ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಅಂತಾರಾಜ್ಯ ಬಂಟ ಕ್ರೀಡೋತ್ಸವ: ಹಗ್ಗಜಗ್ಗಾಟದಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡ ಪ್ರಥಮ

ಸುರತ್ಕಲ್: ಪಡುಬಿದ್ರೆ ಬಂಟರ ಸಂಘ ಮತ್ತು ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಪಡುಬಿದ್ರೆಯಲ್ಲಿ ದಿ ರಮೇಶ್ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಅಂತಾರಾಜ್ಯ ಬಂಟ ಕ್ರೀಡೋತ್ಸವದಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸೆಮಿಫೈನಲ್ ನಲ್ಲಿ ಬಂಟ್ವಾಳ ತಂಡದ ಎದುರು ಜಯ ಸಾಧಿಸಿದ ಸುರತ್ಕಲ್ ತಂಡ ಫೈನಲ್ ನಲ್ಲಿ ಮಂಜೇಶ್ವರ ತಂಡವನ್ನು 2-0 ಅಂತರದಿಂದ ಸೋಲಿಸಿ ಪ್ರಶಸ್ತಿ ಜಯಿಸಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮುಣಿಯಾಲು ಉದಯಕುಮಾರ್ ಶೆಟ್ಟಿ ಪ್ರಶಸ್ತಿ ಹಸ್ತಾಂತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಕ್ರೀಡಾ ಕಾರ್ಯದರ್ಶಿಗಳಾದ ಶಿಶಿರ್ ಶೆಟ್ಟಿ, ಬಬಿತಾ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು 75 ಸಾವಿರ ನಗದು ಮತ್ತು ಪ್ರಶಸ್ತಿಯನ್ನು ಒಳಗೊಂಡಿತ್ತು. ತರಬೇತುದಾರರಾದ ನಿನಾದ್ ಜಯರಾಮ್ ಶೆಟ್ಟಿ, ವಿಕ್ರಂ ಮಾಡ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಚಲನಚಿತ್ರೋಧ್ಯಮ ಕುಸಿಯುತ್ತಿರುವಾಗ ʻಪಯಣ್ʼಶತದಿನಗಳ ಪ್ರದರ್ಶನ ಕಂಡಿರುವುದು ಆಶಾದಾಯಕ ಬೆಳವಣಿಗೆ: ಐವನ್ ಡಿʼಸೋಜ

ʻಇಡೀ ವಿಶ್ವಾಧ್ಯಂತ ಚಲನ ಚಿತ್ರೋಧ್ಯಮವು ಕುಸಿತ ಕಂಡಿರುವಾಗ ಕೊಂಕಣಿ ಭಾಷೆಯ ಪ್ರಾದೇಶಿಕ ಚಿತ್ರವೊಂದು ನೂರು ದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಸೀಮಿತ ಮಾರುಕಟ್ಟೆ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ. ಕೊಂಕಣಿಯಲ್ಲಿ ಚಲನಚಿತ್ರಗಳನ್ನು ತಯಾರಿಸುವುದು ಯಾವುದೇ ಲಾಭದ ನಿರೀಕ್ಷೆಯಿಂದಲ್ಲ, ವಿನಃ ಮಾತೃಭಾಷೆಯ ಮೇಲಿನ ಪ್ರೇಮದಿಂದ. ʻಪಯಣ್ʼ ಕೊಂಕಣಿಯಲ್ಲಿ ಇದುವರೆಗೆ ಬಂದಂತಹ ಎಲ್ಲಾ ಚಿತ್ರಗಳಿಗಿಂತ ಭಿನ್ನವಾಗಿದ್ದು, ಧನಾತ್ಮಕ ಚಿಂತನೆಗಳನ್ನು ಪ್ರೇರೇಪಿಸುವ ಕಲಾತ್ಮಕ ಚಿತ್ರವಾಗಿ ಮೂಡಿ ಬಂದಿದೆ. ಅದಕ್ಕಾಗಿ ನಾವು ʻಸಂಗೀತ್ ಘರ್ ಪ್ರೊಡಕ್ಷನ್ಸ್ʼ ಜೋಡಿ ಮೆಲ್ವಿನ್ ಪೆರಿಸ್ ಮತ್ತು ನೀಟ ಪೆರಿಸ್ ಇವರನ್ನು ಖಂಡಿತವಾಗಿಯೂ ಅಭಿನಂದಿಸಬೇಕುʼ ,ಎಂದರು ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿʼಸೋಜ. ಅವರು ಬಿಜೈನಲ್ಲಿರುವ ಭಾರತ್ ಸಿನೇಮಾದಲ್ಲಿ ʻಪಯಣ್ʼಕೊಂಕಣಿ ಚಲನಚಿತ್ರದ ಶತದಿನೋತ್ಸವ ಸಂಭ್ರಮಾಚರಣೆಯಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ವಿಧ್ಯಾ ಸಂಸ್ಥೆಗಳ ರೆಕ್ಟರ್ ವಂ| ಫಾ| ಮೆಲ್ವಿನ್ ಜೋಸೆಫ್ ಪಿಂಟೊ, ಅನಿವಾಸಿ ಉಧ್ಯಮಿ ಶ್ರೀ ಜೇಮ್ಸ್ ಮೆಂಡೊನ್ಸಾ ಮತ್ತು ದಾಖಲೆ ನಿರ್ಮಿಸಿದ ʻಅಸ್ಮಿತಾಯ್ʼ ಕೊಂಕಣಿ ಚಿತ್ರ ನಿರ್ಮಾಪಕ, ʻಮಾಂಡ್ ಸೊಭಾಣ್ʼ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಲುವಿ ಪಿಂಟೊ ಗೌರವ ಅಥಿತಿಳಾಗಿ ಹಾಜರಿದ್ದರು. ಪಯಣ್ ಸಿನಿಮಾ ನಿರ್ದೇಶಕ ʻಸಂಗೀತ್ ಗುರುʼ ಶ್ರೀ ಜೊಯೆಲ್ ಪಿರೇರಾ ವೇದಿಕೆಯಲ್ಲಿ ಹಾಜರಿದ್ದರು. ಕೊಂಕಣಿಯ ಖ್ಯಾತ ಗಾಯಕ, ಪಯಣ್ ಚಲನಚಿತ್ರದ ನಿರ್ಮಾಪಕ ಮೆಲ್ವಿನ್ ಪೆರಿಸ್ರವರು ಚಲನಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲಾ ಕಲಾವಿದರಿಗೆ, ತಂತ್ರಜ್ಞರಿಗೆ ಹಾಗೂ ವೀಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಸಿನಿಮಾ ನಟ, ಸಂಯೋಜಕ, ಸಂಘಟಕ ಶ್ರೀ ಲೆಸ್ಲಿ ರೇಗೊ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ʻಆಂಜೆಲೊರ್ ಕೊಯರ್ʼ ಪಂಗಡದವರು ಕ್ರಿಸ್ಮಸ್ ಹಾಡೊಂದನ್ನು ಹಾಡಿ ಟಾಕಿಸಿನಲ್ಲಿ ಕ್ರಿಸ್ಮಸ್ ಕಳೆ ತಂದರು. ಕಾರ್ಯಕ್ರಮದ ಕೊನೆಯಲ್ಲಿ ತುಂಬಿದ ಚಿತ್ರಮಂದಿರದಲ್ಲಿ ʻಪಯಣ್ʼ ಸಿನಿಮಾದ ಕೊನೆಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಪ್ರಾದೇಶಿಕ ವಾರ್ತೆಗಳು

