ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ದ.ಕ.-ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರಕಾರದಿಂದ “ಮಾಸ್ಟರ್ ಪ್ಲಾನ್”!. ಶಾಸಕ ಮಂಜುನಾಥ ಭಂಡಾರಿ ಮನವಿಗೆ ಸಚಿವರ ಸ್ಪಂದನೆ

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಮಂಜುನಾಥ ಭಂಡಾರಿಯವರು ಪಶ್ಚಿಮ ಘಟ್ಟದಿಂದ ಹರಿಯುವ ನದಿಗಳು, ಜಲಪಾತಗಳು, ಕಡಲ ತೀರಗಳು ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಈ ಪ್ರದೇಶವನ್ನು“ಟೂರಿಸಂ ಹಬ್” ಆಗಿ ರೂಪಿಸಲು ಮಾಸ್ಟರ್ ಪ್ಲಾನ್ ತಯಾರಿಸುವ ಕುರಿತಂತೆ ಸರ್ಕಾರದ ಗಮನಕ್ಕೆ ತಂದಿದ್ದು ಸರ್ಕಾರವು ಈ ಕುರಿತು ನೀಡಿರುವ ಭರವಸೆಯ ಹಿನ್ನೆಲೆಯಲ್ಲಿ ಇಂದು ನಡೆದ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಯಿತು.ಈ ಕುರಿತು ಶೀಘ್ರವೇ ಎರಡು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಸಭೆ ಕರೆಯಲಾಗುವುದು. ಜಿಲ್ಲೆಗಳಲ್ಲಿ ಸಭೆ ನಡೆಸಲು ಜಿಲ್ಲಾಧಿಕಾರಿಗಳೇ ಮುಖ್ಯಸ್ಥರಾಗಿರುವುದರಿಂದ ಅವರ ಮೂಲಕ ಸಭೆ ಕರೆದು ಅದಕ್ಕೆ ಸದಸ್ಯರನ್ನು ಆಹ್ವಾನಿಸಿ, ಪ್ರವಾಸೋದ್ಯಮ ಚಟುವಟಿಕೆ ಗಳಿಗಾಗಿ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಯೋಜನೆ ಮಾಡಲಾಗುವುದು ಮತ್ತು “ರಿವರ್ ಫೆಸ್ಟ್ರವಲ್” ಬಗ್ಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಜೀವಿಶಾಸ್ತ್ರ ಸಚಿವರು ತಿಳಿಸಿದ್ದಾರೆ.ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸುವ ಹಾಗೂ ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿ ವಿಸ್ತ್ರತ ಯೋಜನೆಯನ್ನು ತಯಾರಿಸಲು ಸರ್ಕಾರದ ಆದೇಶ ಸಂಖ್ಯೆ: ಟಿಓಆ‌ರ್/154/ಟಿಡಿಪಿ/2023, ಬೆಂಗಳೂರು 21.08.2024ರಂದು ಅನುಮೋದನೆಯನ್ನು ನೀಡಿರುತ್ತದೆ.ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ರಸ್ತೆ ಬದಿ ಸೌಲಭ್ಯಗಳನ್ನು ಉನ್ನತೀಕರಿಸುವ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ ಟಿಒಆರ್ 56 ಟಿಡಿಪಿ 2025, 23-07-2025 ಘೋಷಣೆಯನ್ನು ಅನುಷ್ಠಾನಗೊಳಿಸುವ ಪ್ರಸ್ತಾವನೆಗೆ ತಾತ್ವಿಕ ಅನುಮೋದನೆ ನೀಡಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಣ್ಣೀರುಬಾವಿ ಕಡಲ ತೀರದಲ್ಲಿ ರೆಸಾರ್ಟ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಲು ಸಮಾಲೋಚಕ ಸಂಸ್ಥೆಯನ್ನು ಆಯ್ಕೆ ಮಾಡಲು ಟೆಂಡರ್ ಪ್ರಕಟಿಸಲಾಗಿದ್ದು, ಸದರಿ ಟೆಂಡರ್ ನ ತಾಂತ್ರಿಕ ಬಿಡ್ಡನ್ನು ದಿನಾಂಕ 07.08.2025 ರಂದು ತೆರೆಯಲಾಗಿದ್ದು, ಸದರಿ ಟೆಂಡರ್ ‌ನಲ್ಲಿ 3 ಬಿಡ್ಡುದಾರರು ಭಾಗವಹಿಸಿದ್ದು ಸದರಿ ಬಿಡ್ಡುದಾರರಿಗೆ ತಾಂತ್ರಿಕ ಪ್ರಾತ್ಯಕ್ಷಿಕೆ 29.08.2025 ರಂದು ಆಯೋಜಿಸಿದ್ದು. ಸದರಿ ಬಿಡ್ ಪರಿಶೀಲನಾ ಹಂತದಲ್ಲಿರುತ್ತದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೋಡಿಕಲ್, ಗುರುಪುರ ನದಿ ತೀರದಲ್ಲಿ ರೆಸಾರ್ಟ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ವಹಿವಾಟು ಸಲಹೆಗಾರರನ್ನು ಆಯ್ಕೆ ಮಾಡಿಕೊಳ್ಳಲು Infrastructure Development Ports and inland Water Transport Department Government of karnataka (IDP & IWTD) ರವರೊಂದಿಗೆ ಏಂಪ್ಯಾನಲ್ ಆಗಿರುವ ಸಂಸ್ಥೆಗಳಿಗೆ ಮಾತ್ರ ಟೆಂಡರ್ ಪ್ರಕಟಿಸಿದ್ದು, ಸದರಿ ಟೆಂಡರ್ ನ Pre-Bid ಸಭೆಯಲ್ಲಿ ಏಂಪ್ಯಾನಲ್ಡ್ ಬಿಡ್ಡುದಾರರಿಗೆ ಪ್ರಕಟಿಸಿರುವ ಟೆಂಡರ್ ಬದಲಿಗೆ ಒಪನ್ ಟೆಂಡ‌ರ್ ಅನ್ನು ಪ್ರಕಟಿಸಿರುವಂತೆ ಬಿಡ್ಡುದಾರ ಸಂಸ್ಥೆಗಳು ಕೋರಿರುತ್ತಾರೆ. ಆದ್ದರಿಂದ ಸದರಿ ಟೆಂಡ‌ರ್ ಅನ್ನು ರದ್ದುಪಡಿಸಿದ್ದು, ಮತ್ತೊಮ್ಮೆ ಅತ್ಯಂತ ಜರೂರಾಗಿ ಟೆಂಡರ್ (Open Tender) ಅನ್ನು ಮರುಪ್ರಕಟಿಸಲಾಗಿದ್ದು, ಸದರಿ ಟೆಂಡರ್‌ನ ತಾಂತ್ರಿಕ ಬಿಡ್ಡನ್ನು 12.09.2025 ರಂದು ತೆರೆಯಲಾಗುವುದು.