ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮೇ.19 ರಂದು ಮಂಗಳೂರು ಟೌನ್ ಹಾಲ್ ನಲ್ಲಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯಿಂದ ಅನುಬಂಧ -2024 ವೈವಿಧ್ಯಮಯ ಕಾರ್ಯಕ್ರಮ. ಬಂಟ ಸಮಾಜದ ಸಾಧಕರಿಗೆ ಬಂಟ ರತ್ನ, ಬಂಟ ವಿಭೂಷಣ ಪ್ರಶಸ್ತಿ ಪ್ರದಾನ.

ಮಂಗಳೂರು: ಅಂತರ್ಜಾಲ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ ಮಾತ್ರವಲ್ಲ, ಸಹಸ್ರಾರು ಬಂಟರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸಿದ ‘ಬಂಟ್ಸ್‌ ನೌ’ ಅಂತರ್ಜಾಲ ಸುದ್ದಿ ಮಾಧ್ಯಮ ಸಂಸ್ಥೆಯ ವತಿಯಿಂದ ಅನುಬಂಧ – 2024 ಕಾರ್ಯಕ್ರಮವು ಮೇ.19 ರಂದು ಮಂಗಳೂರು ಪುರಭವನದಲ್ಲಿ ಅಪರಾಹ್ನ 3 ರಿಂದ ರಾತ್ರಿ 10 ರ ತನಕ ನಡೆಯಲಿದೆ. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್‌ ಭೋಜ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಅರ್ಥಪೂರ್ಣ, ಸಮಾಜ ಹಿತ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ, ಹಿರಿಯ ಉದ್ಯಮಿ ಅರಿಯಡ್ಕ ಚಿಕ್ಕಪ್ಪನಾಯ್ಕ ಮಾಜಿ ಶಾಸಕ ಬನ್ನೂರು ಅಪ್ಪಣ್ಣ ಹೆಗ್ಡೆಯವರು ಸಾಂಕೇತಿಕವಾಗಿ ತುಳುನಾಡಿನ ಸಂಪ್ರದಾಯದಂತೆ ವಿವಿಧ ಆಕರ್ಷಕ ಶೈಲಿಗಳಲ್ಲಿ ಉದ್ಘಾಟಿಸಲಿದ್ದಾರೆ. ಈ ಸಂಭ್ರಮದಲ್ಲಿ ಗೌರವ ಅತಿಥಿಗಳಾಗಿ ಜಸ್ಟಿಸ್ ಸಂತೋಷ್ ಹೆಗ್ಡೆ, ಡಾ. ಎಚ್. ಎಸ್ ಬಲ್ಲಾಳ್, ಡಾ. ಎ.ಜೆ.ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ರಾಜೇಶ್ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ವಿಜಯ್ ಶೆಟ್ಟಿ ಕಾರ್ಕಳ, ಅಜಿತ್ ಹೆಗ್ಡೆ ಶಾನಾಡಿ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಶಕುಂತಳಾ ಶೆಟ್ಟಿ ಪುತ್ತೂರು, ಮಧುಕರ ಶೆಟ್ಟಿ ಬೆಂಗಳೂರು, ವಸಂತ್ ಶೆಟ್ಟಿ ಬೆಳ್ಳಾರೆ, ಹರಿಪ್ರಸಾದ್ ರೈ, ಚಂದ್ರಹಾಸ್ ಶೆಟ್ಟಿ ರಂಗೋಲಿ, ಜಗನ್ನಾಥ ಶೆಟ್ಟಿ ಬಾಳ, ರಮೇಶ್ ಶೆಟ್ಟಿ ಸಿದ್ದಕಟ್ಟೆ, ಚೇತನ್ ಶೆಟ್ಟಿ ಬೆಳಗಾವಿ, ಗಣೇಶ್ ಶೆಟ್ಟಿ ಡೊಂಬಿವಲಿ, ಜಯರಾಮ್ ಶೆಟ್ಟಿ ಬೆಳ್ತಂಗಡಿ, ಲೋಕಯ್ಯ ಶೆಟ್ಟಿ ಮುಂಚೂರು, ಭವ್ಯ ಎ. ಶೆಟ್ಟಿ ಸುರತ್ಕಲ್ ಇವರುಗಳು ಆಗಮಿಸಲಿದ್ದಾರೆ. ಈ ವಿಶೇಷ ಅದ್ಧೂರಿಯ ಸಮಾರಂಭದಲ್ಲಿ ಡಾ.ಎಂ. ಮೋಹನ್ ಆಳ್ವ, ಕರುಣಾಕರ ಎಂ ಶೆಟ್ಟಿ, ಕಿಶೋರ್ ಹೆಗ್ಡೆ ಮೊಳಹಳ್ಳಿ, ಡಾ.ಆರ್ ಕೆ ಶೆಟ್ಟಿ, ಮಿತ್ರಂಪಾಡಿ ಜಯರಾಮ ರೈ, ಸೀತಾರಾಮ್ ರೈ, ಪ್ರವೀಣ್ ಶೆಟ್ಟಿ ಪುತ್ತೂರು ಮತ್ತು ಕರ್ನಲ್ ಜಗಜೀವನ್ ಭಂಡಾರಿ ಇವರಿಗೆ ಬಂಟ ರತ್ನ-2024 ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಅಂತೆಯೇ ರಾಜೇಂದ್ರ ವಿ. ಶೆಟ್ಟಿ, ಮುರಳಿ ಮೋಹನ್ ಶೆಟ್ಟಿ ಗೋವಾ, ರಾಕೇಶ್ ಶೆಟ್ಟಿ ಬೆಳ್ಳಾರೆ, ಎಂ.ಬಿ. ಉಮೇಶ್ ಶೆಟ್ಟಿ, ವಿಶು ಶೆಟ್ಟಿ ಅಂಬಲಪಾಡಿ ಮತ್ತು ಪ್ರಭಾಕರ್ ವಿ.ಶೆಟ್ಟಿಯವರಿಗೆ ಬಂಟ ವಿಭೂಷಣ – 2024 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಸಮಾರಂಭದಲ್ಲಿ 2024 ರ ಸಾಲಿನ ಯುವ ಬಂಟ ರತ್ನ ಪ್ರಶಸ್ತಿಯನ್ನು ಅದರ್ಶ್ ಶೆಟ್ಟಿ ಹಾಲಾಡಿ, ಮಂದರ ಶೆಟ್ಟಿ ಹೊನ್ನಾಳ, ಎಚ್. ಪ್ರಸನ್ನಚಂದ್ರ ಶೆಟ್ಟಿ, ಡಾ. ಹರ್ಷ ಕುಮಾರ್ ರೈ ಮಾಡಾವು ಇವರಿಗೆ ನೀಡಲಾಗುವುದು. ಮಕ್ಕಳ ಆರೋಗ್ಯ ಮತ್ತು ಜೀವನ ಶೈಲಿಯ ಬಗ್ಗೆ ಬಂಟರ ಸಂಘ ಆಂಧ್ರ ಪ್ರದೇಶ ಇದರ ಮಾಜಿ ಅಧ್ಯಕ್ಷ ರತ್ನಾಕರ ರೈ ದಿಕ್ಕೂಚಿ ಭಾಷಣ ನೀಡಲಿದ್ದಾರೆ. ರಕ್ಷಣ್ ಶೆಟ್ಟಿ ಮಾಡೂರು ಮತ್ತು ಬಳಗದವರಿಂದ ಸಂಗೀತ ರಸಸಂಜೆ, ಯಕ್ಷ ಯುವರತ್ನ ಧೀರಜ್ ರೈ ಸಂಪಾಜೆ ಇವರ ಭಾಗವತಿಕೆಯಲ್ಲಿ ಕಡಬ ದಿನೇಶ್ ರೈ ಸಾರಥ್ಯದ ಯಕ್ಷಗಾನ ನಾಟ್ಯ – ಹಾಸ್ಯ ವೈಭವ ಮತ್ತು ಶಾರದಾ ಆರ್ಟ್ಸ್ ತಂಡದವರಿಂದ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ತುಳು ಪೌರಾಣಿಕ ಭಕ್ತಿಪ್ರಧಾನ ಸಾಮಾಜಿಕ ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಅರ್ಥಪೂರ್ಣ, ಸಮಾಜ ಹಿತ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾಗಬೇಕು ಎಂದು ಬಂಟ್ಸ್ ನೌ ಸುದ್ದಿಸಂಸ್ಥೆಯ ಗೌರವ ಸಂಪಾದಕ ಅರುಣ್ ಶೆಟ್ಟಿ ಎರ್ಮಾಳ್, ಸ್ಥಾಪಕ ರಂಜಿತ್ ಶೆಟ್ಟಿ, ಸ್ವಾಗತ ಸಮಿತಿಯ ಸಂಚಾಲಕ ದಿವಾಕರ ಸಾಮಾನಿ, ಪ್ರಚಾರ ಸಮಿತಿಯ ಸಂಚಾಲಕ ಸಂಕಬೈಲು ಮಂಜುನಾಥ ಅಡಪ ವಿನಂತಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಮೇ.17 ರ ಶುಕ್ರವಾರ ಬೆಳಿಗ್ಗೆ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ರಂಜಿತ್ ಶೆಟ್ಟಿ ಅವರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಸುದ್ದಿ ಗೋಷ್ಠಿಯಲ್ಲಿ ವಿಶ್ವನಾಥ್ ದೊಡ್ಡ ಮನೆ ಮತ್ತು ಸುಕೇಶ್ ಭಂಡಾರಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಘೋಷಣೆ: ಸಿಎಂ ಸಿದ್ಧರಾಮಯ್ಯಗೆ ಕೆಯುಡಬ್ಲ್ಯುಜೆ ಅಭಿನಂದನೆ.

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರರಿಗೆ ಬಸ್ ಪಾಸ್ ನೀಡುವ ಸಂಬಂಧ ಇತ್ತಿಚೆಗೆ ದಾವಣಗೆರೆಯಲ್ಲಿ ನಡೆದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತು ಕೊಟ್ಟಂತೆ ಈ‌ ವರ್ಷದ ಬಜೆಟ್ ನಲ್ಲಿ ಅದನ್ಬು ಘೋಷಣೆ ಸಹ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಧಾನ‌ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರು ರಾಜ್ಯದ ಅಡಳಿತದ ಶಕ್ತಿದೇಗುಲವಾದ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗ ತೆರಳಿ ಅಭಿನಂದನೆ ಪತ್ರ ಸಲ್ಲಿಸಿದರು.ಸಂಘದ ನಿಯೋಗದೊಂದಿಗೆ ಮುಖ್ಯಮಂತ್ರಿಗಳು ಮನದುಂಬಿ ಮಾತನಾಡಿದರು. ರಾಜ್ಯದ ಸಾವಿರಾರು ಗ್ರಾಮೀಣ ಪತ್ರಕರ್ತರಿಗೆ ನಿಮ್ಮ ಘೋಷಣೆಯಿಂದ ತುಂಬ ಅನುಕುಲ ಆಗಲಿದ್ದು, ನಿಮ್ಮ ಈ ಉದಾರತೆಗೆ ಪತ್ರಕರ್ತರ ಸಂಘ ಸದಾ ಚಿರರುಣಿಯಾಗಿರುತ್ತದೆ ಎಂದು ತಗಡೂರು ಹೇಳಿದರು. ಇದಕ್ಕೆ ಮುಖ್ಯಮಂತ್ರಿಗಳು ನಗುತ್ತಲ್ಲೆ ಕೈಜೋಡಿಸಿದರು.ನಿಯೋಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲಿಕ್ ಬಾಳೋಜಿ, ಭವಾನಿಸಿಂಗ್ ಠಾಕೂರ್, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಹಾಸನ ಜಿಲ್ಲಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಮದನಗೌಡ, ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ವಿಜಯನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ರಾಯಚೂರಿನ ಗುರುನಾಥ್, ಮಂಗಳೂರು ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ ಹಿಂದಾಜಿ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಖಜಾಂಚಿ ಪುಷ್ಪರಾಜ್ ಮುಂತಾದವರು ನಿಯೋಗದಲ್ಲಿದ್ದರು

ಪ್ರಾದೇಶಿಕ ವಾರ್ತೆಗಳು

ಪಡೀಲ್ ನಲ್ಲಿ ಶಾಂತಿಯುತ ಮತ್ತು ಆಹ್ಲಾದಕರ ವಾತಾವರಣದೊಂದಿಗೆ ಗ್ರಾಹಕರಿಗಾಗಿ ಶುಭಾರಂಭಗೊಂಡಿದೆ ಮೆಹಂದಿ ಬಾರ್ ಅಂಡ್ ಫ್ಯಾಮಿಲಿ ರೆಸ್ಟೋರೆಂಟ್. ಪತ್ರಿಕೋದ್ಯಮಿ ಪ್ರಕಾಶ್ ಕೆ. ಪಾಂಡೇಶ್ವರ್ ರವರ ಹೋಟೆಲ್ ಉದ್ಯಮದ ಸಾಧನೆಗೆ ಮತ್ತೊಂದು ಕಿರೀಟ.

