ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ರೋಹನ್ ಕಾರ್ಪೋರೇಶನ್ ವತಿಯಿಂದ ಉದ್ಯೋಗಿಗಳು ಮತ್ತು ಕಾರ್ಮಿಕರಿಗಾಗಿ ಉಚಿತ ವೈದ್ಯಕೀಯ ಶಿಬಿರ

ಮಂಗಳೂರು,ಆ.6– ಸಂಸ್ಥೆಯ ಸಿಬ್ಬಂದಿ ಹಾಗೂ ಕಾರ್ಮಿಕರ ಉತ್ತಮ ಆರೋಗ್ಯದ ಕಡೆಗೆ ಕಾಳಜಿ ತೋರುವ ಉದ್ದೇಶದಿಂದ ರೋಹನ್ ಕಾರ್ಪೋರೇಶನ್ ಸಂಸ್ಥೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.ಈ ಶಿಬಿರ ಮಂಗಳೂರು ಬಿಜೈ ಮುಖ್ಯ ರಸ್ತೆಯಲ್ಲಿರುವ ರೋಹನ್ ಸಿಟಿ ಆವರಣದಲ್ಲಿ ನಡೆಯಿತು. ಶಿಬಿರವನ್ನು ಹಿಂದ್ ಕುಷ್ಟ್ ನಿವಾರಣ್ ಸಂಘ (ರಿ) ಮತ್ತು ಲಯನ್ಸ್ ಕ್ಲಬ್ ಮಂಗಳಾದೇವಿ ಈ ಎರಡು ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.ಬೆಳಿಗ್ಗೆಯಿಂದಲೇ ಶಿಬಿರದಲ್ಲಿ ನೂರಾರು ಉದ್ಯೋಗಿಗಳು ಮತ್ತು ಕಾರ್ಮಿಕರು ಭಾಗವಹಿಸಿದ್ದು, ತಜ್ಞ ವೈದ್ಯರ ತಂಡದಿಂದ ರಕ್ತದೊತ್ತಡ, ಡಯಾಬಿಟಿಸ್, ದಂತಚಿಕಿತ್ಸೆ, ಇ.ಸಿ. ಜಿ ,ಸಾಮಾನ್ಯ ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಿತು. ರೋಹನ್ ಕಾರ್ಪೋರೇಶನ್ ನ ಡೈರೆಕ್ಟರ್ ಡಿಯೋನ್ ಮೊಂತೇರೊರವರು “ನಮ್ಮ ಸಂಸ್ಥೆಯ ಬೆಳವಣಿಗೆಯಲ್ಲಿ ಕಾರ್ಮಿಕರ ಕೊಡುಗೆ ಅಮೂಲ್ಯವಾಗಿದೆ. ಅವರ ಆರೋಗ್ಯದ ಬಗ್ಗೆ ನಾವು ತೀವ್ರ ಕಾಳಜಿ ವಹಿಸುತ್ತಿದ್ದೇವೆ. ಈ ಶಿಬಿರವು ಕಾಳಜಿಯ ಪ್ರತಿಬಿಂಬವಾಗಿದೆ” ಎಂದು ಅಭಿಪ್ರಾಯಪಟ್ಟರು.ಮಂಗಳೂರು ಡಿಎಪಿಸಿಯು ಜಿಲ್ಲಾ ಮೇಲ್ವಿಚಾರಕರಾದ ಶ್ರೀ ಮಹೇಶ್ ರವರು “ಇದೊಂದು ಸಾಮಾನ್ಯ ಆರೋಗ್ಯ ತಪಾಸಣೆಯ ಶಿಬಿರವಲ್ಲ, ಇದು ಸಂಸ್ಥೆಯ ಸಿಬ್ಬಂದಿಗಳ ಮತ್ತು ಕಾರ್ಮಿಕರ ಆರೋಗ್ಯಕ್ಕೆ ನೆರವಾಗುವಂತೆ ರೂಪಿಸಲಾದ ಸಾರ್ಥಕ ಹೆಜ್ಜೆಯಾಗಿದೆ. ಭವಿಷ್ಯದಲ್ಲಿಯೂ ಇಂತಹ ಸಾಮಾಜಿಕ ಹಾಗೂ ಆರೋಗ್ಯಪೂರ್ಣ ಯೋಜನೆಗಳನ್ನು ಮುಂದುವರಿಯಲಿ” ಎಂದು ಆಶಿಸಿದರು.ಶಿಬಿರದಲ್ಲಿ ಉಪಸ್ಥಿತರಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಆರೋಗ್ಯ ಅಧಿಕಾರಿ ಸಲೀಂ ಪಾಷಾ, “ಇಂತಹ ಶಿಬಿರಗಳು ನಮ್ಮ ಶಾರೀರಿಕ ಆರೋಗ್ಯದ ತಪಾಸಣೆಯಷ್ಟೇ ಅಲ್ಲ, ಸಂಸ್ಥೆ ಉದ್ಯೋಗಿಗಳು ಮತ್ತು ಕಾರ್ಮಿಕರಿಗಾಗಿ ಬಗ್ಗೆ ಹೊಂದಿರುವ ನಿಜವಾದ ಕಾಳಜಿಯನ್ನೂ ತೋರಿಸುತ್ತವೆ. ರೋಹನ್ ಕಾರ್ಪೋರೇಶನ್ ಮಾಡುತ್ತಿರುವ ಈ ಪ್ರಯತ್ನ ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಹೇಳಿದರು.”ಈ ಕಾರ್ಯಕ್ರಮದಲ್ಲಿ ಕಂಪನಿಯ ಜನರಲ್ ಮ್ಯಾನೇಜರ್ ಸುಮನಾ , ಲಯನ್ಸ್ ಕ್ಲಬ್ ಮಂಗಳದೇವಿ ಮಂಗಳೂರು ಅಧ್ಯಕ್ಷರಾದ ಶ್ರೀ ಸಂತೋಷ ಪೂಂಜ, ಎ.ಜೆ. ಡೆಂಟಲ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೇಷ್ಠ ಶೆಟ್ಟಿ , ಕೆಎಂಸಿ ಮಂಗಳೂರಿನ ಸಮುದಾಯ ವೈದ್ಯಕೀಯ ವಿಭಾಗದ ಶ್ರಿಮತಿ ಶರಾವತಿ , ಯೋಜನಾ ವ್ಯವಸ್ಥಾಪಕರಾದ ಶ್ರೀ ನರೇಶ್ ಕುಮಾರ್, ಹಿಂದ್ ಕುಷ್ಟ ನಿವಾರಣ ಸಂಘ ಯೋಜನಾ ವ್ಯವಸ್ಥಾಪಕರಾದ ಶ್ರೀ ಕಾಂತಾ ನಾಯಕ, ಹೆಲ್ತ್ ಸೇಫ್ಟಿ ಎನ್ವಿರಾನ್‌ಮೆಂಟ್ ಮ್ಯಾನೇಜರ್‌ ಆಗಿರುವ ಶ್ರೀ ಪುನೀತ್ ಕುಮಾರ್ ರವರು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಓಪನ್ ಡೇ 2025 ಸಮಾರಂಭ

ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು ಜುಲೈ 28, 2025ರಂದು ವಾರ್ಷಿಕ ಓಪನ್ ಡೇ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು. 1,300ಕ್ಕೂ ಹೆಚ್ಚು ಭೇಟಿಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ರೆ. ಫಾದರ್ ಡಾ. ವಿಕ್ಟರ್ ಲೋಬೊ ಎಸ್.ಜೆ. (ಕುಲಪತಿ), ಡಾ. ಚಂದ್ರಭಾಸ್ ನಾರಾಯಣ (ರಾಜೀವ್ ಗಾಂಧಿ ಜೈವಿಕತಂತ್ರಜ್ಞಾನ ಕೇಂದ್ರದ ನಿರ್ದೇಶಕ) ಮತ್ತು ಡಾ. ವಿ. ಕ್ರಿಸ್ಟೋ ಸೆಲ್ವನ್ (ಓಪನ್ ಡೇ 2025 ಸಂಯೋಜಕ) ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ 180ಕ್ಕೂ ಹೆಚ್ಚು ಪ್ರದರ್ಶನಗಳು ನಡೆದಿದ್ದು, ವಿಜ್ಞಾನ ವಿಭಾಗದ ಕ್ಯಾನ್ಸರ್ ಸಂಶೋಧನೆ, ಬಯೋಪ್ಲಾಸ್ಟಿಕ್ ತಯಾರಿಕೆ, ವಾಣಿಜ್ಯ ವಿಭಾಗದ ಸೆಗ್ರೆಬಾಟ್ ಯೋಜನೆ, ಇತಿಹಾಸ ವಿಭಾಗದ ವಿಜಯನಗರ ಸಾಮ್ರಾಜ್ಯದ ಮಾದರಿ ಮತ್ತು ಮಾಧ್ಯಮ ವಿಭಾಗದ ಸೃಜನಾತ್ಮಕ ಪ್ರದರ್ಶನಗಳು ಪ್ರಮುಖ ಆಕರ್ಷಣೆಗಳಾಗಿದ್ದವು.“ಶೈಕ್ಷಣಿಕ ಸೇತುವೆಗಳ ನಿರ್ಮಾಣ” ಎಂಬ ವಿಶೇಷ ಸಭೆಯಲ್ಲಿ ಡಿಪಿಎಸ್ ಈಸ್ಟ್ ನ ಪ್ರಾಂಶುಪಾಲೆ ಶ್ರೀಮತಿ ಮನಿಲಾ ಕಾರ್ವಾಲ್ಕೋ ಸೇರಿದಂತೆ ಅನೇಕ ಶಿಕ್ಷಣತಜ್ಞರು ಭಾಗವಹಿಸಿದ್ದರು. ವಿದ್ಯಾರ್ಥಿ ಸಂಸದೀಯ ಸಭೆ 2025 ರಾಜಕೀಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಸಹಾಯಕವಾಗಿತ್ತು. ಪೋಷಕರಿಗಾಗಿ “ಉನ್ನತ ಶಿಕ್ಷಣ – ಬದಲಾಗುವ ಅವಕಾಶಗಳು ಮತ್ತು ಆಯ್ಕೆಗಳು” ವಿಶೇಷ ಸೆಷನ್ ನಡೆದಿತ್ತು. ಕಾರ್ಯಕ್ರಮದ ಅಂತಿಮ ಸಮಾರಂಭದಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಸ್ಕೂಲ್ ಆಫ್ ಇಂಡಿಯಾ ಪ್ರಶಸ್ತಿಗಳನ್ನು ಪಡೆದುಕೊಂಡವು. ಸಂವಹನ ಮತ್ತು ಮಾಧ್ಯಮ ಅಧ್ಯಯನ ಶಾಲೆಯನ್ನು ವಿಶ್ವವಿದ್ಯಾಲಯದ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಘೋಷಿಸಲಾಯಿತು. ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಣತಜ್ಞರೊಂದಿಗೆ ‘ಶೈಕ್ಷಣಿಕ ಸಹಯೋಗ’ ಕುರಿತು ವಿಶೇಷ ಚರ್ಚೆ ನಡೆಯಿತು. ವಿದ್ಯಾರ್ಥಿ ಸಂಸದೀಯ ಸಭೆ, ಪೋಷಕರಿಗಾಗಿ ವಿಶೇಷ ಮಾರ್ಗದರ್ಶನ ಸೆಷನ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆದಿದ್ದು, ಈ ಕಾರ್ಯಕ್ರಮವು ವಿಶ್ವವಿದ್ಯಾಲಯದ ಸಮಗ್ರ ಶಿಕ್ಷಣದ ದೃಷ್ಟಿಯನ್ನು ಯಶಸ್ವಿಯಾಗಿ ಪ್ರದರ್ಶಿಸಿತು.