ಬಂಗ್ರ ಕೂಳೂರು, ಮಂಗಳೂರು “ರಾಮ – ಲಕ್ಷ್ಮಣ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :ಕನೆಹಲಗೆ: 07 ಜೊತೆಅಡ್ಡಹಲಗೆ: 08 ಜೊತೆಹಗ್ಗ ಹಿರಿಯ: 20 ಜೊತೆನೇಗಿಲು ಹಿರಿಯ: 32 ಜೊತೆಹಗ್ಗ ಕಿರಿಯ: 23 ಜೊತೆನೇಗಿಲು ಕಿರಿಯ: 81 ಜೊತೆಒಟ್ಟು ಕೋಣಗಳ ಸಂಖ್ಯೆ: 171 ಜೊತೆ•••••••••••••••••••••••••••••••••••••••••••••• ಕನೆಹಲಗೆ:( ಸಮಾನ ಬಹುಮಾನ ) ಬೊಳ್ಳಂಬಳ್ಳಿ ಶ್ರೀ ರಾಮ ಚೈತ್ರ ಪರಮೇಶ್ವರ ಭಟ್ಹಲಗೆ ಮುಟ್ಟಿದವರು: ಭಟ್ಕಳ ಪಾಂಡು ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿಹಲಗೆ ಮುಟ್ಟಿದವರು: ಭಟ್ಕಳ ಪಾಂಡು ವಾಮಂಜೂರು ತಿರುವೈಲುಗುತ್ತು ಅಭಿಷೇಕ್ ನವೀನ್ಚಂದ್ರ ಆಳ್ವಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ ಬೋಳಾರ ತ್ರಿಶಾಲ್ ಕೆ ಪೂಜಾರಿಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಮುದ್ದುಮನೆ ಭರತ್ ನಾಯ್ಕ್ ಬಾರ್ಕೂರು ಶಾಂತಾರಾಮ ಶೆಟ್ಟಿಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ ನಿಡ್ಡೋಡಿ ಕಾನ ರಾಮ ಸುವರ್ಣಹಲಗೆ ಮುಟ್ಟಿದವರು: ಕೊಕ್ಕರ್ಣೆ ವಡಾಪಿ ಸುರೇಶ್ ನಾಯ್ಕ್•••••••••••••••••••••••••••••••••••••••••••••• ಅಡ್ಡ ಹಲಗೆ: ಪ್ರಥಮ: ನಾರಾವಿ ಯುವರಾಜ್ ಜೈನ್ ಕಂಬಳಾಭಿಮಾನಿ ವಕೀಲರ ವೃಂದ ಮಂಗಳೂರು “ಎ”ಹಲಗೆ ಮುಟ್ಟಿದವರು: ಭಟ್ಕಳ ಹರೀಶ್ ದ್ವಿತೀಯ: ನಾರಾವಿ ಯುವರಾಜ್ ಜೈನ್ ಕಂಬಳಾಭಿಮಾನಿ ವಕೀಲರ ವೃಂದ ಮಂಗಳೂರು “ಬಿ”ಹಲಗೆ ಮುಟ್ಟಿದವರು: ಭಟ್ಕಳ ಹರೀಶ್•••••••••••••••••••••••••••••••••••••••••••••• ಹಗ್ಗ ಹಿರಿಯ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಎ” (11.86)ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ “ಬಿ” (12.06)ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ••••••••••••••••••••••••‌‌‌‌‌••••••••••••••••••••••ಹಗ್ಗ ಕಿರಿಯ: ಪ್ರಥಮ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ (11.72)ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ದ್ವಿತೀಯ: 80 ಬಡಗ ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ “ಬಿ” (11.90)ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ••••••••••••••••••••••••••••••••••••••••••••••ನೇಗಿಲು ಹಿರಿಯ: ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ “ಬಿ” (11.53)ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ ದ್ವಿತೀಯ: ಮಂಗಳೂರು ಬಜಾಲ್ ಶೈಲೇಶ್ ಶೆಟ್ಟಿ (11.59)ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ••••••••••••••••••••••••••••••••••••••••••••••ನೇಗಿಲು ಕಿರಿಯ: ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಎ” (11.80)ಓಡಿಸಿದವರು: ಪಟ್ಟೆ ಗುರು ಚರಣ್ ದ್ವಿತೀಯ: ಮುನಿಯಾಲು ಉದಯ ಕುಮಾರ್ ಶೆಟ್ಟಿ “ಎ” (12.46)ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ಪ್ರಾದೇಶಿಕ ವಾರ್ತೆಗಳು