ಮಂಗಳೂರು: ಪಡೀಲ್ ಬಳಿ ಇರುವ ಪಡೀಲ್ ಗೇಟ್‌ನಲ್ಲಿ ಹಲವು ವಿಶೇಷತೆಗಳನ್ನು ಹೊಂದಿರುವ ‘ಮೆಹಂದಿ’ ಬಾರ್ ಆ್ಯಂಡ್ ಫ್ಯಾಮಿಲಿ ರೆಸ್ಟೋರೆಂಟ್ ಮೇ.12 ರ ಆದಿತ್ಯವಾರ ಸಂಜೆ ಗಣ್ಯ ಅತಿಥಿಗಳ ಉಪಸ್ಥಿತಿಯೊಂದಿಗೆ ಶುಭಾರಂಭಗೊಂಡಿದೆದಕ್ಷಿಣ ಕನ್ನಡದ ಎಂಪಿ ನಳಿನ್ ಕುಮಾರ್ ಕಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ವೈನ್ ಮರ್ಚಂಟ್ ಎಸೋಸಿಯೇಶನ್‌ ಅಧ್ಯಕ್ಷರಾದ ಎಂ. ಗಣೇಶ್ ಶೆಟ್ಟಿ, ಡೈಜಿವರ್ಲ್ಡ್‌ನ ಆಡಳಿತ ನಿರ್ದೆಶಕರಾದ ವಾಲ್ಟರ್ ನಂದಳಿಕೆ, ಶ್ರೀ ಡೆವಲಪರ್ಸ್‌ನ ಮಾಲಕರಾದ ಗಿರೀಶ್ ಎಂ.ಶೆಟ್ಟಿ ಕಟೀಲು, ಮೇಯರ್ ಸುಧೀರ್ ಶೆಟ್ಟಿ, ಮನಪಾ ಸದಸ್ಯೆ ರೂಪಾಶ್ರೀ ಪೂಜಾರಿ, ಚಿತ್ರ ನಿರ್ಮಾಪಕರಾದ ಕಿಶೋರ್‌ಡಿ.ಶೆಟ್ಟಿ, ದೇವದಾಸ್ ಕಾಪಿಕಾಡ್, ವಿಜಯ್‌ ಕುಮಾರ್ ಕೊಡಿಯಾಲ್‌ಬೈಲ್, ಚಿತ್ರನಟ ಭೋಜರಾಜ್ ವಾಮಂಜೂರು ಶುಭ ಹಾರೈಸಿದರು. ಸಿನಿಮಾ ನಿರ್ಮಾಪಕರಾದ ಧನರಾಜ್, ಸಂಸ್ಥೆಯ ಮಾಲಕರಾದ ಪ್ರಕಾಶ್ ಕೆ. ಪಾಂಡೇಶ್ವರ್, ಮ್ಯಾನೇಜರ್ ಬಾಲಕೃಷ್ಣಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯ ಕ್ರಮ ನಿರ್ವಹಿಸಿದರು. ‘ಮೆಹಂದಿ’ ಹೆಸರಿನಿಂದಲೇ ವಿಜಯ: ಮಿಥುನ್ ರೈ.ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಛಲವಿದ್ದರೆ ಯಾವುದೇ ಗುರಿ ಸಾಧಿಸಬಹುದು ಎನ್ನುವುದಕ್ಕೆ ಪ್ರಕಾಶ್ ಪಾಂಡೇಶ್ವರ ಸಾಕ್ಷಿಯಾಗಿದ್ದು,ಅವರು ಯುವಕರಿಗೆ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದಲಿರುವ ಪಡೀಲ್ ನಲ್ಲಿ ಟೇಸ್ಟಿಂಗ್ ಪೌಡರ್, ಕೃತಕ ಬಣ್ಣ ಇಲ್ಲದ ಗುಣಮಟ್ಟದ ಹೋಟೆಲ್ ಅಗತ್ಯವಿತ್ತು, ಮೆಹಂದಿ ಎನ್ನುವ ಹೆಸರೇ ಇದರ ಯಶಸ್ಸಿಗೆ ಕಾರಣವಾಗಲಿದೆ ಎಂದು ಮಿಥುನ್ ರೈ ಆಶಿಸಿದರು.ಪೈಪೋಟಿ ನಡುವೆ ಶುಚಿ- ರುಚಿಗೆ ಆದ್ಯತೆ: ಗಣೇಶ್ ಶೆಟ್ಟಿಪ್ರಸ್ತುತ ದಿನಗಳಲ್ಲಿ ಹೋಟೆಲ್ ನಿರ್ವಹಣೆ ಸುಲಭದ ಮಾತಲ್ಲ. ಅದರಲ್ಲೂ ಮಂಗಳೂರಿನಲ್ಲಿ ಪ್ರತಿದಿನ ಹೋಟೆಲ್ ತೆರೆಯುತ್ತಿದ್ದು, ಪೈಪೋಟಿ ಸಹಜ. ಆದರೆ, ಗ್ರಾಹಕರು ಶುಚಿ, ರುಚಿ ಇರುವಲ್ಲಿಗೆ ಮಾರು ಹೋಗುತ್ತಾರೆ.ಬಿಕರ್ನಕಟ್ಟೆ, ನಾಗುರಿಗೆ ಹೋಗುವ ರಸ್ತೆಯಲ್ಲಿ ಈ ಫ್ಯಾಮಿಲಿ ರೆಸ್ಟೋರೆಂಟ್ ಆರಂಭಗೊಂಡಿದ್ದು, ಯಶಸ್ಸು ಸಾಧಿಸಲೆಂದು ವೈನ್ ಮೆರ್ಚೆಂಟ್ ಅಸೋಸಿಯೇಶನನ ಅಧ್ಯಕ್ಷರಾದ ಎಂ. ಗಣೇಶ್ ಶೆಟ್ಟಿ ಶುಭ ಹಾರೈಸಿದರು. ಜೀವನದಲ್ಲಿ ಎತ್ತರದ ಹೆಜ್ಜೆ: ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು.ಪತ್ರಿಕೋದ್ಯಮದ ಜೊತೆಗೆ ಕಳೆದ 14 ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿರುವ ಪ್ರಕಾಶ್ ಪಾಂಡೇಶ್ವರ ಅವರು ಮಂಗಳೂರಿನ ಹೆಬ್ಬಾಗಿಲು ಪಡೀಲ್‌ನಲ್ಲಿ ಆರಂಭಿಸಿರುವ ಮೆಹಂದಿ ಫ್ಯಾಮಿಲಿ ರೆಸ್ಟೋರೆಂಟ್ ಮೂಲಕ ಜನರಲ್ಲಿ ನವ ಚೈತನ್ಯ ಮೂಡಿಸಿದ್ದಲ್ಲದೆ, ಪರಿಸರಕ್ಕೂ ಕಳೆ ತಂದಿದ್ದಾರೆಂದು ಮೇಯರ್ ಸುಧೀರ್ ಶೆಟ್ಟಿ ಅಭಿಪ್ರಾಯ ಪಟ್ಟರು.