Author name: editor

ಪ್ರಾದೇಶಿಕ ವಾರ್ತೆಗಳು

2025 ಜೂನ್ 1ರಂದು ಯಕ್ಷಧ್ರುವ ಪಟ್ಲ ದಶಮಾನೋತ್ಸವ ಸಂಭ್ರಮ. ಸಮಲೋಚನಾ ಸಭೆಯಲ್ಲೇ ರೂ 1-00 ಕೋಟಿ ದೇಣಿಗೆ ಘೋಷಿಸಿದ ಶಶಿಧರ ಶೆಟ್ಟಿ ಬರೋಡ

ಕರಾವಳಿಯ ಯಕ್ಷಗಾನ ಕಲೆಯನ್ನು ಪ್ರಸ್ತುತ ಕಾಲಘಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಪಸರಿಸುತ್ತಿರುವ ಹಾಗೂ ತನ್ಮೂಲಕ ಯಕ್ಷಗಾನದ ಕಲಾವಿದರಿಗಲ್ಲದೆ ಇತರೇ ವಿವಿಧ ಪ್ರಕಾರದ ಅಶಕ್ತರ ಬಾಳಿಗೆ ಬೆಳಕಾಗಿ ಮೂಡಿಬಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ 10ನೇ ವರ್ಷದ ಪಟ್ಲ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಜರಗಿಸುವ ಕುರಿತಾಗಿ ಫೌಂಡೇಶನಿನ ಮಹಾದಾನಿಗಳ, ಮಹಾಪೋಷಕರ, ಟ್ರಸ್ಟಿಗಳ, ವಿವಿಧ ಪ್ರಾದೇಶಿಕ ಘಟಕಗಳ ಪದಾಧಿಕಾರಿಗಳ ಹಾಗೂ ಪಟ್ಲ ಅಭಿಮಾನಿಗಳ ಸಮಲೋಚನಾ ಸಭೆಯು ನಗರದ ಪ್ರತಿಷ್ಠಿತ ಗೋಲ್ಡ್ ಪಿಂಚ್ ಹೋಟೆಲ್ ಸಭಾಂಗಣದಲ್ಲಿ ಜರಗಿತು.ಸಭೆಯ ವೇದಿಕೆಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರು /ಮಹಾದಾನಿಗಳಾದ ಶ್ರೀ ಕನ್ಯಾನ ಸದಾಶಿವ ಶೆಟ್ಟಿ, ಡಾ. ಕೆ ಪ್ರಕಾಶ್ ಶೆಟ್ಟಿ(MRG Group), ಟ್ರಸ್ಟಿನ ಸಂಚಾಲಕರಾದ ಶ್ರೀ ಐಕಳ ಹರೀಶ್ ಶೆಟ್ಟಿ ,ಮಹಾ ಪೋಷಕರಾದ ಶ್ರೀ ಕೆ. ಎಂ. ಶೆಟ್ಟಿ, ಶ್ರೀ ತೋನ್ಸೆ ಆನಂದ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಬೆಳ್ಳಾಡಿ, ಶ್ರೀ ಸಂತೋಷ್ ಶೆಟ್ಟಿ ಪೂನಾ, ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಶ್ರೀ ಸವಣೂರು ಸೀತಾರಾಮ ರೈಯವರು ಉಪಸ್ಥಿತರಿದ್ದು ದಶಮಾನೋತ್ಸವ ಸಂಭ್ರಮವು ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮವಾಗಲಿ, ಕಾರ್ಯಕ್ರಮದ ಯಶಸ್ಸಿಗೆ ಗರಿಷ್ಠ ಮೊತ್ತದ ದೇಣಿಯನ್ನು ನೀಡಿ ಸಹಕರಿಸಲಾಗುವುದೆಂದು ತಿಳಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನಿನ ಮಹಾದಾನಿಗಳಾದ ಶಶಿಧರ ಶೆಟ್ಟಿ ಬರೋಡ ದಶಮಾನೋತ್ಸವ ಕಾರ್ಯಕ್ರಮದ ಮೂಲಕ ನಮ್ಮ ಪಟ್ಲ ಫೌಂಡೇಶನ್ನು ಸುಭಧ್ರಗೊಳಿಸುವ ಮತ್ತು ಅದರ ಮುಂದಿನ ಯೋಜನಾ ಕಾರ್ಯಕ್ರಮಗಳನ್ನು ನಿರಂತರವಾಗಿ ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸುವ ನಿಟ್ಟಿನಲ್ಲಿ ಸುಮಾರು 10-00 ಕೋಟಿ ಮೊತ್ತದ ದೇಣಿಗೆಯನ್ನು ಮುಂಗಡವಾಗಿ ಸಂಗ್ರಹಿಸುವುದು ಉತ್ತಮವೆಂದು ತಿಳಿಸಿ ಪ್ರಥಮ ಹೆಜ್ಜೆಯಾಗಿ ತಾನು ರೂ 1-00 ಕೋಟಿ ಮೊತ್ತವನ್ನು ದೇಣಿಗೆಯ ರೂಪದಲ್ಲಿ ನೀಡುವುದಾಗಿ ಎಂದು ಘೋಷಣೆ ಮಾಡಿದರು.ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಇವತ್ತಿನ ವರೆಗೂ ಫೌಂಡೇಶನಿಗೆ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸುವುದರೊಂದಿಗೆ, ಈಗಾಗಲೇ ಟ್ರಸ್ಟಿಗೆ 1-00 ಕೋಟಿ ಮೊತ್ತವನ್ನು ನೀಡಿ ಮಹಾದಾನಿಯಾಗಿರುವ ಶಶಿಧರ ಶೆಟ್ಟಿಯವರು ದಶಮಾನೋತ್ಸವ ಕಾರ್ಯಕ್ರಮಕ್ಕೂ 1-00 ಕೋಟಿ ದೇಣಿಗೆಯ ಘೋಷಣೆಗೆ ಶಿರಬಾಗಿ ಕೃತಜ್ಞತೆಯನ್ನು ಸಲ್ಲಿಸಿದರು.ಯಕ್ಷಧ್ರುವ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವು 2025ರ ಜೂನ್ 1ರಂದು ಅಡ್ಯಾರ್ ಗಾರ್ಡನ್ ಇಲ್ಲಿ ಜರಗಲಿದ್ದು , ದಶಮಾನೋತ್ಸವ ಸಂಭ್ರಮಕ್ಕೆ ರಚಿಸಲಾಗುವ ಸಮಿತಿಗೆ ಗೌರವಾಧ್ಯಕ್ಷರಾಗಿ ಕೊಡುಗೈದಾನಿ, ಫೌಂಡೇಶನಿನ ಮಹಾದಾನಿ ಡಾ. ಕೆ ಪ್ರಕಾಶ್ ಶೆಟ್ಟಿ (MRG Group) ಹಾಗೂ ಅಧ್ಯಕ್ಷರಾಗಿ ಶಶಿಧರ ಶೆಟ್ಟಿ ಬರೋಡ ಇವರುಗಳ ಹೆಸರನ್ನು ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಪೂರ್ಣಿಮ ಶಾಸ್ತ್ರಿ, ಶ್ರೀ ಲೋಕನಾಥ ಶೆಟ್ಟಿ, ಶ್ರೀ ವಿನಿತ್ ಕುಮಾರ್ ಶೆಟ್ಟಿ ಫೌಂಡೇಶನಿನ ಟ್ರಸ್ಟಿಗಳಾಗಿ ಸೇರ್ಪಡೆಗೊಂಡರು.ಗೃಹ ನಿರ್ಮಾಣಕ್ಕಾಗಿ ರೂ15 ಲಕ್ಷ ರೂಪಾಯಿ ಮೊತ್ತವನ್ನು 9 ಮಂದಿ ಕಲಾವಿದರಿಗೆ ವಿತರಿಸಲಾಯಿತು.2025ರ ಜನವರಿ 8ರಂದು ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ರವರ ಒಡೆತನದ ಒಡ್ಡೂರು ಫಾರ್ಮಿನಲ್ಲಿ ನಡೆಯಲಿರುವ ಯಕ್ಷ ಶಿಕ್ಷಣ ವಿದ್ಯಾರ್ಥಿ ಸಮ್ಮಿಲನದ ಬಗ್ಗೆ ಬಂಟ್ವಾಳ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿಯವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಫೌಂಡೇಶನಿನ ಕೋಶಾಧಿಕಾರಿಯವರಾದ ಸಿಎ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಅಡ್ಯಾರ್ ಪುರುಷೋತ್ತಮ ಕೆ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು

ಪ್ರಾದೇಶಿಕ ವಾರ್ತೆಗಳು

ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ ಸಂಭ್ರಮದ ಮಂಗಳೂರು ಕಂಬಳಕ್ಕೆ ಚಾಲನೆ.

ಮಂಗಳೂರು: ದಕ್ಷಿಣ ಕನ್ನಡದ ಎಂಪಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೇತೃತ್ವದ 8ನೇ ವರ್ಷದ ‘ಮಂಗಳೂರು ಕಂಬಳಕ್ಕೆ ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕೆರೆಯಲ್ಲಿ ಇಂದು (ಡಿ.28) ಚಾಲನೆ ನೀಡಲಾಯಿತು.ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ತಂದೆ, ಎಂಆರ್‌ಪಿಎಲ್‌ನ ನಿವೃತ್ತ ಆಡಳಿತ ನಿರ್ದೇಶಕರಾದ ಎಂ.ವೆಂಕಟೇಶ್‌ ಅವರು ಕಂಬಳಕ್ಕೆ ಚಾಲನೆ ನೀಡಿದರು. ಮಾಜಿ ಮೇಲ್ಮನೆ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್ ಅಧ್ಯಕ್ಷತೆ ವಹಿಸದ್ದರು. ಮಂಗಳೂರು ವಿ. ವಿ.ಕುಲಪತಿ ಪಿ.ಎಲ್ ಧರ್ಮ, ಚಿತ್ತರಂಜನ್,ಬ್ರಹ್ಮಬೈದರ್ಕಳ ಗರೋಡಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ರಾಮಕೃಷ್ಣ ಮಠದ ಚಿದಂಬರನಾಂದ ಸ್ವಾಮೀಜಿ, ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ, ಧರ್ಮದರ್ಶಿ ಹರಿಕೃಷ್ಣ ಪುನರೂರು ,ಕಟೀಲ್ ಅನಂತ ಪದ್ಮನಾಭ ಆಸ್ರಣ್ಣ,ಜಯರಾಮ್ ಶೆಟ್ಟಿ, ಕಾರ್ಪೊರೇಟರ್ ಕಿರಣ್ ಕೋಡಿಕಲ್, ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ,ಅನಿಲ್ ಕುಮಾರ್, ತರ್ಜನಿ ಕಮ್ಯುನಿಕೇಶನ್ ಸಂಸ್ಥೆಯ ಸಂಜಯ ಪ್ರಭು, ಮಾಜಿ ಮೇಯರ್ ಕವಿತಾ ಸನಿಲ್, ಬ್ರಿಗೇಡಿಯರ್ ಐ.ಎಂ ರೈ, ಮಂಗಳೂರು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ, ಉಪಾಧ್ಯಕ್ಷರಾದ ಈಶ್ವರ್ ಪ್ರಸಾದ್ ಶೆಟ್ಟಿ,ಅಶೋಕ್ ಕೃಷ್ಣಾಪುರ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಕಾರ್ಯದರ್ಶಿ ಸಾಕ್ಷತ್ ಶೆಟ್ಟಿ, ಸಂಚಾಲಕರಾದ ಸಾಂತ್ಯಗುತ್ತು ಸಚಿನ್ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ, ಸುಕುಮಾರ್ ಶೆಟ್ಟಿ, ವಿಜಯ್ ಕುಮಾರ್, ಪ್ರಕಾಶ್‌ ಗರೋಡಿ, ವಸಂತ್ ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಂಜೆ ಸಭಾ ಕಾರ್ಯಕ್ರಮ:ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಆರ್.ಜಿ ಗ್ರೂಪ್ ನ ಸಿ.ಎಂ.ಡಿ , ಮಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಡಾ.ಕೆ. ಪ್ರಕಾಶ್ ಶೆಟ್ಟಿ ವಹಿಸಲಿದ್ದಾರೆ. ಇವರೊಂದಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌, ಮಂಗಳೂರು, ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್‌ ಶೆಟ್ಟಿ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಹಾಲಿ-ಮಾಜಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಉದ್ಯಮಿಗಳು, ಗಣ್ಯರು ಭಾಗವಹಿಸುವರು. 29ರಂದು ಕಂಬಳದ ಫೈನಲ್‌ ಸ್ಪರ್ಧೆ:ಎರಡು ದಿನಗಳ ಮಂಗಳೂರು ಕಂಬಳದಲ್ಲಿ ಫೈನಲ್‌ ಸ್ಪರ್ಧೆ ಡಿ.29ರಂದು ಬೆಳಗ್ಗೆ ನಡೆಯುತ್ತದೆ. 29ರ ಬೆಳಗ್ಗೆ ನಡೆಯುವ ಮಂಗಳೂರು ಕಂಬಳದ ಹೆಚ್ಚು ಕುತೂಹಲ ಹಾಗೂ ಆಸಕ್ತಿ ಮೂಡಿಸುವ ಫೈನಲ್‌ ಸ್ಪರ್ಧೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಭಾಗವಹಿಸುವ ನಿರೀಕ್ಷೆಯಿದೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುಂಜಾಲಕಟ್ಟೆ ಘಟಕ : 7 ನೇ ವಾರ್ಷಿಕೋತ್ಸವ, ಸಮ್ಮಾನ, ಯಕ್ಷಗಾನ

ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ರವಿವಾರ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ, ಖ್ಯಾತ ಭಾಗವತರಾದ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ,ಭರತನಾಟ್ಯ, ಯಕ್ಷಗಾನದಂತಹ ಕಲೆಯಲ್ಲಿ ಮಕ್ಕಳನ್ನು ಜೋಡಿಸಿದರೆ ಅವರು ಸುಸಂಸ್ಕೃತರಾಗುತ್ತಾರೆ. ಯಕ್ಷಗಾನದಿಂದ ದೈಹಿಕ ವ್ಯಾಯಾಮ, ಆತ್ಮಸ್ಥೈರ್ಯ, ಸಂಸ್ಕಾರ ಪಡೆಯುತ್ತಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷ ಶಿಕ್ಷಣ ಯೋಜನೆಯಲ್ಲಿ ರಾಜ್ಯಾದ್ಯಂತ ಈ ವರ್ಷ 9 ಸಾವಿರ ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯ ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಭರತ್ ಶೆಟ್ಟಿ ಅವರ ಸಹಕಾರದಲ್ಲಿ ಡಿ.31ರಂದು ಒಡ್ಡೂರು ಫಾರ್ಮ್‌ನಲ್ಲಿ ಸರಕಾರಿ ಶಾಲಾ ಮಕ್ಕಳ ರಂಗ ಪ್ರವೇಶ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.ಬಿಜೆಪಿ ಜಿಲ್ಲಾ ಪ್ರಮುಖ್ ಸಂದೇಶ್ ಶೆಟ್ಟಿ, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ನಿರ್ದೇಶಕ ಬಿ.ರಾಜಶೇಖರ ಶೆಟ್ಟಿ, ಮಂಗಳೂರು ಹಾಪ್ ಕಾಮ್ಸ್ ವ್ಯವಸ್ಥಾಪಕ ರವಿಚಂದ್ರ ಶೆಟ್ಟಿ, ಮಡಂತ್ಯಾರು ಚಾರ್ಟರ್ಡ್ ಆಕೌಂಟೆಂಟ್ ಹರ್ಷನಾರಾಯಣ ಶೆಟ್ಟಿ,ಪುಂಜಾಲಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಅನಿಲಡೆ, ಘಟಕ ಗೌರವ ಸಲಹೆಗಾರ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ,ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಲಕ್ಷ್ಮೀ ಸಂಜೀವ ಶೆಟ್ಟಿ, ಅಧ್ಯಕ್ಷೆ ಉಮಾ ಡಿ. ಗೌಡ ವೇದಿಕೆಯಲ್ಲಿದ್ದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗವಹಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಜಿನೇಂದ್ರ ಜೈನ್ ಬಳ್ಳಮಂಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಯಕ್ಷಗಾನ ತಾಳಮದ್ದಳೆ ಸಂಘ, ಪಾರೆಂಕಿ ಶ್ರೀ ಮಹಿಷಮರ್ಧಿನಿ ಯಕ್ಷಗಾನ ಸಂಘ ಅವರಿಗೆ ಗೌರವಾರ್ಪಣೆ ನಡೆಯಿತು. ಘಟಕ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.ಘಟಕ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ ಅವರು ಸ್ವಾಗತಿಸಿದರು. ಉಪಾಧ್ಯಕ್ಷ ಅಶೋಕ್ ಗುಂಡ್ಯಲ್ಕೆ ವಂದಿಸಿದರು.ಉದಯ ಕುಮಾರ್ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಪಾವಂಜೆ ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.ಮಧ್ಯಾಹ್ನ ಕಾರ್ಯಕ್ರಮವನ್ನು ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಶಾಂತ್ ಪುಂಜಾಲಕಟ್ಟೆ ಅವರು ಉದ್ಘಾಟಿಸಿದರು. ಘಟಕದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ದೇವಮಾತ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ.

