Author name: editor

ಪ್ರಾದೇಶಿಕ ವಾರ್ತೆಗಳು

ಅಭಾಸಾಪದಿಂದ ವ್ಯಾಸ ಜಯಂತಿ ಆಚರಣೆ. ವ್ಯಾಸ ಭಾರತದಲ್ಲಿ ಬದುಕಿನ ಪಾಠ ಅಡಕ-ಶಿಕ್ಷಣ ತಜ್ಞ ಪ್ರೊ.ಪವನ್ ಕಿಣ್ಕೆರೆ

ಮಂಗಳೂರು: ವೇದವ್ಯಾಸ ಮಹರ್ಷಿಗಳು ರಚಿಸಿದ ಮಹಾಭಾರತದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನದ ಜತೆ ವೈಜ್ಞಾನಿಕ ಒಳನೋಟವಿದೆ. ಗುರುವಿನ ಮಹತ್ವ ಸಹಿತ ಬದುಕಿನ ಪ್ರತಿಯೊಂದು ವಿಚಾರ ವ್ಯಾಸ ಭಾರತದಲ್ಲಿ ಅಡಕವಾಗಿದ್ದು ಜ್ಞಾನ ಮತುಕಾಲಾತೀತ ಬೋಧನೆಗಳಿಂದ ಸಮೃದ್ಧವಾಗಿದೆ. ಗುರು ಪೂರ್ಣಿಮೆಯಾಗಿ ಆಚರಿಸುತ್ತಿರುವ ವ್ಯಾಸ ಜಯಂತಿಯ ಸಾರವು ಮನುಕುಲಕ್ಕೆ ಅತ್ಯಂತ ಪ್ರಸ್ತುತ ಎಂದು ಶಿಕ್ಷಣ ತಜ್ಞ ಪ್ರೊ.ಪವನ್ ಕಿಣ್ಕೆರೆ ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಸಮಿತಿ ಇದರ ವತಿಯಿಂದ ಶಾರದಾ ವಿದ್ಯಾಲಯ ಮತ್ತುಯಕ್ಷಾರಾಧನಾ ಕಲಾ ಕೇಂದ್ರದ ಸಹಯೋಗದಲ್ಲಿ ನಗರದ ಕೊಡಿಯಾಲ್ಬೈಲ್ನ ಶಾರದಾ ವಿದ್ಯಾಲಯದಲ್ಲಿ ನಡೆದವ್ಯಾಸ ಜಯಂತಿ ಆಚರಣೆಯಲ್ಲಿ ಅವರು ‘ಗುರುವಿನ ಮಹತ್ವ ಮತ್ತು ವ್ಯಾಸ ಭಾರತ ಓದಿನ ಪ್ರಸ್ತುತತೆ ‘ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ ‘ ವ್ಯಾಸರುತ್ರಿಮೂರ್ತಿಗಳ ಶಕ್ತಿ ಸ್ವರೂಪವಾಗಿದ್ದಾರೆ ’ಎಂದರು. ಅಭಾಸಾಪ ದ.ಕ.ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಪಿ.ಯು. ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ನಾಯಕ್ , ಯಕ್ಷಾರಾಧನಾ ಕಲಾ ಕೇಂದ್ರದ ನಿರ್ದೇಶಕ ರತ್ನಾಕರ್ ರಾವ್ ಮುಖ್ಯ ಅತಿಥಿಗಳಾಗಿದ್ದರು.ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್, ಡಾ.ಮಾಧವ.ಎಂ.ಕೆ., ಡಾ,ಮೀನಾಕ್ಷಿ ರಾಮಚಂದ್ರ, ದ.ಕ.ಹಾಲು ಉತ್ಪಾಸಕರ ಒಕ್ಕೂಟದ ನಿರ್ದೇಶಕಿ ಸುಭದ್ರ ರಾವ್ ಉಪಸ್ಥಿತರಿದ್ದರು.ಅಭಾಸಾಪ ಜಿಲ್ಲಾ ಜತೆ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಸ್ವಾಗತಿಸಿ, ಸಾಹಿತ್ಯ ಕೂಟ ಪ್ರಮುಖ್ ಗೀತಾ ಲಕ್ಷ್ಮೀಶ್ ವಂದಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಹಿರಿಯ ಪತ್ರಕರ್ತ ಗಂಗಾಧರ ಪಿಲಿಯೂರು ಅವರಿಗೆ ಪತ್ರಿಕಾದಿನ ಪ್ರಶಸ್ತಿ

