ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆಯು 2025 ರ ಏಪ್ರಿಲ್ ತಿಂಗಳಾಂತ್ಯದಲ್ಲಿ ನಡೆಯಲಿದೆ.ಇದು ತೆಂಕು- ಬಡಗುತಿಟ್ಟುವಿನ ಯುವ ಯಕ್ಷಗಾನ ಕಲಾವಿದರ ಬಯಲಾಟ ಸ್ಪರ್ಧೆಯಾಗಿದ್ದು ಪ್ರಸಕ್ತ ಸ್ಪರ್ಧೆಯಲ್ಲಿ ಮೇಳದಲ್ಲಿ ತಿರುಗಾಟ ಮಾಡಿದ, ತಿರುಗಾಟ ಮಾಡುತ್ತಿರುವ ಕಲಾವಿದರು ಭಾಗವಹಿಸಬಹುದಾಗಿದೆ.ಯಕ್ಷಧ್ರುವ ಪಟ್ಲ ಪ್ರಕಾಶನ ಪ್ರಕಟಿಸಿದ ಶಿಮಂತೂರು, ಬಲಿಪ, ಬೊಟ್ಟಿಕೆರೆ, ಕೊಲೆಕಾಡಿ ಪ್ರಸಂಗ ಸಂಪುಟದ ಪ್ರಸಂಗಗಳನ್ನು ಮಾತ್ರ ಸ್ಪರ್ಧೆಗೆ ಬಳಸಬೇಕಾಗಿದ್ದು ಸ್ಫರ್ಧಾಳುಗಳ ವಯೋಮಿತಿಯು 15ರಿಂದ 25 ವರ್ಷದೊಳಗಿನ ಕಲಾವಿದರಿಗೆ ಮಾತ್ರ ಸೀಮಿತವಾಗಿದೆ. ಹಿಮ್ಮೇಳದ ಕಲಾವಿದರಿಗೆ ವಯೋಮಿತಿಯ ನಿರ್ಬಂಧವಿರದಿದ್ದರೂ ಒಂದು ತಂಡದಲ್ಲಿ ಭಾಗವಹಿಸಿದ ಹಿಮ್ಮೇಳ‌‌ ಕಲಾವಿದರು ಇನ್ನೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಶಾಲೆ, ಕಾಲೇಜು, ಸಂಘ, ಬಳಗದ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು ಕನಿಷ್ಠ 10, ಗರಿಷ್ಠ 15 ಕಲಾವಿದರನ್ನು ಒಳಗೊಂಡು ಒಂದು ಗಂಟೆ ಕಾಲಾವಧಿಯಾಗಿದೆ.ಅರ್ಹತಾ ಸುತ್ತು ಮತ್ತು ಅಂತಿಮ ಸುತ್ತು ಎನ್ನುವ ಎರಡು ಸುತ್ತುಗಳಿದ್ದು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಿಟ್ಟುಗಳ ತಲಾ 4 ತಂಡಗಳಿಗೆ ಅಂತಿಮ ಸುತ್ತಿನಲ್ಲಿ ಅವಕಾಶವನ್ನು ನೀಡಲಾಗುವುದು. ಅರ್ಹತಾ ಸುತ್ತು ಮಂಗಳೂರು ಮತ್ತು ಉಡುಪಿಯಲ್ಲಿ ನಡೆಯಲಿದ್ದು ಅಂತಿಮ ಸುತ್ತು ಅಡ್ಯಾರ್ ಗಾರ್ಡನ್ ನಲ್ಲಿ ಜೂನ್ 1 ರಂದು ನಡೆಯುವ ಪಟ್ಲ ಸಂಭ್ರಮದ ದಶಮಾನೋತ್ಸವ ಆಚರಣೆಯ ಸಂದರ್ಭ ನಡೆಯಲಿದೆ.ವಿಜೇತ ತಂಡಕ್ಕೆ ಪ್ರಥಮ ಬಹುಮಾನ ( 1 ಲಕ್ಷ) ದ್ವಿತೀಯ ಬಹುಮಾನ (75,000) ತೃತೀಯ ಬಹುಮಾನ (50,000) ಸಹಿತ ಒಂದು ಶಿಸ್ತಿನ ತಂಡ (25,000) ಪ್ರಶಸ್ತಿಯು ದೊರೆಯಲಿದೆ. ಸ್ಪರ್ಧೆಗೆ ಮಾದರಿ ಪ್ರವೇಶ ಪತ್ರ ಕಳುಹಿಸಲು 31/01/2025 ಅಂತಿಮ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕದ್ರಿ ನವನೀತ ಶೆಟ್ಟಿ (9448123061), ಉದಯಾನಂದ ಶೆಟ್ಟಿ (9535862709 ), ದೀವಿತ್ ಎಸ್ ಕೆ ಪೆರಾಡಿ (9845109989) ಇವರನ್ನು ಸಂಪರ್ಕಿಸಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ-ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ರಂಗಪ್ರವೇಶ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಕಾರಿ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯ ಸೊಗಡು ಪಸರಿಸುತ್ತಿರುವುದು ಸಂತೋಷದ ಸಂಗತಿ. ಫೌಂಡೇಶನ್‌ನಿಂದ ಇಂತಹ ಕೆಲಸಗಳು ನಿರಂತರ ನಡೆಯಲಿ ಎಂದು ಬಂಟ್ವಾಳ ಶಾಸಕ ರಾಜೇಶ್  ನಾಯ್ಕ್ ಹೇಳಿದರು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್  ಮತ್ತು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಬುಧವಾರ ಗಂಜಿಮಠದ ಒಡ್ಡಿರು ಫಾರ್ಮ್‌ನಲ್ಲಿ ಆಯೋಜಿಸಿದ ಯಕ್ಷಧ್ರುವ-ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮದ  ಸಮಾರೋಪದಲ್ಲಿ ಮಾತನಾಡಿದರು ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿದರು. ಯಕ್ಷಧ್ರುವ ಪಟ್ಲ ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪಟ್ಟ ಫೌಂಡೇಶನ್‌ನ ಪದಾಧಿಕಾರಿ ಪುರುಷೋತ್ತಮ `ಭಂಡಾರಿ ಅಡ್ಯಾರು ಸ್ವಾಗತಿಸಿದರು.ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಯಕ್ಷಧ್ರುವ-ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ, ಸರಪಾಡಿ ಘಟಕದ ಅಧ್ಯಕ್ಷ ಶಶಿಕಾಂತ ಶೆಟ್ಟಿ ಸರಪಾಡಿ, ಸಲಹಾ ಸಮಿತಿ ಸದಸ್ಯ ಸರಪಾಡಿ ಅಶೋಕ್ ಶೆಟ್ಟಿ ವಿಟ್ಲ ಘಟಕದ ರಾಧಾಕೃಷ್ಣ ಭಂಡಾರಿ ಚೆಲ್ಲಡ್ಕ, ಎಕ್ಕಾರು ಘಟಕದ ಗಿರೀಶ್ ಎಂ. ಶೆಟ್ಟಿ ಕಟೀಲು, ಸಂತೋಷ್ ಶೆಟ್ಟಿ ಶೆಡ್ಡೆ ಮತ್ತಿತರರು ಉಪಸ್ಥಿತರಿದ್ದರು. ವಾಸುದೇವ ಶೆಟ್ಟಿ ನಿರೂಪಿಸಿ, ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಬಜ್ಪೆ ಶನೈಶ್ಚರ ದೇವಳದ ಜಾತ್ರೆಯಲ್ಲಿ ‘ಯಕ್ಷ ಕಾವ್ಯ ಕಥನ’ *ಶನಿಕಥೆಯಿಂದ ದೋಷ ನಿವಾರಣೆ: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ಗ್ರಹ ಪಂಕ್ತಿಯಲ್ಲಿ ಅತ್ಯಂತ ಪ್ರಭಾವಶಾಲಿಯಾದ ಶನಿ ಗ್ರಹದ ಕಾರಣದಿಂದ ವಿವಿಧ ಬಗೆಯ ಜಾತಕ ದೋಷಗಳು ಸಂಭವಿಸುತ್ತವೆ. ಅದರ ನಿವಾರಣೆಗಾಗಿ ಉಳ್ಳವರು ದುಬಾರಿ ಶನಿ ಶಾಂತಿ ಪೂಜೆಗಳನ್ನು ಮಾಡಿಸುವುದು ವಾಡಿಕೆಯಾಗಿದೆ. ಆದರೆ ಶನಿಕಥಾ ಪ್ರವಚನ, ಪಠಣ, ಕೀರ್ತನ ಮತ್ತು ಅವುಗಳನ್ನು ಭಕ್ತಿಪೂರ್ವಕ ಶ್ರವಣ ಮಾಡುವುದರಿಂದ ಜನಸಾಮಾನ್ಯರೂ ಬಹು ಸುಲಭವಾಗಿ ಶನಿದೋಷ ಮುಕ್ತರಾಗಲು ಸಾಧ್ಯ’ ಎಂದು ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಬಜ್ಪೆ ಶ್ರೀ ಶನೈಶ್ಚರ ದೇವಸ್ಥಾನದ ವಾರ್ಷಿಕ ಜಾತ್ರಾ ಸಂದರ್ಭದಲ್ಲಿ ‘ಶ್ರೀ ಶನೈಶ್ಚರ ಮಹಾತ್ಮೆ – ಯಕ್ಷ ಕಾವ್ಯ ಕಥನ’ ಕಾರ್ಯಕ್ರಮದಲ್ಲಿ ಪ್ರವಚನಕಾರರಾಗಿ ಅವರು ಮಾತನಾಡಿದರು. ಖ್ಯಾತ ಹರಿದಾಸ ಮತ್ತು ಗಾಯಕ ತೋನ್ಸೆ ಪುಷ್ಕಳ ಕುಮಾರ್ ಹಾಗೂ ಮಹಿಳಾ ಭಾಗವತರು ಭವ್ಯಶ್ರೀ ಕುಲ್ಕುಂದ ಕಾವ್ಯ ಗಾಯನ ಮಾಡಿದರು. ವರುಣ್ ಆಚಾರ್ಯ ಮತ್ತು ಸಮರ್ಥ್ ಉಡುಪ ಚೆಂಡೆ – ಮದ್ದಲೆಗಳಲ್ಲಿ ಸಹಕರಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದರು. ಪೂಜಾ ವಿಧಿಗಳು: ಶ್ರೀ ಶನೈಶ್ಚರ ದೇವಸ್ಥಾನದ ಧರ್ಮದರ್ಶಿ ಆನಂದ ಪೂಜಾರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರಧಾನ ಅರ್ಚಕ ಅಭಿಜಿತ್ ಆನಂದ ಭಟ್ ಅವರೊಂದಿಗೆ ರವಿ ಶಾಂತಿ, ಶ್ರೀಧರ ಶಾಂತಿ, ಯಶೋಧರ ಶಾಂತಿ ಪೂಜಾ ವಿಧಿಗಳನ್ನು ನಡೆಸಿಕೊಟ್ಟರು. ಪೂರ್ವಾಹ್ನ ಗಣಹೋಮ, ಪಂಚಾಮೃತ ಅಭಿಷೇಕ, ನವಗ್ರಹ ಶಾಂತಿ ಹೋಮ, ಸಗ್ರಹ ಮುಖ ಶನಿ ಶಾಂತಿ ಹೋಮ; ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ; ಸಾಯಂಕಾಲ ಭಜನೆ, ದುರ್ಗಾ ನಮಸ್ಕಾರ ಪೂಜೆ, ಉತ್ಸವ ಬಲಿ, ಪ್ರಸಾದ ವಿತರಣೆ ಹಾಗೂ ಕ್ಷೇತ್ರದ ದೈವಗಳಿಗೆ ವಿನಿಯೋಗಾದಿಗಳು ಜರಗಿದವು. ಪೂಜಾ ಸೇವಾ ಸಮಿತಿ ಸದಸ್ಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತ ಬಾಂಧವರು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಜನವರಿ11ರಂದು ಬಿ.ಸಿ. ರೋಡ್ ನಲ್ಲಿ ಸರಪಾಡಿ ಅಶೋಕ್ ಶೆಟ್ಟಿ ಅವರ ಯಕ್ಷ ತಿರುಗಾಟದ 50 ರ ಸುವರ್ಣ ಸರಪಾಡಿ ಸಂಭ್ರಮ.