ಬಂಟ್ವಾಳ: ಸುದೀರ್ಘ ವರ್ಷಗಳ ಇತಿಹಾಸವನ್ನು ಹೊಂದಿರುವ ಅಮ್ಟೂರು ಗ್ರಾಮದ ಮೊಗರ್ನಾಡು ದೇವಮಾತಾ ಚರ್ಚಿನ 250ನೇ ವರ್ಷಾಚರಣೆಗೆ ಚರ್ಚ್ ನಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅದ್ದೂರಿಯ ಚಾಲನೆ ನೀಡಲಾಯಿತು.ಸಮಾರಂಭದಲ್ಲಿ ಮಂಗಳೂರು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರೆ|ಫಾ| ವಿಲ್ರೆಡ್ ಪ್ರಕಾಶ್ ಡಿಸೋಜ ಅವರು ಚರ್ಚ್ ನ 250ನೇ ವರ್ಷಾಚರಣೆಯ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲಿಗೆ ಚಾಲನೆ ನೀಡಿದರು.ಚರ್ಚ್ ವ್ಯಾಪ್ತಿಯ ಭಕ್ತರು ಐತಿಹಾಸಿಕ ಕ್ಷಣವನ್ನು ಸ್ಮರಣೀಯಗೊಳಿಸುವ ಜತೆಗೆ ಏಕತೆ, ನಂಬಿಕೆ ಮತ್ತು ಕೃತಜ್ಞತೆಯ ಸಂಕೇತವಾಗಿ ಬರೋಬ್ಬರಿ 250 ಕ್ಯಾಂಡಲ್‌ಗಳನ್ನು ಅದೇ ಸಂಖ್ಯೆಯ ಆಕಾರದಲ್ಲಿ ಜೋಡಿಸಿ ಬೆಳಗಿಸಿ ಸಂಭ್ರಮಿಸಿದರು.ಚರ್ಚ್ ನ ಪ್ರಧಾನ ಧರ್ಮಗುರು ರೆ| ಫಾ| ಅನಿಲ್ ಕೆನ್ಯುಟ್ ಡಿಮೆಲ್ಲೊ ಅವರು ವರ್ಷವಿಡೀ ನಡೆಯುವ 250ನೇ ವರ್ಷಾಚರಣೆ ಕಾರ್ಯಕ್ರಮದ ಪಟ್ಟಿಯನ್ನು ಅನಾವರಣಗೊಳಿಸಿದರು. ಆವರಣೆ ಹಾಗೂ ಕೃತಜ್ಞತೆಯಾಗಿ ವರ್ಷಾಚರಣೆಯ ಥೀಮ್ ಹಾಡನ್ನು ಪ್ರಸ್ತುತ ಪಡಿಸಲಾಯಿತು.ಐತಿಹಾಸಿಕ ವರ್ಷಾಚರಣೆಯಲ್ಲಿ ಆಧ್ಯಾತ್ಮಿಕತೆ, ಸಮುದಾಯ ಸಂಘಟನೆ, ಸಾಂಸ್ಕೃತಿಕ ವೈಭವ ಸೇರಿದಂತೆ ಚರ್ಚಿನ ಗೌರವಯುತ ಪರಂಪರೆಯನ್ನು ಮುಂದುವರಿಸುವ ದೃಷ್ಟಿಯಿಂದ ಹತ್ತಾರು ಕಾರ್ಯಕ್ರಮಗಳನ್ನು ನಡೆಸುವ ಕುರಿತು ಈ ಸಂದರ್ಭದಲ್ಲಿ ವಿವರಿಸಲಾಯಿತು. ಸಂಭ್ರಮಾಚರಣೆಯಲ್ಲಿ ಸರ್ವರೂ ಪಾಲ್ಗೊಂಡು ಮುಂಬರುವ ಪ್ರತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಸಹಕರಿಸಲು ವಿನಂತಿಸಲಾಯಿತು.ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ರೆಡ್ ಲೋಬೊ, ಸರ್ವ ಆಯೋಗಗಳ ಸಂಚಾಲಕಿ ಎಮಿಲಿಯಾ ಡಿಕುನ್ಹಾ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಹರಿನಾರಾಯಣ ಬೈಪಡಿತ್ತಾಯ ಅವರು “ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿ ಗೆ ಆಯ್ಕೆ, ಡಿ.29 ರಂದು ಪ್ರಶಸ್ತಿ ಪ್ರದಾನ, ರಂಗಪ್ರವೇಶ, ಅಬ್ಬರತಾಳ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾಕೇಂದ್ರದ ವಿದ್ಯಾರ್ಥಿಗಳ ರಂಗಪ್ರವೇಶ, ಗುರುವಂದನಾ ಹಾಗೂ” ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿಪ್ರದಾನ” ಕಾರ್ಯಕ್ರಮ ಡಿ.29 ರಂದು ಗಂಟೆಗೆ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ‌ಈ ಬಗ್ಗೆ ಮಾಹಿತಿ ನೀಡಿದ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾಕೇಂದ್ರದ ಅಧ್ಯಕ್ಷ ರಾಘವೇಂದ್ರ ಬಲ್ಲಾಳ್ ಅವರು ಕಲಿಕಾ ಕೇಂದ್ರದ ಗುರುಗಳಾದ ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಸುಮಾರು 10 ಕ್ಕು ಹೆಚ್ಚು ಮಂದಿ ಶಿಷ್ಯಂದಿರು ರಂಗಪ್ರವೇಶ ಮಾಡಲಿದ್ದಾರೆ.ಮಧ್ಯಾಹ್ನ 2.30 ಕ್ಕೆ ಈ ಕಾರ್ಯಕ್ರಮವನ್ನು ಕ್ಷೇತ್ರದ ತಂತ್ರಿಗಳಾದ ವೇ.ಮೂ.ಬಾಲಕೃಷ್ಣ ಪಾಂಗಣ್ಣಾಯ ಅವರು ದೀಪಪ್ರಜ್ವಲನೆಗೈದು ಉದ್ಘಾಟಿಸಲಿದ್ದಾರೆ ಎಂದರು.ಸಂಜೆ 4 ಗಂಟೆಗೆ ಪಿಲಾತಬೆಟ್ಟು ಸಿ.ಎ.ಬ್ಯಾಂಕ್ ಅಧ್ಯಕ್ಷ ತುಂಗಪ್ಪ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳ ವಾದಕರಾದ ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿಪ್ರದಾನ” ಮಾಡಲಾಗುವುದು ಹಾಗೂ ಯಕ್ಷಗುರುಗಳಾದ ಚಂದ್ರಶೇಖರ ಭಟ್ ಕೊಂಕಣಾಜೆ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ‌. ಉದ್ಯಮಿಗಳಾದ ಶ್ರೀಪತಿ ಭಟ್ ಮೂಡಬಿದ್ರೆ,ರೋ.ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ,ಯಕ್ಷಗಾನ ಕಲಾವಿದ ದಿನೆರಶ್ ಶೆಟ್ಟಿ ಕಾವಳಕಟ್ಟೆ, ಪಾಂಗಲ್ಪಾಡಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್.,ಮಂಗಳೂರು ಹಾಪ್ ಕಾಮ್ಸ್ ನಿರ್ದೇಶಕ ಲಕ್ಷ್ಮೀ ನಾರಾಯಣ ಉಡುಪ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಬಳಿಕ ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಶಿಷ್ಯರಿಂದ “ಅಬ್ಬರತಾಳ” ಸಂಜೆ 6 ಗಂಟೆಯಿಂದ ಪ್ರೇಮ್ ರಾಜ್ ಕೊಯಿಲ ಅವರ ನಿರ್ದೇಶನದಲ್ಲಿ “ಯಕ್ಷಕೌಸ್ತಭ” ಮಕ್ಕಳ ತಂಡದಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಯಕ್ಷಗುರು ಚಂದ್ರಶೇಖರ ಭಟ್ ಕೊಂಕಣಾಜೆ,ಸಮಿತಿ ಪದಾಧಿಕಾರಿಗಳಾದ ಹರಿಪ್ರಸಾದ್ ರಾವ್ ಕೊಯಿಲ,ಡಾ.ರಾಮಕೃಷ್ಣ ಎಸ್,ಕೀರ್ತನ್ ಶೆಟ್ಟಿ ಮೊದಲಾದವರಿದ್ದರು.

ಪ್ರಾದೇಶಿಕ ವಾರ್ತೆಗಳು

ದೇವಮಾತ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ.