ಉಡುಪಿ ಜಿಲ್ಲೆಯ ಸದರಿ ಮೂರು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಸಂಬಂಧಿಸಿದಂತೆ ವಹಿವಾಟು ಸಲಹೆಗಾರರನ್ನು ಆಯ್ಕೆ ಮಾಡಿಕೊಳ್ಳಲು Infrastructure Development Ports and inland Water Transport Department Government of karnataka (IDP & IWTD) ಎಂಪ್ಯಾನಲ್ ಆಗಿರುವ ಸಂಸ್ಥೆಗಳಿಗೆ ಮಾತ್ರ ಟೆಂಡರ್ ಪ್ರಕಟಿಸಿದ್ದು, ಸದರಿ ಟೆಂಡರ್ Pre-Bid ಸಭೆಯಲ್ಲಿ ಏಂಪ್ಯಾನಲ್ಡ್ ಬಿಡ್ಡುದಾರರಿಗೆ ಪ್ರಕಟಿಸಿರುವ ಟೆಂಡ‌ರ್ ಬದಲಿಗೆ ಒಪನ್ ಟೆಂಡರ್ ಅನ್ನು ಪ್ರಕಟಿಸಿರುವಂತೆ ಬಿಡುದಾರ ಸಂಸ್ಥೆಗಳು ಕೋರಿರುತ್ತಾರೆ. ಆದ್ದರಿಂದ ಸದರಿ ಟೆಂಡರ್ ಅನ್ನು ರದ್ದುಪಡಿಸಿದ್ದು, ಮತ್ತೊಮ್ಮೆ ಅತ್ಯಂತ ಜರೂರಾಗಿ ಟೆಂಡರ್ (Open Tender) ಅನ್ನು ಮರುಪ್ರಕಟಿಸಲಾಗಿದ್ದು, ಸದರಿ ಟೆಂಡರ್ ತಾಂತ್ರಿಕ ಬಿಡ್ಡನ್ನು 12.09.2025 ರಂದು ತೆರೆಯಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಚಿವರು ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಹಿಂದೂ ಸುರಕ್ಷಾ ಸಮಿತಿ ಅಡ್ಯಾರ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ. ಹಬ್ಬಗಳಿಂದ ಐಕ್ಯತೆ, ಸಾಮಾಜಿಕ ಜಾಗೃತಿಯೊಂದಿಗೆ ಪ್ರಗತಿ-ಪ್ರೊ|ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ನಮ್ಮ ಹಬ್ಬಗಳಲ್ಲೆಲ್ಲ ಐಕ್ಯತೆಯ ಸಂದೇಶವಿದೆ. ಅಷ್ಟಮಿಯ ಆಚರಣೆಯಲ್ಲಿ ಅದು ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ. ಶ್ರೀಕೃಷ್ಣನಂತಹ ಪುರಾಣ ಪುರುಷರ ಉಪದೇಶಗಳಿಂದ ಸಮಾಜದಲ್ಲಿ ಜಾಗೃತಿ ಮೂಡುವ ಜೊತೆಗೆ ವಿವಿಧ ಉದ್ಯಮ ರಂಗಗಳಲ್ಲಿ ವ್ಯಾಪಾರ ವಹಿವಾಟುಗಳ ಮೂಲಕ ಸಾಮಾಜಿಕ ಪ್ರಗತಿಯೂ ಸಾಧ್ಯವಾಗಿದೆ‌’ ಎಂದು ಮಾಜಿ ಅಕಾಡೆಮಿ ಸದಸ್ಯ, ಲೇಖಕ ಹಾಗೂ ಧಾರ್ಮಿಕ ಚಿಂತಕ ಪ್ರೊ|ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.ಹಿಂದೂ ಸುರಕ್ಷಾ ಸಮಿತಿ ಅಡ್ಯಾರ್ ಆಶ್ರಯದಲ್ಲಿ ಅಡ್ಯಾರು ಸೋಮನಾಥ ಕಟ್ಟೆ ಬಳಿ ಛತ್ರಪತಿ ಶಿವಾಜಿ ಮೈದಾನದ ಶ್ರೀಕೃಷ್ಣ ಕಲಾಮಂಟಪದ ಗೀತೋಪದೇಶ ಕಲಾವೇದಿಕೆಯಲ್ಲಿ ಜರಗಿದ 43ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.‘ಭಾರತೀಯ ಕಾವ್ಯಗಳಲ್ಲಿ ಪ್ರಸ್ಥಾನ ತ್ರಯಗಳೆಂದು ಕರೆಯಲ್ಪಡುವ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳಲ್ಲಿ ಮಾನವರ ಬದುಕನ್ನು ಸುಭಗಗೊಳಿಸುವ ಜೀವನ ಮೌಲ್ಯಗಳ ಪಾಠವಿದೆ. ಅದರಲ್ಲೂ ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯನ್ನು ಹಿಂದೂಗಳ ಪವಿತ್ರ ಧರ್ಮ ಗ್ರಂಥವೆಂದೆ ಭಾವಿಸಲಾಗಿದೆ’ ಎಂದವರು ನುಡಿದರು. ಶ್ರೀ ಕೃಷ್ಣನ ಭಾವಚಿತ್ರದ ಮುಂಭಾಗದಲ್ಲಿ ಗೋಪೂಜೆಯನ್ನು ನೆರವೇರಿಸಿ, ಗೋಗ್ರಾಸ ನೀಡಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅತಿಥಿಗಳು ಅಷ್ಟಮಿ ಉತ್ಸವವನ್ನು ಉದ್ಘಾಟಿಸಿದರು. ಸಾಧಕರ ಸನ್ಮಾನ:ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 50ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಉದ್ಯಮಿ ಮತ್ತು ಸಮಾಜಸೇವಕರಾದ ಎ.ಕೆ. ಜಯರಾಮ ಶೇಖರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ರಂಗ ಕಲಾವಿದ ಪ್ರೀತಂ ಕುಮಾರ್ ಅಡ್ಯಾರ್, ಕುಸ್ತಿಪಟು ಕು|ಎಂ. ಅನುಷಾ ಅಡ್ಯಾರ್ ಮತ್ತು ಹತ್ತನೇ ಹಾಗೂ ಪಿಯುಸಿಯಲ್ಲಿ 90% ಶೇಕಡ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ವತಿಯಿಂದ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಭೆಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.ಸುರತ್ಕಲ್ ಶಾಸಕ ವೈ. ಭರತ್ ಶೆಟ್ಟಿ, ಪುತ್ತೂರು ಆದರ್ಶ ದಂತ ಚಿಕಿತ್ಸಾಲಯದ ಮಹೇಶ್ ಕುಮಾರ್ ವೈ , ಎನ್.ಪಿ.ಎಸ್.ಎನ್.ಅಟೋಮೇಟಿವ್ ಮಾರ್ಕೆಟಿಂಗ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವೃಷಭರಾಜ್ ಜೈನ್, ಎಸ್.ಎಸ್.ಡಿ.ಲೋಡ್ಜಿಸ್ಟಿಕ್ ಮಾಲಕ ಮೋಹನ್ ಕುಮಾರ್, ಎಸ್.ಎಸ್. ಬ್ರದರ್ಸ್ ಪಾರ್ಕಿಂಗ್ ಏಜೆನ್ಸೀಸ್ ಮುಖ್ಯಸ್ಥ ಶಿವರಾಜ್ ಅಡ್ಯಾರ್ ಅತಿಥಿಗಳಾಗಿದ್ದರು. ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ವಿವೇಕ್ ಪೂಜಾರಿ ಕೋಡಿಮಜಲು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಹಿಂದೂ ಸುರಕ್ಷಾ ಸಮಿತಿ ಅಡ್ಯಾರ್ ಸಹ ಸಂಚಾಲಕ ಆನಂದ ಶೆಟ್ಟಿ ಅಡ್ಯಾರ್ ಸ್ವಾಗತಿಸಿದರು. ಸಂಚಾಲಕ ಪ್ರವೀಣ್ ಶೆಟ್ಟಿ ಆಡ್ಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಗೌರವಾಧ್ಯಕ್ಷ ಎ.ದಿವಾಕರ ನಾಯ್ಕ್ ಆರ್.ಕೆ.ಟ್ರಾವೆಲ್ಸ್, ಅಧ್ಯಕ್ಷ ಜಗದೀಶ್ ಶೆಟ್ಟಿ ಬಾಳಿಕೆ ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಕೃಷ್ಣ ಪೂಜಾರಿ ಆಡ್ಯಾರ್ ಪದವು ವಂದಿಸಿದರು. ಸಮಿತಿಯ ರಮೇಶ್ ತುಂಬೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜೇಶ್ ಕಲ್ಲಡ್ಕ ಮತ್ತು ಅಶೋಕ್ ಕೊಟ್ಟಾರಿ ಪದವು ಕಾರ್ಯಕ್ರಮ ನಿರೂಪಿಸಿದರು.ಸಮಾರಂಭದ ಬಳಿಕ ನೃತ್ಯ ಸಂಪದ ಅಡ್ಯಾರ್ ಇದರ ಸದಸ್ಯರಿಂದ ‘ರುಕ್ಮಿಣಿ ಸ್ವಯಂವರ’ ಯಕ್ಷಗಾನ ಪ್ರದರ್ಶನ ಜರಗಿತು.