ಬಂಟ್ವಾಳ: ಜನಪ್ರಿಯ ಹಿರಿಯ ಯಕ್ಷಗಾನ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ್ ಶೆಟ್ಟಿ ಇವರ ಯಕ್ಷ ತಿರುಗಾಟದ 50 ರ ಸುವರ್ಣ ಸರಪಾಡಿ ಸಂಭ್ರಮ ನಾಳೆ (ಜನವರಿ 11 ರಂದು )ಬಿ. ಸಿ. ರೋಡಿನ ಗೋಲ್ಡ್ ಪಾರ್ಕ್ ಚಿಣ್ಣರ ಕಲೋತ್ಸವ ವೇದಿಕೆಯಲ್ಲಿ ನಡೆಯಲಿದೆ. ಈ ಪ್ರಯುಕ್ತ ದೊಂದಿ ಬೆಳಕಿನಲ್ಲಿ ಒಂದೂವರೆ ಗಂಟೆಯ ಮಹಾ ಸಂಶಪ್ತಕರು ಯಕ್ಷಗಾನ ಪ್ರದರ್ಶನವಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ. ಈ ಹಿಂದೆ ಮಂಗಳೂರು ಟೌನ್ ಹಾಲ್ ನಲ್ಲಿ .Mp mla’s ನ್ಯೂಸ್ ಸೌಹಾರ್ದ ಸಂಗಮದಲ್ಲಿ ಸರಪಾಡಿ ಅಶೋಕ್ ಶೆಟ್ಟಿ ಅವರನ್ನು ಸನ್ಮಾನಿಸಲಾಗಿತ್ತು. ಯಕ್ಷರಂಗದ ಕಲಾಚಕ್ರವರ್ತಿ, ಮಾತಿನ ಮಲ್ಲ, ನಿಸ್ವಾರ್ಥ ಕಲಾವಿದ, ಸಂಘಟಕ, ಅಭಿನಯ ಚಕ್ರವರ್ತಿ ಸರಪಾಡಿ ಅಶೋಕ ಶೆಟ್ಟಿ ಅವರು ಸಮಸ್ತ ತುಳುನಾಡಿನ ಹೆಮ್ಮೆಯ ಸುಪುತ್ರ. ಅವರಿಗೆ mpmla’s ನ್ಯೂಸ್ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಆವರು ಶುಭ ಹಾರೈಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಬಹುಭಾಷಾ ಸಾಹಿತ್ಯಾಸಕ್ತರ ಹಬ್ಬ:ಮಂಗಳೂರು “ಲಿಟ್ ಫೆಸ್ಟ್-2025” – “ಕಲೆ ಸಾಹಿತ್ಯ ಸಂಗೀತ ಜಾನಪದಗಳ ಸಂಗಮ”.

ಮಂಗಳೂರು: ಭಾರತ್ ಫೌಂಡೇಶನ್ ವತಿಯಿಂದ ಆಯೋಜಿಸಲ್ಪಡುತ್ತಿರುವ”ಲಿಟ್ ಫೆಸ್ಟ್” ಮಂಗಳೂರು ಸಾಹಿತ್ಯೋತ್ಸವದ 7ನೇ ಆವೃತ್ತಿಯು ನಗರದ ಡಾ. ಟಿ.ಎಂ.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ನನ್‌ ಸೆಂಟರ್‌ನಲ್ಲಿ ಜನವರಿ 11 ಮತ್ತು 12 ರಂದು ಜರುಗಲಿದೆ. ನಾಡಿನ ಖ್ಯಾತ ಸಾಹಿತಿಗಳಾದ ಡಾ. ಎಸ್. ಎಲ್. ಭೈರಪ್ಪ ಅವರಿಂದ ಉದ್ಘಾಟನೆಗೊಳ್ಳಲಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕರ ಚಿಂತನೆಯಿಂದ ಆರಂಭ ಗೊಂಡ ಲಿಟ್ ಫೆಸ್ಟ್ ಇಂದು 7ನೆ ಆವೃತಿಗೆ ದಾಪುಗಾಲಿಟ್ಟಿದೆ. ಇದು ಸಾಹಿತ್ಯ ಹಬ್ಬವಲ್ಲ, ಇದು ಇಡೀ ಜಿಲ್ಲೆಯ ಸಾಹಿತ್ಯಾಸಕ್ತರ ಹಬ್ಬ. ಎಲ್ಲರೂ ಒಗ್ಗೂಡಿ ಸಾಹಿತ್ಯೋತ್ಸವವನ್ನು ಅನುಭವಿಸಬೇಕು,ಆನಂದಿಸಬೇಕು ಎನ್ನುವ ದೃಷ್ಟಿಯಿಂದ ಆಯೋಜಿಸಲಾಗುತ್ತದೆ.ಸಾಹಿತ್ಯಸಕ್ತರಿಗೆ ಮಂಗಳೂರು ಸಾಹಿತ್ಯ ಉತ್ಸವದಲ್ಲಿ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ,ಆರ್ಥಿಕಮತ್ತು ಸಿನಿಮಾ ಸಹಿತ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಹೊಸ ಹೊಸ ಆವಿಷ್ಕಾರ,ಬೆಳವಣಿಗೆಗಳನ್ನ ತಿಳಿಯಲು ಇಲ್ಲಿ ಅವಕಾಶವಿದೆ. ಅಲ್ಲದೆ,ಸಾಹಿತ್ಯ ಉತ್ಸವದಲ್ಲಿ ಚಲನಚಿತ್ರಗಳ ಪ್ರದರ್ಶನಗಳು, ಪರಂಪರೆಯ ಕುರಿತು ಚರ್ಚೆಗಳು ಮತ್ತು ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಪ್ರಸ್ತುತಿಗಳು ಸಹ ನಡೆಯಲಿದೆ.ಎಲ್ಲಾ ವಯೋಮಾನದ ಆಸಕ್ತರನ್ನು ಆಕರ್ಷಿಸಲು, ವಿವಿಧ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗಿದ್ದು,ಸ್ಥಳೀಯ ಕಲಾವಿದರು, ಸಾಹಿತಿಗಳು, ಇತಿಹಾಸಕಾರರು, ಸಂಗೀತಗಾರರು ಮತ್ತು ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.