ಬಂಟ್ವಾಳ: ಸುದೀರ್ಘ ವರ್ಷಗಳ ಇತಿಹಾಸವನ್ನು ಹೊಂದಿರುವ ಅಮ್ಟೂರು ಗ್ರಾಮದ ಮೊಗರ್ನಾಡು ದೇವಮಾತಾ ಚರ್ಚಿನ 250ನೇ ವರ್ಷಾಚರಣೆಗೆ ಚರ್ಚ್ ನಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅದ್ದೂರಿಯ ಚಾಲನೆ ನೀಡಲಾಯಿತು.ಸಮಾರಂಭದಲ್ಲಿ ಮಂಗಳೂರು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರೆ|ಫಾ| ವಿಲ್ರೆಡ್ ಪ್ರಕಾಶ್ ಡಿಸೋಜ ಅವರು ಚರ್ಚ್ ನ 250ನೇ ವರ್ಷಾಚರಣೆಯ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲಿಗೆ ಚಾಲನೆ ನೀಡಿದರು.ಚರ್ಚ್ ವ್ಯಾಪ್ತಿಯ ಭಕ್ತರು ಐತಿಹಾಸಿಕ ಕ್ಷಣವನ್ನು ಸ್ಮರಣೀಯಗೊಳಿಸುವ ಜತೆಗೆ ಏಕತೆ, ನಂಬಿಕೆ ಮತ್ತು ಕೃತಜ್ಞತೆಯ ಸಂಕೇತವಾಗಿ ಬರೋಬ್ಬರಿ 250 ಕ್ಯಾಂಡಲ್‌ಗಳನ್ನು ಅದೇ ಸಂಖ್ಯೆಯ ಆಕಾರದಲ್ಲಿ ಜೋಡಿಸಿ ಬೆಳಗಿಸಿ ಸಂಭ್ರಮಿಸಿದರು.ಚರ್ಚ್ ನ ಪ್ರಧಾನ ಧರ್ಮಗುರು ರೆ| ಫಾ| ಅನಿಲ್ ಕೆನ್ಯುಟ್ ಡಿಮೆಲ್ಲೊ ಅವರು ವರ್ಷವಿಡೀ ನಡೆಯುವ 250ನೇ ವರ್ಷಾಚರಣೆ ಕಾರ್ಯಕ್ರಮದ ಪಟ್ಟಿಯನ್ನು ಅನಾವರಣಗೊಳಿಸಿದರು. ಆವರಣೆ ಹಾಗೂ ಕೃತಜ್ಞತೆಯಾಗಿ ವರ್ಷಾಚರಣೆಯ ಥೀಮ್ ಹಾಡನ್ನು ಪ್ರಸ್ತುತ ಪಡಿಸಲಾಯಿತು.ಐತಿಹಾಸಿಕ ವರ್ಷಾಚರಣೆಯಲ್ಲಿ ಆಧ್ಯಾತ್ಮಿಕತೆ, ಸಮುದಾಯ ಸಂಘಟನೆ, ಸಾಂಸ್ಕೃತಿಕ ವೈಭವ ಸೇರಿದಂತೆ ಚರ್ಚಿನ ಗೌರವಯುತ ಪರಂಪರೆಯನ್ನು ಮುಂದುವರಿಸುವ ದೃಷ್ಟಿಯಿಂದ ಹತ್ತಾರು ಕಾರ್ಯಕ್ರಮಗಳನ್ನು ನಡೆಸುವ ಕುರಿತು ಈ ಸಂದರ್ಭದಲ್ಲಿ ವಿವರಿಸಲಾಯಿತು. ಸಂಭ್ರಮಾಚರಣೆಯಲ್ಲಿ ಸರ್ವರೂ ಪಾಲ್ಗೊಂಡು ಮುಂಬರುವ ಪ್ರತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಸಹಕರಿಸಲು ವಿನಂತಿಸಲಾಯಿತು.ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ರೆಡ್ ಲೋಬೊ, ಸರ್ವ ಆಯೋಗಗಳ ಸಂಚಾಲಕಿ ಎಮಿಲಿಯಾ ಡಿಕುನ್ಹಾ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

Special permission under COVID-19 pandemic to deliver medicines at doorstep, being misused by illegal online platforms, posing threat to public health be immediately withdrawn AIOCD urges Central Government.

Mangalore: The All-India Organisation of Chemists and Druggists (AIOCD), and South Kanara District Chemists and Druggists Association which represents all chemists and distributors of the state and across India, has written to the Secretary, Ministry of Health and Family Welfare for the third time, appealing to revoke the notification G.S.R. 220 (E) issued during the COVID-19 pandemic.This notification G.S.R. 220 (E) was published in March 2020 during the COVID pandemic, wherein movement restriction ware imposed, supply of medicines to the doorstep was allowed with some conditions, under Section 26B of the Drugs Act to regulate the manufacture, sale, and distribution of medicines. Under this, doorstep delivery of medicines was allowed and some rules, such as the requirement to stamp the prescription for the sale of medicines (Rule 65), were temporarily set aside only as a special circumstance.AIOCD President Sri. JS Shinde and General Secretary Sri. Rajiv Singhal said that the main purpose of this notification was to deliver medicines in emergency situations through local chemists, but now it is being misused by Swiggy and other digital platforms to deliver medicines at home without following the necessary regulatory safety measures.All these illegal platforms are selling medicines without a valid prescription, which is increasing serious problems like self-medication, drug abuse, and antimicrobial resistance. All such illegal platforms are focusing only on their profits by ignoring the safety of patients.AIOCD and South Kanara District Chemists and Druggists Association has said that the original intention of this notification was to make the delivery of medicines in specific circumstances for valid licensed nearby chemists – not for online platforms to bypass important safety measures.All these online platforms are ignoring the rules of drug delivery for their convenience, which can have a negative impact on the health of the public.* AIOCD demands:*• With the emergency phase of the pandemic is no longer exists and normalcy returned therefore notification is no longer relevant and should be withdrawn immediately.• Strict adherence to prescription and other safety rules for the sale and distribution of medicines should be ensured.• Illegal online sale of medicines in the country should be stopped with immediate effect so that unregulated sale of medicines can be stopped.AIOCD and South Kanara District Chemists and Druggists Association believes that this step is necessary to maintain public health and safety. If the government does not act positively AIOCD and South Kanara District Chemists and Druggists Association shall be forced to launch agitation with all its 12.40 lakh members.For South Kanara District Chemists and Druggists AssociationPresident SecretaryArun Kumar Shetty Dr. A.K. Jamal

ಪ್ರಾದೇಶಿಕ ವಾರ್ತೆಗಳು

COVID -19 ಮಹಾಮಾರಿಯ ಸಂದರ್ಭದಲ್ಲಿ ಔಷಧಿಗಳನ್ನು ಮನೆ ಬಾಗಿಲಿಗೆ ವಿತರಿಸಲು ನೀಡಲಾಗಿದ್ದ ವಿಶೇಷ ಅನುಮತಿಯನ್ನು ಅಕ್ರಮ ಆನ್ಲೈನ್ ವೇದಿಕೆಗಳು ದುರುಪಯೋಗ ಮಾಡುತ್ತಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತಿದೆ. ಈ ಅನುಮತಿಯನ್ನು ತಕ್ಷಣವೇ ಹಿಂಪಡೆಯುವಂತೆ AIOCD ಕೇಂದ್ರದಿಂದ ಸರ್ಕಾರಕ್ಕೆ ಕೋರಿಕೆ.