‘ಮೆಹಂದಿ’ ಹೆಸರೇ ಆಕರ್ಷಕ ಉದ್ಯಮಿ ಗಿರೀಶ್ ಶೆಟ್ಟಿ.ಯಾವುದೇ ಕೆಲಸದಲ್ಲಿ ಶ್ರದ್ಧೆಯಿಟ್ಟು ಮಾಡಿದರೆ ಯಶಸ್ಸು ಖಚಿತ, ತುಳು ಚಿತ್ರರಂಗದಲ್ಲಿ ಎಲ್ಲರನ್ನೂ ಸೇರಿಸಿ ಯಶಸ್ವೀ ಚಿತ್ರ ನಿರ್ಮಿಸಿದ ಪ್ರಕಾಶ್ ಪಾಂಡೇಶ್ವರ ಅವರು‘ಮೆಹಂದಿ’ ಎನ್ನುವ ಅತ್ಯಂತ ಆಕರ್ಷಕ ಹೆಸರಿಟ್ಟು ಫ್ಯಾಮಿಲಿರೆಸ್ಟೋರೆಂಟ್ ಸ್ಥಾಪಿಸಿದ್ದು, ಇದು ಯಶಸ್ಸಿನ ಉತ್ತುಂಗ ಕ್ಕೇರಲಿ ಎಂದು ಶ್ರೀ ಡೆವಲಪರ್ಸ್‌ ಮಾಲಕರಾದ ಗಿರೀಶ್ ಎಂ.ಶೆಟ್ಟಿ ಕಟೀಲು ಅವರು ಆಶಿಸಿದರು.ಪಡೀಲ್ ನಲ್ಲಿ ಶುಭಾರಂಭಗೊಂಡ ‘ಮೆಹಂದಿ’ ಬಾರ್ ಅಂಡ್ ಫ್ಯಾಮಿಲಿ ರೆಸ್ಟೋರೆಂಟ್ ನ ವೈಶಿಷ್ಟತೆಗಳು.“ಮೆಹಂದಿ” ಬಾರ್ ಆ್ಯಂಡ್ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಆಹಾರ ಪದಾರ್ಥಗಳಿಗೆ ಯಾವುದೇ ರಾಸಾಯನಿಕ, ಕೃತಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಉಪಯೋಗಿಸುವುದಿಲ್ಲ.ಉಪ್ಪಿನಿಂದ ಹಿಡಿದು ಎಲ್ಲಾ ಆಹಾರ ವಸ್ತುಗಳು ಆರ್ಗಾನಿಕ್ (ಸಾವಯವ) ಆಗಿರುವುದರಿಂದ ನೈಜ ರುಚಿಯ ಆಸ್ವಾದನೆ ಗ್ರಾಹಕರಿಗೆ ಸಿಗಲಿದೆ. ಕೌಟುಂಬಿಕ ವ್ಯಕ್ತಿಗಳಿಗಾಗಿ ಪ್ರತ್ಯೇಕ ಕ್ಯಾಬಿನೆಟ್ ವ್ಯವಸ್ಥೆ, ರೂಫ್ ಟಾಪ್, ಓಪನ್ ಗಾರ್ಡನ್ ಇದೆ. ತೋಟದ ಮಧ್ಯೆ ಕುಳಿತು ಕೊಂಡು ನೈಜ ಆಹಾರದ ಸ್ವಾದವನ್ನು ಸವಿಯುವ ಅವಕಾಶ ಇದೆ.ಅಲ್ಲದೆ ಪ್ರೇಮಿಗಳಿಗಾಗಿ ಪ್ರತ್ಯೇಕ ಸ್ಥಳವಿದೆ. ಯಾವುದೇ ಸಮಸ್ಯೆಯಿಲ್ಲದೆ ಆಹಾರದ ಸವಿಯೊಂದಿಗೆ ಕಳೆಯಬಹುದಾದ ವಾತಾವರಣ ಇಲ್ಲಿದೆ. ಕಾರ್ಪೊರೇಟ್ ಸಂಸ್ಥೆಗಳ ಸಭೆ, ಇತರ ಸಮಾರಂಭಗಳಿಗೆ ಬೇಕಾದ ವ್ಯವಸ್ಥೆಯೂ ಇದೆ.ಎ.ಸಿ ಮತ್ತು ನಾನ್ ಎ.ಸಿ ವಿಭಾಗಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ನಿರ್ವಹಿಸಲ್ಪಡುತ್ತದೆ. ವಿಶೇಷ ಎಂದರೆ ಇಲ್ಲಿ ಸಂಪೂರ್ಣ ಸಸ್ಯಾಹಾರಿ ವಿಭಾಗವೂ ಇದೆ. ಸಮುದ್ರ ಖಾದ್ಯವನ್ನು ಸವಿಯುವವವರಿಗೆಂದೇ ಪ್ರತ್ಯೇಕ ವಿಭಾಗವಿದೆ.ರೆಸ್ಟೋರೆಂಟ್ ಕೇವಲ ತಿನ್ನಲು ಮಾತ್ರವಲ್ಲ, ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಉತ್ತಮ ಸ್ಥಳವಾಗಿದೆ. ಸಾಂಪ್ರದಾಯಿಕ ಶೈಲಿಯ ವಿನ್ಯಾಸದ ಕಟ್ಟಡದಲ್ಲಿ ನೆಲೆಗೊಂಡಿರುವ ‘ಮೆಹಂದಿ’ ಬಾರ್ ಆ್ಯಂಡ್ ಫ್ಯಾಮಿಲಿ ರೆಸ್ಟೋರೆಂಟ್ ಹಸಿರಿನ ಮಿನುಗು, ಶಾಂತಿಯುತ ಮತ್ತು ಆಹ್ಲಾದಕರ ವಾತಾವರಣದೊಂದಿಗೆ ಗ್ರಾಹಕರನ್ನು ಸ್ವಾಗತಿಸುತ್ತಿದೆ. ಕೈಗೆಟುಕುವ ಬೆಲೆಯಲ್ಲಿ ಅಧಿಕೃತ ಸುವಾಸನೆಯೊಂದಿಗೆ ಇಲ್ಲಿನ ಆಹಾರ ಖಾದ್ಯಗಳನ್ನು ಸವಿಯಬಹುದಾಗಿದೆ ಎಂದು ಸಂಸ್ಥೆಯ ಮಾಲಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮೇ 12 ರ ಆದಿತ್ಯವಾರ ಸಂಜೆ 4ಕ್ಕೆ ಪಡೀಲ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ‘ಮೆಹಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ. ಇಲ್ಲಿ ಆಹಾರ ಪದಾರ್ಥಗಳಿಗೆ ಯಾವುದೇ ರಾಸಾಯನಿಕ ಬಳಸುವುದಿಲ್ಲ: ಮಾಲಕ ಪ್ರಕಾಶ್ ಕೆ. ಪಾಂಡೇಶ್ವರ.

