ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಬೆಳ್ತಂಗಡಿ ತಾಲೂಕಿನ ಬಜಿರೆ,ನಿಟ್ಟಿಡೆ ಮತ್ತುಪಡ್ಡಂದಡ್ಕ ಕ್ಲಸ್ಟರ್ ಗಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

ಬೆಳ್ತಂಗಡಿ ತಾಲೂಕಿನ ಬಜಿರೆ,ನಿಟ್ಟಿಡೆ ಮತ್ತುಪಡ್ಡಂದಡ್ಕ ಕ್ಲಸ್ಟರ್ ಗಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು20/8/2025 ರಂದು ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕರಿಮಣೇಲು ಇಲ್ಲಿ ಜರಗಿತು.ವೇಣೂರು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಕಾಶಿನಾಥ್ ಉದ್ಘಾಟಿಸಿದರು ಶ್ರೀ ಎಲ್ ಜೆ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಆರತಿ ,ನೋಡಲ್ ಅಧಿಕಾರಿಶ್ರೀಮತಿ ಪುಷ್ಪ,ಶಿಕ್ಷಕ ಸಂಘದ ಕೋಶಾಧಿಕಾರಿ ಶ್ರೀ ರಾಜೇಶ್ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಶ್ರೀಮತಿ ಮರ್ಸೆಲಿನ್ ಸ್ವಾಗತಿಸಿದರು ಸುಪ್ರೀತಾ ವಂದಿಸಿದರುಶಿಕ್ಷಕಿ ಮೀನಾ ಮೋನಿಸ್ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಡಾ.ಎಂ.ಮೋಹನ ಆಳ್ವರಿಗೆ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ’ ಅವಾರ್ಡ್. ‘ಸಾಮರಸ್ಯದ ಮನೋಭಾವನೆಯಿಂದ ಬದುಕಿಗೆ ಶಕ್ತಿ’-ಡಾ.ಎಂ.ಮೋಹನ ಆಳ್ವ

ಮಂಗಳೂರು: ಎಲ್ಲ ಜಾತಿ, ಮತ, ಧರ್ಮದವರನ್ನು ಗೌರವಿಸುವ ಸಾಮರಸ್ಯದ ಮನೋಭಾವನೆ ಬೆಳೆಸಿಕೊಂಡಿರುವುದೇ ಇಂದು ಬದುಕಿಗೆ ಶಕ್ತಿ ತುಂಬಿದೆ. ಉತ್ತಮ ಸಂಸ್ಕಾರದ ಜತೆಗೆ ಸಾಮರ್ಥ್ಯ ಅರಿತು ದುಡಿದ ಪರಿಣಾಮ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದು ಮೂಡುಬಿದಿರೆಯ ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್‌ನ ಚೇರ್ಮನ್ ಡಾ.ಎಂ.ಮೋಹನ ಆಳ್ವ ಹೇಳಿದರು.ನಗರದ ಎ.ಜೆ.ಗ್ರಾೃಂಡ್ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 29ನೇ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಮಿನೆಂಟ್ ಬಂಟ್ ಪರ್ಸನಾಲಿಟಿ ಅವಾರ್ಡ್ ಸ್ವೀಕರಿಸಿ ಅವರು ಮಾತನಾಡಿದರು.ಬಾಲ್ಯದಿಂದಲೇ ಕಲೆ ಮತ್ತು ಕ್ರೀಡೆಯಲ್ಲಿ ಆಸಕ್ತಿ ಹೊಂದಿದೆ. ಸಾಂಸ್ಕೃತಿಕ ಕ್ಷೇತ್ರ ಬದುಕಿಗೆ ಒಳ್ಳೆಯ ಮೌಲ್ಯಗಳನ್ನು ನೀಡಿದರೆ,ಕ್ರೀಡೆಯ ಮೇಲಿನ ಆಸಕ್ತಿ ಹೋರಾಟದ ಮನೋಭಾವನೆ ಬೆಳೆಸಿಕೊಳ್ಳಲು ಸಹಕಾರಿಯಾಯಿತು ಎಂದು ಡಾ.ಆಳ್ವ ಹೇಳಿದರು.ಮುಖ್ಯ ಅತಿಥಿಯಾಗಿದ್ದ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಡಾ.ಎಂ.ಶಾಂತಾರಾಮ ಶೆಟ್ಟಿ ಮಾತನಾಡಿ ‘ ಡಾ.ಎಂ.ಮೋಹನ ಆಳ್ವ ಅವರಸಾಧನೆ ಬಂಟ ಸಮಾಜಕ್ಕೆ ಪ್ರೇರಣಾ ಶಕ್ತಿಯಾಗಿದೆ’ ಎಂದರು.ಹಿರಿಯ ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಅವರಿಗೆ ದಿ.ಡಾ.ಡಿ.ಕೆ.ಚೌಟ ದತ್ತಿನಿಧಿ ಪ್ರಶಸ್ತಿ, ಕೃಷಿ ಕ್ಷೇತ್ರದ ಸಾಧನೆಗಾಗಿ ಇಂದಿರಾ ಶೆಟ್ಟಿ ಅವರಿಗೆ ದಿ.ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ 24ನೇ ರ‌್ಯಾಂಕ್ ಪಡೆದ ಸಿಎ ನಿಶ್ಚಲ್ ರೈ ಅವರಿಗೆ ಸಿಎ ವೈ.ಆರ್.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ಹಾಗೂ ಸಿಎ ರಕ್ಷಾ. ಆರ್.ಶೆಟ್ಟಿ ಅವರಿಗೆ ಸಿಎ ಗೋಪಾಲ್.