ಪ್ರಾದೇಶಿಕ ವಾರ್ತೆಗಳು

ದೇಶ ಕಟ್ಟುವ ಕಾರ್ಯದಲ್ಲಿ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಳ್ಳಬೇಕು- ರಾಜೇಶ್ ನಾಯ್ಕ್

ಬಂಟ್ವಾಳ ಸೆ.16 ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರು ಸಕ್ರೀಯವಾಗಿರಬೇಕು. ಭಾ.ಜ.ಪಾ. ಪಕ್ಷವು ಕೇವಲ ರಾಜಕೀಯ ಪಕ್ಷವಾಗಿರದೆ ತತ್ವ ಸಿದ್ದಾಂತದ ಮೂಲಕ ರಾಷ್ಟç ನಿರ್ಮಾಣ ಕಾರ್ಯದಲ್ಲಿ ಸಕ್ರೀಯವಾಗಿದೆ. 20ಕೋಟಿಗಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿಯು ಜಗತ್ತಿನ ಅತೀ ದೊಡ್ಡ ಸಂಘಟಿತ ರಾಜಕೀಯ ಪಕ್ಷವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.ಅವರು ಮಾಣಿ ಮಹಾಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಕ್ತಿ ಕೇಂದ್ರದ ಪ್ರಮುಖ ಹರೀಶ್ ಕುಲಾಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಬಂಟ್ವಾಳ ಮಂಡಲ ಕಾರ್ಯದರ್ಶಿ ಸುದರ್ಶನ್ ಬಜ ,ಮಾಣಿ ಶಕ್ತಿಕೇಂದ್ರದ ಅಧ್ಯಕ್ಷ ಅರವಿಂದ ರೈ, ಪ್ರಧಾನ ಕಾರ್ಯದರ್ಶಿ ನಾಗೇಶ ಭಂಡಾರಿ , ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯೆ ಭವಾನಿ ಶೆಟ್ಟಿ ಉಪಸ್ಥಿತರಿದ್ದರು.ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧನಲಕ್ಷಿö್ಮÃ ಗಟ್ಟಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ , ವಿಕಾಸ್ ಪುತ್ತೂರು ಸಂಘಟನೆಯ ಬಗ್ಗೆ ಮಾರ್ಗದರ್ಶನ ನೀಡಿ ವಿಷಯ ಮಂಡಿಸಿದರು.ಸಮಾರೋಪ ಸಮಾರಂಭದಲ್ಲಿ ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿ ಶುಭ ಹಾರೈಸಿದರು. ಬಿಜೆಪಿ ನಾಯಕರಾದ ಮಾಧವ ಮಾವೆ , ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ , ಉಪಾಧ್ಯಕ್ಷ ರವೀಶ ಶೆಟ್ಟಿ, ನೇರಳಕಟ್ಟೆ ಸೊಸೈಟಿ ಅಧ್ಯಕ್ಷ ಪುಷ್ಪರಾಜ ಚೌಟ, ಅಭ್ಯಾಸ ವರ್ಗ ಸಂಚಾಲಕ ನಾರಾಯಣ ಶೆಟ್ಟಿ , ಸಹಸಂಚಾಲಕಿ ಸುಶೀಲ ಆನಂದ್ , ಬಿಜೆಪಿ ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು , ಮಹಿಳಾ ಪ್ರಮುಖರು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಮಿಸ್ ಇಂಡಿಯಾ ಆಸ್ಟ್ರಲ್ 2025 ಗೆ ಆಶ್ನಾ ಜುವೆಲ್ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರ ವಲಯಅದ ಫೆರಾರ್ ನಿವಾಸಿ ಆಶ್ನಾ ಜುವೆಲ್ ಡಿ ಸೋಜಾ ಅವರು ಶನಿವಾರ ಬೆಂಗಳೂರಿನ ದಿ ಕಿಂಗ್ಸ್ ಮಿಡೋಸ್ ನಲ್ಲಿ ನಡೆದ ವೈಭವಮಯ ಅಂತಿಮ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಆಸ್ಟ್ರಲ್ 2025 ಆಗಿ ಆಯ್ಕೆಯಾದರು.ದೇಶದ ವಿವಿಧ ಭಾಗಗಳಿಂದ ಬಂದ 45 ಸ್ಪರ್ಧಿಗಳ ನಡುವೆ ನಡೆದ ಈ ಸ್ಪರ್ಧೆ ಮಿಸ್ ಆ್ಯಂಡ್ ಮಿಸ್ ಇಂಡಿಯಾ ಪೆಜೆಂಟ್ ನ 9 ನೇ ಆವೃತ್ತಿಯಾಗಿತ್ತು. ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ಕಿರೀಟದ ಜತೆಗೆ ಆಶ್ನಾ ಹಲವು ಉಪ ಶೀರ್ಷಿಕೆಗಳನ್ನು ತಮ್ಮದಾಗಿಸಿಕೊಂಡರು. ಅವುಗಳಾದ ಮಿಸ್ ಬೆಸ್ಟ್ ಟ್ಯಾಲೆಂಟ್, ಮಿಸ್ ಬೆಸ್ಟ್ ಸ್ಟೇಜ್ ಪ್ರೆಸೆನ್ಸ್ ಹಾಗೂ ಮಿಸ್ ಬೆಸ್ಟ್ ವಾಕ್ ಪ್ರಶಸ್ತಿಗಳು ಅವರನ್ನು ಈ ಸ್ಪರ್ಧೆಯ ಪ್ರಮುಖ ವಿಜೇತೆಯನ್ನಾಗಿ ಮಾಡಿದವು.