ಮಹಿಳೆಯರು, ಮಕ್ಕಳು ಮತ್ತು ಯುವಕರಿಗೆ ಎರಡು ದಿನಗಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮಗಳ ವಿವರ:9.30-ಉದಯರಾಗ.10.00- ಸಮಾರಂಭ ಉದ್ಘಾಟನೆಬೆಳಿಗ್ಗೆ10.45 ಕ್ಕೆ,“Energy for Survival – Security and Climate” ಬಗ್ಗೆ ಇಂಗ್ಲಿಷ್ ಭಾಷೆಯಲ್ಲಿ ಸಂವಾದ ಇದ್ದು, ಹರ್ದೀಪ್ ಸಿಂಗ್ ಪುರಿ ವಿಚಾರ ಮಂಡಿಸುವರು. ಡಾ. ನಂದಕಿಶೋರ್ ಎಂ.ಎಸ್. ಅವರು ನಿರ್ವಹಣೆ ಮಾಡುವರು.11.45ಕ್ಕೆ ವಿಕ್ರಮ್ ಸೂದ್ “Art and Craft of Building and Dismantling narratives”ವಿಚಾರ ಮಂಡಿಸಲಿದ್ದು, ಪ್ರಶಾಂತ್ ವೈದ್ಯರಾಜ್ ಸಂವಾದ ನಡೆಸುವರು.ಮಧ್ಯಾಹ್ನ 2ಕ್ಕೆ “ಸಂಸ್ಕೃತಯಾನಂ” ಎಂಬ ಕಾರ್ಯಕ್ರಮದಲ್ಲಿ ಸಮಸ್ಥಿ ಗುಬ್ಬಿ, ಡಾ.ಎಚ್.ಆರ್.ವಿಶ್ವಾಸ್, ಡಾ.ಶಂಕರ ರಾಜಾರಾಮನ್ ವಿಚಾರ ಮಂಡಿಸಲಿದ್ದು, ಡಾ. ಶಾಂತಲಾ ವಿಶ್ವಾಸ್ ಸಂವಹನಕಾರರಾಗಿ ನಿರ್ವಹಣೆ ಮಾಡುವರು. ಮಧ್ಯಾಹ್ನ 3.00 ಗಂಟೆಗೆ “ಪ್ರೋಸೆಸ್ ರೆಫಾರ್ಮ್ಸ್ ಆಸ್ ಪಬ್ಲಿಕ್ ಪಾಲಿಸಿ” ವಿಷಯದ ಕುರಿತು ಸಂಜೀವ ಸಾನ್ಯಾಲ್ ವಿಚಾರ ಮಂಡಿಸಲಿದ್ದು, ಬಂಗಾರಡ್ಕ ವಿಶ್ವೇಶ್ವರ ಭಟ್ ಸಂವಹನಕಾರರಾಗಿ ಭಾಗವಹಿಸುವರು.ಸಂಜೆ 4 ಗಂಟೆಗೆ “ಗ್ರಾಜುವೇಟಿಂಗ್‌ ದಿ ಎಜುಕೇಶನಲ್‌ ಪಾಲಿಸಿ” ಕುರಿತು ಡಾ. ಸಂತಿಶ್ರೀ ಧುಲಿಪುಡಿ ಪಂಡಿತ್, ಡಾ. ವಿನಯ್ ಸಹಸ್ರಬುದ್ಧ ಮಾತನಾಡಲಿದ್ದು, ಡಾ. ವಿನಯಚಂದ್ರ ಭನ್ವತೆ ಸಂವಹನಕಾರರಾಗಿರುವರು. ಸಂಜೆ 5ಕ್ಕೆ ಡೆಮಾಕ್ರೆಸಿ ಆಂಡ್ ಡೆಮಾಕ್ರೆಟಿಕ್ ಗವರ್ನೆನ್ಸ್ ಕುರಿತು ಕೆ.ಅಣ್ಣಾಮಲೈ ವಿಚಾರ ಮಂಡಿಸಲಿದ್ದು, ಜೈದೀಪ್ ಶೆಣೈ ಸಂವಹನಕಾರರಾಗಿರುವರು.ಜನವರು 11ರಂದು ಎರಡನೇ ಸಭಾಂಗಣದಲ್ಲಿಬೆಳಗ್ಗೆ 10.45ಕ್ಕೆ- ಕನ್ನಡ ಸಾಹಿತ್ಯ ವಿಮರ್ಶೆ ಒಂದು ಅಕಾಡೆಮಿಕ್ ಚರ್ಚೆ ವಿಷಯದಲ್ಲಿ ಜಿ.ಎಸ್.ಅಮೂರ ಶತಮಾನದ ನೆನಪು ಕುರಿತು.ಡಾ. ಜಿ.ಬಿ.ಹರೀಶ, ಡಾ.ಎನ್.ಎಸ್.ಗುಂಡೂರ, ಡಾ.ಶ್ಯಾಮಸುಂದರ ಬಿದರಕುಂದಿ ವಿಚಾರ ಮಂಡಿಸಲಿದ್ದು, ಡಾ.ಕಾಖಂಡಕಿ ಎಚ್‌.ವಿ. ಸಂವಹನಕಾರರಾಗಿ ಭಾಗವಹಿಸುವರು.11.45ಕ್ಕೆ ಪತ್ರಿಕೋದ್ಯಮ ಮತ್ತು ಸಾಹಿತ್ಯ, ಒಂದು ಹರಟೆ ಎಂಬ ವಿಷಯದಲ್ಲಿ ಜೋಗಿ ಮತ್ತು ರವಿ ಹೆಗಡೆ ಮಾತನಾಡುವರು.2.15ಕ್ಕೆ ‘ಹಳ್ಳಿಯನ್ನು ಕಟ್ಟುವ ಕಷ್ಟ ಸುಖ’ ಕುರಿತು ಶಿವಾನಂದ ಕಳವೆ, ಡಾ. ಪ್ರಕಾಶ ಭಟ್ ಮಾತನಾಡಲಿದ್ದು, ಅರ್ಚನ ಆರ್ಯ ಸಂವಹನಕಾರರಾಗಿ ಭಾಗವಹಿಸುವರು.3.15ಕ್ಕೆ ಸಿನಿಮೀಯ-ಸಿನಿಕೀಯ ಪುಸ್ತಕ ಬಿಡುಗಡೆ ಮತ್ತು ಚರ್ಚೆ ಇರಲಿದ್ದು, ಅರುಣ್ ಭಾರಧ್ವಾಜ್ ಮತ್ತು ಪ್ರಕಾಶ್ ಬೆಳವಾಡಿ ಭಾಗವಹಿಸುವರು. ಶೈಲೇಶ್‌ ಕುಲಕರ್ಣಿ ಸಂವಹನ ನಡೆಸುವರು.4.15ಕ್ಕೆ “ಸೈಟ್ ಆಂಡ್ ಇನ್ಸೆಟ್” ಕುರಿತು ಡಾ. ಮಲ್ಲಪ್ಪ ಭಂಡಿ, ಡಿ.ಐಶ್ವರ್ಯ ಮಾತನಾಡಲಿದ್ದು, ಪ್ರಥ್ವಿ ಕಾರಿಂಜೆ ಸಂವಹನ ಮಾಡುವರು.5.15ಕ್ಕೆ ಗುರುದತ್‌ ಶತಮಾನೋತ್ಸವ ಸ್ಮರಣೆ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆ, ಸಂವಾದ “ಥ್ಯಾಂಕ್ಯೂ ಗುರುದತ್” ಎಂಬ ವಿಷಯದಲ್ಲಿ ಲತಾ ಜಗತಿಯಾನಿ, ಪ್ರಕಾಶ್ ಬೆಳವಾಡಿ ಮಾತನಾಡಲಿದ್ದು, ಕಾರ್ತಿಕೇಯ ಗೋಸ್ವಾಮಿ ಸಂವಹನ ನಡೆಸಲಿದ್ದಾರೆ.