ಪ್ರಾದೇಶಿಕ ವಾರ್ತೆಗಳು

ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪಲಿತಾಂಶ ಪ್ರಕಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮದ ಪ್ರಯುಕ್ತ ಪತ್ರಿಕಾ ಛಾಯಾಗ್ರಾಹಕರಿಗಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಹುಬ್ಬಳ್ಳಿಯ ಕನ್ನಡ ಪ್ರಭ ಪತ್ರಿಕೆಯ ಛಾಯಾಗ್ರಾಹಕ ಈರಪ್ಪ ನಾಯ್ಕರ್ ಅವರ  ಚಿತ್ರ ಪ್ರಥಮ ಸ್ಥಾನ ಪಡೆದಿದೆ. ಮೈಸೂರಿನ ಕನ್ನಡಪ್ರಭ ಪತ್ರಿಕೆಯ ಛಾಯಾಗ್ರಾಹಕ  ಎಂ.ಎಸ್. ಬಸವಣ್ಣ ಅವರು ದ್ವಿತೀಯ, ಮೈಸೂರಿನ ದ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರಿನ್ಸಿಪಾಲ್ ಫೋಟೋಗ್ರಾಪರ್ ಉದಯಶಂಕರ್ ಅವರುತೃತೀಯ ಪಡೆದುಕೊಂಡಿದ್ದಾರೆ.ಬೆಂಗಳೂರಿನ ಪ್ರಜಾವಾಣಿಯ ಹಿರಿಯ ಛಾಯಾಗ್ರಾಹಕ ಎಂ.ಎಸ್. ಮಂಜುನಾಥ್  ಮತ್ತು ಇಂದ್ರಕುಮಾರ್ ದಸ್ತೇನವರ ಚಿತ್ರ ತೀರ್ಪುಗಾರರ ಮೆಚ್ಚುಗೆಯ ಬಹುಮಾನಕ್ಕೆ ಪಾತ್ರವಾಗಿದೆ.*ಇಂದು ಬಹುಮಾನ ವಿತರಣೆ:* ಆ.6ರಂದು (ಇಂದು) ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ  ನಡೆಯಲಿರುವ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು.*ಪ್ರಶಸ್ತಿ ವಿವರ:* ಸುದ್ದಿ ಚಿತ್ರ ವಿಭಾಗದಲ್ಲಿ ಸ್ಪರ್ಧೆಗೆ ಛಾಯಾಚಿತ್ರ ಆಹ್ವಾನಿಸಲಾಗಿದ್ದು, ಪ್ರಥಮ ಬಹುಮಾನ 10ಸಾವಿರ ರೂ. ಮತ್ತು ನಗದು ಫಲಕ, ದ್ವಿತೀಯ ಬಹುಮಾನ 5 ಸಾವಿರ ರೂ. ನಗದು ಮತ್ತು ಫಲಕ ಹಾಗೂ ತೃತೀಯ ಬಹುಮಾನ3 ಸಾವಿರ ರೂ. ನಗದು ಮತ್ತು ಫಲಕ ನೀಡಲಾಗುವುದು ಛಾಯಾಚಿತ್ರ ಸ್ಪರ್ಧಾ ವಿಭಾಗದ ಸಂಚಾಲಕ ಸತೀಶ್ ಇರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ ಸಂಚಿಕೆ ಬಿಡುಗಡೆ. ‘ದಾಖಲೀಕರಣದಿಂದ ಮುಂದಿನ ಪೀಳಿಗೆಗೆ ಸ್ಪೂರ್ತಿ’-ಇಂಜಿನಿಯರ್ ಮೋಹನ್‌ದಾಸ್ ಕಾಮತ್

ಮಂಗಳೂರು: ದಾಖಲೀಕರಣ ಕಾರ್ಯಕ್ಕೆ ತನ್ನದೇ ಆದ ಮಹತ್ವವಿದೆ .ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಸಂಘ, ಸಂಸ್ಥೆಗಳ ಸಾಧನೆ ಶಾಶ್ವತ ದಾಖಲೆಯಾಗಿ ಮೂಡಿಬಂದರೆ ಮುಂದಿನ ಪೀಳಿಗೆಗೆ ಸ್ಪೂರ್ತಿಯ ಸೆಲೆಯಾಗಲು ಸಾಧ್ಯವಿದೆ ಎಂದು ಅನಿವಾಸಿ ಭಾರತೀಯ ಇಂಜಿನಿಯರ್ ಮಂಜೇಶ್ವರ ಮೋಹನ್‌ದಾಸ್ ಕಾಮತ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್‌ನ ಗೃಹ ಪತ್ರಿಕೆ ‘ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ‘ಇ-ಪೇಪರ್ ಇದರ ಆರನೇ ಸಂಚಿಕೆಯ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ನೂತನ ಸಂಚಿಕೆ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಮಾತನಾಡಿ ‘ ಪತ್ರಕರ್ತರಿಗೆ ಕಾನೂನಿನ ಮಾಹಿತಿ ಅವಶ್ಯವಾಗಿದ್ದು ,ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಬೆಳಕು ಚೆಲ್ಲುವ ಲೇಖನಗಳನ್ನು ಪ್ರಕಟಿಸಲು ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು.ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಆ.6ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ‘ಸುವರ್ಣ ಸಂಭ್ರಮ’

