ಯಮಿ, ಚಲನ ಚಿತ್ರ ನಿರ್ಮಾಪಕ ಅಸ್ತ್ರ ಗ್ರೂಪ್ ನ ಲಂಚು ಲಾಲ್, ಉದ್ಯಮಿ ರಾಧಾಕೃಷ್ಣ ರೈ ಬುಡಿಯಾರ್, ನಿರ್ದೇಶಕ ತ್ರಿಶೂಲ್ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ, ಅಕ್ಷಯ ಕಾಲೇಜ್ ನ ಜಯಂತ ನಡುಬೈಲು, ನಿರ್ಮಾಪಕ ಪ್ರತೀಕ್ ಪೂಜಾರಿ, ಎಸ್ ಆರ್ ಎಸ್ ಮಸಾಲ ದ ಮಾಲೀಕರಾದ ಶೈಲೆಂದ್ರ ಎಸ್ ಸುವರ್ಣ, ಬಾಲಕೃಷ್ಣ ಸಾಲ್ಯಾನ್ ನಡುಬೈಲ್, ಧರ್ಮ ಚಾವಡಿ ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್ ನಡುಬೈಲು, ಮಾಜಿ ಯಕ್ಷಗಾನ ಅಕಾಡೆಮಿಯ ಸದಸ್ಯ ಭಾಸ್ಕರ್ ರೈ ಕುಕ್ಕುವಳ್ಳಿ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಯುವ ನಿರ್ದೇಶಕ ಹರ್ಷಿತ್ ಸೋಮೇಶ್ವರ, ಚಿತ್ರದ ಸಹ ನಿರ್ಮಾಪಕ ರವಿ ಸ್ನೇಹಿತ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಟ ರಮೇಶ್ ರೈ ಕುಕ್ಕುವಳ್ಳಿ ನೆರವೇರಿಸಿದರು. ಧರ್ಮ ಚಾವಡಿ ಚಿತ್ರ ಜುಲೈ 11ರಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಗಲಿದೆ.

ಪ್ರಾದೇಶಿಕ ವಾರ್ತೆಗಳು

ಎ.22 ಮತ್ತು 23 ರಂದು ನೆಲ್ಲಿಗುಡ್ಡೆ ಶ್ರೀರಕ್ತೇಶ್ವರಿ ದೈವಸ್ಥಾನದಲ್ಲಿರಕ್ತೇಶ್ವರಿ, ಪಂಜುರ್ಲಿ ಧರ್ಮ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವ.

ಮಂಗಳೂರು,: ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿರುವ ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ರಕ್ತೇಶ್ವರಿ, ಪಂಜುರ್ಲಿ, ಧರ್ಮ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವ ಎಪ್ರಿಲ್ 22 ಹಾಗೂ 23 ರಂದು ನಡೆಯಲಿದೆ.ಶ್ರೀಕಾರಿಂಜೇಶ್ವರ ದೇವಸ್ಥಾನ ವಗ್ಗ ಬಳಿಯಲ್ಲಿ ಪ್ರಾಚೀನ ಕಾಲದಿಂದ‌ ಆರಾಧಿಸಿಕೊಂಡು ಬರುತ್ತಿರುವ ನೆಲ್ಲಿಗುಡ್ಡೆ ಶ್ರೀ ರಕ್ತೇಶ್ವರಿ ದೈವಸ್ಥಾನದ ಜೀರ್ಣೋದ್ಧಾರ ಪೂರ್ಣಗೊಂಡಿದ್ದು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ ಎಂದು ಶ್ರೀ ರಕ್ತೇಶ್ವರಿ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ.ಎ.22 ಮಂಗಳವಾರ ಸಂಜೆ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಬಲಿ ಪ್ರಧಾನ, ದೈವಾಲಯದ ಶುಚೀಕರಣ ಕ್ರಿಯೆ ನಡೆಯಲಿದೆ. ಎ.23ರಂದು ಬೆಳಗ್ಗೆ 8.45ಕ್ಕೆ ಮಿಥುನ ಲಗ್ನ ಮುಹೂರ್ತದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ, ಸಾನಿಧ್ಯ ಹವನ, ಪ್ರತಿಷ್ಠಾಹ ವನ, ಬ್ರಹ್ಮ ಕಲಶ ಅಭಿಷೇಚನ, ಪ್ರಸನ್ನ ಪೂಜೆ, ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆಶ್ರೀ ರಾಕೇಶ್ವರಿ ದೈವಸ್ಥಾನದ ಕುರಿತು:ಅನಾದಿಕಾಲದಿಂದಲೂ ಈ ಮಣ್ಣಿನಲ್ಲಿ ನೆಲೆ ನಿಂತ ರಕ್ತೇಶ್ವರಿ ದೇವಿ, ದುರ್ಗಾ ಪರಮೇಶ್ವರಿ, ಸನಾತನ ಹಿಂದೂ ದೇವಾಲಯಗಳಲ್ಲಿ ಪೂಜಿಸಲ್ಪಡುವ ಬ್ರಹ್ಮಾಂಡದ ದೈವಿಕ ಮಾತೃ ಶಕ್ತಿ ದೇವತೆ.ಅನಾದಿ ಕಾಲದಿಂದಲೂ ಕಾರಿಂಜೇಶ್ವರನ ಸಾನಿಧ್ಯಕ್ಕೆ ಸೇರಿದ ನೆಲ್ಲಿಗುಡ್ಡೆ ಪರಿಸರದ ಮಣ್ಣಿನಲ್ಲಿ ನೆಲೆ ನಿಂತ ರಕ್ತೇಶ್ವರಿ ದೇವಿ, ಈ ಶಕ್ತಿದೇವತೆ ಯನ್ನು ನೆಲ್ಲಿಗುಡ್ಡೆ ಪರಿಸರದಲ್ಲಿ ಆರಾಧನೆ ಮಾಡಿಕೊಂಡು ಬಂದ ಐತಿಹ್ಯವಿದೆ. ಆದರೆ ಕಾಲಾಂತರದಲ್ಲಿ ಈ ಆರಾಧನೆ ನಡೆಯಬೇಕಾದ ಪರ್ವ ಕಾಲದಲ್ಲಿ ನಡೆಯದೆ ಇರುವುದರಿಂದ ಕೆಲವೊಂದು ದೋಷಗಳು ಪರಿಸರದಲ್ಲಿ ಕಂಡು ಬಂದವು. ಈ ಬಗ್ಗೆ ಪ್ರಶ್ನೆ ಯಲ್ಲಿ ನೆಲ್ಲಿಗುಡ್ಡೆಯಲ್ಲಿ ಈಗ ಇರುವಷ್ಟೇ ದೊಡ್ಡದಾದ ರಕ್ತೇಶ್ವರಿಯ ಹೊಸ ಗುಡಿಯನ್ನು ನಿರ್ಮಿಸಬೇಕು. ಹೊಸದಾದ ಬಿಂಬ ಪ್ರತಿಷ್ಠಾಪನೆಯಾಗಬೇಕು.ದೇವಿಯ ನಿರಂತರ ಉಪಾಸನೆ, ಪ್ರಾರ್ಥನೆಯ ಮೂಲಕ ರಕ್ತೇಶ್ವರಿ ಗುಡಿಯ ಜೀರ್ಣೋದ್ಧಾರ ನಡೆಯಬೇಕು. ಪ್ರತಿ ಸಂಕ್ರಮಣದಂದು ಪೂಜೆ ನಡೆಯಬೇಕು ಎಂದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಶ್ರೀಕಾರಿಂಜೇಶ್ವರನ ಅನುಗ್ರಹ ಬೇಡಿಕೊಂಡು ಶಕ್ತಿ ದೇವತೆ ರಕ್ತೇಶ್ವರಿಯ ಜೀರ್ಣೋದ್ದಾರ, ಬಿಂಬ ಪ್ರತಿಷ್ಠಾಪನೆ ಸೇರಿದಂತೆ ಕಾಲ ಕಾಲಕ್ಕೆ ದೈವಿಕ ಸಂಸ್ಕಾರವನ್ನು ನಡೆಸಿ ಕೊಂಡು ಬರಲು ನಿರ್ಧರಿಸಿ ಜೀರ್ಣೋದ್ಧಾರ ಕಾರ್ಯ ನೆರವೇರಿಸಿ ಇದೀಗಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದೆ ಎಂದು ಶ್ರೀನಿವಾಸ ನಾಯಕ್ ಇಂದಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು,ಎ.20: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ , ಶ್ರೀ ಶಾರದಾ ಪೂಜಾ ಸಮಿತಿ, ಮಂಗಳಾ ಫ್ರೆಂಡ್ಸ್ ಸರ್ಕಲ್ ಊರ್ವಸ್ಟೋರ್ ಹಾಗೂ ಎ ಜೆ ಆಸ್ಪತ್ರೆ ಯ ಜಂಟಿ ಆಶ್ರಯದಲ್ಲಿ ಊರ್ವ ಸ್ಟೋರ್ ನ ಮಾನಸ ಮಂಟಪದ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ರವಿವಾರ ನಡೆಯಿತು.ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಅಧ್ಯಕ್ಷ ರೋ. ಬ್ರಾಯನ್ ಪಿಂಟೋ , ರೋಟರಿ ಜಿಲ್ಲೆ 3181 ಅಸಿಸ್ಟೆಂಟ್ ಗವರ್ನರ್ ಕೆ. ಯಂ .ಹೆಗ್ಡೆ , ಎ ಜೆ ದಂತ ಮಹಾ ವಿದ್ಯಾಲಯದ ಸಮುದಾಯ ಸೇವಾ ವಿಭಾಗದ ಮುಖ್ಯಸ್ಥೆ ಡಾ .ವಿಜಯ ಹೆಗ್ಡೆ ಹಾಗೂ ರೋಟರಿ ಪದಾಧಿಕಾರಿಗಳಾದ ರವಿ ಜಲನ್, ಸಾಯಿಬಾಬಾ ರಾವ್, ರಾಜೇಶ್ ಶೆಟ್ಟಿ,ಡೆರಿಲ್ ,ಆರ್ ಒ ಟಿ ಮಂಗಳ ಸ್ಫೋರ್ಟ್ಸ್ ಸರ್ಕಲ್ ಊರ್ವ ಸ್ಟೋರ್ ನ ಅಧ್ಯಕ್ಷ. ರಮೇಶ್ ಶೆಟ್ಟಿ ಮಾಜಿ ರೋಟರಿ ಗವರ್ನರ್ ದೇವ ದಾಸ್ ರೈ, ಜಗನ್ನಾಥ್ ಶೆಟ್ಟಿ, ಜಾಕ್ಸನ್ ಸಲ್ದಾನಾ,ಡೆರಿಲ್ ಸ್ಟೀವನ್ ಡಿಸೋಜ, ಆ್ಯನ್ಸ್ ಪೂರ್ಣಿಮಾ ರೈ, ಪ್ರಮೀಳಾ ಹೆಗ್ಡೆ, ಗೀತಾ ಬಿ ರೈ ಎ ಜೆ ಆಸ್ಪತ್ರೆ ಯ ವೈದ್ಯರು ಗಳು ಉಪಸ್ಥಿತರಿದ್ದರು. ರೋ ರಾಜ್ ಗೋಪಾಲ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಕೆ ಯಂ ಹೆಗ್ಡೆ ರೋಟರಿ ಕ್ಲಬ್ ಹಮ್ಮಿ ಕೊಂಡಿರುವ ಸಾಮಾಜಿಕ ಕಾರ್ಯ ಕ್ರಮಗಳ ಮಾಹಿತಿ ನೀಡಿದರು. ಎ ಜೆ ದಂತ ಮಹಾ ವಿದ್ಯಾಲಯದ ಕ. ಕಮ್ಯುನಿಟಿ ದಂತವೈದ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಹೆಗ್ಡೆ ಶಿಬಿರದ ಮಹತ್ವವನ್ನು ತಿಳಿಸಿದರು.ರೋ ಭಾಸ್ಕರ್ ರೈ ಕಟ್ಟ ನಿರೂಪಿಸಿದರು.ಶಿಬಿರದಲ್ಲಿ ಹೃದಯ ತಪಾಸಣೆ, ಕಣ್ಣು ತಪಾಸಣೆ , ಅಗತ್ಯ ವಿದ್ದವರಿ ಗೆ ಕನ್ನಡಕ ವಿತರಣೆ, ರಕ್ತ ದೊತ್ತಡ ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಯನ್ನು ನೀಡ ಲಾ ಯಿತು. ಶಿಬಿರದಲ್ಲಿ 124 ಫಲಾನುಭವಿಗಳಿಗೆ ಉಚಿತ ತಪಾಸಣೆ ನಡೆಸಲಾಯಿತು.

Scroll to Top