ಈ ಸಾಧನೆಯೊಂದಿಗೆ ಆಶ್ನಾ ಅವರು ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ 2626 ಎಂಬ ಗೌರವಾನ್ವಿತ ಬಿರುದನ್ನೂ ಗಳಿಸಿದ್ದಾರೆ. ಇದರ ಮೂಲಕ ಅವರು ಮುಂದಿನ ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದುಕೊಂಡಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್: ಸೇಕ್ರೆಡ್ ಹಾರ್ಟ್ ವಾರ್ಡ್ ನಲ್ಲಿ ಮೊಂತಿ ಫೆಸ್ತ್ ಆಚರಣೆ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಸೇಕ್ರೆಡ್ ಹಾರ್ಟ್ ವಾರ್ಡ್ ನಲ್ಲಿ ಮೊಂತಿ ಫೆಸ್ತ್ ನ್ನು ಹೊಸ ತೆನೆಯ ಹಬ್ಬದ ಊಟದೊಂದಿಗೆ ಆಚರಿಸಲಾಯಿತು.ಚರ್ಚ್ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಮಾತನಾಡಿ ಇಂತಹ ಸಾಮೂಹಿಕ ಆಚರಣೆಗಳಿಂದ ವಾರ್ಡ್ ಮಟ್ಟದಲ್ಲಿ ಕೌಟುಂಬಿಕ ಸಂಬಂಧ, ಒಗ್ಗಟ್ಟು ಮತ್ತು ಏಕತೆಯ ಭಾವನೆ ಬೆಳೆಯುತ್ತದೆ. ಜತೆಗೆ ವಾರ್ಡ್ ನ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದರು.ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಮತ್ತು ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಅವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ವಾರ್ಡ್ ಮುಖ್ಯಸ್ಥರಾದ ಮೋಲಿ ಡಿ ಸೋಜಾ ಸ್ವಾಗತಿಸಿದರು. ವಾರ್ಡ್ ಪ್ರತಿನಿಧಿಗಳಾದ ರಿಚಾರ್ಡ್ ಮಾರ್ಟಿಸ್, ಬ್ಯಾಪ್ಟಿಸ್ಟ್ ಡಿ ಕುನ್ಹಾ, ಅನಿಲ್ ಮಸ್ಕರೇಂಞಸ್ ಉಪಸ್ಥಿತರಿದ್ದರು.ಪಿಯುಸಿ ಪರೀಕ್ಷೆಯಲ್ಲಿ ಶೇ. 97.6 ಅಂಕ ಪಡೆದ ವಾರ್ಡ್ ಸದಸ್ಯೆ ಜೋಸ್ ಮಾ ಮರಿಯಾ ಮೋರಸ್ ಅವರನ್ನು ಸನ್ಮಾನಿಸಲಾಯಿತು. ವಾರ್ಡ್ ಸದಸ್ಯರಿಗಾಗಿ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಮರ್ಲಿನ್ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸ್ವೀಡಲ್ ಡಿ’ ಸೋಜಾ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್; ಮದರ್ ತೆರೆಸಾ ವಾರ್ಡ್ ನಲ್ಲಿ ಮೊಂತಿ ಫೆಸ್ತ್‌ ಆಚರಣೆ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಮದರ್ ತೆರೆಸಾ ವಾರ್ಡ್ ನಲ್ಲಿ ಮೊಂತಿ ಫೆಸ್ತ್ ನ್ನು ವಾರ್ಡ್ ಸದಸ್ಯರಾದ ರೋಲ್ಫಿ ಫೆರ್ನಾಂಡಿಸ್ ಮತ್ತು ಪ್ರೆಸಿಲ್ಲಾ ಫೆರ್ನಾಂಡಿಸ್‌ ಅವರ ಮನೆಯಲ್ಲಿ ಸಾಮೂಹಿಕವಾಗಿ ಆಚರಿಸಲಾಯಿತು. ವಾರ್ಡ್‌ ನ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚರ್ಚ್ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊ ಅವರು ಮಾತನಾಡಿ, ಮೇರಿ ಮಾತೆ ನಮ್ಮೆಲ್ಲರ ಕುಟುಂಬಗಳ ತಾಯಿ ಇದ್ದಂತೆ. ಅವರ ಜನ್ಮದಿನವನ್ನು ವಾರ್ಡ್ ನ ಎಲ್ಲಾ ಕುಟುಂಬದವರೂ ಒಟ್ಟು ಸೇರಿ ಆಚರಿಸುವ ಈ ಸಂದರ್ಭದಲ್ಲಿ ಮೇರಿ ಮಾತೆಯ ಒಳ್ಳೆಯ ಗುಣಗಳನ್ನು ನಮ್ಮ ಕುಟುಂಬಗಳಲ್ಲಿ ಅಳವಡಿಸಿಕೊಳ್ಳ ಬೇಕೆಂದರು.ವಾರ್ಡ್ ಮುಖ್ಯಸ್ಥ ರೋಶನ್ ಮೊಂತೇರೊ ಸ್ವಾಗತಿಸಿದರು. ವಾರ್ಡ್ ಪ್ರತಿನಿಧಿ ಪ್ರೆಸಿಲ್ಲಾ ಫೆರ್ನಾಂಡಿಸ್ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ಇನ್ನೋರ್ವ ಪ್ರತಿನಿಧಿ ಸುನಿತಾ ಫೆರ್ನಾಂಡಿಸ್ ಮತ್ತು ಮೈಕಲ್‌ ಕುವೆಲ್ಲೊ, ಸ್ಥಳಿಯ ಕಾನ್ವೆಂಟ್‌ ಮುಖ್ಯಸ್ಥೆ ಸಿಸ್ಟರ್‌ ಮೊಂತಿ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಾರ್ಡ್‌ ನ ಸದಸ್ಯರಿಗಾಗಿ ವಿವಿಧ ಆಟೋಟಗಳನ್ನು ಮತ್ತು ಸಹ ಭೋಜನವನ್ನು ಏರ್ಪಡಿಸಲಾಗಿತ್ತು.