ಮೊದಲ ದಿನದ ಹರಟೆಕಟ್ಟೆಯಲ್ಲಿ “ಚಿಲಿಪಿಲಿ” ಕಾರ್ಯಕ್ರಮವನ್ನು ವಂದನಾ ರೈ ಕಾರ್ಕಳ 10.30ಕ್ಕೆ ನಡೆಸಿಕೊಡಲಿದ್ದಾರೆ2.00 ಗಂಟೆಗೆ ಡಾ.ತುಕಾರಾಮ ಪೂಜಾರಿ ಅವರು ತುಳು ಸಾಹಿತ್ಯ, ಆಳ, ಅಗಲ, ಆವಿಷ್ಕಾರ ಕುರಿತು ಮಾತನಾಡುವರು.ಶಶಿರಾಜ್ ಕಾವೂರು ಸಂವಹನಕಾರರಾಗಿ ಸಂವಹನ ನಡೆಸಲಿದ್ದಾರೆ.3.00 ಗಂಟೆಗೆ “ರೋಲ್ ಆಂಡ್ ಗೋಲ್ ಆಫ್ ಇಂಡಿಯನ್ ಡಯಾಸ್ಪೋರ” ಕುರಿತು ವೀಣಾ ರಾವ್‌ ಮಾತನಾಡಲಿದ್ದು, ಬಿ.ಅರ್ಚನಾ ಬಾಳಿಗ ಸಂವಹನ ನಡೆಸುವರು.4ಗಂಟೆಗೆ ಜಾನಪದ ಗೊಂದಲಿಗರ ಪದಗಳು, ಹಾಡು ಮತ್ತು ಕಥೆ ಕುರಿತು ವಿಠಲ ಗೋಂದಳೆ ಮಾತನಾಡುವರು.5 ಗಂಟೆಗೆ “ಕಥಾ ಓದು”ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಕುಂಠಿನಿ, ಸ್ಮಿತಾ ರಾಘವೇಂದ್ರ ಮತ್ತು ಸಚಿನ್ ತೀರ್ಥಹಳ್ಳಿ ಭಾಗವಹಿಸಲಿದ್ದು,ಸಂವಹನಕಾರರಾಗಿ ವಿಷ್ಣುಧರನ್ ನಿರ್ವಹಿಸುವರು.ಎರಡನೇ ದಿನದ ಕಾರ್ಯಕ್ರಮಒಂದನೇ ಸಭಾಂಗಣದಲ್ಲಿ.ಎರಡನೇ ದಿನ 9.30ಗೆ ಮೇಧಾ ಉಡುಪ ಅವರಿಂದ ಉದಯರಾಗ.10.00 ಗಂಟೆಗೆ ಪ್ರಶಸ್ತಿ ಪ್ರದಾನ ಡಾ. ಆ‌ರ್. ಬಾಲಸುಬ್ರಹ್ಮಣ್ಯಂ ಅವರಿಗೆ.11.15ಕ್ಕೆ .ಮಾಗಧ ಲೋಕಾರ್ಪಣ ಮತ್ತು ಅವಲೋಕನದಲ್ಲಿ ಸಹನಾ ವಿಜಯಕುಮಾರ ಭಾಗವಹಿಸುವರು. ಡಾ. ಅಜಕ್ಕಳ ಗಿರೀಶ್ ಭಟ್ ಸಂವಹನಕಾರರಾಗಿರುವರು.12.15ಕ್ಕೆ ಐಕಾನ್ಸ್ ಫಾರ್ ಟುಡೇ ಡೂಸ್ ಆಂಡ್ ಡೋಂಟ್ಸ್,( ಟಿಪ್ಪು ಸುಲ್ತಾನ್ – ದಿ ಸಾಗಾ ಆಫ್ ಮೈಸೂ‌ರ್ ಇಂಟರ್ಜೆನಮ್) 1760-1799 ಪುಸ್ತಕ ಲೋಕಾರ್ಪಣೆ, ಸಂವಾದವಿದ್ದು, ಡಾ. ವಿಕ್ರಮ್ ಸಂಪತ್, ಪ್ರಕಾಶ್ ಬೆಳವಾಡಿ ಸಂವಾದ ನಡೆಸುವರು, ಹರ್ಷ ಶಂಕರ ಭಟ್ ಸಂವಹನಕಾರರಾಗಿ ನಿರ್ವಹಣೆ.ಮಧ್ಯಾಹ್ನ 2 ಗಂಟೆಗೆ ಸಿನಿಮಾ ತಾಂತ್ರಿಕತೆ ಕುರಿತು ಗಿರೀಶ್ ಕಾಸರವಳ್ಳಿ ,ಗೋಪಾಲಕೃಷ್ಣ ಪೈ, ಮಾತನಾಡಲಿದ್ದು, ಅರುಣ್‌ ಭಾರಧ್ವಾಜ್‌ ಸಂವಹನಕಾರರಾಗಿದ್ದಾರೆ.ಮಧ್ಯಾಹ್ನ 3ಕ್ಕೆ ಫ್ರಮ್ ಇಂಡಿವಿಜುವಲ್‌ ಟು ಮಧ್ಯಾಹ್ನ 3ಕ್ಕೆ ಪ್ರೊಮ್ ಇಂಡಿವಿಜುವಲ್‌ ಟು ಇನ್ ಡಿವಿಸಿಬಲ್‌ ಎಂಬ ವಿಷಯದಲ್ಲಿ ಸ್ವಾಮಿ ಮಹಾಮೇಧಾನಂದ, ಸತ್ಯೇಶ್ ಬೆಳ್ಳೂರು ಮಾತನಾಡಲಿದ್ದು, ಡಾ. ಶಂಕ‌ರ್ ರಾಜಾರಾಮ್ ಸಂವಹನ ನಡೆಸಲಿದ್ದಾರೆ.4.00 ಗಂಟೆಗೆ ಭಾರತೀಯ ಭಾಷೆಗಳಿಗೆ ದೇಶಿಯತೆ ಕೊಡುಗೆಗಳು ಕುರಿತು ಡಾ. ಜಿ.ಬಿ.ಹರೀಶ, ವಿ.ನಾಗರಾಜ್, ಡಾ.ಎಚ್.ಆರ್.ವಿಶ್ವಾಸ್ ಮಾತನಾಡಲಿದ್ದಾರೆ, ಕ್ಷಮಾ ನರಗುಂದ ಸಂವಹನ ನಡೆಸುವರು.ಸಮಾರೋಪ ಸಮಾರಂಭದಲ್ಲಿ ಶತಾವಧಾನಿ ಡಾ.ಆರ್. ಗಣೇಶ್ ಮತ್ತು ಡಾ.ಅಜಕ್ಕಳ ಗಿರೀಶ ಭಟ್ ಭಾಗವಹಿಸುವರು.11 ಗಂಟೆಗೆ ಹರಟೆಕಟ್ಟೆಯಲ್ಲಿ ಡಾ. ಎಸ್.ಎಲ್.ಭೈರಪ್ಪ ಜೊತೆ ಸಂವಾದ.ಮಧ್ಯಾಹ್ನ 2.15ಕ್ಕೆ ರಸಪ್ರಶ್ನೆ ಕಾರ್ಯಕ್ರಮದ ಅಂತಿಮ ಘಟ್ಟ ನಡೆಯುವುದು.ಎರಡನೇ ದಿನದ ಕಾರ್ಯಕ್ರಮಎರಡನೇ ಸಭಾಂಗಣದಲ್ಲಿ.10.15ಕ್ಕೆ ಹಿಮಾಲಯನ್ ಜಿಯೋಪಾಲಿಟಿಕ್ಸ್ ಕುರಿತು ಡಾ.