ಬಿ.ಶೆಟ್ಟಿದತ್ತಿನಿಧಿ ಪ್ರಶಸ್ತಿ ವಿತರಿಸಲಾಯಿತು.ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ , ಉಪಾಧ್ಯಕ್ಷ ಕೆ.ಎಸ್.ಹೆಗ್ಡೆ, ಯೋಜನಾ ನಿರ್ದೇಶಕ ಡಾ.ಬಿ. ಸಂಜೀವ ರೈ, ಖಜಾಂಚಿ ಸಿಎ ಸುದೇಶ್ ಕುಮಾರ್ ರೈ , ಮೀನಾಕ್ಷಿ ಆಳ್ವ ಉಪಸ್ಥಿತರಿದ್ದರು. ಪಳ್ಳಿ ಕಿಶನ್ ಹೆಗ್ಡೆ , ಕೆ.ಎಂ.ಶೆಟ್ಟಿ ಮತ್ತು ಜ್ಯೋತಿ ಪ್ರಸಾದ್ ಹೆಗ್ಡೆ ಸನ್ಮಾನಿತರನ್ನು ಪರಿಚಯಿಸಿದರು. ಜೈರಾಜ್.ಬಿ.ರೈ ವಂದಿಸಿದರು. ಕಳ್ಳಿಗೆ ತಾರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಸಂತ ಮದರ್ ಥೆರೇಸಾ ವಿಚಾರ ಸಂಕಿರಣ

ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪೂರ್ಣ ಪ್ರಮಾಣದ ಸಭೆಯು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರ ಅಧ್ಯಕ್ಷತೆಯಲ್ಲಿ ಇಂದು ನಗರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.70ಕ್ಕೂ ಮಿಕ್ಕಿದ ಸದಸ್ಯರು ಸ್ವಯಂಸ್ಪೂರ್ತಿಯಿಂದ ಭಾಗವಹಿಸಿರುವುದು ಕಾರ್ಯಕ್ರಮದ ಹುಮ್ಮಸ್ಸನ್ನು ಹೆಚ್ಚಿಸಿದೆ. ಕಾರ್ಯಕ್ರಮದ ವರ್ಣರಂಜಿತ ಕರಪತ್ರವನ್ನು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟಾನಿ ಆಲ್ವಾರೀಸ್ ರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.ಸೆಪ್ಟೆಂಬರ್ 11ರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಹಲವರು ಸಭೆಯಲ್ಲಿ ಮಾತನಾಡುವ ಮೂಲಕ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಕೆಥೋಲಿಕ್ ಸಭಾದ ಅಧ್ಯಕ್ಷರಾದ ಸಂತೋಷ್ ಡಿಸೋಜ ಬಜಪೆ,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಾಯಕರಾದ ಲಕ್ಷ್ಮಣ್, ಯೆನಪೋಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜೀವನ್ ರಾಜ್ ಕುತ್ತಾರ್,ಸಂತ ಅಲೋಶಿಯಸ್ ಕಾಲೇಜ್ ನ ಪ್ರಾಧ್ಯಾಪಕರಾದ ಫ್ಲೋರಾ ಕ್ಯಾಸ್ಟಲಿನೋ, ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್,ಮಹಿಳಾ ಮುಖಂಡರಾದ ಸುಮತಿ ಎಸ್ ಹೆಗ್ಡೆ, ವೇದಿಕೆಯ ಪ್ರಮುಖರಾದ ಡೋಲ್ಫಿ ಡಿಸೋಜರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಮುಖರಾದ ಸ್ಟಾನಿ ಲೋಬೋ, ಡಾ ಕ್ರಷ್ಣಪ್ಪ ಕೊಂಚಾಡಿ, ಶೆಟ್ಟಿ, ಡಾ.ವಸಂತ ಕುಮಾರ್, ಕೆ ಕರಿಯ,ಎರಿಕ್ ಲೋಬೋ, ಫ್ಲೇವಿಕ್ರಾಸ್ತಾ ಅತ್ತಾವರ,ಮರ್ಲಿನ್ ರೇಗೋ,ಬಿ ಎನ್ ದೇವಾಡಿಗ, ಮಿಥುನ್ ರಾಜ್ ಕುತ್ತಾರ್, ಅಶೋಕನ್ ಬೋಳಾರ, ಸಂತೋಷ್ ಡಿಸೋಜ ಪಂಜಿಮೊಗರು, ಸಮರ್ಥ್ ಭಟ್, ಗ್ರೆಟ್ಟಾ ಟೀಚರ್,ಎಸ್ ಎಲ್ ಪಿಂಟೋ,ಆಲ್ವಿನ್ ಡಿಸೋಜ, ಅಸುಂತ ಡಿಸೋಜ, ವಿದ್ಯಾ ಶೆಣೈ, ಜೆ ಇಬ್ರಾಹಿಂ ಜೆಪ್ಪು,ಹೆಝಲ್ ಟೀಚರ್,ಕ್ವೀನಿ‌ ಪರ್ಸಿ ಆನಂದ್, ಪುರುಷೋತ್ತಮ ಪೂಜಾರಿ, ಫ್ಲೋರಿನ್ ಡಿಸೋಜ, ಅರುಣ್ ಡಿಸೋಜ ಶಕ್ತಿನಗರ, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು,ಟೋನಿ ಪಿಂಟೊ, ಚರಣ್ ಶೆಟ್ಟಿ, ನವೀನ್ ಕೊಂಚಾಡಿ, ಫೆಲಿಕ್ಸ್ ಡಿಸೋಜ, ರಾಕೇಶ್ ಕುಂದರ್,ಓಸ್ವಾಲ್ಡ್ ಪುರ್ತಾಡೋ,ಜೇಮ್ಸ್ ಪ್ರವೀಣ್, ಕಮಲಾಕ್ಷ ಜಲ್ಲಿಗುಡ್ಡ,ರವೀಂದ್ರ ವಾಮಂಜೂರು, ಕ್ರಿಸ್ಟನ್ ಮೆನೇಜಸ್,ಶೇಖರ್ ವಾಮಂಜೂರು,ನಿತಿನ್ ಬಂಗೇರ ಯೆಯ್ಯಾಡಿ,ತಯ್ಯುಬ್ ಬೆಂಗರೆ,ರೆಹಮಾನ್ ಖಾನ್ ಕುಂಜತ್ತಬೈಲ್,ಜ್ಯೋತಿ, ಮಹಮ್ಮದ್ ಆಯೂಬ್ ಷಾ, ನೀತಾ ಡಿಸೋಜ, ಶೈಲಜಾ ರಾಜೇಶ್,ಕ್ರಷ್ಣ ಇನ್ನಾ ಮುಂತಾದವರು ಹಾಜರಿದ್ದರು*

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ವಾರ್ಷಿಕ ಮಹಾ ಸಭೆ

ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ವಾರ್ಷಿಕ ಮಹಾ ಸಭೆ ಮತ್ತು ಹಿರಿಯ ನಾಗರಿಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿರೋಡು, ಮೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.ಮಂಗಳೂರಿನ ಹಿರಿಯ ನ್ಯಾಯವಾದಿ, ಸರಕಾರಿ ಅಭಿಯೋಜಕರಾದ ಉದಯಾನಂದ ಎ.ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಒಂದು ಕಾಲದಲ್ಲಿ ಅವಿಭಕ್ತ ಕುಟುಂಬವನ್ನು ಹೊಂದಿ ಹಿರಿಯರಿಂದಲೇ ಮಾರ್ಗದರ್ಶನ ಪಡೆಯುತ್ತಿದ್ದ ದೇಶದಲ್ಲಿ ಇಂದು ಹಿರಿಯ ನಾಗರೀಕರ ಹಕ್ಕು ರಕ್ಷಣಾ ಕಾಯ್ದೆ ಜಾರಿಗೆ ಬಂದಿರುವುದು ನಮ್ಮ ದುರ್ದೈವ ಎಂದರು.ಹಿರಿಯರು,ಕಿರಿಯರು ಜೊತೆ ಸೇರಿದಾಗ ಸಮಾಜ ಬಾಂಧವ್ಯ ಬೆಳೆಯುವುದರೊಂದಿಗೆ ಅಭಿವೃದ್ಧಿ ಸಾಧ್ಯ ಎಂದ ಅವರು ಕಿರಿಯರು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು.ಅತಿಥಿಯಾಗಿದ್ದ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಅಧ್ಯಕ್ಷರಾದ ಭಾಸ್ಕರ ಪೆರುವಾಯಿ ಮಾತನಾಡಿ,ಭವಿಷ್ಯದಲ್ಲಿ ಸಂಘದ ಕಟ್ಟಡ ನಿರ್ಮಾಣ ಅಥವಾ ಯಾವುದೇ ಜನಪಯೋಗಿ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ವಸ್ತ್ರೋದ್ಯಮಿ ರಮಾನಂದ ನಾರಾಯಣ ಬಂಗೇರ ನಾಸಿಕ್ ,ಉದ್ಯಮಿ ಮನೋಜ್ ಬಾಸಬೈಲು,ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ರಮೇಶ ಸಂಚಯಗಿರಿ,ಕರ್ನಾಟಕ ರಾಜ್ಯ ಕರಾವಳಿ ಕುಲಾಲರ ಯುವ ವೇದಿಕೆ ಅಧ್ಯಕ್ಷಸುಮಿತ್ ಸಾಲಿಯಾನ್ ವೇದಿಕೆಯಲ್ಲಿದ್ದರು‌.ಸಂಘದ ಅಧ್ಯಕ್ಷರಾದ ಸೋಮಯ್ಯ ಹನ್ನೆರಡೆಯವರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ಟಿ. ಶೇಷಪ್ಪ ಮಾಸ್ಟರ್ ಪ್ರಸ್ತಾವನೆಗೈದರು.72 ವರ್ಷ ತುಂಬಿದ ಸಂಘದ ಸದಸ್ಯರಾದ ಕೃಷ್ಣ ಶ್ಯಾಮ್ ಬಿ.ಸಿ.ರೋಡು, ಜನಾರ್ಧನ ಸಾಲಿಯಾನ್ ವೀರಕಂಭ, ಧರ್ಣಪ್ಪ ಮುಡಿಪು, ಜಿನ್ನಪ್ಪ ಮೂಲ್ಯ ವೀರಕಂಭ, ವಿಶ್ವನಾಥ ಸಾಲಿಯಾನ್ ಸೋರ್ನಾಡು, ನೀಲಪ್ಪ ಸಾಲಿಯಾನ್ ತುಂಬೆ, ಧೋಳ ಮೂಲ್ಯ ಪುಡಿಕಲಕೋಡಿ, ಅಣ್ಣಪ್ಪ ಮೂಲ್ಯ ಅಂಗರ ಗುಂಡಿ, ಭೋಜ ಸಾಲಿಯಾನ್ ಮೈರಾನ ಪಾದೆ, ಮೋಹನ ಸಾಲಿಯಾನ್ ಅರ್ಕಮ ಡಿ. ಚಂದಪ್ಪ ಮೂಲ್ಯ ಉಪ್ಪಿನಂಗಡಿ, ಕೃಷ್ಣಪ್ಪ ಕುಲಾಲ್ ಕುಪ್ಪಿಲ, ಶೇಷಪ್ಪ ಸಾಲಿಯಾನ್ ಆಮ್ಟಾಡಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಸದಸ್ಯರಾದ ದಿನಕರ ಉದ್ಯಾವರ, ರೋಕಿಂಣಿ, ಓಬಯ್ಯ ಮೂಲ್ಯ ಜತೆ. ಕಾರ್ಯದರ್ಶಿ ಶ್ರೀನಿವಾಸ ಅವರು ಸನ್ಮಾನ ಪತ್ರ ವಾಚಿಸಿದರು.ಇದೇ ವೇಳೆಆಗಲಿದ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ರಾಮಮೂಲ್ಯ ಮರ್ದೊಳಿ ಅಗಲಿದ ಸದಸ್ಯರ ಮಾಹಿತಿ ನೀಡಿದರು.ಈ ಸಂದರ್ಭ 2025-27ನೇ ಸಾಲಿಗೆ ಕಾರಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ದೇವದಾಸ್ ಮಾಸ್ಟರ್ ಕೊಡಾಣ್ ನಡೆಸಿದರು. ಶಾಂಭವಿ ಸೋಮಯ್ಯ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು.ಖಚಾಂಚಿ ಸೋಮಪ್ಪ ಬಂಗೇರ ಲೆಕ್ಕ ಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎಂ ವರದಿ ವಾಚಿಸಿ ಕೊನೆಯಲ್ಲಿ ವಂದಿಸಿದರು . ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.ಸದಸ್ಯರಾದ ವಿಠಲ ಮೂಲ್ಯ ಜಕ್ರಿಬೆಟ್ಟು, ಕೃಷ್ಣಪ್ಪ ಬಡ್ಡಕಟ್ಟೆ ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಆ.26ರಂದು ದೇವ್‌ದಾಸ್ ಕಾಪಿಕಾಡ್ ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಆ.26ರಂದು ಬೆಳಗ್ಗೆ 11.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ದೇವದಾಸ ಕಾಪಿಕಾಡ್ ಭಾಗವಹಿಸಿ ಸಂವಾದ ನಡೆಸಲಿದ್ದಾರೆ. ಶ್ರೀನಿವಾಸ ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಶ್ಮಿತಾ.ಎಸ್.ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅಂಚೆ ಅಪಘಾತ ವಿಮೆ ಉಪಯುಕ್ತ ಯೋಜನೆ: ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ಮಾಹಿತಿ

ಮಂಗಳೂರು : ಭಾರತೀಯ ಅಂಚೆ ಇಲಾಖೆಯ ಅಪಘಾತ ವಿಮಾ ಯೋಜನೆ ಅತ್ಯಂತ ಸರಳವಾದ ಹಾಗೂ ಜನಸಾಮಾನ್ಯರ ಕೈಗೆಟುಕುವ ಉಪಯುಕ್ತ ವಿಮಾ ಯೋಜನೆಯಾಗಿದೆ ಎಂದು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕ ಎಂ.ಸುಧಾಕರ ಮಲ್ಯ ತಿಳಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಅಂಚೆ ಇಲಾಖೆ ಸಹಭಾಗಿತ್ವದಲ್ಲಿ ಬುಧವಾರ ಪತ್ರಿಕಾಭವನದಲ್ಲಿ ನಡೆದ 10 ಲಕ್ಷ ರೂ. ಮೊತ್ತದ ಉಚಿತ ವಿಮಾ ಯೋಜನೆಯ ನೋಂದಣಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಅಂಚೆ ಇಲಾಖೆಯ ಈ ಅಭಿಯಾನಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿದೆ. ಕಳೆದ ಸಾಲಿನಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಮಂಗಳೂರು ವಿಭಾಗದಲ್ಲಿ 21 ಸಾವಿರ ಮಂದಿ ಅಪಘಾತ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.ಅಂಚೆ ಇಲಾಖೆಯ ಉಪ ಅಧೀಕ್ಷಕ ದಿನೇಶ್ ಮತ್ತು ಐಪಿಪಿಬಿ ಮ್ಯಾನೇಜರ್ ಸುಬ್ರಹ್ಮಣ್ಯ ಅವರು ಅಂಚೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು.ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್.ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ವಲಯ ಮಟ್ಟದ ಕಬಡ್ಡಿ ಪಂದ್ಯಾಟ

ಬೆಳ್ತಂಗಡಿ ತಾಲೂಕಿನ ಬಜಿರೆ,ನಿಟ್ಟಿಡೆ ಮತ್ತುಪಡ್ಡಂದಡ್ಕ ಕ್ಲಸ್ಟರ್ ಗಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು20/8/2025 ರಂದು ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕರಿಮಣೇಲು ಇಲ್ಲಿ ಜರಗಿತು.ವೇಣೂರು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಕಾಶಿನಾಥ್ ಉದ್ಘಾಟಿಸಿದರು ಶ್ರೀ ಎಲ್ ಜೆ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಆರತಿ ,ನೋಡಲ್ ಅಧಿಕಾರಿಶ್ರೀಮತಿ ಪುಷ್ಪ,ಶಿಕ್ಷಕ ಸಂಘದ ಕೋಶಾಧಿಕಾರಿ ಶ್ರೀ ರಾಜೇಶ್ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಶ್ರೀಮತಿ ಮರ್ಸೆಲಿನ್ ಸ್ವಾಗತಿಸಿದರು ಸುಪ್ರೀತಾ ವಂದಿಸಿದರುಶಿಕ್ಷಕಿ ಮೀನಾ ಮೋನಿಸ್ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಆ. 24: ಮೂಡುಬಿದಿರೆ ಜೈನ ಮಠದಲ್ಲಿ ಮಂದಾರರ ‘ಬೀರದ ಬೊಲ್ಪು’ ತುಳು ಕಾವ್ಯಯಾನ ಸುಗಿಪು -ದುನಿಪು