ಮಂಗಳೂರು,ಆ.5;ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಸುವರ್ಣ ಮಹೋತ್ಸವ ಕಾರ್ಯಕ್ರಮ ಆ.6ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.ಬೆ.9ಕ್ಕೆ ಉದ್ಘಾಟನಾ ಕಾರ್ಯಕ್ರಮ ಶಾಸಕ ವೇದವ್ಯಾಸ ಕಾಮತ್ ರ ಅಧ್ಯಕ್ಷತೆ ಯಲ್ಲಿ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುವರ್ಣ ಮಹೋತ್ಸವದ ಅಂಗವಾಗಿ ನೀಡಲಾಗುತ್ತಿರುವ ಪ್ರತಿಷ್ಠಿತ ಸುವರ್ಣ ಸಂಭ್ರಮ ಗೌರವ ಪ್ರಶಸ್ತಿಯನ್ನು ಮೂಡು ಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅವರಿಗೆ ಪ್ರದಾನ ಮಾಡಲಾಗುವುದು ಸುವರ್ಣ ಸಂಭ್ರಮ ಸ್ಮರಣ ಸಂಚಿಕೆಯನ್ನು ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಬಿಡುಗಡೆ ಗೊಳಿಸಲಿದ್ದಾರೆ.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸುವರ್ಣ ಸಂಭ್ರಮ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದ್ದಾರೆ.‌ಸುವರ್ಣ ಸಂಭ್ರಮ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಬಹು ಮಾನ ವಿತರಣೆಯನ್ನು ಮಂಗಳೂರು ವಿ.ವಿ.ಕುಲಪತಿ ಪ್ರೊ.ಪಿ. ಎಲ್ .ಧರ್ಮ ನೆರವೇರಿಸಲಿದ್ದಾರೆ.ಮಧ್ಯಾಹ್ನ ಪ್ರಸ್ತುತ ಹಾಗೂ ಭವಿಷ್ಯದ ಮಾಧ್ಯಮ ವಿಚಾರ ಗೋಷ್ಟಿ ರವಿ ಹೆಗ್ಡೆ,( ಪ್ರಧಾನ ಸಂಪಾ ದಕರು, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್)ಅಧ್ಯಕ್ಷತೆಯಲ್ಲಿ ನಡೆಯಲಿದೆ.ವಿಜಯ ಕರ್ನಾಟಕ ಮಂಗಳೂರು ಸ್ಥಾನೀಯ ಸಂಪಾದಕ ಬಿ. ರವೀಂದ್ರ ಶೆಟ್ಟಿ ಮತ್ತು ದಾಯ್ಜಿ ವರ್ಲ್ಡ್ ಪ್ರೈ.ಲಿಮಿಟೆಡ್ ನ ವ್ಯವಸ್ಥಾಪಕ ಸಂಪಾದಕ ವಾಲ್ಟರ್ ನಂದಳಿಕೆ ವಿಷಯ ಮಂಡನೆ ಮಾಡಲಿದ್ದಾರೆ.ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ನಡೆಯಲಿದೆ.ಕರ್ನಾಟಕ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸನ್ಮಾನಿಸುವರು.ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿನ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಸುವರ್ಣ ಸಂಭ್ರಮ ಸಮಿತಿಯ ಪ್ರಧಾನ ಸಂಚಾಲಕ ಪಿ.ಬಿ. ಹರೀಶ್ ರೈ ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್. ಬಿ.ಎನ್,ರಾಜ್ಯ ಕಾರ್ಯ ಕಾರಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಐಸಿವೈಎಂ ಸಿಟಿ ವಲಯದ ವತಿಯಿಂದ ವಿಶಿಷ್ಟ ಕಾರ್ಯಕ್ರಮ ‘ರೂಟ್‌ ಆಫ್‌ ಕೇರ್‌’ ಗೆ ಚಾಲನೆ

ಮಂಗಳೂರು: ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾಥೊಲಿಕ್ ಯುವಜನರ ಸಂಘಟನೆ – ಐಸಿವೈಎಂ ಇದರ ಸಂತ ಪೀಟರ್ ಡೀನರಿ ಅಂದರೆ ಸಿಟಿ ವಲಯವು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ‘ರೂಟ್‌ ಆಫ್‌ ಕೇರ್‌’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರನ್ವಯ ಐಸಿವೈಎಂ ಸದಸ್ಯರು 12 ಚರ್ಚ್ ಗಳನ್ನು ಒಳಗೊಂಡ ಸಂತ ಪೀಟರ್ ಡೀನರಿ ವ್ಯಾಪ್ತಿಯಲ್ಲಿ ವಿವಿಧ ಗಿಡಗಳನ್ನು ನೆಡಲಿದ್ದಾರೆ. ಮುಂದಿನ ವರ್ಷ ಇದೇ ಸಮಯಕ್ಕೆ ಈ ಗಿಡಗಳ ಪರಿಶೀಲನೆ ನಡೆಸಿ ಬೆಳವಣಿಗೆಯನ್ನು ಗಮನಿಸಿ ಬಹುಮಾನ ನೀಡಲಾಗುತ್ತದೆ. ಮಂಗಳೂರಿನ ಸಂತ ತೆರೆಸಾ ಚರ್ಚ್‌ ಚರ್ಚ್ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊ ಅವರು ಆಗಸ್ಟ್ 3 ರಂದು ರವಿವಾರ ಕಾರ್ಯಕ್ರಮಕ್ಕೆ ಪಾಲ್ದನೆ ಚರ್ಚ್ ಆವರಣದಲ್ಲಿ ಪೇರಳೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಯುವಜನತೆ ಪರಿಸರದ ಬಗ್ಗೆ ಬಹಳಷ್ಟು ಕಾಳಜಿ ವಹಿಸ ಬೇಕು. ಯುವಕರು ಮನಸ್ಸು ಮಾಡಿದರೆ ಪ್ರಕೃತಿಯಲ್ಲಿ ಪ್ರತಿ ವರ್ಷ ಗಿಡಗಳನ್ನು ನೆಟ್ಟು ಮುಂದಿನ ದಿನಗಳಲ್ಲಿ ಪರಿಸರ ಕಾಪಾಡುವ ಕೆಲಸಕ್ಕೆ ತಮ್ಮಕೊಡುಗೆ ನೀಡ ಬಹುದೆಂದರು. ಕಾರ್ಯಕ್ರಮದಲ್ಲಿ ಸಿಟಿ ವಲಯದ ಅಧ್ಯಕ್ಷ ರಾಯನ್‌ ಮಾರ್ಸೆಲ್‌ ನೊರೊನ್ಹಾ, ಘಟಕದ ಅಧ್ಯಕ್ಷೆ ವಿಲೀಶಾ ಬ್ರ್ಯಾಗ್ಸ್, ಕಾರ್ಯದರ್ಶಿ ವಿಶೆಲ್‌ ಲೋಬೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