ಕ್ಲಾಔಡೆ ಅರ್ಪಿ, ದಿಲೀಪ್ ಸಿನ್ಹ, ಜಂಗ್ಚುಪ್ ಚೊಡೆನ್ ಮಾತನಾಡುವರು, ಬಿಪೀಂದ್ರ ಅವರು ಸಂವಹನ ನಡೆಸುವರು.11.15ಕ್ಕೆ ನಾಗೋರ್ಟ್ ಅಂಡ‌ರ್ ಸೀಝ್ ಕುರಿತು ಬಾವನ್ ಅರೋರ,ಮೆಗ್ನ ಗಿರೀಶ್, ಶಿವ್ ಅರೂರ್ ಮಾತನಾಡುವರು. ಸುರಭಿ ಹೊಡಿಗೆರೆ ಸಂವಹನ ನಡೆಸುವರು.12.15ಕ್ಕೆ ವುಮನ, ಜೆಂಡ‌ರ್ ಮತ್ತು ಸೊಸೈಟಿ ಕುರಿತು ಡಾ. ವರದ ಸಂಭುಸ್, ಕ್ಷಮಾ ನರಗುಂದ ಮಾತನಾಡುವರು. ಡಾ. ಸುಷ್ಮಾ ಶೆಟ್ಟಿ ಸಂವಹನ ನಡೆಸುವರು.“ಅಂಬೇಡ್ಕ‌ರ್ ಮತ್ತು ಸಂವಿಧಾನ” ಸತ್ಯ ಮತ್ತು ಮಿಥ್ಯ ಕುರಿತು ವಿಕಾಸ್ ಕುಮಾರ್ ಪಿ. ಎಸ್, ಮಹೇಶ್‌ ಮಾತನಾಡುವರು 3 ಗಂಟೆಗೆ ಯುವ ಮಿಥ್ಯ ಕುರಿತು ವಿಕಾಸ್ ಕುಮಾರ್ ಪಿ. ಎನ್ , ಮಹೇಶ್‌ ಮಾತನಾಡುವರು.3 ಗಂಟೆಗೆ ಯುವ ಕವಿಗೋಷ್ಠಿಯಲ್ಲಿ ಸತೀಶ ಹೆಗಡೆ ಶಿರಸಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಸ್ಮಿತಾ ಅಮೃತರಾಜ್‌ ಭಾಗವಹಿಸುವರು. ಗುರುಪ್ರಸಾದ್ ಟಿ.ಎನ್. ನಡೆಸಿಕೊಡುವರು.ಲಿಟ್ ಫೆಸ್ಟ್ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತಿ.ಸುಜಿತ್ ಪ್ರತಾಪ್,ಈಶ್ವರಚಂದ್ರ ಶೆಟ್ಟಿ,ಸುನಿಲ್ ಕುಲಕರ್ಣಿ, ಭಾರತ್ ಫೌಂಡೇಶನ್ ಟ್ರಸ್ಟಿ , ಶ್ರೀರಾಜ್ ಗುಡಿ ಟ್ರಸ್ಟಿ ಭಾರತ್ ಫೌಂಡೇಶನ್ , ದುರ್ಗಾ ಪ್ರಸಾದ್ ಕಟೀಲ್.ಚಿತ್ರಗಳು :ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ ಸಂಚಿಕೆ ಬಿಡುಗಡೆ

ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ನ ಗೃಹ ಪತ್ರಿಕೆ ” ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ” ಇ-ಪೇಪರ್ ನ 4ನೇ ಸಂಚಿಕೆಯನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಬುಧವಾರ ಬಿಡುಗಡೆಗೊಳಿಸಿದರು.ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ,ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕಾರ್ಯಕಾರಿ ಸಮಿತಿ ಸದಸ್ಯ ಸುಖಪಾಲ್ ಪೊಳಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಭಾರತ ಅಕಾಡೆಮಿ ಮಂಗಳೂರಿಗೆ ಎಜುಕೇಶನ್ ಟುಡೇ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ನಂಬರ್ 1 ಸ್ಥಾನ

ಈ ಪ್ರದೇಶದ ಮೊದಲ ಕೇಂಬಿಡ್ಜ್ ಸಂಯೋಜಿತ ಶಾಲೆಯಾದ ಭಾರತ್ ಅಕಾಡೆಮಿ, ಮಂಗಳೂರು, ಕಲಿಕೆ ಮತ್ತು ಶಿಕ್ಷಣದಲ್ಲಿ ರಾಷ್ಟ್ರದ ಪ್ರಮುಖ ನಿಯತಕಾಲಿಕವಾದ ಎಜುಕೇಶನ್ ಟುಡೆ ನಡೆಸಿದ ಸಮೀಕ್ಷೆಯಲ್ಲಿ “ಸಮಗ್ರ ಶಿಕ್ಷಣಕ್ಕಾಗಿ ಅಂತರರಾಷ್ಟ್ರೀಯ ಪ್ಯಾರಾಮೀಟರ್ ಶ್ರೇಯಾಂಕ” ವಿಭಾಗದಲ್ಲಿ ಭಾರತದಲ್ಲಿ ನಂ. 1 ಸ್ಥಾನ ಪಡೆದಿದೆ.ಈ ಪ್ರಶಸ್ತಿ ಪ್ರದಾನ ಸಮಾರಂಭವು 10ನೇ ಡಿಸೆಂಬರ್ 2024 ರಂದು ಹೋಟೆಲ್ ತಾಜ್ ಬೆಂಗಳೂರು ಇಲ್ಲಿ ನೆರವೇರಿತು. ಭಾರತ್ ಅಕಾಡೆಮಿಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ವಿಂಧ್ಯಾ. ಆನಂದ್ ಪೈ ಅವರು ನಿರ್ದೇಶಕರಾದ ಶ್ರೀ ಪ್ರಶಾಂತ್ ಮಲ್ಯ ಮತ್ತು ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ನಾಯಕ್ ಅವರೊಂದಿಗೆ ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸಿದರು.ಈ ಮನ್ನಣೆಯು ಸಮಗ್ರ ಶಿಕ್ಷಣದ ದೃಢವಾದ ಬದ್ಧತೆಗೆ ಮತ್ತು ಭಾರತ್ ಅಕಾಡೆಮಿಯನ್ನು “ದಿ ಸ್ಕೂಲ್ ವಿತ್ ಎ ಡಿಫರೆನ್ಸ್” ಆಗಿ ರೂಪಿಸುವ ನಮ್ಮ ಧೈಯಕ್ಕೆ ಮತ್ತಷ್ಟು ಸಾಕ್ಷಿಯಾಗಿದೆ ಎಂದು ಭಾರತ್ ಅಕಾಡೆಮಿ, ಮಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ: ರಾಜ್ಯಮಟ್ಟದ ಆಯ್ಕೆ ಸಮಿತಿ ಸದಸ್ಯರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ನೇಮಕ

ಮಂಗಳೂರು: ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆ ಮಾಡಲು ಸರಕಾರ ರಚಿಸಿರುವ ರಾಜ್ಯ ಸಮಿತಿ ಸದಸ್ಯರಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಹಿರಿಯ ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ ಅವರನ್ನು ನೇಮಕ ಮಾಡಿ‌ ಸರಕಾರ ಆದೇಶ ಮಾಡಿದೆ. ಗ್ರಾಮೀಣ‌ ಪತ್ರಕರ್ತರಿಗೆ ವೃತ್ತಿ ಸಂಬಂಧಿಸಿ ಜಿಲ್ಲಾ ವ್ಯಾಪ್ತಿಯಲ್ಲಿ ಸರಕಾರಿ ಬಸ್‌ನಲ್ಲಿ ಓಡಾಟ ನಡೆಸಲು ಉಚಿತ ಬಸ್ ಪಾಸ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆ ಬಳಿಕ ಆದೇಶ ಕೂಡ ಮಾಡಲಾಗಿತ್ತು. ಇದೀಗ ಉಚಿತ ಬಸ್ ಪಾಸ್ ವಿತರಣೆ ಯೋಜನೆ ಅನುಷ್ಠಾನ ಮಾಡಲು ರಾಜ್ಯಮಟ್ಟದ ಆಯ್ಕೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆಯ್ಕೆ ಸಮಿತಿಗೆ ಶ್ರೀನಿವಾಸ ನಾಯಕ್ ಇಂದಾಜೆ ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಿ ಆದೇಶ ಮಾಡಿದೆ. ಸಮಿತಿಯಲ್ಲಿ 9 ಮಂದಿ ಸದಸ್ಯರುತ್ತಾರೆ. ಗ್ರಾಮೀಣ ಪತ್ರಕರ್ತರ ಅರ್ಜಿಗಳನ್ನು ಪರಿಶೀಲಿಸಿ ಸೌಲಭ್ಯವನ್ನು ಮಂಜೂರು ಮಾಡಲು ಸಮಿತಿ ರಚಿಸಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಸದಸ್ಯರಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಸುದ್ದಿ ಮತ್ತು ಪತ್ರಿಕಾ ಶಾಖೆಯ ಜಂಟಿ ನಿರ್ದೇಶಕರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಯಾಗಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಬೆಂಗಳೂರು ವರದಿಗಾರರ ಕೂಟದ ಪ್ರತಿನಿಧಿಯಾಗಿ ಹಿರಿಯ ಪತ್ರಕರ್ತ ಎಂ ಚಂದ್ರಶೇಖರ್, ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ಪ್ರತಿನಿಧಿಯಾಗಿ ಹೆಚ್.ಎಲ್ ಸುರೇಶ್, ಬೆಂಗಳೂರು ಪೋಟೋ ಜರ್ನಲಿಸ್ಟ್ ಸಂಘದ ಪ್ರತಿನಿಧಿಯಾಗಿ ಮೋಹನ್ ಕುಮಾರ್, ವಿಶೇಷ ಆಮಂತ್ರಿತತ ಪ್ರತಿನಿಧಿಗಳಾಗಿ ಗಂಗಾಧರ್ ಬಂಡಿಹಾಳ್ ಹಾಗೂ ಶ್ರೀನಿವಾಸ ನಾಯಕ್ ಇಂದಾಜೆ ಅವರನ್ನು‌ ಸರಕಾರ ನಾಮ ನಿರ್ದೇಶನ ಮಾಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯಉಪ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ಜ.10: ಡೊಂಗರಕೇರಿ ವೆಂಕಟರಮಣ ದೇವಳದಲ್ಲಿ ವೈಕುಂಠ ಏಕಾದಶಿ