ಪ್ರಾದೇಶಿಕ ವಾರ್ತೆಗಳು

ಪಿಲಿಕುಳದಲ್ಲಿ ದ.ಕ.ಹಾಗೂ ಕೊಡಗು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ತರಬೇತಿ. ‘ವಿಪತ್ತು ನಿರ್ವಹಣೆ ತರಬೇತಿಯಿಂದ ಹೆಚ್ಚಿನ ಕೌಶಲ್ಯ’-ಎನ್‌ಡಿಆರ್‌ಎಫ್ ಅಧಿಕಾರಿ ಶಾಂತಿಲಾಲ್ ಜಾಟಿಯಾ

ಮಂಗಳೂರು: ವಿಪತ್ತು ಸಂಭವಿಸಿದಾಗ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಹಾಗೂ ಅವುಗಳ ಪರಿಣಾಮಗಳನ್ನು ಕಡಿಮೆ ಮಾಡಲು ಅಗತ್ಯ ಇರುವ ಜ್ಞಾನ ಮತ್ತು ಕೌಶಲ್ಯವನ್ನು ವಿಪತ್ತು ನಿರ್ವಹಣೆ ತರಬೇತಿಯು ಒದಗಿಸುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮಾಂಡೆಂಟ್ ಶಾಂತಿಲಾಲ್ ಜಾಟಿಯಾ ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಹಾಗೂ ದ.ಕ. ಜಿಲ್ಲಾ ಸಂಸ್ಥೆ ವತಿಯಿಂದ ಎನ್‌ಡಿಆರ್‌ಎಫ್ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ದ.ಕ.ಹಾಗೂ ಕೊಡಗು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಿಲ್ಲಾ ನೋಡಲ್ ಅಧಿಕಾರಿ ವಿಜಯಕುಮಾರ್ ಪೂಜಾರ್ ಶಿಬಿರ ಉದ್ಘಾಟಿಸಿದರು. ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ನಿರ್ದೇಶಕ ಪಿ.ಬಿ.ಹರೀಶ್ ರೈ, ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಗುರುಪುರ ಸ್ಥಳೀಯ ಸಂಸ್ಥೆ ಅಧ್ಯಕ್ಷ ಸೋಹನ್ ಅತಿಕಾರಿ, ಉಪಾಧ್ಯಕ್ಷ ಸುನೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಸ್ಕೌಟ್ ಅಯುಕ್ತ ಟಿ.ಎಂ.ತುಂಬೆ ಅಧ್ಯಕ್ಷತೆ ವಹಿಸಿದ್ದರು.ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ 30 ಕಾಲೇಜುಗಳ 355 ರೋವರ್ಸ್‌-ರೇಂಜರ್ಸ್‌ ವಿದ್ಯಾರ್ಥಿಗಳು ಒಂದು ವಾರದತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸಂಘಟಕಿ ಲತಾ ಮಂಜುನಾಥ್ ತಿಳಿಸಿದರು. ಸ್ಕೌಟ್ಸ್‌ನ ರಾಜ್ಯ ಸಂಘಟನಾಆಯುಕ್ತ ಭರತ್‌ರಾಜ್.ಕೆ. ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್.ವಂದಿಸಿದರು.ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಸಂತ ವಿನ್ಸೆಂಟ್ ಪಾವ್ಲ್ ಪ್ರಾದೇಶಿಕ ಸಿಟಿ ವಲಯದ ಸಾಮಾನ್ಯ ಸಭೆ