ಮಂಗಳೂರು: ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ತುಳುವ ಮಹಾಸಭೆ ಮೂಡುಬಿದಿರೆ, ಮಂದಾರ ಪ್ರತಿಷ್ಠಾನ ಮಂಗಳೂರು, ತುಳುಕೂಟ ಬೆದ್ರ ಇವರ ಸಂಯುಕ್ತ ಆಶ್ರಯದಲ್ಲಿ ‘ತುಳು ಕಾವ್ಯ ಯಾನ-28’ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ ವಿರಚಿತ ‘ಬೀರದ ಬೊಲ್ಪು’ ಶ್ರೀಕೃಷ್ಣನ ಬಾಲ ಲೀಲೆಯ ಕುರಿತ ‘ಸುಗಿಪು – ದುನಿಪು’ ವಾಚನ – ವ್ಯಾಖ್ಯಾನ ಕಾರ್ಯಕ್ರಮವನ್ನು ಅಗಸ್ಟ್ 24 ರಂದು ಸಂಜೆ 3 ಗಂಟೆಗೆ ಮೂಡಬಿದಿರೆಯ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನ ಶ್ರೀ ದಿಗಂಬರ ಜೈನ ಮಠದಲ್ಲಿ ಆಯೋಜಿಸಲಾಗಿದೆ ಎಂದು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ. ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಕಾವ್ಯದ ವ್ಯಾಖ್ಯಾನ ನೀಡಲಿದ್ದಾರೆ. ಯುವ ಭಾಗವತರಾದ ಪ್ರಶಾಂತ ರೈ ಪುತ್ತೂರು ಮತ್ತು ರಚನಾ ಚಿತ್ಕಲ್ ವಾಚನ ಮಾಡುವರು. ಯಕ್ಷದೇವ ಮಿತ್ರ ಮಂಡಳಿಯ ಎಂ. ದೇವಾನಂದ ಭಟ್ ಬೆಳುವಾಯಿ ಮದ್ದಳೆ ನುಡಿಸುವರು.ಮಂದಾರ ಪ್ರತಿಷ್ಠಾನದ ಡಾ. ರಾಜೇಶ್ ಭಟ್ ಸಹಕಾರದೊಂದಿಗೆ ತುಳುವರ್ಲ್ಡ್ ಫೌಂಡೇಶನ್ ನ ಡಾ. ರಾಜೇಶ ಆಳ್ವ ಅವರ ಸಂಯೋಜನೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ದೀಪ ಬೆಳಗಿಸಿ ಕಾವ್ಯಯಾನಕ್ಕೆ ಚಾಲನೆ ನೀಡಲಿದ್ದಾರೆ.ಬೆದ್ರ ತುಳುಕೂಟದ ಧನಕೀರ್ತಿ ಬಲಿಪ, ಚಂದ್ರಹಾಸ ದೇವಾಡಿಗ, ಮಂದಾರರ ಪುತ್ರಿ ಶಾರದಾಮಣಿ, ತುಳುವ ಮಹಾಸಭೆ ಮೂಡುಬಿದಿರೆ ಸಂಚಾಲಕಿ ಜಯಂತಿ ಎಸ್. ಬಂಗೇರ ಉಪಸ್ಥಿತರಿರುವರು ಎಂದು ತುಳುವ ಮಹಾಸಭೆ ಮುಖ್ಯ ಸಂಚಾಲಕ ಪ್ರಮೋದ್ ಸಪ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ಸಂಘ ಕತಾರ್ ವತಿಯಿಂದ ಬೆಂಗಳೂರಿನಲ್ಲಿ ಸಂಸ್ಥಾಪಕರು ಮತ್ತು ಅಶಕ್ತರಿಗೆ ನೆರವಿನೊಂದಿಗೆ, ಸಮಾಜಸೇವಕರಿಗೆ ಗೌರವ ಸಲ್ಲಿಕೆ

ಮಂಗಳೂರು: ಕರ್ನಾಟಕ ಸಂಘ ಕತಾರ್ (ಕೆಎಸ್‌ಕ್ಯೂ) 2025 ರ ಆಗಸ್ಟ್ 10 ರಂದು ಬೆಂಗಳೂರಿನ ಬಸವೇಶ್ವರ ನಗರದ ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿಯಲ್ಲಿ “ಸಂಸ್ಥಾಪಕರಿಗೆ, ರಜತಪಥದ ಹರಿಕಾರರಿಗೆ ಅಭಿವಂದನಾ “ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿ, ತನ್ನ ಬೆಳ್ಳಿಹಬ್ಬದ ಸಂಭ್ರಮವನ್ನು ತವರು ನೆಲಕ್ಕೆ ತರುವುದರ ಮೂಲಕ ರಜತ ವರ್ಷಕ್ಕೆ ಇನ್ನಷ್ಟು ಮೆರುಗನ್ನು ನೀಡಿದೆ.ಕಾರ್ಯಕ್ರಮದ ಆರಂಭದಲ್ಲಿ, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಅವರು “ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು” ಎಂಬ ಡಿವಿಜಿ ಅವರ ಕಗ್ಗದ ಸಾಲುಗಳನ್ನು ಉಲ್ಲೇಖಿಸಿ, ಕೃತಜ್ಞತೆಯ ಮನೋಭಾವವನ್ನು ಮೂಡಿಸಿದರು. ಕಾರ್ಯಕ್ರಮ ನಿರೂಪಕರಾಗಿದ್ದ ಮಾಜಿ ಅಧ್ಯಕ್ಷ ಎಚ್.