ಮಂಗಳೂರು: “ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 10ರಂದು ಏಳನೇ ವರ್ಷದ ಏಕಾದಶಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದು” ಎಂದು ದೇವಳದ ಮೆನೇಜಿಂಗ್ ಟ್ರಷ್ಟಿ ಪ್ರವೀಣ್ ನಾಗ್ವೇಕರ್ ಬೋಳಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. “ಇಲ್ಲಿ ನಡೆಯುವ ಏಕಾದಶಿ ಕಾರ್ಯಕ್ರಮ ದೇವರ ಅಪ್ಪಣೆಯಂತೆ ನಡೆಯುತ್ತಿದ್ದು ಪ್ರತೀ ಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಲೋಕ ಕಲ್ಯಾಣಕ್ಕಾಗಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಾಯಂಕಾಲ 4 ಗಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿದೆ” ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದ ಉಸ್ತುವಾರಿ ಗಣೇಶ್ ನಾಗ್ವೇಕರ್ ಬೋಳಾರ್ ಮಾತಾಡಿ “ಅಂದು ಬೆಳಗ್ಗೆ 7ರಿಂದ 8ರವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1ರಿಂದ 3ರವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ದೀಪಾರಾಧನೆ ಮಹಾಪೂಜೆ ಬಳಿಕ 10 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ“ ಎಂದು ಹೇಳಿದರು. ವೇದಿಕೆಯಲ್ಲಿ ವಿನಾಯಕ ಶೇಟ್, ಸಾಯಿದತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಸಾವಯವ ಸಸ್ಯಗಳಿಂದ ಅಲಂಕಾರ!ಜನರಲ್ಲಿ ಸಾವಯವ ಮತ್ತು ಆಯುರ್ವೇದ ಸಸ್ಯಗಳ ಬಳಕೆಯ ಬಗ್ಗೆ ಆಸಕ್ತಿ ಮೂಡಿಸಲು ಈ ಬಾರಿ ದೇವಳವನ್ನು ವಿಶೇಷವಾಗಿ ಸಾವಯವ ಸಸ್ಯಗಳಿಂದ ಅಲಂಕಾರ ಮಾಡಲಾಗಿದೆ. ಅದೇ ರೀತಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಸಸ್ಯವನ್ನು ನೀಡಲು ದೇವಳದ ಆಡಳಿತ ಮಂಡಳಿ ನಿರ್ಧರಿಸಿದೆ. ಅಲಂಕಾರದಲ್ಲಿ ಪಾಲಕ್, ಹರಿವೆ, ರೆಡ್ ಬಾಸಿಲ್, ಗ್ರೀನ್ ಬಾಸಿಲ್ ಗಿಡಗಳನ್ನು ಬಳಸಲಾಗಿದೆ. ಸರಿಸುಮಾರು 10000ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಲಾಗಿದೆ. 8000 ತುಳಸಿ ಗಿಡಗಳನ್ನು ಭಕ್ತರಿಗೆ ನೀಡಲು ಬೆಳೆಸಲಾಗಿದೆ. ಚಿತ್ರಗಳು:ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ ತಾಲೂಕಿನ ಪಂಚ ಗ್ಯಾರಂಟಿಗಳ ಅನುಷ್ಠಾನಗಳ ಸಭೆ

ಬಂಟ್ವಾಳ ತಾಲೂಕಿನ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯು ದಿನಾಂಕ 06-01-2025ರಂದು ತಾಲೂಕು ಪಂಚಾಯತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರದ 10 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜನೆಗೊಳಿಸಲು ಸಹಕರಿಸಿದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಗಳನ್ನು ತಾಲೂಕು ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ವಹಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಚಿನ್ ಕುಮಾರ್, ಸಮಿತಿ ಸದಸ್ಯರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧಿಕಾರಿಗಳು ಭಾಗವಹಿಸಿದ್ದರು.

Scroll to Top