ಮಂಗಳೂರು: ಅಖಿಲ ಭಾರತ ಔಷಧ ಮತ್ತು ಔಷಧಿ ವ್ಯಾಪಾರಿಗಳ ಸಂಘ (AIOCD )ಮತ್ತು ರಾಜ್ಯ ಮತ್ತು ಭಾರತಾದ್ಯಂತದ ಎಲ್ಲಾ ಔಷಧಿ ಮಾರಾಟಗಾರರು ಹಾಗೂ ವಿತರಕರನ್ನು ಪ್ರತಿನಿಧಿಸುವ ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಗಳಿಗೆ ಮೂರನೇ ಸಲ ಪತ್ರ ಬರೆದಿದ್ದು, COVID -19 ಮಹಾಮಾರಿಯ ವೇಳೆ ಜಾರಿಗೊಂಡಿದ್ದ G.S.R.220(E) ಅಧಿಸೂಚನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದೆ.ಈ G.S.R.220(E) ಅಧಿಸೂಚನೆಯನ್ನು COVID -19 ಮಹಾಮಾರಿಯ ಸಮಯದಲ್ಲಿ, 2020 ರ ಮಾರ್ಚ್ ನಲ್ಲಿ ಪ್ರಕಟಿಸಲಾಗಿದ್ದು, ತುರ್ತು ಪರಿಸ್ಥಿತಿಯಡಿಯಲ್ಲಿ ಔಷಧಿ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ನಿಯಂತ್ರಿಸಲು ಡ್ರಗ್ಸ್ ಕಾಯ್ದೆಯ 26B ಕಲಮದ ಅನ್ವಯ ಕೆಲವು ಶರತ್ತುಗಳೊಂದಿಗೆ ಔಷಧಿಗಳನ್ನು ಮನೆಬಾಗಿಲಿಗೆ ವಿತರಿಸುವುದಕ್ಕೆ ಅನುಮತಿ ನೀಡಲಾಯಿತು. ಇದರಡಿ, ಔಷಧಿಗಳ ಮನೆಬಾಗಿಲಿನ ವಿತರಣೆಗೆ ಅನುಮತಿ ನೀಡಲಾಯಿತು ಮತ್ತು ಔಷಧಿಗಳ ಮಾರಾಟಕ್ಕಾಗಿ ಪ್ರಿಸ್ಕಿçಪ್ಷನ್ ಮೇಲೆ ಮುದ್ರಣ ಅಗತ್ಯ (ನಿಯಮ 65) ತಾತ್ಕಾಲಿಕವಾಗಿ ನಿರ್ಲಕ್ಷಿಸಲಾಯಿತು, ಅದು ವಿಶೇಷ ಸಂದರ್ಭಕ್ಕೆ ಮಾತ್ರ ಅನ್ವಯಿಸಿತು.AIOCD ಅಧ್ಯಕ್ಷ ಜೆ.ಎಸ್.ಶಿಂಧೆ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಗ್ಹಲ್ ಅವರು ಹೇಳಿರುವಂತೆ, ಈ ಅಧಿಸೂಚನೆಯ ಪ್ರಮುಖ ಉದ್ದೇಶವು ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯ ಔಷಧಿ ವ್ಯಾಪಾರಿಗಳ ಮೂಲಕ ಔಷಧಿಗಳನ್ನು ವಿತರಿಸುವುದಾದರೂ, ಇತ್ತೀಚಿಗೆ ಸ್ವಿಗ್ಗಿ ಮತ್ತು ಇತರ ಡಿಜಿಟಲ್ ವೇದಿಕೆಗಳು ಔಷಧಿಗಳನ್ನು ಮನೆಬಾಗಿಲಿಗೆ ವಿತರಿಸಲು ಇದನ್ನು ದುರುಪಯೋಗ ಮಾಡುತ್ತಿವೆ, ಅಗತ್ಯವಿರುವ ನಿಯಂತ್ರಣ ಮತ್ತು ಭದ್ರತಾ ಕ್ರಮಗಳನ್ನು ಅನುಸರಿಸಿದೆ.ಈ ಎಲ್ಲಾ ಅಕ್ರಮ ವೇದಿಕೆಗಳು ಮಾನ್ಯವಾದ ಪ್ರಿಸ್ಕಿçಪ್ಷನ್ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡುತ್ತಿವೆ, ಇದರಿಂದ ಸ್ವಯಂ ಚಿಕಿತ್ಸಾ ಔಷಧಿಗಳು ದುರುಪಯೋಗ ಮತ್ತು ಆಚಿಟಿಮೈಕ್ರೋಬಿಯಲ್ ಪ್ರತಿರೋಧದಂತಹ ಗಂಭೀರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಎಲ್ಲಾ ಅಕ್ರಮ ವೇದಿಕೆಗಳು ರೋಗಿಗಳ ಭದ್ರತೆಯನ್ನು ಕಡೆಗಣಿಸಿ, ತನ್ನ ಲಾಭಗಳನ್ನು ಮಾತ್ರ ಗಮನದಲ್ಲಿಡುತ್ತಿವೆ.AIOCD ಮತ್ತು ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ಅವರು ಹೇಳಿರುವಂತೆ, ಈ ಅಧಿಸೂಚನೆಯ ಮೂಲ ಉದ್ದೇಶವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಮಾನ್ಯ ಲೈಸನ್ಸ್ ಹೊಂದಿರುವ ಸ್ಥಳೀಯ ಔಷಧಿ ವ್ಯಾಪಾರಿಗಳಿಂದ ಔಷಧಿಗಳ ವಿತರಣೆಯನ್ನು ಅನುಮತಿಸುವುದಾಗಿತ್ತು- ಆದರೆ ಅದು ಆನ್ಲೈನ್ ವೇದಿಕೆಗಳಿಗೆ ಮಹತ್ವಪೂರ್ಣ ಭದ್ರತಾ ಕ್ರಮಗಳನ್ನು ಅವಗಣಿಸಲು ಅವಕಾಶ ನೀಡುವುದಕ್ಕೆ ಇವು ಉದ್ದೇಶಿತವಾಗಿರಲಿಲ್ಲ.ಈ ಎಲ್ಲಾ ಆನ್ಲೈನ್ ವೇದಿಕೆಗಳು ತಮ್ಮ ಸುಲಭತೆಗೆ ಅನುಗುಣವಾಗಿ ಔಷಧಿ ವಿತರಣೆಯ ನಿಯಮಗಳನ್ನು ಅವಗಣಿಸುತ್ತಿವೆ, ಇದರಿಂದ ಸಾರ್ವಜನಿಕ ಆರೋಗ್ಯಕ್ಕೆ ನಕಾರಾತ್ಮಕ ಪರಿಣಾಮ ಬೀರುವ ಸಾದ್ಯತೆ ಇದೆ.AIOCD ಯ ಬೇಡಿಕೆಗಳು:• ಮಹಾಮಾರಿಯ ತುರ್ತು ಹಂತವು ಈವಾಗ ಇರುವುದಿಲ್ಲ ಮತ್ತು ಸಾಮಾನ್ಯ ಜನಜೀವನಕ್ಕೆ ಬಂದಿರುವುದರಿಂದ ಈ ಅಧಿಸೂಚನೆ ಇನ್ನು ಕೂಡಾ ಅನ್ವಯಿಸದು, ಮತ್ತು ಅದನ್ನು ತಕ್ಷಣವೇ ಹಿಂಪಡೆಸಬೇಕಾಗಿದೆ.• ಔಷಧಿಗಳ ಮಾರಾಟ ಮತ್ತು ವಿತರಣೆಗೆ ಸಂಬAಧಿಸಿದ ಪ್ರಿಸ್ಕಿçಪ್ಷನ್ ಮತ್ತು ಇತರ ಭದ್ರತಾ ನಿಯಮಗಳಿಗೆ ಕಠಿಣವಾಗಿ ಅನುಸರಣೆ ನೀಡಬೇಕು ಎಂದು ಖಾತ್ರಿಪಡಿಸಬೇಕು.• ದೇಶದಲ್ಲಿ ಅಕ್ರಮ ಆನ್ಲೈನ್ ಔಷಧಿ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು, ಇದರಿಂದ ನಿಯಂತ್ರಣವಿಲ್ಲದ ಔಷಧಿ ಮಾರಾಟವನ್ನು ತಡೆಯಲು ಸಾಧ್ಯವಾಗುತ್ತದೆ.AIOCD ಮತ್ತು ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ಅವರು ಸಾರ್ವಜನಿಕ ಆರೋಗ್ಯ ಮತ್ತು ಭದ್ರತೆಯನ್ನು ಕಾಪಾಡಲು ಈ ಕ್ರಮ ಅಗತ್ಯವಾಗಿದೆ ಎಂಬುದನ್ನು ನಂಬುತ್ತೇವೆ. ಸರ್ಕಾರವು ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ,AIOCD ಮತ್ತು ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘವು ತನ್ನ 12.40 ಲಕ್ಷ ಸದಸ್ಯರೊಂದಿಗೆ ಆಂದೋಲನ ಆರಂಭಿಸಲು ಬಾಧ್ಯವಾಗಲಿದೆ.ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಪರವಾಗಿ,ಅಧ್ಯಕ್ಷರುಅರುಣ್ ಕುಮಾರ್ ಶೆಟ್ಟಿ , ಕಾರ್ಯದರ್ಶಿ ಡಾ. ಎ.ಕೆ. ಜಮಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