ಕೆ. ಮಧು ಅವರು, ಈ ಮಹತ್ವದ ಮೈಲಿಗಲ್ಲನ್ನು ಅಧ್ಯಕ್ಷ ರವಿ ಶೆಟ್ಟಿಯವರ ನಾಯಕತ್ವ ಮತ್ತು ಅವರ ಉತ್ಸಾಹಿ ತಂಡಕ್ಕೆ ಸಮರ್ಪಿಸಿದರು. ಅವರು ಡಿವಿಜಿ ಅವರ ಮತ್ತೊಂದು ಕಗ್ಗದ “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು” ಎಂಬ ಸಾಲನ್ನು ಉಲ್ಲೇಖಿಸಿ, ಸಂಪ್ರದಾಯ ಮತ್ತು ಹೊಸ ಶಕ್ತಿಯ ಮಹತ್ವವನ್ನು ಸಾರಿದರು. ಉದ್ಘಾಟನೆ ಮತ್ತು ಪ್ರಥಮ ಹಂತ:ಕಾರ್ಯಕ್ರಮಕ್ಕೆ ಪದ್ಮಶ್ರೀ ಡಾ. ಕೆ.ಎಸ್. ರಾಜಣ್ಣ, ಅಧ್ಯಕ್ಷ ರವಿ ಶೆಟ್ಟಿ, ಸಲಹಾ ಸಮಿತಿಯ ಅಧ್ಯಕ್ಷ ಮಹೇಶ್ ಗೌಡ, ಮಾಜಿ ಅಧ್ಯಕ್ಷರುಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ದೀಪ ಬೆಳಗಿಸಿ ಚಾಲನೆ ನೀಡಿದರು. ತಮ್ಮ ಸ್ವಾಗತ ಭಾಷಣದಲ್ಲಿ ರವಿ ಶೆಟ್ಟಿ ಅವರು, ಅನುಭವಿ ಮನಸ್ಸುಗಳು ಮತ್ತು ಯುವ ಪ್ರತಿಭೆಗಳು ನಿಸ್ವಾರ್ಥವಾಗಿ ಕೆಲಸ ಮಾಡಿದಾಗ ಸಂಘದ ಪ್ರತಿಷ್ಠೆಯು ಹೆಚ್ಚುತ್ತದೆ ಎಂದು ಹೇಳಿ, ಕೆಎಸ್‌ಕ್ಯೂನ 25 ವರ್ಷಗಳ ಪಯಣದಲ್ಲಿ ಅಮೂಲ್ಯ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.ಪ್ರಥಮ ಹಂತದಲ್ಲಿ, ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮವನ್ನು ಕೆಎಸ್‌ಕ್ಯೂ ಕೋಶಾಧಿಕಾರಿ ಪ್ರದೀಪ್ ದಿಲೀಪ್ ಅವರು ನಿರ್ವಹಿಸಿದರು. ಸದಸ್ಯರು ಮತ್ತು ಹಿತೈಷಿಗಳಿಂದ ಸಂಗ್ರಹಿಸಿದ ನಿಧಿಯ ಮೂಲಕ, ಈ ಕೆಳಗಿನ ವ್ಯಕ್ತಿಗಳಿಗೆ ಬೆಳ್ಳಿಹಬ್ಬದ ವಿಶೇಷ ಶಾಲು, ಬಿರುದಿನೊಂದಿಗೆ ಸ್ಮರಣಿಕೆ ಮತ್ತು ಗೌರವಧನ ನೀಡಿ ಗೌರವಿಸಲಾಯಿತು:*ಮಂಡ್ಯದ ಪದ್ಮಶ್ರೀ ಡಾ. ಕೆ.ಎಸ್. ರಾಜಣ್ಣ , ನಾಲ್ಕು ಅಂಗಗಳಲ್ಲಿ ತೀವ್ರ ವಿಕಲತೆ ಇದ್ದರೂ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದ ಇವರಿಗೆ “ಅದಮ್ಯ ದಿವ್ಯ ಚೇತನ” ಎಂಬ ಬಿರುದನ್ನು ನೀಡಲಾಯಿತು.*ಬೆಳಗಾವಿಯ ನಾಗರತ್ನ25 ವರ್ಷಗಳ ಹಿಂದೆ ಏಡ್ಸ್ ರೋಗದಿಂದ ಬಳಲುತ್ತಿದ್ದ ಇವರು, ಈಗ ವಿಧವೆಯಾಗಿದ್ದರೂ ಏಡ್ಸ್ ರೋಗಿಗಳಿಗಾಗಿ ‘ಆಶ್ರಯ ಫೌಂಡೇಶನ್’ ಸ್ಥಾಪಿಸಿ ನಡೆಸುತ್ತಿರುವ ಇವರು “ ಸ್ಪೂರ್ತಿಯ ಚಿಲುಮೆ “ ಬಿರುದಿಗೆ ಪಾತ್ರರಾದರು.*ಮಂಗಳೂರಿನ ಗೀತಾ ಶೆಟ್ಟಿಯವರು ದೇರಳಕಟ್ಟೆಯಲ್ಲಿ ವ್ರಧಾಶ್ರಮವನ್ನು ನಡೆಸುತ್ತಿದ್ದು “ ಸೇವಾ ಸಂಪದ “ಬಿರುದಿಗೆ ಭಾಜನರಾದರು.*ಮೂಡಬಿದ್ರಿಯ ಪ್ರಕಾಶ್ ಶೆಟ್ಟಿಗಾರ್ ತಾನು ಮತ್ತು ಮಗ ವಿಕಲಾಂಗರಾಗಿದ್ದರೂ ವಿಶೇಷ ಮಕ್ಕಳಿಗಾಗಿ ‘ಸ್ಪೂರ್ತಿ ಶಾಲೆ’ ನಡೆಸುತ್ತಿರುವ ಇವರಿಗೆ “ ಸ್ಪೂರ್ತಿ ಪ್ರಕಾಶ” ಬಿರುದನ್ನು ನೀಡಲಾಯಿತು.*ಮೇರೆಮಜಲಿನ ಇಂಜಿನಿಯರ್ ಹರೀಶ್ ಪೆರ್ಗಡೆ ತಮ್ಮ ದಿವಂಗತ ತಾಯಿಯ ನೆನಪಿನಲ್ಲಿ ‘ಮಾತ ಲಕ್ಷಣಿ ವೃದ್ಧಾಶ್ರಮ’ ನಡೆಸುತ್ತಿದ್ದು “ ಆಶ್ರಯದಾತ “ ಬಿರುದಿಗೆ ಪಾತ್ರರಾದರು.*ಬಳ್ಳಾರಿಯ ದ್ರಷ್ಟಿಹೀನರಾದ ಅಶ್ವಿನ್ ಅಂಗಡಿಯವರು ಬೆಂಗಳೂರಿನಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ಬೆಳಕು ಅಕಾಡೆಮಿ ಫಾರ್ ಬ್ಲೈಂಡ್ & ಡೆಫ್’ ಸಂಸ್ಥೆ ಸ್ಥಾಪಿಸಿದ ಇವರಿಗೆ “ಬೆಳಕಿನಂಗಡಿ “ ಬಿರುದು ನೀಡಲಾಯಿತು.*ಬೆಂಗಳೂರಿನ ರಂಜಿತ್ ಶೆಟ್ಟಿಯವರು ಕೆಂಗೇರಿಯಲ್ಲಿ ‘ಅರೈಕೆ ಟ್ರಸ್ಟ್’ ಸ್ಥಾಪಿಸಿ, 80 ನಿರ್ಗತಿಕರನ್ನು ನೋಡಿಕೊಳ್ಳುತ್ತಿರುವ ಇವರು “ ಹೃದಯವಂತ “ ಬಿರುದಿಗೆ ಪಾತ್ರರಾದರು.*ತೀರ್ಥಹಳ್ಳಿಯ ತರುಳ ತರುಣ್, ಉಡುಪಿ ಜಿಲ್ಲೆಯ ಬೈಲೂರಿನಲ್ಲಿ ‘ಹೊಸಬೆಳಕು ಆಶ್ರಮ’ ಸ್ಥಾಪಿಸಿ, 180 ನಿರ್ಗತಿಕರನ್ನು ನೋಡಿಕೊಳ್ಳುತ್ತಿದ್ದು “ಅನಾಥರ ಹೊಸಬೆಳಕು “ ಬಿರುದಿಗೆ ಪಾತ್ರರಾದರು.