ಮಂಗಳೂರು: ಸಮಾಜ ಸೇವಾ ಸಂಘಟನೆ ಸಂತ ವಿನ್ಸೆಂಟ್ ಪಾವ್ಲ್ ಸಭಾ ಇದರ ಮಂಗಳೂರು ಪ್ರಾದೇಶಿಕ ಸಿಟಿ ವಲಯದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಆಧ್ಯಾತ್ಮಿಕ ಸಮಾಲೋಚನೆಯು ರವಿವಾರ (ಸೆ. 14) ಮಂಗಳೂರಿನ ದೇರೆಬೈಲ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.ಸುಖ ಜೀವನವನ್ನು ದಾನ ಹಾಗೂ ಧರ್ಮದ ಮೂಲಕ ನಡೆಸ ಬಹುದು ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಈ ಸಭೆಯಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಜೋಸೆಫ್ ಮಾರ್ಟಿಸ್ ಅವರು ಮಾತನಾಡಿ ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಸದಸ್ಯರು ಯಾವುದೇ ಪ್ರಚಾರವಿಲ್ಲದೆ ಗೌಪ್ಯವಾಗಿ ದಾನ, ಧರ್ಮ, ಬಡವರ ಸೇವೆಯನ್ನು ಮಾಡುತ್ತಿದ್ದು, ಈ ಸೇವೆ ದೇವರ ಸೇವೆಗೆ ಸಮಾನ. ಬಡತನವು ಖಂಡಿತಾ ಶಾಪವಲ್ಲ. ಯಾವುದೇ ಪರಿಸ್ಥಿತಿಯಲ್ಲಿಯೂ ನಾವು ಧೃತಿಗೆಡದೆ ಪ್ರಯತ್ನವನ್ನು ಮುಂದುವರಿಸಿದರೆ ಯಶಸ್ಸು ಸಾಧಿಸ ಬಹುದು ಎಂದರು.ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಿಟಿ ವಲಯದ ಅಧ್ಯಕ್ಷ ರಿಚಾರ್ಡ್ ಪಿಂಟೊ, ಕಾರ್ಯದರ್ಶಿ ಐರಿನ್ ಪಿಂಟೊ, ಖಜಾಂಚಿ ಯೂಜಿನ್ ಲೋಬೊ, ದೇರೆಬೈಲ್ ಘಟಕದ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಪ್ರಾದೇಶಿಕ ಸಿಟಿ ವಲಯದ ಉಪಾಧ್ಯಕ್ಷ ಜೋಕಿಂ ಮತ್ತು ಇತರರು ಉಪಸ್ಥಿತರಿದ್ದರು.ಆಶಾ ಡಿ ಸಿಲ್ವಾ ನೇತೃತ್ವದ ತಂಡದಿಂದ ಪ್ರಾರ್ಥನೆ ನಡೆಯಿತು. ಕಾರ್ಯದರ್ಶಿ ಐರಿನ್ ಪಿಂಟೊ ವರದಿ ವಾಚಿಸಿದರು.ಪ್ರಾದೇಶಿಕ ಸಿಟಿ ವಲಯವು ದೇರೆಬೈಲ್, ಕುಲಶೇಖರ, ಬೋಂದೆಲ್, ಪಾಲ್ದನೆ, ವಾಮಂಜೂರು, ಕೆಲರಾಯ್, ಬಜಾಲ್, ನೀರುಮಾರ್ಗ, ಆಂಜೆಲೋರ್, ಬಜ್ಜೋಡಿ, ಶಕ್ತಿನಗರ, ಪೆರ್ಮಾಯಿ ಚರ್ಚ್ ಗಳನ್ನು ಒಳಗೊಂಡಿದೆ.

ಪ್ರಾದೇಶಿಕ ವಾರ್ತೆಗಳು

MCC Bank Ltd Inaugurates 12th ATM at Kinnigoli Branch

MCC Bank, Mangalore inaugurated its 12th ATM at the Kinnigoli Branch on Saturday, September 13, 2025.The ATM was officially inaugurated by Dr Rudolph Joyer Noronha, Chief General Manager – Corporate Branding and Corporate Communications, MRPL. The ATM was blessed by Rev. Fr Joachim Fernandes, Parish Priest of Immaculate Conception Church, Kinnigoli, who invoked divine blessings for the bank’s continued service to the community. The first cash withdrawal from the newly inaugurated ATM was made by Rev. Fr.Paul Sequeira, Parish Priest of St. Paul’s Church, Balkunje.The event was graced by the presence of Chief Guest Mr Jerome D’Almeida, Ex-NRI, Secretary of Catholic Sabha Kinnigoli, & Auditor of Vincent de Paul Kinnigoli, and Mr Dhananjaya P. Shettigar, Proprietor of M/s Chaitanya Medicals and Sagarika Arrangers, Kinnigoli. General Manager, Mr Sunil Menezes and Branch Manager Mr Anil R. D’Souza were also present on the dais. The function was presided over by Sahakara Ratna Mr Anil Lobo, Chairman of MCC Bank. In his presidential address, he thanked the customers of the Kinnigoli Branch for their continuous support in the branch’s growth over the last 28 years. He highlighted the Bank’s remarkable progress in the past seven years, noting that its turnover had increased from ₹500 crore to ₹1300 crore during this period. He also shared the Bank’s plans for future expansion, including the opening of new branches at Santhekatte, Deralakatte, and other locations. He urged customers to extend their continued support and cooperation. He further emphasized that MCC Bank has initiated a tradition of honouring achievers in various fields such as education, sports, and arts. Concluding his address, he expressed heartfelt gratitude to the Board of Directors, staff, customers, and community members for their unwavering support. He assured that MCC Bank remains committed to delivering high-quality services without compromise.Delivering the first keynote address, Rev. Fr Joachim Fernandes congratulated the Bank on the inauguration of its 12th ATM at the Kinnigoli Branch. A customer of MCC Bank since 1996, he fondly recalled his long association with the Bank and praised the branch’s excellent customer service. He urged the Bank to continue providing value-based and result-oriented services and stressed the importance of building strong, friendly relationships with customers. He expressed his hope that MCC Bank would expand across Karnataka and eventually throughout the country.Addressing the gathering, Dr Rudolph Joyer Noronha thanked the Bank for the opportunity to be part of the ATM inauguration at Kinnigoli. He commended the professionalism of MCC Bank and pledged his support. He noted that in today’s highly competitive environment, growth is challenging; however, MCC Bank’s strong financials clearly reflect the management’s vision and the dedication of its staff in realizing that vision.In his address, Rev. Fr Paul Sequeira applauded the dynamic leadership of Chairman Mr Anil Lobo and conveyed his best wishes for the Bank’s continued success.On this occasion, educational achievers in SSLC and PUC were honoured for their accomplishments. In addition, Ms Nikitha Reona D’Souza (CA Completed), Dr Melisha Rodrigues (NEET PG 163rd Rank), and Mr Shown Sequeira (Karate Champion) were felicitated for their outstanding achievements in their respective fields.As part of the celebrations, customers whose birthdays fell on September 13 were specially honoured with a cake-cutting ceremony, and Mr Daniel Dsouza who celebrates his 75th Birthday on 19th of September, was also felicitated.Dr.Freeda Flavia D’Souza, Director, welcomed the dignitaries. The programme commenced with a prayer led by Ms.Ancilla Fernandes and Ms Dealle D’Souza.Directors Mr Andrew Dsouza, Mr Melwin Vas, Mr David Dsouza, Deputy General Manager Mr Raj Menezes, Branch Managers , staff members, and customers in large number.were present. Ms Lavita Dsouza, Mulki compered the programme and proposed the vote of thanks.