MCC Bank Inaugurates Its 20th Branch in Byndoor

Marking a significant milestone in its growth journey, MCC Bank Ltd inaugurated its 20th branch at Byndoor on Sunday, August 3, 2025 on the ground floor of Deepa Complex, Main Road, near Petrol Bank, Byndoor.The branch was inaugurated by the Chairman of MCC Bank, ‘Sahakara Ratna’ Mr Anil Lobo, in the presence of distinguished guests, members of the community, and bank officials. The premises were blessed by Rev. Fr Vincent Coelho, Parish Priest of Holy Cross Church, Byndoor, who offered prayers for the success of the new branch.A key highlight of the event included the inauguration of the Safe Room by Mr Babu Shetty, President of the Managing Trustee of Shri Mookambika Temple, Kollur. The E-Stamping Facility was launched by Rev. Fr Philip Nellivilla, Principal of St Thomas Residential School, Byndoor. Shri Raju Poojari, Ex-president, Udupi Zilla Panchayath, Shri Sadashiva D. Paduvari, Nominated Member, Town Panchayath, Byndoor, Shri Kapsi Noor Mohammed, Vice President, Shiroor Grama Panchayath, Shri Nagesh Kharvi, President, Nadadoni State Association, Shri Mobi P.C. President, Bar Association, Byndoor, were the Guests of honour.The programme commenced with a prayer song performed by the staff of the bank.‘Sahakara Ratna’ Mr Anil Lobo, Chairman of the Bank, in his presidential address, thanked the institutions and the general public of the area for their warm welcome, assistance, and cooperation extended to the staff during their visit to promote the Bank’s products and services. He sought their continued support to help the branch achieve a turnover of ₹10 crore within a year of its inauguration. He also urged them to become brand ambassadors of the Bank in the Byndoor area.The Bank operates under the supervisory control of the Reserve Bank of India (RBI), and its deposits are secured by DICGC insurance. The Bank has successfully doubled its turnover in just seven years since his Board took over the management of the Bank in the year 2018. He informed the audience that MCC Bank offers all the services provided by other private and public sector banks. He added that despite various hurdles, hardships, and challenges, the Bank continues to grow at a steady pace, largely due to the dedicated efforts of its management and staff.Rev. Fr Vincent Coelho, while addressing the gathering, congratulated the management and staff for providing a customer-friendly ambience at Byndoor and invoked God’s blessings on the bank’s future endeavors. He referred to the bank as the “Bank of the Society,” highlighting its young and dynamic chairman with progressive vision. He also described it as the best co-operative bank, offering excellent customer service. Additionally, he expressed his hope that the bank would be a boon to all sections of society, especially the poor and the downtrodden. Speaking on the occasion, Rev. Fr Philip Nellivilla lauded MCC Bank’s exceptional customer service and wished the institution continued expansion across Karnataka. He shared his personal experiences with the bank and praised its commitment to customer satisfaction.Mr Babu Shetty thanked MCC Bank for establishing a branch in Byndoor and encouraged local residents to support its growth.Mr Raju Poojary, in his address, congratulated the bank and urged the staff to work diligently toward even greater achievements, assuring his continued support.The bank took the opportunity to felicitate students from the Byndoor region who achieved outstanding results in the SSLC and PUC examinations, showcasing its dedication to community development. Ms Nicola Roshni Dias from Byndoor, who has cleared her CA examination in her 1st attempt, was felicitated.The customers who opened their accounts at Byndoor branch were felicitated.In recognition of their contribution, office bearers of various local associations were honoured. Special acknowledgments were given to Mr Jagannath Shetty, owner of the new premises, and Mr Karthik Kiran, Civil Engineer, for their roles in making the branch a reality.General Manager Mr Sunil Menezes introduced the newly appointed staff of the Byndoor branch to the audience. The dignitaries were presented with mementos as a token of gratitude by the Chairman.The event witnessed the presence of Vice Chairman Mr Jerald Jude Dsilva and Directors Mr Andrew Dsouza, Mr David D’Souza, Mr Herald Monteiro, Mr Melwyn Vas, Mr J.P. Rodrigues, Mr Roshan D’Souza, Dr Gerald Pinto, Mr Vincent Lasrado, Mr C.G. Pinto, Mr Sushanth Saldanha, Mr Alwyn P. Monteiro, Mr Felix D’Cruz, and General Manager Mr Sunil Menezes.Mr. Elroy Kiran Crasto, Director welcomed the gathering. Mr Sandeep Quadras, Senior Manager, Byndoor Branch delivered the vote of thanks. The event was compered by Mr Steevan Colaco, Udyavar.