ಕಾಸರಗೋಡು-ಕಾಸರಗೋಡು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ‘ಪತ್ರಿಕಾದಿನ ಪ್ರಶಸ್ತಿ’ಯನ್ನು ಇಂದು ನೀಲೇಶ್ವರದ ತಾಜ್ ಕ್ರೂಸ್ ಬೋಟ್ ಹೌಸ್ ನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಗಂಗಾಧರ ಪಿಲಿಯೂರು ಅವರಿಗೆ ಪ್ರದಾನಿಸಲಾಯಿತು.ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾಣಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವೆನ್ಲಾಕ್, ಲೇಡಿಗೋಶನ್ ಹಾಗು ಕೆಎಂಸಿ ಹಳೆ ವಿದ್ಯಾರ್ಥಿ ಸಂಘ ಹಾಗು ವೆನ್ಲಾಕ್ ಲೇಡಿ ಗೋಶನ್ ಆಸ್ಪತ್ರೆಗಳ 175 ನೇ ವರ್ಷದ ಆಚರಣಾ ಸಮಿತಿಯ ವತಿಯಿಂದ ಐತಿಹಾಸಿಕ ವೈದ್ಯರ ದಿನಾಚರಣೆ

ಈ ಮೂರೂ ಸಂಸ್ಥೆಗಳಲ್ಲಿ 25 ರಿಂದ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ವೈದ್ಯರು ಶಿಕ್ಷಕರು, ಡೀನ್, ಜಿಲ್ಲಾ ಸರ್ಜನ್, ನಿವಾಸಿ ವೈದ್ಯಾಧಿಕಾರಿಗಳನ್ನ ಸೇರಿಸಿ ಸುಮಾರು 43 ವೈದ್ಯರನ್ನ ಹಿರಿತನದ ಆಧಾರದಲ್ಲಿ ಸನ್ಮಿಸಲಾಗುತ್ತಿದೆ ಮುಂದೆ ಈ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ಇನ್ನಷ್ಟು ವೈದ್ಯರು ನರ್ಸಿಂಗ್ ಆಫೀಸರ್ಸ್ ಸಹಾಯಕ ಸಿಬ್ಬಂದಿಗಳು ಡಿ ಗ್ರೂಪ್ ನೌಕರರನ್ನ ಗುರುತಿಸಿ ಗೌರವಿಸುವ ಯೋಜನೆ ಇದ್ದು ಇದು ಪ್ರಥಮ ಹಂತದ ಸನ್ಮಾನ ಕಾರ್ಯಕ್ರಮ ಅಂತ ಸರ್ವರನ್ನ ಸ್ವಾಗತಿಸಿದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ ಶಿವಪ್ರಕಾಶ್ ಪ್ರಸ್ತಾವನೆಯಲ್ಲಿ ತಿಳಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಹಿರಿಯ ವೈದ್ಯಕೀಯ ಶಿಕ್ಷಕರಾದ ಡಾ ಶಾಂತಾರಾಮ್ ಶೆಟ್ಟಿ ಮಾತಾಡಿ ವೆನ್ಲಾಕ್ ಲೇಡಿಗೋಶನ್ ಹಾಗು ಕೆಎಂಸಿ ಸಂಸ್ಥೆಗಳು ಆರೋಗ್ಯ ಸೇವೆ ನೀಡಲು ಹಾಲು ಜೇನು ಸಕ್ಕರೆ ಹಾಗೆ ಬೇರ್ಪಡಿಸಲು ಆಗದಷ್ಟು ಗಟ್ಟಿ ಸೇವಾ ಬಾಂದವ್ಯ ಹಾಗು ಬದ್ಧತೆಯನ್ನ ಹೊಂದಿದ ವಿಶ್ವ ಮಟ್ಟದ ಸಂಸ್ಥೆಗಳಾಗಿದ್ದು ಈ 175 ರ ಸಂಭ್ರಮದಲ್ಲಿ ವೈದ್ಯರ ದಿನಾಚರಣೆಯ ಸನ್ಮಾನ ಸ್ವೀಕರಿಸಲು ಬಂದಿರುವ ಹಿರಿಯ ವೈದ್ಯರುಗಳು ಸಂಸ್ಥೆಯ ಹಾಗು ಸಂಘಟನೆಯ ಘನತೆಯನ್ನ ಹೆಚ್ಚಿಸಿದ್ದಾರೆ ಎಂದರು. ಕೆಎಂಸಿ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಡೀನ್ ಡಾ ಸುರೇಶ್ ಶೆಟ್ಟಿ ಕೆಎಂಸಿ ವೆನ್ಲಾಕ್ ಲೇಡಿಗೋಶನ್ ನಲ್ಲಿ ಸೇವೆ ಸಲ್ಲಿಸಲು ಸಿಗುವ ಅವಕಾಶವೇ ಒಂದು ಭಾಗ್ಯ, ಹಳೆ ವಿದ್ಯಾರ್ಥಿಗಳು 175 ನೇ ವರ್ಷದ ಆಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಲಿದ್ದಾರೆ ಎಂದರು. ಹಳೆ ವಿದ್ಯಾರ್ಥಿ ಸಂಘದ ಡಾ ಅಣ್ಣಯ್ಯಕುಲಾಲ್ ಹಾಗು ಡಾ ಕೆ ಆರ್ ಕಾಮತ್ ರವರು ಜಂಟಿಯಾಗಿ ವೆನ್ಲಾಕ್ ಲೇಡಿಗೋಶನ್ ಕೆಎಂಸಿ ಯ ಆಯ್ದ ಸುಮಾರು 43 ಮಂದಿ ಹಿರಿಯ ವೈದ್ಯರ ಹಿರಿತನ ಕಾರ್ಯತತ್ಪರತೆ ಸಾಮಾಜಿಕ ಕಾಳಜಿ ಬದ್ಧತೆಗಳನ್ನ ತಿಳಿಸಿ ಹೇಳಿ ಸನ್ಮಾನಿಸಲು ಸಹಕರಿಸಿದರು. ಸನ್ಮಾನಿತರ ಪರವಾಗಿ ಡಾ ಎಂ ವಿ ಪ್ರಭು ಡಾ ಆರ್ ಎಂ ಶೆನಾಯ್ ಡಾ ಜೋ ವರ್ಗೀಸ್ ಡಾ ಸದಾಶಿವ ಶಾನುಭೋಗ್ ಡಾ ವತ್ಸಲಾ ಮಲ್ಯ ಮುಂತಾದವರು ಇದೊಂದು ಚಾರಿತ್ರಿಕ ಘಳಿಗೆ ಅಂತ ಮನಬಿಚ್ಚಿ ಸಂತಸ ವ್ಯಕ್ತ ಪಡಿಸಿದರು. ಡಾ ಬಿ ಸಿ ರಾಯ್ ಬಗ್ಗೆ ಡಾ ಕಾಮತ್ ವಿವರಿಸಿದರು. ಲೇಡಿಗೋಶನ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ ದುರ್ಗಾಪ್ರಸಾದ್ ವಂದಿಸಿದರು ಸ್ಮರಣ ಸಂಚಿಕೆ ಸಮಿತಿಯ ಡಾ ಸೀತಾರಾಮ್ ರಾವ್ ಕಾರ್ಯಕ್ರಮ ನಿರ್ವಹಿಸಿದರು, ಮೂರು ಸಂಸ್ಥೆಯ ಪ್ರಮುಖರು, ಹಳೆ ವಿದ್ಯಾರ್ಥಿ ಸಂಘದ ಹಾಗು 175 ನೇ ವರ್ಷಾಚರಣೆಯ ಸಮಿತಿಯ ಪದಾಧಿಕಾರಿಗಳು ಜಂಟಿಯಾಗಿ ಕಾರ್ಯಕ್ರಮವನ್ನ ಸಂಯೋಜಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಜಲ ಸಂರಕ್ಷಣೆ ಅರಿವು ಮೂಡಿಸುವುದು ಅವಶ್ಯ-ಸಂಸದ ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು: ಮಳೆ ಕೊಯ್ಲಿನ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಜಿಲ್ಲೆಯ ಪ್ರತಿ ಮನೆ ಮನೆಗಳಲ್ಲೂ ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಅಭಿಯಾನ ನಡೆಸುವ ಅಗತ್ಯವಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಸೇವಾ ಯೋಜನೆಯ ಅಂಗವಾಗಿ ಅರಿವು ಕೇಂದ್ರ ,ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟ್ ಚಿಕ್ಕಮಗಳೂರು ಇದರ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಮಳೆನೀರು ಕೊಯ್ಲು ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜನತೆ ಬೆಂಬಲಿಸುತ್ತಾರೆ. ಸಂಸದನಾಗಿ ಜಿಲ್ಲೆಯ ಅಭಿವೃದ್ದಿಯತ್ತ ಮಾತ್ರ ಗಮನ ಕೇಂದ್ರೀಕರಿಸಿದ್ದೇನೆ.ಕೇಂದ್ರ ಸರ್ಕಾರದ ಸೌರ ಶಕ್ತಿ ಬಳಕೆಯ ಸೂರ್ಯ ಘರ್ ಯೋಜನೆಯ ಪ್ರಯೋಜನವನ್ನು ಜನತೆ ಪಡೆಯಬೇಕು. ಈ ‌ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ‌ ಅಡ್ಕಸ್ಥಳ, ದ.ಕ.ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಖಜಾಂಜಿ ಪುಷ್ಪರಾಜ್ ಬಿ.ಎನ್.,ಅರಿವು ಕೇಂದ್ರದ ನಿರ್ದೇಶಕ ಡಾ.ಯು. ಪಿ.ಶಿವಾನಂದ,ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟ್ ನನಿರ್ದೇಶಕ ಮೈಕೆಲ್ ಬ್ಯಾಪ್ಟಿಸ್ಟ್ , ಮನೋಜ್ ಸ್ಯಾಮ್ಯುಯೆಲ್ ಬ್ಯಾಪ್ಟಿಸ್ಟ್ , ಲಿನ್‌ಫೋರ್ಡ್ ಪಿಂಟೊ, ರೋಟರಿ ಅಸಿಸ್ಟೆಂಟ್ ಗವರ್ನರ್ ಚೆನ್ನಗಿರಿ ಗೌಡ, ಸಹಾಯಕ ಗವರ್ನರ್ ರವಿಶಂಕರ್ ರಾವ್, ಜಿಲ್ಲಾ ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ,ರೋಟರಿ ಕ್ಲಬ್ ಝೋನಲ್ ಲೆಫ್ಟಿನೆಂಟ್ ರವಿ ಜಲನ್, ಗೀತಾ ರೈ ಮುಂತಾದವರು ಉಪಸ್ಥಿತರಿದ್ದರು.ಇದೇ ಸಂದರ್ಭ ಮಂಗಳೂರು ಪ್ರೆಸ್ ಕ್ಲಬ್ ನಿವೃತ್ತ ಸಿಬ್ಬಂದಿ ಚಂಚಲಾಕ್ಷಿ ಅವರನ್ನು ರೋಟರಿ ಮಂಗಳೂರು ಸೆಂಟ್ರಲ್ ವತಿಯಿಂದ ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಸಿಎಂ ಪಟ್ಟ ಬಿಡಲೊಪ್ಪದ ಸಿದ್ದು. ಡಿಕೆಶಿ ಬಿಜೆಪಿಗೆ ಬರುತ್ತಾರಾ