ಮಂಗಳೂರು : ಪಡೀಲ್ ಬಳಿ ಇರುವ ಪಡೀಲ್ ಗೇಟ್‌ನಲ್ಲಿ ಮೇ 12ರಂದು ಸಂಜೆ 4 ಗಂಟೆಗೆ ‘ಮೆಹಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭಗೊಳ್ಳಲಿದೆ.ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ವೇದವ್ಯಾಸ ಕಾಮತ್, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಮಿಥುನ್ ರೈ, ವೈನ್ ಮರ್ಚಂಟ್ ಅಸೋಸಿಯೇಶನ್ ಅಧ್ಯಕ್ಷ ಎಂ. ಗಣೇಶ್ ಶೆಟ್ಟಿ,ಡೈಜಿವರ್ಲ್ಡ್‌ನ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ, ಶ್ರೀ ಡೆವಲಪರ್ಸ್‌ನ ಮಾಲಕ ಗಿರೀಶ್ ಎಂ. ಶೆಟ್ಟಿ ಕಟೀಲು, ಮನಪಾ ಸದಸ್ಯೆ ರೂಪಾಶ್ರೀ ಪೂಜಾರಿ, ಚಿತ್ರನಟ ನವೀನ್ ಡಿ.ಪಡೀಲ್ ಭಾಗವಹಿಸಲಿದ್ದಾರೆ ಎಂದು ಮೆಹಂದಿ ಫ್ಯಾಮಿಲಿ ರೆಸ್ಟೋರೆಂಟ್‌ನ ಮಾಲಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.ಮೆಹಂದಿ ರೆಸ್ಟೋರೆಂಟ್‌ನಲ್ಲಿ ಆಹಾರ ಪದಾರ್ಥಗಳಿಗೆ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಅರ್ಗಾನಿಕ್ (ಸಾವಯವ) ಉತ್ಪನ್ನಗಳನ್ನೇ ಆಹಾರ ಪದಾರ್ಥಗಳಿಗೆ ಬಳಸುವು ದರಿಂದ ನೈಜ ರುಚಿಯ ಆಸ್ವಾದನೆ ಗ್ರಾಹಕರಿಗೆ ಆಗುತ್ತದೆ. ಇಲ್ಲಿ ಉಪ್ಪಿನಿಂದ ಹಿಡಿದು ಎಲ್ಲ ಆಹಾರ ವಸ್ತುಗಳು ಸಾವಯವ ಆಗಿರುವುದರಿಂದ, ಕೃತಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಉಪಯೋಗಿಸುವುದಿಲ್ಲ.ವಿವಿಧ ವಿಭಾಗಗಳು:‘ಮೆಹಂದಿ’ ರೆಸ್ಟೋರೆಂಟ್‌ನಲ್ಲಿ ಕೌಟುಂಬಿಕ ವ್ಯಕ್ತಿಗಳಿಗಾಗಿ ಪ್ರತ್ಯೇಕ ಕ್ಯಾಬಿನ್‌ಗಳಿವೆ. ರೂಫ್ ಟಾಪ್, ಓಪನ್ ಗಾರ್ಡನ್ ಇದೆ. ತೋಟದ ಮಧ್ಯೆ ಕುಳಿತು ನೈಜ ಆಹಾರದ ಸ್ವಾದವನ್ನು ಸವಿಯಬಹುದು. ಯಾವುದೇ ಸಮಸ್ಯೆಯಿಲ್ಲದೆ ಆಹಾರದ ಸವಿಯೊಂದಿಗೆ ಕಳೆಯಬಹುದು. ಕಾರ್ಪೋರೆಟ್ ಸಂಸ್ಥೆಗಳು ಮೀಟಿಂಗ್, ಸಭೆ ಸಮಾರಂಭಗಳನ್ನು ನಡೆಸಲು ಇಚ್ಚಿಸಿದರೆ ಅವರಿಗೆ ಬೇಕಾದ ವ್ಯವಸ್ಥೆಯೂ ಇದೆ. ಎ.ಸಿ ಮತ್ತು ನಾನ್ ಎಸಿ ವಿಭಾಗಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ನಿರ್ವಹಿಸಲ್ಪಡುತ್ತದೆ. ಇಲ್ಲಿ ಸಂಪೂರ್ಣ ಸಸ್ಯಾಹಾರಿ ವಿಭಾಗವೂ ಇದೆ. ಸಮುದ್ರ ಖಾದ್ಯವನ್ನು ಸವಿಯುವವವರಿಗೆಂದೇ ಪ್ರತ್ಯೇಕ ವಿಭಾಗವಿದೆ.ಆಹ್ಲಾದಕರ ವಾತಾವರಣ:‘ಮೆಹಂದಿ’ ರೆಸ್ಟೋರೆಂಟ್ ಕೇವಲ ಖಾದ್ಯ ಸವಿಯಲು ಮಾತ್ರವಲ್ಲ, ದಕ್ಷಿಣ ಭಾರತದ ಸಂಸ್ಕೃತಿ, ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಉತ್ತಮ ಸ್ಥಳವಾಗಿದೆ. ಸಾಂಪ್ರದಾಯಿಕ ಶೈಲಿಯ ವಿನ್ಯಾಸದ ಕಟ್ಟಡದಲ್ಲಿ ನೆಲೆಗೊಂಡಿರುವ ‘ಮೆಹಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಹಸಿರಿನ ಮಿನುಗು, ಶಾಂತಿಯುತ, ಅಹ್ಲಾದಕರ ವಾತಾವರಣದೊಂದಿಗೆ ಗ್ರಾಹಕರನ್ನು ಸ್ವಾಗತಿಸಲು ಸಜ್ಜಾಗಿದೆ. ಕೈಗೆಟಕುವ ಬೆಲೆಯಲ್ಲಿ ಅಧಿಕೃತ ಸುವಾಸನೆಯೊಂದಿಗೆ ಇಲ್ಲಿನ ಆಹಾರ ಖಾದ್ಯಗಳನ್ನು ಸವಿಯಬಹುದಾಗಿದೆ ಎಂದು ಸಂಸ್ಥೆಯ ಮಾಲಕ ಪ್ರಕಾಶ್ ಪಾಂಡೇಶ್ವ‌ರ್ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಲಾಲ್ ಬಾಗ್ ವನಿತಾ ಪಾರ್ಕ್ ನಲ್ಲಿ ಸ್ವಚ್ಚತಾ ಜಾಗೃತಿ ಕಾರ್ಯ ಕ್ರಮ