ಉಳ್ಳಾಲ ಮಂಜನಾಡಿ ಗ್ಯಾಸ್ ದುರಂತ, ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಬಾಲಕಿ ಮೃತ್ಯು, ಯು ಟಿ ಖಾದರ್ ಸಂತಾಪ

ಉಳ್ಳಾಲ: ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಲ್ಕಟ್ಟದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ,ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಯಿಝ(9) ಡಿಸೆಂಬರ್ 28ರಂದು ಮೃತಪಟ್ಟಿದ್ದು,ಸಭಾಧ್ಯಕ್ಷ ಯು.ಟಿ ಖಾದರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರು,ಸ್ಥಳೀಯರು ನಾವೆಲ್ಲರೂ ಸೇರಿ ಗಾಯಾಳುಗಳ ರಕ್ಷಣೆಗಾಗಿ ಶಕ್ತಿ ಮೀರಿ ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಮನಸ್ಸಿಗೆ ಬಹಳ ಆಘಾತ ತಂದಿದೆ.ಅಲ್ಲಾಹು ಅವರ ಖಬರ್ ವಿಶಾಲವಾಗಿರಿಸಲಿ,ಕುಟುಂಬಸ್ಥರಿಗೆ,ಹಿತೈಷಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲು ಪ್ರಾರ್ಥಿಸುತ್ತೇನೆಂದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಅಲ್ಲದೆ ದುರಂತ ಸಂಭವಿಸಿದ ದಿನದಿಂದ ಇಂದಿನವರೆಗೂ ಸುಮಾರು ದಿನಗಳ ಕಾಲ ಕುಟುಂಬಸ್ಥರ ಜತೆಗಿದ್ದ ಸ್ಥಳೀಯ ಮುಖಂಡರಿಗೂ,ಸಂಘ ಸಂಸ್ಥೆಗಳ ಕಾರ್ಯ ವೈಖರಿ ಎಲ್ಲರಿಗೂ ಮಾದರಿ ಎಂದವರು ತಿಳಿಸಿದರು.

ಪ್ರಾದೇಶಿಕ ವಾರ್ತೆಗಳು

2025 ಜೂನ್ 1ರಂದು ಯಕ್ಷಧ್ರುವ ಪಟ್ಲ ದಶಮಾನೋತ್ಸವ ಸಂಭ್ರಮ. ಸಮಲೋಚನಾ ಸಭೆಯಲ್ಲೇ ರೂ 1-00 ಕೋಟಿ ದೇಣಿಗೆ ಘೋಷಿಸಿದ ಶಶಿಧರ ಶೆಟ್ಟಿ ಬರೋಡ