ನವದೆಹಲಿ- ಮುಂದಿನ ಅವಧಿಗೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿರುವ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಹೆಚ್ಚಿನ ಕಾಂಗ್ರೆಸ್‌‍ ಶಾಸಕರ ಬೆಂಬಲ ಇಲ್ಲ ಎಂದಿದ್ದಾರೆ.ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು 5 ವರ್ಷಗಳ ಅವಧಿ ಮುಖ್ಯ ಮಂತ್ರಿಯಾಗಿ ಪೂರ್ಣಗೊಳಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ.ಇದೇ ತಿಂಗಳ ಆರಂಭದಲ್ಲಿ ನಾನು ಈ ಹೇಳಿಕೆ ನೀಡಿದಾಗ ಡಿ.ಕೆ.ಶಿವಕುಮಾರ್‌ ಕೂಡ ಜೊತೆಯಲ್ಲೇ ಇದ್ದರು. ಮುಂದಿನ 2028 ರ ವಿಧಾನಸಭೆ ಚುನಾವಣೆಗೂ ನನ್ನದೇ ನಾಯಕತ್ವ ಇರುತ್ತದೆ ಎಂದರು. ಡಿ.ಕೆ.ಶಿವಕುಮಾರ್‌ ಪಕ್ಷದ ಅಧ್ಯಕ್ಷರಾಗಿ ಶ್ರಮ ವಹಿಸಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರೇ ಆ ಸ್ಥಾನದಲ್ಲಿದ್ದರೂ ಅದೇ ರೀತಿ ಕೆಲಸ ಮಾಡಬೇಕು. ಡಿ.ಕೆ.ಶಿವಕುಮಾರ್‌ ಕೂಡ ತಮ್ಮ ಕರ್ತವ್ಯ ಮಾಡಿದ್ದಾರೆ ಎಂದಿದ್ದಾರೆ.ಕಾಂಗ್ರೆಸ್‌‍ ಶಾಸಕರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸಭೆ ನಡೆಸಿದ ವೇಳೆ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಶ್ನೆ ಕೇಳಲಾಗಿಲ್ಲ, ಯಾವ ಶಾಸಕರೂ ಸಭೆಯಲ್ಲಿ ಈ ಕುರಿತು ಅಭಿಪ್ರಾಯ ಹೇಳಿಲ್ಲ. ಕೆಲ ಶಾಸಕರು ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಬಲಿಸಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ ,ಅದು ಹೆಚ್ಚಿನ ಸಂಖ್ಯೆಯಲ್ಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಎರಡೂವರೆ ವರ್ಷಗಳ ಅವಧಿಗೆ ಸೀಮಿತವಾಗಿ ಅಧಿಕಾರ ಹಂಚಿಕೆಯಾಗಿದೆ ಎಂಬುದು ಸರಿಯಲ್ಲ. ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು, ಡಿ.ಕೆ.ಶಿವಕುಮಾರ್‌ ಮತ್ತು ಎಲ್ಲರೂ ಅದನ್ನು ಅನುಸರಿಸುತ್ತೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಈ ವಿಚಾರವಾಗಿ ತಮ ಬಳಿ ಏನನ್ನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸುರ್ಜೇವಾಲ ಸಭೆ ನಡೆಸಿದ ವೇಳೆ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳು ಯಾವ ರೀತಿ ಅನುಷ್ಠಾನಗೊಂಡಿವೆ, ಏನೆಲ್ಲಾ ಅಭಿವೃದ್ಧಿ ಕೆಲಸಗಳಾಗಿವೆ, ಸರ್ಕಾರದಿಂದ ಮತ್ಯಾವ ರೀತಿಯ ಕೆಲಸಗಳಾಗಬೇಕು ಎಂಬ ಪ್ರಶ್ನೆಗಳನ್ನಷ್ಟೇ ಕೇಳಿದ್ದಾರೆ. ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯೇ ಆಗಿಲ್ಲ. ಹೀಗಾಗಿ ತಾವು ಮುಂದಿನ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ. ಸದ್ಯಕ್ಕೆ ಕುರ್ಚಿ ಖಾಲಿ ಇಲ್ಲ ಎಂದರು.