*ಕತಾರಿನಲ್ಲಿ ಬ್ಯಾಂಕರ್ ಆಗಿದ್ದ ಮಂಗಳೂರಿನ ಹೆರಾಲ್ಡ್ ಮೊರಾಸ್ ನೂರಾರು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗುತ್ತಿರುವ ಇವರಿಗೆ “ ಸೇವಾ ರತ್ನ “ ಬಿರುದನ್ನು ನೀಡಲಾಯಿತು .*ಮಂಗಳೂರಿನ ವಸಂತ್ ಮಾಸ್ಟರ್ ‘ಸಾನಿಧ್ಯ ಸ್ಪೆಷಲ್ ಸ್ಕೂಲ್’‌ನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು “ ವಿಕಲರ ಚೇತನ “ ಬಿರುದಿಗೆ ಪಾತ್ರರಾದರು.*ಕೊಡಗಿನ ಅಣ್ಣಪ್ಪ ಪುತ್ತೂರಿನಲ್ಲಿ ಮಾನಸಿಕವಾಗಿ ಅಸ್ವಸ್ಥರಾದವರಿಗಾಗಿ ‘ಪ್ರಜ್ಞಾಶ್ರಮ’ ಸ್ಥಾಪಿಸಿದ್ದಾರೆ. ಇವರಿಗೆ “ ಅನಾಥ ಬಂಧು “ ಬಿರುದು ನೀಡಲಾಯಿತು*ಕುಂದಾಪುರದ ಜಯರಾಮ್ 34 ವರ್ಷಗಳಿಂದ ಹಾಸಿಗೆ ಹಿಡಿದಿದ್ದರೂ, ಜೀವನದ ಸವಾಲುಗಳನ್ನು ಎದುರಿಸುವಲ್ಲಿ ಮಾದರಿಯಾಗಿದ್ದಾರೆ.ಇವರಿಗೆ “ ಮನೋಬಲದ ಜಯವೀರ” ಬಿರುದನ್ನು ನೀಡಲಾಯಿತುಇದರ ಜೊತೆಗೆ, ಕರ್ನಾಟಕದ ವಿವಿಧ ಜಿಲ್ಲೆಗಳ ಮೂತ್ರಪಿಂಡ ಕಾಯಿಲೆ, ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ “25 ವರ್ಷ 25 ನೊಂದ ಮುಖಗಳಲ್ಲಿ ಹರ್ಷ” ಎಂಬ ಯೋಜನೆಯ ಅಡಿಯಲ್ಲಿ ಸಹಾಯ ಹಸ್ತವನ್ನು ರಾಜ್ಯದ ಬೇರೆ ಬೇರೆ ಕಡೆಯವರಿಗೆ ನೀಡಲಾಯಿತು . ಕರುಣಾಕರ್ ಪೂಜಾರಿ(ಬಂಟ್ವಾಳ್ ) , ಎಕ್ಬಾಲ್ ಅಬೂಬಕ್ಕರ್ ( ಚಿಕ್ಕಮಗಳೂರ್ ), ನಿಖಿಲ್ ರೈ (ಕಾಸರ್ಗೋಡ್ ), ಸತೀಶ್ ಪೂಜಾರಿ (ಪುತ್ತೂರು ), ಮಿರ್ಜಾ ಮಾಯಿಜ ( ಬೆಂಗಳೂರ್ ), ರಾಬರ್ಟ್ & ರೆಮ್ಮಿ ಡಿ ಸೋಜಾ ( ಉಪ್ಪಿನಂಗಡಿ ) , ರೇಖಾ ಶೆಟ್ಟಿ( ವಾಮಂಜೂರ್ ) , ರಮ್ಯಾ ( ಬೆಂಗಳೂರು ), ವಿಜಯ್ ( ಬೆಂಗಳೂರು ), ನಾಗರಾಜ್ ( ಯೆಲ್ಲಾಪುರ ) , ಭೀಮಕ್ಕ ( ಹುಬ್ಬಳ್ಳಿ ) , ಸುಬ್ಬ ರಾವ್ ( ಬಳ್ಳಾರಿ ) , ಸ್ಟಾಲಿನ್ ( ಬೆಂಗಳೂರು ), ಮೊಹಮ್ಮದ್ (ಬಿಜಾಪುರ್) , ಕಿರಣ್ ನಾಯಕ್ ( ಉಡುಪಿ ) , ಮಲ್ಲಪ್ಪ ( ಬೆಳಗಾವಿ ), ಮಲ್ಲಿಕಾರ್ಜುನ್ ( ಹಾವೇರಿ ) , ಯಮುನ (ರಾಯಚೂರ್) , ನೀಲಕಾಂತ್ ( ಸಕಲೇಶಪುರ ) , ಮಮ್ಮುನ್ಹಿ ( ಕಾಸರ್ಗೋಡ್ ).ಮೊದಲ ಹಂತವು ರಾಜ್ಯ ಪ್ರಶಸ್ತಿ ವಿಜೇತ ಗಾಯಕ ರಮೇಶ್ಚಂದ್ರ, ಡಾ. ಸುಶೀಲಾ ಮತ್ತು ಪ್ರಕಾಶ್ ಪಾವಂಜೆ ಅವರ ಗಾಯನಗಳೊಂದಿಗೆ ಮುಕ್ತಾಯಗೊಂಡಿತು.ಸಂಸ್ಥಾಪಕರು ಮತ್ತು ಪ್ರವರ್ತಕರಿಗೆ ಗೌರವ ಕಾರ್ಯಕ್ರಮದ ಎರಡನೇ ಹಂತವನ್ನು “ಕೆಎಸ್‌ಕ್ಯೂ ಇತಿಹಾಸದಲ್ಲಿ ಸುವರ್ಣ ಅಧ್ಯಾಯ” ಎಂದು ನಿರೂಪಕ ಎಚ್.ಕೆ. ಮಧು ಅವರು ಬಣ್ಣಿಸಿದರು. ಇದು ಸಂಸ್ಥೆಯ ಸ್ಥಾಪಕರಿಗೆ ಧನ್ಯವಾದಗಳನ್ನು ಹೇಳಲು ಒಂದು ಅಪರೂಪದ ಪುನರ್ಮಿಲನವಾಗಿತ್ತು. ಅಧ್ಯಕ್ಷ ರವಿ ಶೆಟ್ಟಿ ಅವರು ರಾಷ್ಟ್ರ ಕವಿಗಳಾದ ಜಿ.ಎಸ್. ಶಿವರುದ್ರಪ್ಪ ಮತ್ತು ಕುವೆಂಪು ಅವರ ಕವನಗಳನ್ನು, ಮತ್ತು ಡಿವಿಜಿ ಅವರ “ಇರುವ ಕೆಲಸವ ಮಾಡು ಕಿರಿದೆನೆದೆ ಮನವಿಟ್ಟು” ಎಂಬ ಕಗ್ಗದ ಸಾಲುಗಳನ್ನು ಉಲ್ಲೇಖಿಸಿ, ಕೆಎಸ್‌ಕ್ಯೂನ ಸ್ಥಾಪಕರು ಮತ್ತು ಮಾಜಿ ನಾಯಕರ ನಿಸ್ವಾರ್ಥ ಸೇವೆಗೆ ಅದನ್ನು ಸಮರ್ಪಿಸಿದರು.ಸನ್ಮಾನಿತರಾದವರಲ್ಲಿ ಸಂಸ್ಥಾಪಕ ಉಪಾಧ್ಯಕ್ಷ ಡಾ. ವಿ.ಸಿ. ಮೂರ್ತಿ, ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್ ಬಾಬು, ಪ್ರಭಾಕರ್, ಅರವಿಂದ್ ಪಾಟೀಲ್, ವೆಂಕಟ್ ರಾವ್ ಮತ್ತು ಅನುರಾಧ ನಾಗೇಶ್ ರಾವ್ ಸೇರಿದ್ದಾರೆ. ಸಂಸ್ಥಾಪಕ ಅಧ್ಯಕ್ಷ ಸತೀಶ್ ದೇಶಪಾಂಡೆ ಮತ್ತು ಶ್ರೀಮತಿ ಭುವನ ನಾಗರಾಜ್ ಅವರನ್ನು ಅವರ ಮನೆಗಳಲ್ಲಿ ಗೌರವಿಸಲಾಯಿತು.