ಕರಾವಳಿಯ ಯಕ್ಷಗಾನ ಕಲೆಯನ್ನು ಪ್ರಸ್ತುತ ಕಾಲಘಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಪಸರಿಸುತ್ತಿರುವ ಹಾಗೂ ತನ್ಮೂಲಕ ಯಕ್ಷಗಾನದ ಕಲಾವಿದರಿಗಲ್ಲದೆ ಇತರೇ ವಿವಿಧ ಪ್ರಕಾರದ ಅಶಕ್ತರ ಬಾಳಿಗೆ ಬೆಳಕಾಗಿ ಮೂಡಿಬಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ 10ನೇ ವರ್ಷದ ಪಟ್ಲ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಜರಗಿಸುವ ಕುರಿತಾಗಿ ಫೌಂಡೇಶನಿನ ಮಹಾದಾನಿಗಳ, ಮಹಾಪೋಷಕರ, ಟ್ರಸ್ಟಿಗಳ, ವಿವಿಧ ಪ್ರಾದೇಶಿಕ ಘಟಕಗಳ ಪದಾಧಿಕಾರಿಗಳ ಹಾಗೂ ಪಟ್ಲ ಅಭಿಮಾನಿಗಳ ಸಮಲೋಚನಾ ಸಭೆಯು ನಗರದ ಪ್ರತಿಷ್ಠಿತ ಗೋಲ್ಡ್ ಪಿಂಚ್ ಹೋಟೆಲ್ ಸಭಾಂಗಣದಲ್ಲಿ ಜರಗಿತು.ಸಭೆಯ ವೇದಿಕೆಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರು /ಮಹಾದಾನಿಗಳಾದ ಶ್ರೀ ಕನ್ಯಾನ ಸದಾಶಿವ ಶೆಟ್ಟಿ, ಡಾ. ಕೆ ಪ್ರಕಾಶ್ ಶೆಟ್ಟಿ(MRG Group), ಟ್ರಸ್ಟಿನ ಸಂಚಾಲಕರಾದ ಶ್ರೀ ಐಕಳ ಹರೀಶ್ ಶೆಟ್ಟಿ ,ಮಹಾ ಪೋಷಕರಾದ ಶ್ರೀ ಕೆ. ಎಂ. ಶೆಟ್ಟಿ, ಶ್ರೀ ತೋನ್ಸೆ ಆನಂದ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಬೆಳ್ಳಾಡಿ, ಶ್ರೀ ಸಂತೋಷ್ ಶೆಟ್ಟಿ ಪೂನಾ, ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಶ್ರೀ ಸವಣೂರು ಸೀತಾರಾಮ ರೈಯವರು ಉಪಸ್ಥಿತರಿದ್ದು ದಶಮಾನೋತ್ಸವ ಸಂಭ್ರಮವು ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮವಾಗಲಿ, ಕಾರ್ಯಕ್ರಮದ ಯಶಸ್ಸಿಗೆ ಗರಿಷ್ಠ ಮೊತ್ತದ ದೇಣಿಯನ್ನು ನೀಡಿ ಸಹಕರಿಸಲಾಗುವುದೆಂದು ತಿಳಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನಿನ ಮಹಾದಾನಿಗಳಾದ ಶಶಿಧರ ಶೆಟ್ಟಿ ಬರೋಡ ದಶಮಾನೋತ್ಸವ ಕಾರ್ಯಕ್ರಮದ ಮೂಲಕ ನಮ್ಮ ಪಟ್ಲ ಫೌಂಡೇಶನ್ನು ಸುಭಧ್ರಗೊಳಿಸುವ ಮತ್ತು ಅದರ ಮುಂದಿನ ಯೋಜನಾ ಕಾರ್ಯಕ್ರಮಗಳನ್ನು ನಿರಂತರವಾಗಿ ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸುವ ನಿಟ್ಟಿನಲ್ಲಿ ಸುಮಾರು 10-00 ಕೋಟಿ ಮೊತ್ತದ ದೇಣಿಗೆಯನ್ನು ಮುಂಗಡವಾಗಿ ಸಂಗ್ರಹಿಸುವುದು ಉತ್ತಮವೆಂದು ತಿಳಿಸಿ ಪ್ರಥಮ ಹೆಜ್ಜೆಯಾಗಿ ತಾನು ರೂ 1-00 ಕೋಟಿ ಮೊತ್ತವನ್ನು ದೇಣಿಗೆಯ ರೂಪದಲ್ಲಿ ನೀಡುವುದಾಗಿ ಎಂದು ಘೋಷಣೆ ಮಾಡಿದರು.ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಇವತ್ತಿನ ವರೆಗೂ ಫೌಂಡೇಶನಿಗೆ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸುವುದರೊಂದಿಗೆ, ಈಗಾಗಲೇ ಟ್ರಸ್ಟಿಗೆ 1-00 ಕೋಟಿ ಮೊತ್ತವನ್ನು ನೀಡಿ ಮಹಾದಾನಿಯಾಗಿರುವ ಶಶಿಧರ ಶೆಟ್ಟಿಯವರು ದಶಮಾನೋತ್ಸವ ಕಾರ್ಯಕ್ರಮಕ್ಕೂ 1-00 ಕೋಟಿ ದೇಣಿಗೆಯ ಘೋಷಣೆಗೆ ಶಿರಬಾಗಿ ಕೃತಜ್ಞತೆಯನ್ನು ಸಲ್ಲಿಸಿದರು.ಯಕ್ಷಧ್ರುವ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವು 2025ರ ಜೂನ್ 1ರಂದು ಅಡ್ಯಾರ್ ಗಾರ್ಡನ್ ಇಲ್ಲಿ ಜರಗಲಿದ್ದು , ದಶಮಾನೋತ್ಸವ ಸಂಭ್ರಮಕ್ಕೆ ರಚಿಸಲಾಗುವ ಸಮಿತಿಗೆ ಗೌರವಾಧ್ಯಕ್ಷರಾಗಿ ಕೊಡುಗೈದಾನಿ, ಫೌಂಡೇಶನಿನ ಮಹಾದಾನಿ ಡಾ. ಕೆ ಪ್ರಕಾಶ್ ಶೆಟ್ಟಿ (MRG Group) ಹಾಗೂ ಅಧ್ಯಕ್ಷರಾಗಿ ಶಶಿಧರ ಶೆಟ್ಟಿ ಬರೋಡ ಇವರುಗಳ ಹೆಸರನ್ನು ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಪೂರ್ಣಿಮ ಶಾಸ್ತ್ರಿ, ಶ್ರೀ ಲೋಕನಾಥ ಶೆಟ್ಟಿ, ಶ್ರೀ ವಿನಿತ್ ಕುಮಾರ್ ಶೆಟ್ಟಿ ಫೌಂಡೇಶನಿನ ಟ್ರಸ್ಟಿಗಳಾಗಿ ಸೇರ್ಪಡೆಗೊಂಡರು.ಗೃಹ ನಿರ್ಮಾಣಕ್ಕಾಗಿ ರೂ15 ಲಕ್ಷ ರೂಪಾಯಿ ಮೊತ್ತವನ್ನು 9 ಮಂದಿ ಕಲಾವಿದರಿಗೆ ವಿತರಿಸಲಾಯಿತು.2025ರ ಜನವರಿ 8ರಂದು ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ರವರ ಒಡೆತನದ ಒಡ್ಡೂರು ಫಾರ್ಮಿನಲ್ಲಿ ನಡೆಯಲಿರುವ ಯಕ್ಷ ಶಿಕ್ಷಣ ವಿದ್ಯಾರ್ಥಿ ಸಮ್ಮಿಲನದ ಬಗ್ಗೆ ಬಂಟ್ವಾಳ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿಯವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಫೌಂಡೇಶನಿನ ಕೋಶಾಧಿಕಾರಿಯವರಾದ ಸಿಎ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಅಡ್ಯಾರ್ ಪುರುಷೋತ್ತಮ ಕೆ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು

ಪ್ರಾದೇಶಿಕ ವಾರ್ತೆಗಳು

ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ ಸಂಭ್ರಮದ ಮಂಗಳೂರು ಕಂಬಳಕ್ಕೆ ಚಾಲನೆ.