ಪ್ರಾದೇಶಿಕ ವಾರ್ತೆಗಳು

ಎಂ.ಸಿ.ಸಿ. ಬ್ಯಾಂಕಿನ 12ನೇ ಎಟಿಎಂ ಕಿನ್ನಿಗೋಳಿ ಶಾಖೆಯಲ್ಲಿ ಉದ್ಘಾಟನೆ

ಎಂಸಿಸಿ ಬ್ಯಾಂಕ್, ಮಂಗಳೂರು ತನ್ನ 12 ನೇ ಎಟಿಎಂ ಅನ್ನು ಸೆಪ್ಟೆಂಬರ್ 13, 2025 ರ ಶನಿವಾರ ಕಿನ್ನಿಗೋಳಿ ಶಾಖೆಯಲ್ಲಿ ಉದ್ಘಾಟಿಸಿತು.ಈ ಎಟಿಎಂ ಅನ್ನು ಎಂಆರ್‌ಪಿಎಲ್‌ನ ಕಾರ್ಪೊರೇಟ್ ಬ್ರ‍್ಯಾಂಡಿAಗ್ ಮತ್ತು ಕಾರ್ಪೊರೇಟ್ ಕಮ್ಯುನಿಕೇಷನ್ಸ್ನ ಚೀಫ್ ಜನರಲ್ ಮ್ಯಾನೇಜರ್ ಡಾ| ರುಡಾಲ್ಫ್ ಜೋಯರ್ ನೊರೊನ್ಹಾ ಅವರು ಉದ್ಘಾಟಿಸಿದರು. ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್ನ ಧರ್ಮಗುರು ರೆವರೆಂಡ್ ಫಾದರ್ ಜೋಕಿಮ್ ಫೆರ್ನಾಂಡಿಸ್ ಅವರು ಎಟಿಎಂ ಅನ್ನು ಆಶೀರ್ವದಿಸಿದರು. ಹೊಸದಾಗಿ ಉದ್ಘಾಟನೆಗೊಂಡ ಎಟಿಎಂನಿAದ ಮೊದಲ ನಗದು ಹಿಂಪಡೆಯುವಿಕೆಯನ್ನು ಬಳ್ಕುಂಜೆಯ ಸೇಂಟ್ ಪೌಲ್ಸ್ ಚರ್ಚ್ನ ಧರ್ಮಗುರು ರೆವರೆಂಡ್ ಫಾದರ್ ಪೌಲ್ ಸಿಕ್ವೇರಾ ಮಾಡಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಎನ್‌ಅರ್‌ಐ, ಕಥೋಲಿಕ್ ಸಭಾ ಕಿನ್ನಿಗೋಳಿಯ ಕಾರ್ಯದರ್ಶಿ ಹಾಗೂ ವಿನ್ಸೆಂಟ್ ಡಿ ಪಾಲ್ ಲೆಕ್ಕಪರಿಶೋಧಕ ಶ್ರೀ ಜೆರೋಮ್ ಡಿ’ಅಲ್ಮೇಡಾ ಮತ್ತು ಕಿನ್ನಿಗೋಳಿಯ ಮೆಸ್ಸರ್ಸ್ ಚೈತನ್ಯ ಮೆಡಿಕಲ್ಸ್ ಮತ್ತು ಸಾಗರಿಕಾ ಅರೇಂಜರ್ಸ್ನ ಮಾಲೀಕ ಶ್ರೀ ಧನಂಜಯ ಪಿ. ಶೆಟ್ಟಿಗಾರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೇಜಸ್ ಮತ್ತು ಶಾಖಾ ವ್ಯವಸ್ಥಾಪಕ ಶ್ರೀ ಅನಿಲ್ ಆರ್. ಡಿ’ಸೋಜಾ ಹಾಜರಿದ್ದರು.ಸಮಾರಂಭದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕಳೆದ 28 ವರ್ಷಗಳಲ್ಲಿ ಶಾಖೆಯ ಬೆಳವಣಿಗೆಗೆ ನಿರಂತರ ಬೆಂಬಲ ನೀಡಿದ ಕಿನ್ನಿಗೋಳಿ ಶಾಖೆಯ ಗ್ರಾಹಕರಿಗೆ ಅವರು ಧನ್ಯವಾದ ಅರ್ಪಿಸಿದರು. ಕಳೆದ ಏಳು ವರ್ಷಗಳಲ್ಲಿ ಬ್ಯಾಂಕಿನ ಗಮನಾರ್ಹ ಪ್ರಗತಿಯನ್ನು ತಿಳಿಸಿ ಈ ಅವಧಿಯಲ್ಲಿ ಬ್ಯಾಂಕಿನ ವಹಿವಾಟು ₹ 500 ಕೋಟಿಯಿಂದ ₹ 1300 ಕೋಟಿಗೆ ಏರಿದೆ. ಸಂತೆಕಟ್ಟೆ, ದೇರಳಕಟ್ಟೆ ಮತ್ತು ಇತರ ಸ್ಥಳಗಳಲ್ಲಿ ಹೊಸ ಶಾಖೆಗಳನ್ನು ತೆರೆಯುವುದು ಸೇರಿದಂತೆ ಬ್ಯಾಂಕಿನ ಮುಂದಿನ ಯೋಜನೆಗಳನ್ನು ಅವರು ಹಂಚಿ‌ಕೊಂಡರು. ಗ್ರಾಹಕರು ತಮ್ಮ ನಿರಂತರ ಬೆಂಬಲ ಮತ್ತು ಸಹಕಾರವನ್ನು ನೀಡಬೇಕೆಂದು ಅವರು ಒತ್ತಾಯಿಸಿದರು. ಶಿಕ್ಷಣ, ಕ್ರೀಡೆ ಮತ್ತು ಕಲೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಗೌರವಿಸುವ ಸಂಪ್ರದಾಯವನ್ನು ಎಂಸಿಸಿ ಬ್ಯಾಂಕ್ ಆರಂಭಿಸಿದೆ ಎಂದು ಹೇಳಿ, ನಿರ್ದೇಶಕರು, ಸಿಬ್ಬಂದಿ, ಗ್ರಾಹಕರು ಮತ್ತು ಸಮುದಾಯದ ಸದಸ್ಯರಿಗೆ ಅವರ ಅಚಲ ಬೆಂಬಲಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ರಾಜಿ ಇಲ್ಲದೆ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡಲು ಎಂಸಿಸಿ ಬ್ಯಾಂಕ್ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು. ರೆವರೆಂಡ್ ಫಾದರ್ ಜೋಕಿಮ್ ಫೆರ್ನಾಂಡಿಸ್ ಮತನಾಡಿ, ಕಿನ್ನಿಗೋಳಿ ಶಾಖೆಯಲ್ಲಿ ತನ್ನ 12 ನೇ ಎಟಿಎಂ ಉದ್ಘಾಟಿಸಿದ ಬ್ಯಾಂಕಿಗೆ ಅಭಿನಂದಿಸಿದರು. 