ಅಲ್ಲದೆ, ಮಾಜಿ ಕಾರ್ಯಕಾರಿ ಸಮಿತಿ ಸದಸ್ಯರಾದ ಸೂರ್ಯನಾರಾಯಣ, ಆರ್. ರವಿ, ಶ್ಯಾಮ್ ಎನ್. ಸ್ವಾಮಿ, ವೀಣಾ ಸಂತೋಷ್ ಕುಲಕರ್ಣಿ, ರಾಜೇಂದ್ರ ಜ್ಯೋತಿ, ಶಾಲಿನಿ ಶರಣ್ ಆಲೂರು, ರೂಪಾ ಪ್ರಮೋದ್, ಅರುಣ್ ಕುಮಾರ್ ಎಂ.ಕೆ., ಸುಬ್ರಮಣ್ಯ ಇ., ಮಂಜುಳ ಮಂಜುನಾಥ ರಾವ್, ಅಶೋಕ್ ಉನಕಲ್, ಸಿ.ಆರ್. ಮಂಜುನಾಥ್, ಲಕ್ಕಪ್ಪ ಗೌಡ, ಸವಿತಾ ಅರುಣ್, ನಿಯಾಜ್ ಅಹಮದ್, ಹೇಮಾ ಲಕ್ಕಪ್ಪ, ಆಶಾ ನಂಜಪ್ಪ ಮತ್ತು ಸಂಜನಾ ಜೀವನ್ ಅವರಿಗೆ ಗೌರವ ಸಲ್ಲಿಸಲಾಯಿತು.ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತರಾದ ಸುಮ ಮಹೇಶ್ ಮತ್ತು ಅಶ್ವಿನ್ ಪಿ. ಕುಮಾರ್, ಹಾಗೂ ಬೆಳ್ಳಿಹಬ್ಬದ ಬೆಂಬಲಿಗರಾದ ಅರುಣ್ ಕುಮಾರ್ ಮತ್ತು ಸಂಜಯ್ ಚಪೋಲ್ಕರ್ ಅವರಿಗೆ ಸ್ಮರಣಿಕೆಯೊಂದಿಗೆ ಗೌರವ ನೀಡಲಾಯಿತು.ಮಾಜಿ ನಾಯಕರ ಪರವಾಗಿ ಮಾತನಾಡಿದ ಡಾ. ವಿ.ಸಿ. ಮೂರ್ತಿ ಅವರು ಈ ಕಾರ್ಯಕ್ರಮವನ್ನು ಶ್ಲಾಘಿಸಿ, ಕೆಎಸ್‌ಕ್ಯೂನ ಆರಂಭಿಕ ವರ್ಷಗಳನ್ನು ನೆನಪಿಸಿಕೊಂಡರು. ಕನ್ನಡ ಅಭಿವೃದ್ಧಿ ಕಾರ್ಯದರ್ಶಿ ಭೀಮಪ್ಪ ಖೋತ್ ಅವರು ವಂದನಾರ್ಪಣೆ ಮಾಡಿದರು.ಈ ಸಂಭ್ರಮಾಚರಣೆಯು ಮತ್ತಷ್ಟು ಗಾಯನ, ಪುನರ್ಮಿಲನಗಳು ಮತ್ತು ಸಾಂಪ್ರದಾಯಿಕ ಊಟದೊಂದಿಗೆ ಕೊನೆಗೊಂಡಿತು. ಅಧ್ಯಕ್ಷರು , ಕಾರ್ಯಕಾರಿ ಸಮಿತಿ ಸದಸ್ಯರು, ಸ್ವಯಂಸೇವಕರು, ಮತ್ತು ಮಾಜಿ ಅಧ್ಯಕ್ಷರಾದ ಪ್ರಭಾಕರ್ ಹಾಗೂ ವೆಂಕಟ್ ರಾವ್ ಅವರ ಸಹಕಾರದಿಂದ ಈ ಅಭಿನಂದನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವಿದೇಶದ ಕರ್ನಾಟಕ ಸಂಘವೊಂದು ತಾಯ್ನಾಡಿನಲ್ಲಿ ಇಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವುದರ ಮೂಲಕ ಸಂಘದ ಪ್ರತಿಷ್ಠೆ ಮತ್ತು ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಪ್ರಾದೇಶಿಕ ವಾರ್ತೆಗಳು

ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾಗಿ ಪುಂಡಲೀಕ ಪೈ ಆಯ್ಕೆ

ಮಂಗಳೂರು: ಪತ್ರಿಕಾ ಭವನ ಟ್ರಸ್ಟ್ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಪುಂಡಲೀಕ ಪೈ (ಅನ್ನು ಮಂಗಳೂರು) , ಪ್ರಧಾನ ಕಾರ್ಯದರ್ಶಿಯಾಗಿ ರವಿ ಪೊಸವಣಿಕೆ ಹಾಗೂ ಖಜಾಂಚಿಯಾಗಿ ಹರ್ಷ ಆಯ್ಕೆಯಾಗಿದ್ದಾರೆ. ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್.ಅವರಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ರಧಾನ ಕಾರ್ಯದರ್ಶಿ ವೇಣುವಿನೋದ್ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಟ್ರಸ್ಟ್ ಸದಸ್ಯರಾದ ಕೆ. ಆನಂದ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಪುಪ್ಪರಾಜ್. ಬಿ. ಎನ್.ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ.ಹರೀಶ್ ರೈ ಉಪಸ್ಥಿತರಿದ್ದರು.ಪತ್ರಿಕಾ ಭವನ ಟ್ರಸ್ಟ್‌ನಿಂದ ಪತ್ರಕರ್ತರ ಆರೋಗ್ಯ ಸಮಸ್ಯೆಗೆ ನೆರವು ಮತ್ತು ಮೃತ ಪತ್ರಕರ್ತರ ಕುಟುಂಬಕ್ಕೆ ಪರಿಹಾರವಾಗಿ 7.47 ಲಕ್ಷ ರೂ. ನೆರವು ನೀಡಲಾಗಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ಒಟ್ಟು 5 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.

Scroll to Top