ಸಚಿವ ಸಂಪುಟ ಪುನರ್‌ ರಚನೆಯ ಬಗ್ಗೆಯೂ ಚರ್ಚೆಯಾಗಿಲ್ಲ. ಆ ರೀತಿಯ ಯಾವ ಬೆಳವಣಿಗೆಯೂ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿಲ್ಲ. ಇದಕ್ಕೆ ಹಣಕಾಸಿನ ಕೊರತೆಯೂ ಇಲ್ಲ. ಒಂದೆರಡು ಪ್ರಕರಣಗಳಲ್ಲಿ ವೇತನ ಪಾವತಿಯಾಗಿಲ್ಲ ಎಂದಾಕ್ಷಣ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದರು.ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ ಎಂಬುದು ಸರಿಯಲ್ಲ. ಬಜೆಟ್‌ನಲ್ಲಿ ಘೋಷಿಸಿದ ಎಲ್ಲಾ ಕಾಮಗಾರಿಗಳು, ಯೋಜನೆಗಳು ಜಾರಿಯಲ್ಲಿವೆ. ಶಾಸಕರು ವಿಶೇಷ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆ ವಿಚಾರವಾಗಿ ಚರ್ಚೆ ನಡೆಯುತ್ತಿವೆ ಎಂದರು.ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಶಾಸಕರು, ಸಚಿವರನ್ನು ಗುರಿಯಾಗಿಸಿಕೊಂಡೇ ಬಳಕೆ ಮಾಡಿಕೊಳ್ಳುತ್ತಿದೆೆ. ಗೃಹಸಚಿವ ಪರಮೇಶ್ವರ್‌ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಯಾಯಿತು. ಈಗ ಶಾಸಕರುಗಳ ಮನೆ ಮೇಲೆ ದಾಳಿಯಾಗಿದೆ. ನನ್ನನ್ನೂ ಸೇರಿದಂತೆ ಎಲ್ಲರ ವಿರುದ್ಧವೂ ಇ.ಡಿ. ನಿಗಾ ಇರಿಸಿದೆ ಎಂದು ಹೇಳಿದರು.ಬಿಜೆಪಿಯ ವಿರುದ್ಧ ಶೇ.40 ರಷ್ಟು ಕಮಿಷನ್‌ ಆರೋಪ ಮಾಡಿದ್ದು ನಾವಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದರು. ನಾವು ಅದನ್ನು ಪುನರುಚ್ಚರಿಸಿದ್ದೇವೆ.ನಮ ಸರ್ಕಾರದ ವಿರುದ್ಧ ಶೇ.60 ರಷ್ಟು ಕಮಿಷನ್‌ ಆರೋಪವನ್ನು ಯಾರೂ ಮಾಡಿಲ್ಲ. ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್‌‍ ಸರ್ಕಾರದ ಲೋಪವಾಗಲಿ, ವೈಫಲ್ಯವಾಗಲೀ ಇಲ್ಲ. ಆರ್‌ಸಿಬಿ ಮತ್ತು ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಕಾರ್ಯಕ್ರಮ ಆಯೋಜಿಸಿದ್ದವು. ಅವರ ಮನವಿಯ ಮೇರೆಗೆ ವಿಧಾನಸೌಧದ ಬಳಿ ಅಭಿನಂದನಾ ಸಮಾರಂಭ ನಡೆಸಲಾಯಿತು. ಸಂಜೆ 4.15 ಕ್ಕೆ ಕಾಲ್ತುಳಿತವಾಗಿದೆ. ಈ ವಿಚಾರವನ್ನು ಪೊಲೀಸ್‌‍ ಅಧಿಕಾರಿಗಳು ನನಗೆ ಮಾಹಿತಿ ನೀಡಲಿಲ್ಲ ಮತ್ತು ಸರಿಯಾದ ಭದ್ರತೆ ಒದಗಿಸಲಿಲ್ಲ. ಈ ಕಾರಣಕ್ಕೆ ಅಮಾನತುಗೊಳಿಸಲಾಗಿದೆ ಎಂದರು.ರಾಜ್ಯದಲ್ಲಿ ಜಾತಿ ಜನಗಣತಿಯ 2ನೇ ಸಮೀಕ್ಷೆಯನ್ನು ಮೂರ್ನಾಲ್ಕು ತಿಂಗಳಲ್ಲೇ ಪೂರ್ಣಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯನವರ ಖಡಕ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಇನ್ನೂ ಕಾದು ಪ್ರಯೋಜನವಿಲ್ಲ. ಸಿಎಂ ಆಗಬೇಕಾದರೆ ಡಿಕೆಶಿ ಬಿಜೆಪಿ ಜೊತೆ ಕೈ ಜೋಡಿಸುತ್ತಾರೋ ಎಂಬುವುದನ್ನು ಕಾದು ನೋಡಬೇಕಷ್ಟೇ