“Payann” Konkani movie celebrating its 100th show.

A hit from the day of its release, the Konkani film “Payann”, produced by yodeling King Melvin Peris and Neeta Peris under the banner “Sangeet Ghar”, is entering its 100th day. Due to the limited market, making a movie in Konkani and delivering it to the scattered Konkani people is a challenging task. However, the team of “Payann” has worked tirelessly to ensure that the film achieves a 100-day run. This milestone is a record for the Mangalorean Konkani-speaking community, as it is rare for a movie with a limited market to sustain such a long theatrical release. At the same time, many films with multi-crore budgets have turned out to be flops. “Payann” has created history as the second Konkani film to run for 100 days after last year’s “Osmitay.”The movie narrates the life story of a musician who discovers that true harmony in life requires more than mastery of the art of music. The protagonist navigates the challenges of the music industry, confronting personal demons and unpredictable webs of deceit and craft. Driven by his desire to break the mold in the music industry and leave a legacy behind, “Payann” is a compelling tale of resilience and ambition.The 100th-day celebration will be held on 29th December at 4:00 PM sharp at Bharat Cinema in Bijai. Member of the Legislative Council, Mr. Ivan D’Souza, will be the chief guest for this event. Rector of St. Aloysius Educational Institutions, Rev. Fr. Melwin Joseph Pinto, and non-resident businessman Mr. James D’Souza from Dubai will be the guests of honor.The creative team behind “Payann” includes Director Joel Pereira, who also wrote the story, screenplay, and dialogues. Roshan D’Souza Angelore served as the music director. Brian Sequeira, a young talent from Puttur, played the lead role, supported by heroines Jasmine D’Souza, Kate Pereira, and Shaina D’Souza. The ensemble cast includes Rainal Sequeira, Leslie Rego, Gerry Rasquinha, Walter Nandalike, Jeevan Vas, Jossey Rego, Alvin Danti, Albert Peris, Arun Noronha, Denver Peris, Denver D’Souza, and Melisha Pinto. Lyrics and music were composed by Melvin Peris, cinematography was handled by V. Ramanjaneya, and the film was edited by Mevin Joel Pinto, Shirthady.