ಪ್ರಾದೇಶಿಕ ವಾರ್ತೆಗಳು

ಬೈಂದೂರಿನಲ್ಲಿ ಎಂ.ಸಿ.ಸಿ. ಬ್ಯಾಂಕಿನ 20ನೇ ಶಾಖೆ ಉದ್ಘಾಟನೆ

ತನ್ನ ಬೆಳವಣಿಗೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಮೂಲಕ, ಎಂ.ಸಿ.ಸಿ. ಬ್ಯಾಂಕ್ ತನ್ನ 20ನೇ ಶಾಖೆಯನ್ನು ಬೈಂದೂರಿನ ಪೆಟ್ರೋಲ್ ಬಂಕ್ ಬಳಿಯ ಮುಖ್ಯ ರಸ್ತೆಯ ದೀಪಾ ಕಾಂಪ್ಲೆಕ್ಸ್’ನ ನೆಲ ಮಹಡಿಯಲ್ಲಿ ಆಗಸ್ಟ್ 3, 2025ರ ಭಾನುವಾರದಂದು ಉದ್ಘಾಟಿಸಿತು.ಈ ಶಾಖೆಯನ್ನು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ಅವರು ಗಣ್ಯ ಅತಿಥಿಗಳು, ಸಮುದಾಯದ ಸದಸ್ಯರು ಮತ್ತು ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು. ಬೈಂದೂರಿನ ಹೋಲಿ ಕ್ರಾಸ್ ಚರ್ಚ್’ನ ಧರ್ಮಗುರುಗಳಾದ ರೆವರೆಂಡ್ ಫಾದರ್ ವಿನ್ಸೆಂಟ್ ಕುವೆಲ್ಲೊ ಅವರು ಆಶೀರ್ವದಿಸಿ, ಹೊಸ ಶಾಖೆಯ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಬು ಶೆಟ್ಟಿ ಸೇಫ್ ಡೆಪಾಸಿಟ್ ಲಾಕರ್ ಉದ್ಘಾಟಿಸಿದರು ಇ-ಸ್ಟ್ಯಾಂಪಿಂಗ್ ಸೌಲಭ್ಯವನ್ನು ಬೈಂದೂರಿನ ಸೈಂಟ್ ಥಾಮಸ್ ವಸತಿ ಶಾಲೆಯ ಪ್ರಾಂಶುಪಾಲ ರೆವರೆಂಡ್ ಫಾದರ್ ಫಿಲಿಪ್ ನೆಲಿವಿಲ್ಲಾ ಉದ್ಘಾಟಿಸಿದರು.ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರಾಜು ಪೂಜಾರಿ, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಶ್ರೀ ಸದಾಶಿವ ಡಿ. ಪಡುವರಿ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಕಾಪ್ಸಿನೂರ್ ಮೊಹಮ್ಮದ್, ನಾಡದೋಣಿ ರಾಜ್ಯ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಖಾರ್ವಿ, ಬೈಂದೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಮೋಬಿ ಪಿ.ಸಿ. ಅವರು ಗೌರವಾನ್ವಿತ ಅತಿಥಿಗಳಾಗಿದ್ದರು.ಬ್ಯಾಂಕಿನ ಅಧ್ಯಕ್ಷರಾದ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳನ್ನು ಉತ್ತೇಜಿಸಲು ಮತ್ತು ಅಮಂತ್ರಣ ಪತ್ರವನ್ನು ನೀಡಲು ಭೇಟಿ ನೀಡಿದ ಸಂದರ್ಭದಲ್ಲಿ ಸಿಬ್ಬಂದಿಗೆ ನೀಡಿದ ಆತ್ಮೀಯ ಸ್ವಾಗತ, ಸಹಾಯ ಮತ್ತು ಸಹಕಾರಕ್ಕಾಗಿ ಸಂಸ್ಥೆಗಳು ಮತ್ತು ಪ್ರದೇಶದ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಉದ್ಘಾಟನೆಯಾದ ಒಂದು ವರ್ಷದೊಳಗೆ ಶಾಖೆಯು ರೂ.10 ಕೋಟಿ ವಹಿವಾಟು ಸಾಧಿಸಲು ಬೆಂಬಲವನ್ನು ಕೋರಿದರು. ಬೈಂದೂರು ಪ್ರದೇಶದಲ್ಲಿ ಬ್ಯಾಂಕಿನ ಬ್ರಾಂಡ್ ರಾಯಭಾರಿಗಳಾಗುವಂತೆ ಅವರು ಪ್ರೇರೆಪಿಸಿದರು. ಎಂ.ಸಿ.ಸಿ. ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕಿನ (RBI) ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಠೇವಣಿಗಳು DICGC ವಿಮೆಯಿಂದ ಸುರಕ್ಷಿತಗೊಳ್ಳುತ್ತವೆ. ಬ್ಯಾಂಕಿನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಕೇವಲ ಏಳು ವರ್ಷಗಳಲ್ಲಿ ತನ್ನ ವಹಿವಾಟನ್ನು ಯಶಸ್ವಿಯಾಗಿ ದ್ವಿಗುಣಗೊಳಿಸಿದೆ. ಎಂ.ಸಿ.ಸಿ. ಬ್ಯಾಂಕ್ ಇತರ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಒದಗಿಸುವ ಎಲ್ಲಾ ಸೇವೆಗಳನ್ನು ನೀಡುತ್ತದೆ ಎಂದು ತಿಳಿಸಿದರು. ವಿವಿಧ ಅಡೆತಡೆಗಳು, ಕಷ್ಟಗಳು ಮತ್ತು ಸವಾಲುಗಳ ಹೊರತಾಗಿಯೂ, ಬ್ಯಾಂಕ್ ಸ್ಥಿರವಾದ ವೇಗದಲ್ಲಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಸಮರ್ಥ ಆಡಳಿತ ಮಂಡಳಿ, ಸಿಬ್ಬಂದಿಯ ಸಮರ್ಪಿತ ಪ್ರಯತ್ನ ಮತ್ತು ಗ್ರಾಹಕರ ಬೆಂಬಲ ಎಂದು ಹೇಳಿದರು.ಸಭೆಯನ್ನುದ್ದೇಶಿಸಿ ಮಾತನಾಡಿದ ರೆವರೆಂಡ್ ಫಾದರ್ ವಿನ್ಸೆಂಟ್ ಕುವೆಲ್ಲೋ, ಬೈಂದೂರಿನಲ್ಲಿ ಗ್ರಾಹಕ ಸ್ನೇಹಿ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು ಮತ್ತು ಬ್ಯಾಂಕಿನ ಭವಿಷ್ಯದ ಪ್ರಯತ್ನಗಳಿಗೆ ದೇವರ ಆಶೀರ್ವಾದವನ್ನು ಕೋರಿದರು. ಪ್ರಗತಿಪರ ದೃಷ್ಟಿಕೋನ ಹೊಂದಿರುವ ಯುವ ಮತ್ತು ಕ್ರಿಯಾಶೀಲ ಅಧ್ಯಕ್ಷರನ್ನು ಹೊಂದಿರುವ ಎಂ.