ಮಂಗಳೂರು,ಮೇ.11: ವನಿತಾ ಪಾರ್ಕ್ ನಲ್ಲಿ ಬೆಸೆಂಟ್ ಕಾಲೇಜಿನ ಯುವ ರೆಡ್ ಕ್ರಾಸ್‌ ಘಟಕ ಮತ್ತು ನೆಲ್ಲಿಗುಡ್ಡೆ ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ಶನಿವಾರ ಹಮ್ಮಿಕೊಂಡ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ ನಗರದ ಲಾಲ್ ಬಾಗ್ ಬಳಿಯ ವನಿತಾ ಪಾರ್ಕ್ ನಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಇಂಡಿಯನ್ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಹಿರಿಯ ಸಲಹೆಗಾರರಾದ ಪ್ರಭಾಕರ ಶರ್ಮ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಸ್ವಚ್ಚತಾ ಕಾರ್ಯ ನಮ್ಮ ಮನೆಗಳಿಂದಲೇ ಆರಂಭವಾಗಬೇಕು ಯುವ ರೆಡ್ ಕ್ರಾಸ್ ಘಟಕ ವಿದ್ಯಾರ್ಥಿ ಗಳಲ್ಲಿ ಯುವ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭಗೊಂಡಿದೆ ನಮ್ಮ ಪ್ರತಿ ನಿತ್ಯದ ಸಣ್ಣ ಪುಟ್ಟ ಕೆಲಸಗಳಲ್ಲಿ ಇತರರಿಗೆ ನೆರವಾಗುವ ಮೂಲಕ ನಾವು ಸಮಾಜಿಕ ಹೊಣೆಗಾರಿಕೆ ಯನ್ನು ನಿಭಾಯಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.ಇಂಡಿಯನ್ ರೆಡ್ ಕ್ರಾಸ್ ಘಟಕದ ಹಿರಿಯ ಸದಸ್ಯರಾದ ರವೀಂದ್ರನಾಥ ಉಚ್ಚಿಲ, ಬೆಸೆಂಟ್ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ದೀಕ್ಷಿತಾ ಹಾಗೂ ಬೆಸೆಂಟ್ ಯುವ ರೆಡ್ ಕ್ರಾಸ್ ಘಟಕದ ಸದಸ್ಯರು ಉಪಸ್ಥಿ ತರಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ ಕೋಶಾಧಿಕಾರಿ ರೆಡ್ ಕ್ರಾಸ್ ಘಟಕದ ಸದಸ್ಯ ಪುಷ್ಪ ರಾಜ್ ಬಿ.ಎನ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇಕಡ 100 ಫಲಿತಾಂಶ

ಕೊಂಚಾಡಿ ಶ್ರೀರಾಮಾಶ್ರಮ ವಿದ್ಯಾ ಸಂಸ್ಥೆಯುಕೊಂಚಾಡಿ ಎಜ್ಯುಕೇಶನಲ್ ಟ್ರಸ್ಟ್ ಬೋರ್ಡ್ ನಿಂದ ನಡೆಸಲ್ಪಡುತ್ತಿರುವ ಸುಮಾರು 108 ವರ್ಷಗಳ ಕಾಲ ಇತಿಹಾಸವುಳ್ಳ ಒಂದು ವಿದ್ಯಾ ಕಾಶಿ ಯಾಗಿದೆ.“ಅಳಿಸಲಾಗದ ಸಂಪತ್ತೊಂದಿದ್ದರೆ ಅದು ಆಕ್ಷರ ಸಂಪತ್ತು ಮಾತ್ರ “ಎಂಬ ಸತ್ಯವನ್ನು ಅರಿತುಕೊಂಡಿರುವ ಇಲ್ಲಿನ ಆಡಳಿತ ಮಂಡಳಿಯು ಪರಿಸರದ ವಿದ್ಯಾಕಾಂಕ್ಷಿಗಳಿಗೆ ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೆ ಗುಣಮಟ್ಟದ ಶಿಕ್ಷಣವನ್ನು ನುರಿತ ಶಿಕ್ಷಕರಿಂದ ನೀಡುತ್ತಾ ಬಂದಿರುವುದು ನಿಜಕ್ಕೂ ಕೊಂಚಾಡಿ ಟ್ರಸ್ಟ್ ಗೆ ಶಿಕ್ಷಣದ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ. ಈ ಶೈಕ್ಷಣಿಕ ಸಾಲಿನಲ್ಲಿ ಶ್ರೀರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ದಾಖಲಾಗಿದೆ.ಇಲ್ಲಿ ಶಿಕ್ಷಣ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಹೊರಬಂದಿದ್ದಾರೆ. ಹಿಂದೆ ಪದವಿಪೂರ್ವ ಫಲಿತಾಂಶದ ಸಂದರ್ಭದಲ್ಲಿ ಶ್ರೀ.ರಾಮಾಶ್ರಮ ಪದವಿ ಪೂರ್ವ ಕಾಲೇಜಿಗೆ ಶೇಕಡ 100 ಫಲಿತಾಂಶವನ್ನು ತಂದು ಕೊಡುವ ಮೂಲಕ ರಾಜ್ಯದ ಕೆಲವೇ ಕೆಲವು ಗುಣಮಟ್ಟದ ಕಾಲೇಜುಗಳ ಸಾಲಿನಲ್ಲಿ ರಾಮಾಶ್ರಮ ಪದವಿ ಪೂರ್ವ ಕಾಲೇಜು ಮಿಂಚಿತ್ತು.ಇದೀಗ ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಕೊಂಚಾಡಿ ಎಜುಕೇಶನಲ್ ಟ್ರಸ್ಟ್ ಬೋರ್ಡ್ ಹಾಗೂ ಶಾಲಾ ಶಿಕ್ಷಕರ ಪರಿಶ್ರಮದಿಂದ ಶೇಕಡಾ ನೂರು ಫಲಿತಾಂಶದ ಸಿಹಿ ಸುದ್ದಿಯನ್ನು ನೀಡಿದೆ ಎಂದು ಶಾಲಾ ಮುಖ್ಯೋಪಾಧ್ಯಯರಾಗಿರುವ ಡಾ. ರಾಜೇಶ್ ಕದ್ರಿ ಯವರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಉತ್ತಮ ಸಮಾಜ ನಿರ್ಮಾಣದ ಶಕ್ತಿ ಮಾಧ್ಯಮಗಳಿಗಿದೆ -ಪ್ರೊ.ಪಿ.ಎಲ್ .ಧರ್ಮ

ಮಂಗಳೂರು: ಮೇ.9; ಉತ್ತಮ ಸಮಾಜ ನಿರ್ಮಾಣದ ಶಕ್ತಿ ಮಾಧ್ಯಮಗಳಿಗಿದೆ. ಮುಖ್ಯವಾಗಿ ಯುವಜನರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ಗುರುವಾರ ಹಮ್ಮಿಕೊಂಡ ಪ.ಗೋ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಎಂ. ಇಸ್ಮಾಯಿಲ್ ಕಂಡ ಕರೆಯವರಿಗೆ ಪ.ಗೋ ಪ್ರಶಸ್ತಿ ವಿತರಿಸಿ ಮಾತನಾಡುತ್ತಿದ್ದರು.ಮಾಧ್ಯಮಗಳು ಪರಂಪರೆಯ ಕೊಂಡಿ ಯಾಗಿ ಕಾರ್ಯ ನಿರ್ವಹಿಸುತ್ತಾ ಉತ್ತಮ ಭವಿಷ್ಯ ರೂಪಿಸುವಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಮಂಗಳೂರು ವಿಶ್ವ ವಿದ್ಯಾನಿಲಯದ ಬೆಳವಣೆಗೆಯಲ್ಲಿ ಮಹತ್ವದ ಪಾತ್ರವಹಿಸಿದೆ.