ಪ್ರಾದೇಶಿಕ ವಾರ್ತೆಗಳು

ಶತದಿನೋತ್ಸವದತ್ತ ‘ಪಯಣ್‌’ ಕೊಂಕಣಿ ಸಿನೆಮಾ

ಬಿಡುಗಡೆಗೊಂಡ ದಿನದಿಂದಲೇ ಜನಮನ ಗೆದ್ದ, ಸಂಗೀತ್‌ ಘರ್‌’ ಬ್ಯಾನರ್‌ನಡಿಯಲ್ಲಿ ಯೊಡ್ಲಿಂಗ್‌ ಕಿಂಗ್‌ ಮೆಲ್ವಿನ್‌ ಪೆರಿಸ್‌ ಮತ್ತು ನೀಟ ಪೆರಿಸ್‌ ನಿರ್ಮಿಸಿರುವ “ಪಯಣ್‌’ ಕೊಂಕಣಿ ಚಲನಚಿತ್ರವು ನೂರನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಸೀಮಿತ ಮಾರುಕಟ್ಟೆಯಿಂದಾಗಿ ಕೊಂಕಣಿಯಲ್ಲಿ ಸಿನಿಮಾ ತಯಾರಿಸುವುದು ಮತ್ತು ಚದುರಿ ಹೋಗಿರುವ ಕೊಂಕಣಿ ಜನರಿಗೆ ಅದನ್ನು ತಲುಪಿಸುವುದು ಬಲುದೊಡ್ಡ ಪ್ರಯಾಸದ ಕೆಲಸ. ಆದರೆ “ಪಯಣ್‌’ ಸಿನಿಮಾ ತಂಡವು ‘ಪಯಣ್‌’ ಸಿನಿಮಾ ನೂರು ದಿನಗಳ ಪ್ರದರ್ಶನವನ್ನು ಕಾಣುವಂತೆ ನಿರಂತರ ಶ್ರಮವಹಿಸಿ ದುಡಿದಿದೆ. ಕೋಟ್ಯಾಂತರ ಬಜೆಟಿನ ಚಿತ್ರಗಳು ಸೋಲುತ್ತಿರುವಾಗ, ಸೀಮಿತ ಮಾರುಕಟ್ಟೆಯಿರುವ ಕೊಂಕಣಿ ಸಮಾಜದ ಸಿನಿಮಾವೊಂದು ನೂರು ದಿನಗಳ ಪ್ರದರ್ಶನವನ್ನು ಕಾಣುವುದು ನಿಜಕ್ಕೂ ದಾಖಲೆಯೇ ಸರಿ. ಕಳೆದ ವರ್ಷ ತೆರೆಕಂಡ “ಅಸ್ಮಿತಾಯ್‌’ ಕೊಂಕಣಿ ಚಲನಚಿತ್ರದ ಬಳಿಕ ನೂರು ದಿನಗಳ ಪ್ರದರ್ಶನ ಕಂಡ ದ್ವಿತಿಯ ಚಿತ್ರವಾಗಿ ‘ಪಯಣ್‌’ ಇತಿಹಾಸ ಸೃಷ್ಠಿಸಿದೆ.“ಪಯಣ್‌’ ಜೀವನದ ನಿಜವಾದ ಸಾಮರಸ್ಯಕ್ಕೆ ಸಂಗೀತ ಕಲೆಯ ನಿಪುಣತೆಗಿಂತಲೂ ಹೆಚ್ಚಿನದ್ದು ಬೇಕು ಎಂಬುದನ್ನು ಅನುಭವಿಸಿ ಜೀರ್ಣಿಸಿಕೊಳ್ಳುವ ಸಂಗೀತಗಾರನ ಜೀವನಗಾಥೆ. ನಾಯಕ ಸಂಗೀತ ಉದ್ಯಮದ ಸವಾಲುಗಳನ್ನು ಎದುರಿಸಿ ಮುನ್ನಡೆಯುವಾಗ – ವೈಯಕ್ತಿಕ ಪೈಶಾಚಿಕತೆಯನ್ನು ಎದುರಿಸುವುದರೊಂದಿಗೆ ವಂಚನೆ ಮತ್ತು ಕಸುಬಿನ ಅನಿರೀಕ್ಷಿತ ಜಾಲಗಳನ್ನು ಎದುರಿಸುತ್ತಾನೆ. ಸಂಗೀತ ಕ್ಷೇತ್ರದಲ್ಲಿ ಪಡಿಯಚ್ಚನ್ನು ಒತ್ತಿ, ತನ್ನ ಹಿಂದೆ ಪರಂಪರೆಯೊಂದನ್ನು ಬಿಟ್ಟು ಹೋಗುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟ ಅವ ತನ್ನ ಸಂಗೀತ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಕೇಂದ್ರಬಿಂದುವಾಗಿಸಿದ ಕಥೆಯೇ ಪಯಣ್‌.ಶತದಿನೋತ್ಸವ ಸಂಭ್ರಮವು ಡಿಸೆಂಬರ್‌ 29ರಂದು ಸಂಜೆ 4.00 ಗಂಟೆಗೆ ಸರಿಯಾಗಿ ಬಿಜೈನಲ್ಲಿರುವ ಭಾರತ್‌ ಸಿನೆಮಾದಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ವಿಧಾನ ಪರಿಷತ್‌ ಶಾಸಕ ಐವನ್‌ ಡಿಸೋಜಾರವರು ಮುಖ್ಯ ಅಥಿತಿಯಾಗಿ ಆಗಮಿಸಲಿರುವರು. ಸಂತ ಅಲೋಶಿಯಸ್‌ ಸಮೂಹ ವಿದ್ಯಾ ಸಂಸ್ಥೆಗಳ ರೆಕ್ಟರ್‌ ವಂ| ಮೆಲ್ವಿನ್‌ ಜೋಸೆಫ್‌ ಪಿಂಟೊ ಮತ್ತು ಅನಿವಾಸಿ ಉಧ್ಯಮಿ ಶ್ರೀ ಜೇಮ್ಸ್‌ ಡಿ’ಸೋಜಾ ದುಬಾಯ್‌ ಇವರುಗಳು ಗೌರವ ಅಥಿತಿಗಳಾಗಿರುವರು.ಪಯಣ್‌ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಜೊಯೆಲ್‌ ಪಿರೇರಾ ಬರೆದಿದ್ದು, ರೋಶನ್‌ ಡಿ’ಸೋಜಾ ಆಂಜೆಲೊರ್‌ ಸಂಗೀತ ನಿರ್ದೇಶನ ನೀಡಿದ್ದಾರೆ. ಪುತ್ತೂರಿನ ಯುವ ಪ್ರತಿಭೆ ಬ್ರಾಯನ್‌ ಸಿಕ್ಟೇರಾ ನಾಯಕನಾಗಿ ಹಾಗೂ ಜಾಸ್ಮಿನ್‌ ಡಿ’ಸೋಜಾ, ಕೇಟ್‌ ಪಿರೇರಾ ಮತ್ತು ಶೈನಾ ಡಿ’ಸೋಜ ನಾಯಕಿಯರಾಗಿ ನಟಿಸಿದ್ದಾರೆ. ನಟರಾದ ರೈನಲ್‌ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ನಾ, ವಾಲ್ಟರ್‌ ನಂದಳಿಕೆ, ಜೀವನ್‌ ವಾಸ್‌, ಜೊಸ್ಸಿ ರೇಗೊ, ಆಲ್ವಿನ್‌ ದಾಂತಿ, ಆಲ್ಬರ್ಟ್‌ ಪೆರಿಸ್‌, ಅರುಣ್‌ ನೊರೊನ್ಹಾ, ಡೆನ್ವರ್‌ ಪೆರಿಸ್‌, ಡೆನ್ವರ್‌ ಡಿ’ಸೋಜಾ, ಮೆಲಿಶಾ ಪಿಂಟೊ ಮುಖ್ಯ ಭೂಮಿಕೆಯಲ್ಲಿದ್ದಾರೆ.ಸಾಹಿತ್ಯ ಮತ್ತು ರಾಗ ಸಂಯೋಜನ್‌ ಮೆಲ್ವಿನ್‌ ಪೆರಿಸ್‌, ಛಾಯಾಗ್ರಹಣ ವಿ. ರಾಮಾಂಜನೆಯ ಮತ್ತು ಸಂಕಲನ ಮೆವಿನ್‌ ಜೊಯೆಲ್‌ ಪಿಂಟೊ, ಶಿರ್ತಾಡಿ ಇವರದ್ದು.

Scroll to Top