ಮಂಗಳೂರು: ದಕ್ಷಿಣ ಕನ್ನಡದ ಎಂಪಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೇತೃತ್ವದ 8ನೇ ವರ್ಷದ ‘ಮಂಗಳೂರು ಕಂಬಳಕ್ಕೆ ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕೆರೆಯಲ್ಲಿ ಇಂದು (ಡಿ.28) ಚಾಲನೆ ನೀಡಲಾಯಿತು.ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ತಂದೆ, ಎಂಆರ್‌ಪಿಎಲ್‌ನ ನಿವೃತ್ತ ಆಡಳಿತ ನಿರ್ದೇಶಕರಾದ ಎಂ.ವೆಂಕಟೇಶ್‌ ಅವರು ಕಂಬಳಕ್ಕೆ ಚಾಲನೆ ನೀಡಿದರು. ಮಾಜಿ ಮೇಲ್ಮನೆ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್ ಅಧ್ಯಕ್ಷತೆ ವಹಿಸದ್ದರು. ಮಂಗಳೂರು ವಿ. ವಿ.ಕುಲಪತಿ ಪಿ.ಎಲ್ ಧರ್ಮ, ಚಿತ್ತರಂಜನ್,ಬ್ರಹ್ಮಬೈದರ್ಕಳ ಗರೋಡಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ರಾಮಕೃಷ್ಣ ಮಠದ ಚಿದಂಬರನಾಂದ ಸ್ವಾಮೀಜಿ, ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ, ಧರ್ಮದರ್ಶಿ ಹರಿಕೃಷ್ಣ ಪುನರೂರು ,ಕಟೀಲ್ ಅನಂತ ಪದ್ಮನಾಭ ಆಸ್ರಣ್ಣ,ಜಯರಾಮ್ ಶೆಟ್ಟಿ, ಕಾರ್ಪೊರೇಟರ್ ಕಿರಣ್ ಕೋಡಿಕಲ್, ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ,ಅನಿಲ್ ಕುಮಾರ್, ತರ್ಜನಿ ಕಮ್ಯುನಿಕೇಶನ್ ಸಂಸ್ಥೆಯ ಸಂಜಯ ಪ್ರಭು, ಮಾಜಿ ಮೇಯರ್ ಕವಿತಾ ಸನಿಲ್, ಬ್ರಿಗೇಡಿಯರ್ ಐ.ಎಂ ರೈ, ಮಂಗಳೂರು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ, ಉಪಾಧ್ಯಕ್ಷರಾದ ಈಶ್ವರ್ ಪ್ರಸಾದ್ ಶೆಟ್ಟಿ,ಅಶೋಕ್ ಕೃಷ್ಣಾಪುರ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಕಾರ್ಯದರ್ಶಿ ಸಾಕ್ಷತ್ ಶೆಟ್ಟಿ, ಸಂಚಾಲಕರಾದ ಸಾಂತ್ಯಗುತ್ತು ಸಚಿನ್ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ, ಸುಕುಮಾರ್ ಶೆಟ್ಟಿ, ವಿಜಯ್ ಕುಮಾರ್, ಪ್ರಕಾಶ್‌ ಗರೋಡಿ, ವಸಂತ್ ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಂಜೆ ಸಭಾ ಕಾರ್ಯಕ್ರಮ:ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಆರ್.ಜಿ ಗ್ರೂಪ್ ನ ಸಿ.ಎಂ.ಡಿ , ಮಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಡಾ.ಕೆ. ಪ್ರಕಾಶ್ ಶೆಟ್ಟಿ ವಹಿಸಲಿದ್ದಾರೆ. ಇವರೊಂದಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌, ಮಂಗಳೂರು, ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್‌ ಶೆಟ್ಟಿ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಹಾಲಿ-ಮಾಜಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಉದ್ಯಮಿಗಳು, ಗಣ್ಯರು ಭಾಗವಹಿಸುವರು. 29ರಂದು ಕಂಬಳದ ಫೈನಲ್‌ ಸ್ಪರ್ಧೆ:ಎರಡು ದಿನಗಳ ಮಂಗಳೂರು ಕಂಬಳದಲ್ಲಿ ಫೈನಲ್‌ ಸ್ಪರ್ಧೆ ಡಿ.29ರಂದು ಬೆಳಗ್ಗೆ ನಡೆಯುತ್ತದೆ. 29ರ ಬೆಳಗ್ಗೆ ನಡೆಯುವ ಮಂಗಳೂರು ಕಂಬಳದ ಹೆಚ್ಚು ಕುತೂಹಲ ಹಾಗೂ ಆಸಕ್ತಿ ಮೂಡಿಸುವ ಫೈನಲ್‌ ಸ್ಪರ್ಧೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಭಾಗವಹಿಸುವ ನಿರೀಕ್ಷೆಯಿದೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುಂಜಾಲಕಟ್ಟೆ ಘಟಕ : 7 ನೇ ವಾರ್ಷಿಕೋತ್ಸವ, ಸಮ್ಮಾನ, ಯಕ್ಷಗಾನ

ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ರವಿವಾರ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ, ಖ್ಯಾತ ಭಾಗವತರಾದ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ,ಭರತನಾಟ್ಯ, ಯಕ್ಷಗಾನದಂತಹ ಕಲೆಯಲ್ಲಿ ಮಕ್ಕಳನ್ನು ಜೋಡಿಸಿದರೆ ಅವರು ಸುಸಂಸ್ಕೃತರಾಗುತ್ತಾರೆ. ಯಕ್ಷಗಾನದಿಂದ ದೈಹಿಕ ವ್ಯಾಯಾಮ, ಆತ್ಮಸ್ಥೈರ್ಯ, ಸಂಸ್ಕಾರ ಪಡೆಯುತ್ತಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷ ಶಿಕ್ಷಣ ಯೋಜನೆಯಲ್ಲಿ ರಾಜ್ಯಾದ್ಯಂತ ಈ ವರ್ಷ 9 ಸಾವಿರ ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯ ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಭರತ್ ಶೆಟ್ಟಿ ಅವರ ಸಹಕಾರದಲ್ಲಿ ಡಿ.31ರಂದು ಒಡ್ಡೂರು ಫಾರ್ಮ್‌ನಲ್ಲಿ ಸರಕಾರಿ ಶಾಲಾ ಮಕ್ಕಳ ರಂಗ ಪ್ರವೇಶ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.ಬಿಜೆಪಿ ಜಿಲ್ಲಾ ಪ್ರಮುಖ್ ಸಂದೇಶ್ ಶೆಟ್ಟಿ, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ನಿರ್ದೇಶಕ ಬಿ.ರಾಜಶೇಖರ ಶೆಟ್ಟಿ, ಮಂಗಳೂರು ಹಾಪ್ ಕಾಮ್ಸ್ ವ್ಯವಸ್ಥಾಪಕ ರವಿಚಂದ್ರ ಶೆಟ್ಟಿ, ಮಡಂತ್ಯಾರು ಚಾರ್ಟರ್ಡ್ ಆಕೌಂಟೆಂಟ್ ಹರ್ಷನಾರಾಯಣ ಶೆಟ್ಟಿ,ಪುಂಜಾಲಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಅನಿಲಡೆ, ಘಟಕ ಗೌರವ ಸಲಹೆಗಾರ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ,ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಲಕ್ಷ್ಮೀ ಸಂಜೀವ ಶೆಟ್ಟಿ, ಅಧ್ಯಕ್ಷೆ ಉಮಾ ಡಿ. ಗೌಡ ವೇದಿಕೆಯಲ್ಲಿದ್ದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗವಹಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಜಿನೇಂದ್ರ ಜೈನ್ ಬಳ್ಳಮಂಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಯಕ್ಷಗಾನ ತಾಳಮದ್ದಳೆ ಸಂಘ, ಪಾರೆಂಕಿ ಶ್ರೀ ಮಹಿಷಮರ್ಧಿನಿ ಯಕ್ಷಗಾನ ಸಂಘ ಅವರಿಗೆ ಗೌರವಾರ್ಪಣೆ ನಡೆಯಿತು. ಘಟಕ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.ಘಟಕ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ ಅವರು ಸ್ವಾಗತಿಸಿದರು. ಉಪಾಧ್ಯಕ್ಷ ಅಶೋಕ್ ಗುಂಡ್ಯಲ್ಕೆ ವಂದಿಸಿದರು.ಉದಯ ಕುಮಾರ್ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಪಾವಂಜೆ ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.ಮಧ್ಯಾಹ್ನ ಕಾರ್ಯಕ್ರಮವನ್ನು ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಶಾಂತ್ ಪುಂಜಾಲಕಟ್ಟೆ ಅವರು ಉದ್ಘಾಟಿಸಿದರು. ಘಟಕದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ದೇವಮಾತ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ.