ಯುವ ಜನರಲ್ಲಿ ಕಲಿಕೆಯ ಬಗ್ಗೆ ಇರುವ ನಿರಾಸಕ್ತಿಯನ್ನು ದೂರ ಮಾಡಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಪಿ.ಎಲ್.ಧರ್ಮ ತಿಳಿಸಿದ್ದಾರೆ. ಮಾಧ್ಯಮಗಳು ಪದ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು.ಸಮಾಜದಲ್ಲಿನ ವಿಕೃತಿಗಳನ್ನು ಮೀರಿ ಮಾಧ್ಯಮಗಳು ಸಮಾಜದ ಉತ್ತಮ ಭವಿಷ್ಯವನ್ನು ರೂಪಿಸುವ ಶಕ್ತಿ ಯನ್ನು ಹೊಂದಿದೆ ಈ ನಿಟ್ಟಿನಲ್ಲಿ ಮಾಧ್ಯಮಗಳು ಗಮನಹರಿಸಲು ಮನವಿ ಮಾಡುವುದಾಗಿ ಪ್ರೊ.ಪಿ. ಎಲ್.ಧರ್ಮ ತಿಳಿಸಿದ್ದಾರೆ.ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ,ಹಿರಿಯ ಪತ್ರಕರ್ತ ದಿವಂಗತ ಪದ್ಯಾಣ ಗೋಪಾಲಕೃಷ್ಣರ ಒಡನಾಟದ ಬಗ್ಗೆ ಮಾತನಾಡಿ ಪತ್ರಕರ್ತರು ವರ್ತಮಾನ ಕಾಲದಲ್ಲಿದ್ದು ಭೂತಕಾಲದ ಜ್ಞಾನದೊಂದಿಗೆ ಭವಿಷ್ಯದ ಚಿಂತನೆ ಹೊಂದಿರಬೇಕಾದ ಅಗತ್ಯವಿದೆ ಎಂದರು. ಪ.ಗೋ ಪ್ರಶಸ್ತಿ ವಿಜೇತ ವಾರ್ತಾಭಾರತಿ ಪತ್ರಿಕೆಯ ವಿಶೇಷ ವರದಿಗಾರ ಇಸ್ಮಾಯಿಲ್ ಕಂಡಕೆರೆ ಮಾತನಾಡುತ್ತಾ,ಪತ್ರಿಕೆ ಗಳು ಗ್ರಾಮೀಣ ಪ್ರದೇಶದ ಸಮಸ್ಯೆ ಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆವಹಿಸಿದ್ದರು.ಸಮಾರಂಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ಆರ್,ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ ಬಂಟ್ವಾಳ,ಪದ್ಯಾಣ ಗೋಪಾಲಕೃಷ್ಣರವರ ಪುತ್ರ ವಿಶ್ವೇಶ್ವರ ಭಟ್ ,ಮ್ಯಾಮ್ ನ ಗೌರವಾಧ್ಯಕ್ಷ ವೇಣು ಶರ್ಮ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಡಸ್ಥಳ,ಹಿರಿಯ ಪತ್ರಕರ್ತ ಹಿಲರಿ ಕ್ರಾಸ್ತ,ಹರ್ಷ ಮೊದಲಾದ ವರು ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಸಜ್ಜನಿಕ ನಡೆ, ಸಂಘರ್ಷದ ಹೋರಾಟ, ಸೌಜನ್ಯಯುತ ರಾಯಭಾರಿತ್ವ ಹೊಂದಿದ ಅಪರೂಪದ ರಾಜಕಾರಣಿ ವಸಂತ ಬಂಗೇರ – ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ:ಮೇ.8 – ಹಿರಿಯ ರಾಜಕಾರಣಿ ಮಾಜಿ ಶಾಸಕ ಶ್ರೀ ಕೆ ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಕರ್ನಾಟಕದ ಪ್ರಮುಖ ಮೂರು ರಾಜಕೀಯ ಪಕ್ಷಗಳಡಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದ ಜಿಲ್ಲೆಯ ಏಕೈಕ ರಾಜಕಾರಣಿ ವಸಂತ ಬಂಗೇರರಾಗಿದ್ದು, ಪಕ್ಷಾತೀತವಾಗಿ ಜನತೆ ಅವರನ್ನು ಬೆಂಬಲಿಸಿದುದರ ನಿದರ್ಶನವಾಗಿದೆ. ಪ್ರಜಾಪ್ರಭುತ್ವಕ್ಕೆ ಕರಾಳವಾಗಿ ಜಾರಿಯಾಗಿದ್ದ ತುರ್ತುಪರಿಸ್ಥಿತಿ ವಿರುದ್ಧ ವಸಂತ ಬಂಗೇರರ ಹೋರಾಟ, 1983-85ರ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳ ಜನತೆ ಮಂಗನ ಖಾಯಿಲೆಯಿಂದ ತತ್ತರಿಸಿದಾಗ ಮಿಡಿದ ಅವರ ಸಹೃದಯಿ ಮನ. ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಬೆಳ್ತಂಗಡಿಯಿಂದ ಮಂಗಳೂರಿಗೆ ಅವರು ನಡೆಸಿದ ಜಾಥಾ ಇಂದಿಗೂ ಜನತೆಯ ಮನದಲ್ಲಿ ಹಚ್ಚ ಹಸಿರು.ಅವರ ನಿಧನ ವೈಯಕ್ತಿಕವಾಗಿಯೂ ತಾಲೂಕಿನ ಜನತೆಗೂ ಅಪಾರ ದುಃಖವನ್ನು ತಂದಿದ್ದು, ದಿವಂಗತರಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಶಾಸಕ ಹರೀಶ್ ಪೂಂಜ ತನ್ನ ನುಡಿನಮನ ಸಲ್ಲಿಸಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ಕನ್ನಡ ಸಂಘ ಅಲ್ ಐನ್‌ನ 21ನೇ ವಾರ್ಷಿಕೋತ್ಸವ