ಪ್ರಾದೇಶಿಕ ವಾರ್ತೆಗಳು

ಗುರು ಪೂರ್ಣಿಮೆ: ಅಮೃತ ವಿದ್ಯಾಲಯಂ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳ ಪಾದ ಪೂಜೆ

ದಿನಾಂಕ: 10ನೇ ಜುಲೈ 2025“ಗುರು ಬ್ರಹ್ಮ, ಗುರು ವಿಷ್ಣು,ಗುರು ದೇವೋ ಮಹೇಶ್ವರ:ಗುರು ಸಾಕ್ಷಾತ್ ಪರಬ್ರಹ್ಮ,ತಸ್ಮೈ ಶ್ರೀ ಗುರವೇ ನಮ:ಗುರು ಪೂರ್ಣಿಮೆಯ ಪ್ರಯುಕ್ತ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳ ಪಾದ ಪೂಜೆಯನ್ನು ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಸಂಸ್ಕೃತಿ ಪೂಜೆಯನ್ನು ನಡೆಸಿಕೊಟ್ಟರು. ಶಿಕ್ಷಕ ಅಭಿಷೇಕ್ ಅವರ ನೇತೃತ್ವದಲ್ಲಿ ಪ್ರಾರ್ಥನೆ ಮತ್ತು ಭಜನೆಗಳೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು,ಶ್ರೀಮತಿ ಮೃದಲಾ ಅವರ ಮಾರ್ಗದರ್ಶನದಲ್ಲಿ ಶ್ರೀಮತಿ ರಶ್ಮಿ ಅವರು ಪಾದುಕಾ ಪೂಜೆಯನ್ನು ಶ್ರದ್ಧಾ, ಭಕ್ತಿ ಯಿಂದ ಮಾಡಿದರು. ಶ್ರೀಮತಿ ಯೋಗಿತಾ ಅವರ ಮಾರ್ಗದರ್ಶನದಲ್ಲಿ, 10 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು . ಶ್ರೀಮತಿ ಯೋಗಿತಾ ಅವರು ಜೀವನವನ್ನು ರೂಪಿಸುವಲ್ಲಿ ಗುರುವಿನ ಪ್ರಮುಖ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು,