ಬಂಟ್ವಾಳ: ಸುದೀರ್ಘ ವರ್ಷಗಳ ಇತಿಹಾಸವನ್ನು ಹೊಂದಿರುವ ಅಮ್ಟೂರು ಗ್ರಾಮದ ಮೊಗರ್ನಾಡು ದೇವಮಾತಾ ಚರ್ಚಿನ 250ನೇ ವರ್ಷಾಚರಣೆಗೆ ಚರ್ಚ್ ನಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅದ್ದೂರಿಯ ಚಾಲನೆ ನೀಡಲಾಯಿತು.ಸಮಾರಂಭದಲ್ಲಿ ಮಂಗಳೂರು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರೆ|ಫಾ| ವಿಲ್ರೆಡ್ ಪ್ರಕಾಶ್ ಡಿಸೋಜ ಅವರು ಚರ್ಚ್ ನ 250ನೇ ವರ್ಷಾಚರಣೆಯ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲಿಗೆ ಚಾಲನೆ ನೀಡಿದರು.ಚರ್ಚ್ ವ್ಯಾಪ್ತಿಯ ಭಕ್ತರು ಐತಿಹಾಸಿಕ ಕ್ಷಣವನ್ನು ಸ್ಮರಣೀಯಗೊಳಿಸುವ ಜತೆಗೆ ಏಕತೆ, ನಂಬಿಕೆ ಮತ್ತು ಕೃತಜ್ಞತೆಯ ಸಂಕೇತವಾಗಿ ಬರೋಬ್ಬರಿ 250 ಕ್ಯಾಂಡಲ್‌ಗಳನ್ನು ಅದೇ ಸಂಖ್ಯೆಯ ಆಕಾರದಲ್ಲಿ ಜೋಡಿಸಿ ಬೆಳಗಿಸಿ ಸಂಭ್ರಮಿಸಿದರು.ಚರ್ಚ್ ನ ಪ್ರಧಾನ ಧರ್ಮಗುರು ರೆ| ಫಾ| ಅನಿಲ್ ಕೆನ್ಯುಟ್ ಡಿಮೆಲ್ಲೊ ಅವರು ವರ್ಷವಿಡೀ ನಡೆಯುವ 250ನೇ ವರ್ಷಾಚರಣೆ ಕಾರ್ಯಕ್ರಮದ ಪಟ್ಟಿಯನ್ನು ಅನಾವರಣಗೊಳಿಸಿದರು. ಆವರಣೆ ಹಾಗೂ ಕೃತಜ್ಞತೆಯಾಗಿ ವರ್ಷಾಚರಣೆಯ ಥೀಮ್ ಹಾಡನ್ನು ಪ್ರಸ್ತುತ ಪಡಿಸಲಾಯಿತು.ಐತಿಹಾಸಿಕ ವರ್ಷಾಚರಣೆಯಲ್ಲಿ ಆಧ್ಯಾತ್ಮಿಕತೆ, ಸಮುದಾಯ ಸಂಘಟನೆ, ಸಾಂಸ್ಕೃತಿಕ ವೈಭವ ಸೇರಿದಂತೆ ಚರ್ಚಿನ ಗೌರವಯುತ ಪರಂಪರೆಯನ್ನು ಮುಂದುವರಿಸುವ ದೃಷ್ಟಿಯಿಂದ ಹತ್ತಾರು ಕಾರ್ಯಕ್ರಮಗಳನ್ನು ನಡೆಸುವ ಕುರಿತು ಈ ಸಂದರ್ಭದಲ್ಲಿ ವಿವರಿಸಲಾಯಿತು. ಸಂಭ್ರಮಾಚರಣೆಯಲ್ಲಿ ಸರ್ವರೂ ಪಾಲ್ಗೊಂಡು ಮುಂಬರುವ ಪ್ರತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಸಹಕರಿಸಲು ವಿನಂತಿಸಲಾಯಿತು.ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ರೆಡ್ ಲೋಬೊ, ಸರ್ವ ಆಯೋಗಗಳ ಸಂಚಾಲಕಿ ಎಮಿಲಿಯಾ ಡಿಕುನ್ಹಾ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಹರಿನಾರಾಯಣ ಬೈಪಡಿತ್ತಾಯ ಅವರು “ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿ ಗೆ ಆಯ್ಕೆ, ಡಿ.29 ರಂದು ಪ್ರಶಸ್ತಿ ಪ್ರದಾನ, ರಂಗಪ್ರವೇಶ, ಅಬ್ಬರತಾಳ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾಕೇಂದ್ರದ ವಿದ್ಯಾರ್ಥಿಗಳ ರಂಗಪ್ರವೇಶ, ಗುರುವಂದನಾ ಹಾಗೂ” ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿಪ್ರದಾನ” ಕಾರ್ಯಕ್ರಮ ಡಿ.29 ರಂದು ಗಂಟೆಗೆ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ‌ಈ ಬಗ್ಗೆ ಮಾಹಿತಿ ನೀಡಿದ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾಕೇಂದ್ರದ ಅಧ್ಯಕ್ಷ ರಾಘವೇಂದ್ರ ಬಲ್ಲಾಳ್ ಅವರು ಕಲಿಕಾ ಕೇಂದ್ರದ ಗುರುಗಳಾದ ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಸುಮಾರು 10 ಕ್ಕು ಹೆಚ್ಚು ಮಂದಿ ಶಿಷ್ಯಂದಿರು ರಂಗಪ್ರವೇಶ ಮಾಡಲಿದ್ದಾರೆ.ಮಧ್ಯಾಹ್ನ 2.30 ಕ್ಕೆ ಈ ಕಾರ್ಯಕ್ರಮವನ್ನು ಕ್ಷೇತ್ರದ ತಂತ್ರಿಗಳಾದ ವೇ.ಮೂ.ಬಾಲಕೃಷ್ಣ ಪಾಂಗಣ್ಣಾಯ ಅವರು ದೀಪಪ್ರಜ್ವಲನೆಗೈದು ಉದ್ಘಾಟಿಸಲಿದ್ದಾರೆ ಎಂದರು.ಸಂಜೆ 4 ಗಂಟೆಗೆ ಪಿಲಾತಬೆಟ್ಟು ಸಿ.ಎ.ಬ್ಯಾಂಕ್ ಅಧ್ಯಕ್ಷ ತುಂಗಪ್ಪ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳ ವಾದಕರಾದ ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿಪ್ರದಾನ” ಮಾಡಲಾಗುವುದು ಹಾಗೂ ಯಕ್ಷಗುರುಗಳಾದ ಚಂದ್ರಶೇಖರ ಭಟ್ ಕೊಂಕಣಾಜೆ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ‌. ಉದ್ಯಮಿಗಳಾದ ಶ್ರೀಪತಿ ಭಟ್ ಮೂಡಬಿದ್ರೆ,ರೋ.ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ,ಯಕ್ಷಗಾನ ಕಲಾವಿದ ದಿನೆರಶ್ ಶೆಟ್ಟಿ ಕಾವಳಕಟ್ಟೆ, ಪಾಂಗಲ್ಪಾಡಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್.,ಮಂಗಳೂರು ಹಾಪ್ ಕಾಮ್ಸ್ ನಿರ್ದೇಶಕ ಲಕ್ಷ್ಮೀ ನಾರಾಯಣ ಉಡುಪ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಬಳಿಕ ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಶಿಷ್ಯರಿಂದ “ಅಬ್ಬರತಾಳ” ಸಂಜೆ 6 ಗಂಟೆಯಿಂದ ಪ್ರೇಮ್ ರಾಜ್ ಕೊಯಿಲ ಅವರ ನಿರ್ದೇಶನದಲ್ಲಿ “ಯಕ್ಷಕೌಸ್ತಭ” ಮಕ್ಕಳ ತಂಡದಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಯಕ್ಷಗುರು ಚಂದ್ರಶೇಖರ ಭಟ್ ಕೊಂಕಣಾಜೆ,ಸಮಿತಿ ಪದಾಧಿಕಾರಿಗಳಾದ ಹರಿಪ್ರಸಾದ್ ರಾವ್ ಕೊಯಿಲ,ಡಾ.ರಾಮಕೃಷ್ಣ ಎಸ್,ಕೀರ್ತನ್ ಶೆಟ್ಟಿ ಮೊದಲಾದವರಿದ್ದರು.