ಸಿ.ಸಿ. ಬ್ಯಾಂಕನ್ನು “ಸಮಾಜದ ಬ್ಯಾಂಕ್” ಎಂದು ಉಲ್ಲೇಖಿಸಿದರು. ಅತ್ಯುತ್ತಮ ಗ್ರಾಹಕ ಸೇವೆಯನ್ನು ನೀಡುವ ಮೂಲಕ ಎಂ.ಸಿ.ಸಿ. ಬ್ಯಾಂಕನ್ನು ಅತ್ಯುತ್ತಮ ಸಹಕಾರಿ ಬ್ಯಾಂಕ್ ಎಂದೂ ಅವರು ಬಣ್ಣಿಸಿದರು. ಹೆಚ್ಚುವರಿಯಾಗಿ, ಬ್ಯಾಂಕ್ ಸಮಾಜದ ಎಲ್ಲಾ ವರ್ಗಗಳಿಗೆ, ವಿಶೇಷವಾಗಿ ಬಡವರು ಮತ್ತು ದೀನದಲಿತರಿಗೆ ವರದಾನವಾಗಲಿದೆ ಎಂದು ಅವರು ಆಶಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೆವರೆಂಡ್ ಫಾದರ್ ಫಿಲಿಪ್ ನೆಲಿವಿಲ್ಲಾ ಅವರು ಎಂಸಿಸಿ ಬ್ಯಾಂಕಿನ ಅಸಾಧಾರಣ ಗ್ರಾಹಕ ಸೇವೆಯನ್ನು ಶ್ಲಾಘಿಸಿದರು ಮತ್ತು ಬ್ಯಾಂಕ್ ಕರ್ನಾಟಕದಾದ್ಯಂತ ವಿಸ್ತರಣೆಯಾಗುವುದನ್ನು ಹಾರೈಸಿದರು. ಬ್ಯಾಂಕಿನೊಂದಿಗಿನ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡು ಗ್ರಾಹಕರ ತೃಪ್ತಿಗೆ ಅದರ ಬದ್ಧತೆಯನ್ನು ಶ್ಲಾಘಿಸಿದರು.ಬೈಂದೂರಿನಲ್ಲಿ ಶಾಖೆಯನ್ನು ಸ್ಥಾಪಿಸಿದ್ದಕ್ಕಾಗಿ ಶ್ರೀ ಬಾಬು ಶೆಟ್ಟಿ ಎಂಸಿಸಿ ಬ್ಯಾಂಕ್‌ಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸ್ಥಳೀಯ ನಿವಾಸಿಗಳು ಅದರ ಬೆಳವಣಿಗೆಗೆ ಬೆಂಬಲ ನೀಡುವಂತೆ ಪ್ರೋತ್ಸಾಹಿಸಿದರು.ಶ್ರೀ ರಾಜು ಪೂಜಾರಿ ಅವರು ತಮ್ಮ ಭಾಷಣದಲ್ಲಿ ಬ್ಯಾಂಕನ್ನು ಅಭಿನಂದಿಸಿ ಇನ್ನೂ ಹೆಚ್ಚಿನ ಸಾಧನೆಗಳತ್ತ ಸಿಬ್ಬಂದಿ ಶ್ರದ್ಧೆಯಿಂದ ಕೆಲಸ ಮಾಡುವಂತೆ ಒತ್ತಾಯಿಸಿ, ನಿರಂತರ ಬೆಂಬಲದ ಭರವಸೆ ನೀಡಿದರು.ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಗಳಿಸಿದ ಬೈಂದೂರು ಪ್ರದೇಶದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೈಂದೂರು ಶಾಖೆಯಲ್ಲಿ ಖಾತೆಗಳನ್ನು ತೆರೆದ ಗ್ರಾಹಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ಥಳೀಯ ಸಂಘಗಳ ಪದಾಧಿಕಾರಿಗಳ ಕೊಡುಗೆಯನ್ನು ಗುರುತಿಸಿ, ಅವರನ್ನು ಸನ್ಮಾನಿಸಲಾಯಿತು. ಸಿಎ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾದ ಕು. ನಿಕೋಲ ರೋಶನಿ ಡಾಯಸ್ ಇವರನ್ನು ಸನ್ಮಾನಿಸಲಾಯಿತು. ಕಟ್ಟಡದ ಮ್ಹಾಲಿಕರಾದ ಶ್ರೀ ಜಗನ್ನಾಥ ಶೆಟ್ಟಿ ಮತ್ತು ಸಿವಿಲ್ ಎಂಜಿನಿಯರ್ ಶ್ರೀ ಕಾರ್ತಿಕ್ ಕಿರಣ್ ಅವರನ್ನು ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.ಬೈಂದೂರು ಶಾಖೆಗೆ ನೇಮಕಗೊಂಡ ಸಿಬ್ಬಂದಿಯನ್ನು ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೆಜಸ್ ಪರಿಚಯಿಸಿದ್ದು ಅಧ್ಯಕ್ಷರು ಕೃತಜ್ಞತೆಯ ಸಂಕೇತವಾಗಿ ಅವರಿಗೆ ಹೂ ಗುಚ್ಛ ನೀಡಿದರು.ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ ಮತ್ತು ನಿರ್ದೇಶಕರಾದ ಶ್ರೀ ಆಂಡ್ರ‍್ಯೂ ಡಿಸೋಜಾ, ಶ್ರೀ ಡೇವಿಡ್ ಡಿಸೋಜಾ, ಶ್ರೀ ಹೆರಾಲ್ಡ್ ಮೊಂತೇರೊ, ಶ್ರೀ ಮೆಲ್ವಿನ್ ವಾಸ್, ಶ್ರೀ ಜೆ.ಪಿ. ರೊಡ್ರಿಗಸ್, ಶ್ರೀ ರೋಶನ್ ಡಿಸೋಜಾ, ಡಾ| ಜೆರಾಲ್ಡ್ ಪಿಂಟೊ, ಶ್ರೀ ವಿನ್ಸೆಂಟ್ ಲಸ್ರಾದೊ, ಶ್ರೀ ಸಿ.ಜಿ. ಪಿಂಟೊ, ಶ್ರೀ ಸುಶಾಂತ್ ಸಲ್ಡಾನ್ಹಾ, ಶ್ರೀ ಅಲ್ವಿನ್ ಪಿ. ಮೊಂತೇರೊ, ಶ್ರೀ ಫೆಲಿಕ್ಸ್ ಡಿ’ಕ್ರೂಜ್ ಮತ್ತು ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮೆನೆಜಸ್ ಉಪಸ್ಥಿತರಿದ್ದರು.ನಿರ್ದೇಶಕರಾದ ಶ್ರೀ ಎಲ್ರಾಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಬೈಂದೂರು ಶಾಖೆಯ ಹಿರಿಯ ವ್ಯವಸ್ಥಾಪಕರಾದ ಶ್ರೀ ಸಂದೀಪ್ ಕ್ವಾಡ್ರಸ್ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ಶ್ರೀ ಸ್ಟೀವನ್ ಕುಲಾಸೊ ಉದ್ಯಾವರ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಏಳು ದಿನ, ನಿರಂತರ ನೃತ್ಯ –ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ ಮಂಗಳೂರಿನ ಯುವತಿಗೆ , ರೋಹನ್ ಕಾರ್ಪೋರೇಶನ್ ಸಂಸ್ಥೆಯಿಂದ ಗೌರವ ಸನ್ಮಾನ.