ಪ್ರಾದೇಶಿಕ ವಾರ್ತೆಗಳು

ವಿದ್ಯಾರ್ಥಿಗಳಲ್ಲಿ ಪರಿಸರ ಕುರಿತು ಕಾಳಜಿ ಮುಖ್ಯ

ಮಂಗಳೂರು, ವಿದ್ಯಾರ್ಥಿಗಳಲ್ಲಿ ಪರಿಸರ ಕುರಿತು ಕಾಳಜಿ ಮೂಡಿಸುವ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಹೇಳಿದರು.ಬಂಟ್ವಾಳ ತಾಲೂಕಿನ ತುಂಬೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತ ಅಗ್ನೇಸ್ ಕಾಲೇಜು ವತಿಯಿಂದ ನಡೆದ ಸಂತ ಅಗ್ನೇಸ್ ಸಮುದಾಯದತ್ತ ಘಟಕ ಕಾರ್ಯಕ್ರಮದಡಿ ಯಲ್ಲಿ ನಡೆದ ವನ ಮಹೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ನಗರೀಕರಣದಿಂದಾಗಿ ಈಗ ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿದೆ. ಹೀಗಾಗಿ ನಗರ ಪ್ರದೇಶಲ್ಲಿ ಹೆಚ್ಚು ಗಿಡಗಳನ್ನು ನೆಡುವ ಅಗತ್ಯವಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಜನರಲ್ಲಿ ಜಾಗ್ರತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸ0ಯೋಜಕಿ ಡಾ. ಶೈಲಜಾ ರೈ, ಶ್ರೀಮತಿ ವಿನೀತಾ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ್ಯೋಪದ್ಯಾಯಿನಿ ಶ್ರೀಮತಿ ಶಕುಂತಲಾ ಎಸ್ ಉಳ್ಳಾಲ್, ಸಂತ ಅಗ್ನೇಸ್ ಕಾಲೇಜು ವಿದ್ಯಾರ್ಥಿಗಳು, ತುಂಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

108ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಕೆನರಾ ಪದವಿ ಪೂರ್ವ ಕಾಲೇಜ್ ಜಂಟಿ ಆಶ್ರಯದಲ್ಲಿ 108ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮವು ಕೆನರಾ ಪದವಿ ಕಾಲೇಜು ಸಭಾಂಗಣದಲ್ಲಿ ಜುಲೈ 4 ರಂದು ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಪದವಿ ಪೂರ್ವ ಕಾಲೇಜು ಮಂಗಳೂರು. ಡೀನ್ ಗೋಪಾಲಕೃಷ್ಣ ಶೆಟ್ಟಿ .ಕೆ .ಎಂ. ವಹಿಸಿದರು. ಈ ಸಂದರ್ಭದಲ್ಲಿ ಸಾಹಿತ್ಯ ಸಂಘದ ಉದ್ಘಾಟನೆಯು ನಡೆಯಿತು. ಸಾಹಿತ್ಯ ಅಭಿರುಚಿ ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ಅತಿಥಿಯಾಗಿ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕರಾದ ಬಿ. ರವೀಂದ್ರ ಶೆಟ್ಟಿ ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕಿ, ಲೇಖಕಿ ಸುಧಾ ನಾಗೇಶ್ ಉತ್ತಮ ಮಾರ್ಗ ದರ್ಶನ ಮಾಹಿತಿ ನೀಡಿದರು. ಕೆನರಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲತಾ ಮಹೇಶ್ವರಿ ಕೆ.ಬಿ ಸಾಹಿತ್ಯ ಸಂಘದ ಮುಖ್ಯಸ್ಥರಾದ ಮಧುಕೇಶ್ವರ ಶಾಸ್ತ್ರಿ ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಎಚ್. ವಿ ಗೌರವ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕೆ ಶುಭ ಹಾರೈಸಿದರು.ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು. ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು.