ಮಂಗಳೂರು : ಅರಬ್ ಸಂಯುಕ್ತ ಸಂಸ್ಥಾನದ ಕನ್ನಡ ಸಂಘ ಅಲ್ ಐನ್ ಇದರ 21ನೇ ವಾರ್ಷಿಕೋತ್ಸವ ಅಲ್ ಐನ್‌ನ ಬು ್ಲರಾಡಿಸನ್ಸ್ ಹೋಟೆಲ್‌ನಲ್ಲಿ ನಡೆಯಿತು. ಉದ್ಯಮಿಗಳಾದ ಜೋಸೆಫ್ ಮಥಾಯಸ್, ಹರೀಶ್ ಶೇರಿಗಾರ್, ಮಹಮ್ಮದ್ ಇಬ್ರಾಹಿಂ, ಜಾನ್ ಲ್ಯಾನ್ಸಿ ಡಿಸೋಜಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.ಕರ್ನಾಟಕ ಸಂಘ ಶಾರ್ಜಾ ಪೂರ್ವಾಧ್ಯಕ್ಷ ಬಿ. ಕೆ.ಗಣೇಶ್, ಅಬುದಾಬಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ತೋನ್ಸೆ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ನೋವೆಲ್ ಡಿಅಲೈಡಾ, ಮಲ್ಲಿಕಾರ್ಜುನ ಗೌಡ, ಮನೋಹರ್ ಹೆಗ್ಡೆ ಇವರುಗಳನ್ನು ಗೌರವಿಸಲಾಯಿತು. ಶ್ಯಾಮಲ ಗಣಪತಿ, ವಿಕಾಸ್ ಶೆಟ್ಟಿ ಮತ್ತು ಡಾ. ಪ್ರದೀಪ್‌ಚಂದ್ರ ಇವರುಗಳಿಗೆ ಕನ್ನಡ ಸಂಘ ಅಲ್ ಐನ್‌ನ ಸಾಧಕ ಪ್ರಶಸ್ತಿ ಹಾಗೂ ನಿಶ್ಚಲ್ ನಿತ್ಯಾನಂದ ಶೆಟ್ಟಿ ಮತ್ತು ಮಿತುಲ್ ವಸಂತ್ ಕುಮಾರ್ ಇವರುಗಳಿಗೆ ಆದರ್ಶ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಮಾಡಲಾಯಿತು.ಅಲ್ ಐನ್ ಹೈಸ್ಕೂಲ್ನ ಕನ್ನಡ ಅಧ್ಯಾಪಕಿ ರುಬೀನಾ ಮತ್ತು ಕನ್ನಡ ಪಾಠ ಶಾಲೆ ದುಬೈಯ ಶಿಕ್ಷಕಿಯರಿಗೆ ಗುರುವಂದನೆ ಸಲ್ಲಿಸಲಾಯಿತು. ಕಲಾ ನಿರ್ದೇಶಕ ಬಿ.ಕೆ.ಗಣೇಶ್ ರೈ, ಸಂಯೋಜಕ ರಮೇಶ್.ಕೆ.ಬಿ. ಉಪಸ್ಥಿತರಿದ್ದರು.ಮುಖ್ಯ ಸಂಘಟಕಯು.ಪಿ.ಹರೀಶ್ ಸ್ವಾಗತಿಸಿ, ರಮೇಶ್ ಕೆ.ಬಿ.ವಂದಿಸಿದರು. ಶ್ಯಾಮಲ, ಆಯಿಶಾ, ಸವಿತಾ ನಾಯಕ್, ಉಮ್ಮರ್ ಫಾರೂಕ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.ಕನ್ನಡ ಸಂಘ ಅಲ್ ಐನ್‌ನ ಸಂಘಟನೆಯ ಸದಸ್ಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ವೈಭವ , ಶರವ್ ಮತ್ತು ಆರ್ಯ ಇವರ ನಿರೂಪಣೆಯಲ್ಲಿ ಸಮಗ್ರ ಕರ್ನಾಟಕ ದರ್ಶನ ನೃತ್ಯ ರೂಪಕ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಜನರ ಪ್ರಾಣವನ್ನು ಪಣಕ್ಕಿಟ್ಟು ರಾಜಕೀಯ ಮಾಡುವುದೇ ಕಾಂಗ್ರೆಸ್‌ನ ಗ್ಯಾರಂಟಿ: ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು : ಜನರ ಜೀವ ಉಳಿಸಲು ಹಗಲಿರುಳು ದುಡಿಯುವ ಆಂಬ್ಯುಲೆನ್ಸ್ ಸಿಬ್ಬಂದಿಯ ಜೀವನಕ್ಕೆ ಗ್ಯಾರಂಟಿ ಇಲ್ಲದಿರುವುದು ದುರಂತ. ಸತತ ಮೂರು ತಿಂಗಳಿಂದ ಸಂಬಳ ನೀಡದೆ ಸತಾಯಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತ ಕೇವಲ ಪ್ರಚಾರಕಷ್ಟೇ ಸೀಮಿತವಾಗಿದೆಂದು ಬ್ರಿಜೇಶ್ ಚೌಟ ಹೇಳಿದ್ದಾರೆ. ಸಣ್ಣ ಸಮಸ್ಯೆಯಿಂದ ಸಂಬಳ ನೀಡುವಲ್ಲಿ ವಿಳಂಬವಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವ ಆರೋಗ್ಯ ಸಚಿವರೇ, ಕನಿಷ್ಠ ಸಂಬಳಕ್ಕೆ ಜೀವದ ಹಂಗು ತೆರೆದು ಕೆಲಸ ಮಾಡುವ ಜೀವ ರಕ್ಷಕ ಆಂಬುಲೆನ್ಸ್ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡದಿರುವುದು ಸಣ್ಣ ಸಮಸ್ಯೆ..? ನೀವು ಹೇಳುವಂತಹ ಸಣ್ಣ ಸಮಸ್ಯೆಯನ್ನು ಪರಿಹಾರ ಮಾಡಲು ಇಷ್ಟು ತಿಂಗಳಾದರೂ ಸಾಧ್ಯವಾಗದೇ ಇರುವಾಗ ನಿಮಗೆ ರಾಜ್ಯದ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಿದೆಯೇ?ಆಂಬುಲೆನ್ಸ್ ಸೇವೆಯ ವ್ಯತ್ಯಾಯದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿದರೆ ಅದರ ನೇರ ಹೊಣೆಯನ್ನು ಕಾಂಗ್ರೆಸ್ ಸರ್ಕಾರ ಹೊರಬೇಕಾಗುತ್ತದೆ. ಆಂಬುಲೆನ್ಸ್ ಸಿಬ್ಬಂದಿಗಳ ವೇತನವನ್ನು ಬಿಡುಗಡೆ ಮಾಡುವ ಮೂಲಕ ಮುಷ್ಕರವನ್ನು ಶೀಘ್ರವಾಗಿ ಹಿಂಪಡೆಯುವಂತೆ ನೋಡಿಕೊಳ್ಳಬೇಕೆಂದು ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆಂದು ಬಿಜೆಪಿ ಪಕ್ಷದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ ಅವರು ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿದ್ದಾರೆ.

Scroll to Top