ಪ್ರಾದೇಶಿಕ ವಾರ್ತೆಗಳು

ದೇವಮಾತ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ.

ಬಂಟ್ವಾಳ: ಸುದೀರ್ಘ ವರ್ಷಗಳ ಇತಿಹಾಸವನ್ನು ಹೊಂದಿರುವ ಅಮ್ಟೂರು ಗ್ರಾಮದ ಮೊಗರ್ನಾಡು ದೇವಮಾತಾ ಚರ್ಚಿನ 250ನೇ ವರ್ಷಾಚರಣೆಗೆ ಚರ್ಚ್ ನಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅದ್ದೂರಿಯ ಚಾಲನೆ ನೀಡಲಾಯಿತು.ಸಮಾರಂಭದಲ್ಲಿ ಮಂಗಳೂರು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರೆ|ಫಾ| ವಿಲ್ರೆಡ್ ಪ್ರಕಾಶ್ ಡಿಸೋಜ ಅವರು ಚರ್ಚ್ ನ 250ನೇ ವರ್ಷಾಚರಣೆಯ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲಿಗೆ ಚಾಲನೆ ನೀಡಿದರು.ಚರ್ಚ್ ವ್ಯಾಪ್ತಿಯ ಭಕ್ತರು ಐತಿಹಾಸಿಕ ಕ್ಷಣವನ್ನು ಸ್ಮರಣೀಯಗೊಳಿಸುವ ಜತೆಗೆ ಏಕತೆ, ನಂಬಿಕೆ ಮತ್ತು ಕೃತಜ್ಞತೆಯ ಸಂಕೇತವಾಗಿ ಬರೋಬ್ಬರಿ 250 ಕ್ಯಾಂಡಲ್‌ಗಳನ್ನು ಅದೇ ಸಂಖ್ಯೆಯ ಆಕಾರದಲ್ಲಿ ಜೋಡಿಸಿ ಬೆಳಗಿಸಿ ಸಂಭ್ರಮಿಸಿದರು.ಚರ್ಚ್ ನ ಪ್ರಧಾನ ಧರ್ಮಗುರು ರೆ| ಫಾ| ಅನಿಲ್ ಕೆನ್ಯುಟ್ ಡಿಮೆಲ್ಲೊ ಅವರು ವರ್ಷವಿಡೀ ನಡೆಯುವ 250ನೇ ವರ್ಷಾಚರಣೆ ಕಾರ್ಯಕ್ರಮದ ಪಟ್ಟಿಯನ್ನು ಅನಾವರಣಗೊಳಿಸಿದರು. ಆವರಣೆ ಹಾಗೂ ಕೃತಜ್ಞತೆಯಾಗಿ ವರ್ಷಾಚರಣೆಯ ಥೀಮ್ ಹಾಡನ್ನು ಪ್ರಸ್ತುತ ಪಡಿಸಲಾಯಿತು.ಐತಿಹಾಸಿಕ ವರ್ಷಾಚರಣೆಯಲ್ಲಿ ಆಧ್ಯಾತ್ಮಿಕತೆ, ಸಮುದಾಯ ಸಂಘಟನೆ, ಸಾಂಸ್ಕೃತಿಕ ವೈಭವ ಸೇರಿದಂತೆ ಚರ್ಚಿನ ಗೌರವಯುತ ಪರಂಪರೆಯನ್ನು ಮುಂದುವರಿಸುವ ದೃಷ್ಟಿಯಿಂದ ಹತ್ತಾರು ಕಾರ್ಯಕ್ರಮಗಳನ್ನು ನಡೆಸುವ ಕುರಿತು ಈ ಸಂದರ್ಭದಲ್ಲಿ ವಿವರಿಸಲಾಯಿತು. ಸಂಭ್ರಮಾಚರಣೆಯಲ್ಲಿ ಸರ್ವರೂ ಪಾಲ್ಗೊಂಡು ಮುಂಬರುವ ಪ್ರತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಸಹಕರಿಸಲು ವಿನಂತಿಸಲಾಯಿತು.ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ರೆಡ್ ಲೋಬೊ, ಸರ್ವ ಆಯೋಗಗಳ ಸಂಚಾಲಕಿ ಎಮಿಲಿಯಾ ಡಿಕುನ್ಹಾ ಉಪಸ್ಥಿತರಿದ್ದರು.

Scroll to Top