ಪ್ರಾದೇಶಿಕ ವಾರ್ತೆಗಳು

ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ- ದಿನೇಶ್ ಗುಂಡೂರಾವ್

ಮಂಗಳೂರು,ಜು.9: ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದುಎಂದು ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ, ಯೂತ್ ರೆಡ್ ಕ್ರಾಸ್ ಸೊಸೈಟಿ, ವೆನ್ ಲಾಕ್ ಆಸ್ಪತ್ರೆ, ನಗರ ಕೇಂದ್ರ ಗ್ರಂಥಾಲಯ, ಕೆ ಎಂ ಸಿ ಆಸ್ಪತ್ರೆ ಸಹಭಾಗಿತ್ವದಲ್ಲಿ ವೆನ್ ಲಾಕ್ ಆಸ್ಪತ್ರೆ ಆವರಣದಲ್ಲಿ ಸ್ಥಳಾಂತರಗೊಂಡ ಸಮುದಾಯ ವಾಚನಾಲಯ ಮತ್ತು ಗ್ರಂಥಾಲಯ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಸಮುದಾಯ ವಾಚನಾಲಯ ರಾಜ್ಯಕ್ಕೆ ಮಾದರಿ.ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅವರ ಸಹಾಯಕರಿಗೆ ಸಂದರ್ಶಕರಿಗೆ ಮತ್ತು ಸಾರ್ವಜನಿಕರಲ್ಲಿ ಸಮಯದ ಸದುಪ ಯೋಗ ಮಾಡಲು ಮತ್ತು ಮಾಹಿತಿ ಪಡೆಯಲು ಒಂದು ಒಳ್ಳೆಯ ಅವಕಾಶ ಒದಗಿ ಸಿದಂತಾಗಿದೆ ಎಂದರು.ಸಮಾರಂಭದಲ್ಲಿ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಶಿವಪ್ರಕಾಶ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ,ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ರಾಘವೇಂದ್ರ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಕೆಎಂಸಿ ಅಸೋಸಿಯೇಟ್ ಡೀನ್ ಡಾ.ಸುರೇಶ್ ಶೆಟ್ಟಿ, ಡಾ ಶೀತಲ್ ,ಐಆರ್ ಸಿಎಸ್ ಡಾ.ಕೆ.ಆರ್. ಕಾಮತ್,ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ,ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಇಂಡಿಯನ್ ರೆಡ್ ಕ್ರಾಸ್ ಘಟಕದ ರಾಜ್ಯದ ನಿಕಟಪೂರ್ವ ಖಜಾಂಚಿ ಯತೀಶ್ ಬೈಕಂಪಾಡಿ,ಹಿರಿಯ ಸಲಹೆಗಾರ ರವೀಂದ್ರ ನಾಥ ಉಚ್ಚಿಲ್ ,ರೋಟರಿ ಕ್ಲಬ್ ಮಂಗಳೂ ರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ,ಜಿಲ್ಲಾ ಮುಖ್ಯ ಗ್ರಂಥ ಪಾಲಕಿ ಗಾಯತ್ರಿ ,ವೆನ್ಲಾಕ್ ರಕ್ಷಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ನಿವೃತ್ತ ಪ್ರಿನ್ಸಿಪಾಲ್ ವಿಶ್ವನಾಥ್ ಕೆ. ನಿಧನ

ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದ ಜನಾನುರಾಗಿ ಶಿಕ್ಷಕ, ಸಜ್ಜನ – ಸ್ನೇಹಶೀಲ ವ್ಯಕ್ತಿತ್ವದ ವಿಶ್ವನಾಥ ಜೋಗಿ ಕದ್ರಿ (72) ಅವರು ಜುಲೈ 8ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಮೂರು ದಶಕಗಳಿಂದ ಮಂಗಳೂರು ತಾಲೂಕಿನ ಬಲ್ಮಠ,ಕಾವೂರು,ಮೊಂಟೆಪದವು ಗುರುಪುರ ಮೊದಲಾದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿದ ಅವರು 2014ರಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾದರು. ತಮ್ಮ ಸೇವಾವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ವಿದ್ಯಾರ್ಥಿಗಳ ಹಾಗೂ ಹೆತ್ತವರ ನೆಚ್ಚಿನ ಅಧ್ಯಾಪಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ನಿವೃತ್ತರಾದ ಬಳಿಕ ನಗರದ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.ಕಳೆದ ಆರು ತಿಂಗಳಿಂದ ಅಸ್ವಸ್ಥರಾಗಿದ್ದ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರೂ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದರು. ಶಿಕ್ಷಕಿಯಾಗಿದ್ದ ಪತ್ನಿ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಏಕೈಕ ಪುತ್ರಿ – ಅಳಿಯ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.ಸಂತಾಪ:ಪ್ರೊ.ವಿಶ್ವನಾಥ್ ಕೆ. ಅವರ ನಿಧನಕ್ಕೆ ಗುರುಪುರದಲ್ಲಿ ಅವರ ಸಹೋದ್ಯೋಗಿಯಾಗಿದ್ದ ಲೇಖಕ – ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ, ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ, ಕಾಟಿಪಳ್ಳ ಪ.ಪೂ. ಕಾಲೇಜು ಪ್ರಾಚಾರ್ಯೆ ಅನುಸೂಯ ಕೆ.ಪಿ., ನಿವೃತ್ತ ಪ್ರಾಂಶುಪಾಲರುಗಳಾದ ಶ್ಯಾಮ ಮೊಯಿಲಿ, ಪದ್ಮನಾಭ ರೈ ಸಿದ್ಧಕಟ್ಟೆ ಹಾಗೂ ಜೋಗಿ ಸಮಾಜದ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದು ತಮ್ಮ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ದಿವಂಗತರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವು ಜುಲೈ 10ರಂದು ಗುರುವಾರ ಬೆಳಿಗ್ಗೆ ಗಂಟೆ 11ಕ್ಕೆ ಕದ್ರಿ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Scroll to Top