1996ರಿಂದ ಎಂಸಿಸಿ ಬ್ಯಾಂಕಿನ ಗ್ರಾಹಕರಾಗಿರುವ ಅವರು, ಬ್ಯಾಂಕಿನೊAದಿಗಿನ ತಮ್ಮ ದೀರ್ಘ ಸಂಬಂಧವನ್ನು ನೆನಪಿಸಿಕೊಂಡರು ಮತ್ತು ಶಾಖೆಯ ಅತ್ಯುತ್ತಮ ಗ್ರಾಹಕ ಸೇವೆಯನ್ನು ಶ್ಲಾಘಿಸಿದರು. ಮೌಲ್ಯಾಧಾರಿತ ಮತ್ತು ಫಲಿತಾಂಶ-ಆಧಾರಿತ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸಲು ಅವರು ಬ್ಯಾಂಕಿಗೆ ಸೂಚಿಸಿ ಗ್ರಾಹಕರೊಂದಿಗೆ ಬಲವಾದ, ಸ್ನೇಹಪರ ಸಂಬAಧಗಳನ್ನು ನಿರ್ಮಿಸುವ ಮಹತ್ವವನ್ನು ಹೇಳಿದರು. ಎಂಸಿಸಿ ಬ್ಯಾಂಕ್ ಕರ್ನಾಟಕದಾದ್ಯಂತ ಮತ್ತು ಅಂತಿಮವಾಗಿ ದೇಶಾದ್ಯಂತ ವಿಸ್ತರಿಸುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಡಾ| ರುಡಾಲ್ಫ್ ಜೋಯರ್ ನೊರೊನ್ಹಾ, ಕಿನ್ನಿಗೋಳಿಯಲ್ಲಿ ನಡೆದ ಎಟಿಎಂ ಉದ್ಘಾಟನೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಬ್ಯಾಂಕಿಗೆ ಧನ್ಯವಾದ ಅರ್ಪಿಸಿದರು. ಅವರು ಎಂಸಿಸಿ ಬ್ಯಾಂಕಿನ ವೃತ್ತಿಪರತೆಯನ್ನು ಶ್ಲಾಘಿಸಿ ತಮ್ಮ ಬೆಂಬಲವನ್ನು ಘೋಷಿಸಿದರು. ಇಂದಿನ ಅತ್ಯಂತ ಸ್ಪರ್ಧಾತ್ಮಕ ವಾತಾವರಣದಲ್ಲಿ, ಬೆಳವಣಿಗೆ ಸವಾಲಿನದ್ದಾಗಿದ್ದರೂ ಎಂಸಿಸಿ ಬ್ಯಾಂಕಿನ ಬಲವಾದ ಹಣಕಾಸು ನಿರ್ವಹಣೆಯ ದೃಷ್ಟಿಕೋನ ಮತ್ತು ಆ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಅದರ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಸಮರ್ಪಣೆಯನ್ನು ಶ್ಲಾಘಿಸಿದರು.ರೆವರೆಂಡ್ ಫಾದರ್ ಪಾಲ್ ಸಿಕ್ವೇರಾ ಮತನಾಡಿ ಬ್ಯಾಂಕಿನ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಅವರ ಕ್ರಿಯಾತ್ಮಕ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಬ್ಯಾಂಕಿನ ನಿರಂತರ ಯಶಸ್ಸಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಿಎ ಪೂರ್ಣಗೊಳಿಸಿದ ನಿಕಿತಾ ರಿಯೋನಾ ಡಿ’ಸೋಜಾ, ಡಾ| ಮೆಲಿಶಾ ರೊಡ್ರಿಗಸ್ (ನೀಟ್ ಪಿಜಿ 163ನೇ ರ‍್ಯಾಂಕ್) ಮತ್ತು ಶ್ರೀ ಶೋನ್ ಸಿಕ್ವೇರಾ (ಕರಾಟೆ ಚಾಂಪಿಯನ್) ಅವರನ್ನು ಅವರ ಅತ್ಯುತ್ತಮ ಸಾಧನೆಗಳಿಗಾಗಿ ಸನ್ಮಾನಿಸಲಾಯಿತು.ಆಚರಣೆಯ ಭಾಗವಾಗಿ, ಸೆಪ್ಟೆಂಬರ್ 13 ರಂದು ಹುಟ್ಟುಹಬ್ಬ ಆಚರಿಸಿಕೊಂಡ ಗ್ರಾಹಕರನ್ನು ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಸನ್ಮಾನಿಸಲಾಯಿತು ಮತ್ತು ಸೆಪ್ಟೆಂಬರ್ 19ರಂದು ತಮ್ಮ 75 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಶ್ರೀ ಡೇನಿಯಲ್ ಡಿಸೋಜಾ ಅವರನ್ನು ಸಹ ಸನ್ಮಾನಿಸಲಾಯಿತು.ನಿರ್ದೇಶಕಿ ಡಾ| ಫ್ರೀಡಾ ಫ್ಲಾÃವಿಯಾ ಡಿ’ಸೋಜಾ ಸ್ವಾಗತಿಸಿದರು. ಅನ್ಸಿಲ್ಲಾ ಫೆರ್ನಾಂಡಿಸ್ ಮತ್ತು ಡೇಲ್ ಡಿ’ಸೋಜಾ ಅವರ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ನಿರ್ದೇಶಕರಾದ ಶ್ರೀ ಆಂಡ್ರ್ಯೂ ಡಿಸೋಜ, ಶ್ರೀ ಮೆಲ್ವಿನ್ ವಾಸ್, ಶ್ರೀ ಡೆವಿಡ್ ಡಿಸೋಜ, ಉಪ ಪ್ರಧಾನ ವ್ಯವಸ್ಥಾಪಕ ಶ್ರೀ ರಾಜ್ ಮೆನೆಜಸ್, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ಸದಸ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿದ್ದರು. ಶ್ರೀಮತಿ ಲವಿಟಾ ಡಿಸೋಜ, ಮುಲ್ಕಿ ನಿರೂಪಿಸಿ ವಂದಿಸಿದರು.

Scroll to Top