ಮಂಗಳೂರು, ಆ.1: ಮಂಗಳೂರಿನ ಭರತನಾಟ್ಯ ಕಲಾವಿದೆಯಾದ ರೆಮೋನಾ ಎವೆಟ್ ಪಿರೇರಾ ಅವರು 7 ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ ಹಿನ್ನೆಲೆಯಲ್ಲಿ, ರೋಹನ್ ಕಾರ್ಪೋರೇಶನ್ ಸಂಸ್ಥೆ ಅವರ ಸಾಧನೆಯನ್ನು ಗುರುತಿಸಿ ಶುಕ್ರವಾರ ವಿಶೇಷವಾಗಿ ಸನ್ಮಾನಿಸಿದೆ. ಈ ಸನ್ಮಾನ ಕಾರ್ಯಕ್ರಮವು ಮಂಗಳೂರಿನ ಬಿಜೈ ಮುಖ್ಯ ರಸ್ತೆಯ ರೋಹನ್ ಸಿಟಿಯಲ್ಲಿರುವ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕರಾದ ಡಾ.ರೋಹನ್ ಮೊಂತೇರೊರವರು ರೆಮೋನಾ ಪಿರೇರಾ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹಾಗೂ ಮಂಗಳೂರಿನ ಕಲೆ, ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳಕಿಗೆ ತರುವ ಉದ್ದೇಶದಿಂದ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.“ರೆಮೋನಾ ಅವರ ಸಾಧನೆ ಮಂಗಳೂರು ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆ ತಂದಿದೆ. ಇವರು ಇಂದಿನ ಯುವ ಸಮುದಾಯಕ್ಕೆ ಸ್ಪೂರ್ತಿ” ಎಂದು ಡಾ.ರೋಹನ್ ಮೊಂತೇರೊ ಹೇಳಿದರು.ಅದ್ವಿತೀಯ ಸಾಧನೆಗಾಗಿ ಸಂಸ್ಥೆಯ ವತಿಯಿಂದ ಭವಿಷ್ಯದಲ್ಲಿಯೂ ಇಂತಹ ಪ್ರತಿಭೆಗಳಿಗೆ ವೇದಿಕೆ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.

ಪ್ರಾದೇಶಿಕ ವಾರ್ತೆಗಳು

Rohan Corporation felicitates Remona Evette Pereira for herGolden Book world record achievement.

Mangaluru, Aug 1: Renowned Bharatanatyam dancer from Mangaluru, RemonaEvette Pereira, who set a world record by performing Bharatanatyamcontinuously for seven days, was specially felicitated by Rohan Corporation onFriday in recognition of her exceptional achievement. The felicitation ceremony took place at the company’s office located at RohanCity on Bejai Main Road, Mangaluru. During the event, Dr.Rohan Monteiro,Founder of Rohan Corporation, honoured Remona Pereira with a certificate ofappreciation and a memento.The initiative was undertaken to encourage local talent and to bring Mangaluru’srich art and culture to a global platform.“Remona’s achievement has brought pride not only to Mangaluru but to the entireNation. She is an inspiration to today’s young generation,” said Dr.RohanMonteiro.He also assured that similar platforms will continue to be provided to supportsuch talent in the future.

Scroll to Top